ನೂತನ ತಳಿ ಟೊಮೆಟೋಬೆಳೆದು ಲಾಭ ಪಡೆಯಿರಿ

Team Udayavani, May 20, 2019, 1:11 PM IST

ಮುಳಬಾಗಿಲು ತಾಲೂಕು ಹೆಬ್ಬಣಿ ಗ್ರಾಪಂ ವ್ಯಾಪ್ತಿಯ ಎಚ್. ಬೈಪನಹಳ್ಳಿ ರೈತ ಶಿವಾರೆಡ್ಡಿ ತೋಟದಲ್ಲಿ ಬೆಳೆದಿದ್ದ ನೂತನ ತಳಿಯ ಟೊಮೆಟೋ ಹಣ್ಣನ್ನು ರೈತರು ವೀಕ್ಷಿಸಿದರು.

ಮುಳಬಾಗಿಲು: ನೂತನ ತಳಿಯ ಟೊಮೆಟೋ ಬೆಳೆದು ರೈತರು ಅಧಿಕ ಇಳುವರಿ ಮತ್ತು ಲಾಭ ಪಡೆಯಬೇಕು ಎಂದು ಜಿಪಂ ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್‌ ರಾಮಚಂದ್ರ ಸಲಹೆ ನೀಡಿದರು. ಹೆಬ್ಬಣಿ ಗ್ರಾಪಂ ವ್ಯಾಪ್ತಿಯ ಎಚ್.ಬೈಪನಹಳ್ಳಿ ರೈತ ಶಿವಾರೆಡ್ಡಿ ತೋಟದಲ್ಲಿ ಬೆಳೆದಿದ್ದ ಸೀಲ್ವರ್‌ ಸೀಡ್‌ ಕಂಪನಿಯ ನೂತನ ತಳಿಯ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ಮಾತನಾಡಿ, ನೂತನ ತಳಿಗಳಾದ ಇಂಡಿಯನ್‌, ಭಾಗ್ಯ ಇವು ಸುಧಾರಿತ ತಳಿಗಳಾಗಿದ್ದು, ಒಂದು ಎಕರೆಗೆ ಕನಿಷ್ಠ 25 ಟನ್‌ ಇಳುವರಿ ಸಿಗುವುದರಿಂದ ಅಧಿಕ ಉಷ್ಣಾಂಶ ಹಾಗೂ ಕಡಿಮೆ ನೀರಾವರಿಯಲ್ಲಿ ಬೆಳೆಯಬಹುದಾಗಿದೆ. ಈ ತಳಿ ತಾಲೂಕಿನಲ್ಲಿ ಪ್ರಥಮ ಪ್ರಯೋಗವಾಗಿ ಬೆಳೆಯಲಾಗಿದ್ದು, ಪ್ರಸ್ತುತ ರೈತರಿಗೆ ಪ್ರಾತ್ಯಕ್ಷಿಕವಾಗಿ ತೋರಿಸಲು ಕಾರ್ಯಾಗಾರವನ್ನು ರೂಪಿಸಲಾಗಿದೆ ಎಂದರು. ರ್‍ಯಾಂಬೋ ಕಂಪನಿಯ ಮಾಲಿಕ ಎಚ್.ಎನ್‌ರವಿಕುಮಾರ್‌ ಮಾತನಾಡಿ, ನಮ್ಮ ಕಂಪನಿಯಲ್ಲಿ ದೊರೆಯುವ ಟೊಮೆಟೋ ಸಸಿಗಳಿಗೆ ಬಹು ಬೇಡಿಕೆ ಇದೆ. ಈ ತಳಿ ಬೆಳೆದ ಬೆಳೆ ದೀರ್ಘ‌ಕಾಲ ಶೇಖರಣೆ ಮಾಡಲು ಅನುಕೂಲವಿದೆ. ಬಹು ದೂರದ ಮಾರುಕಟ್ಟೆಗಳಾದ ಹೈದ್ರಾಬಾದ್‌ ಚೆನ್ನೈ, ವಾಘಾ ಗಡಿಗಳಿಗೆ ತಲುಪಿಸಲು ಅನುಕೂಲಕರವೆಂದು ತಿಳಿಸಿದರು. ವಿಜ್ಞಾನಿ ಬಿ.ಕೆ.ತ್ರಿಪಾಠಿ, ರೈತ ಶಿವಾರೆಡ್ಡಿ, ಗ್ರಾಪಂ ಸದಸ್ಯ ಸುಧಾಕರ್‌, ವಿಎಸ್‌ಎಸ್‌ಎನ್‌ ನಿರ್ದೇಶಕ ಕೊತ್ತೂರು ಶ್ರೀರಾಮ್‌, ಜಗದೀಶ್‌ ನಂದೀಶ್‌ರೆಡ್ಡಿ, ಬಂಗವಾದಿ ಶ್ರೀನಿವಾಸ್‌, ಪ್ರಭಾಕರ್‌ ಮತ್ತಿತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ