Udayavni Special

ಗಡಿಭಾಗದಲ್ಲಿ ಕಾಡಾನೆ ನಿಯಂತ್ರಣಕ್ಕೆ ಸರ್ಕಾರ ವಿಫ‌ಲ


Team Udayavani, Mar 29, 2021, 3:01 PM IST

ಗಡಿಭಾಗದಲ್ಲಿ ಕಾಡಾನೆ ನಿಯಂತ್ರಣಕ್ಕೆ ಸರ್ಕಾರ ವಿಫ‌ಲ

ಬಂಗಾರಪೇಟೆ: ತಾಲೂಕಿನ ಗಡಿಭಾಗದ ಕಾಮಸಮುದ್ರ ಹಾಗೂ ಬೂದಿಕೋಟೆಹೋಬಳಿಯಲ್ಲಿ ಹೊರರಾಜ್ಯವಾದ ಆಂಧ್ರಪ್ರದೇಶ, ತಮಿಳುನಾಡಿನಿಂದವಲಸೆ ಬರುತ್ತಿರುವ ಕಾಡಾನೆಗಳ ದಾಳಿಗೆ ತಾಲೂಕಿನ ರೈತರು ಬೆಳೆದ ಬೆಳೆ ನಾಶವಾಗಿದ್ದು, ಸಂಕಷ್ಟಕ್ಕೆ ಒಳಗಾಗಿದ್ದರೂಅರಣ್ಯ ಇಲಾಖೆ, ಜಿಲ್ಲಾಡಳಿತ ಯಾವುದೇತುರ್ತು ಕ್ರಮಕೈಗೊಳ್ಳದೇ ಸಮಸ್ಯೆ ತೀವ್ರಗೊಂಡಿದೆ.

ತಾಲೂಕಿನ ಗಡಿಭಾಗದ ತೊಪ್ಪನಹಳ್ಳಿ ಗ್ರಾಮಕ್ಕೆ ಕಾಡಾನೆಗಳ ಉಪಟಳದಿಂದಅನ್ಯಾಯಕ ಒಳಗಾದ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಲು ಹಾಗೂತೊಪ್ಪನಹಳ್ಳಿ ಗ್ರಾಮದಿಂದ ಕೋಲಾರದ ಡೀಸಿ ಕಚೇರಿವರೆಗೂ ಮಾ.1ರಂದು ಹಮ್ಮಿಕೊಂಡಿದ್ದ ರೈತರ ಪಾದಯಾತ್ರೆಯನ್ನು ತಡೆದು ಸ್ವತಃ ಜಿಲ್ಲಾಧಿಕಾರಿಗಳೇ ತೊಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ರೈತರಸಮಸ್ಯೆ ಪರಿಹಾರ ಕಲ್ಪಿಸಲು ಕೊಟ್ಟಮಾತಿನಂತೆ ಆಗಮಿಸಿದ್ದರೂ, ರೈತರಸಮಸ್ಯೆಗಳು ಬಗೆಹರಿದಿಲ್ಲ ಎನ್ನುವ ಆತಂಕ ರೈತರಲ್ಲಿ ಮೂಡಿದೆ.

ರೈತರಿಗೆ ಸಂಕಷ್ಟ: ತಾಲೂಕಿನ ಗಡಿಭಾಗದಲ್ಲಿ ಕಾಡಾನೆ ತಡೆಗೆ ಸೋಲಾರ್‌ ಪ್ರನ್ಸಿಂಗ್‌ಅಳವಡಿಸಲು ಸರ್ಕಾರದಿಂದನೀಡುತ್ತಿರುವ ಶೇ.50 ಸಬ್ಸಿಡಿಯನ್ನುಶೇ.100ಕ್ಕೆ ಏರಿಸಬೇಕು. ಆನೆಗಳನ್ನುಹಿಡಿದು ಬೇರೆಡೆಗೆ ಸ್ಥಳಾಂತರಿಸಲು ರೈತರು ಬೇಡಿಕೆ ಇಟ್ಟಿದ್ದಾರೆ. ಸರ್ಕಾರದ ಪರಿಹಾರಹಣ ಬಹಳ ಕಡಿಮೆ ಆಗಿದ್ದು, ರೈತರುಸಾವಿರಾರು ರೂ. ಬಂಡವಾಳ ಹೂಡಿ ಬೆಳೆಬೆಳೆದಿದ್ದಾರೆ. ಆದರೆ, ಸರ್ಕಾರ ನೀಡುವಪರಿಹಾರದಿಂದ ಹಾಕಿದ ಪರಿಶ್ರಮಕ್ಕೆಪರಿಹಾರ ಸಿಗುತ್ತಿಲ್ಲ. ಆಯಾ ಬೆಳೆಗೆಅನುಗುಣವಾಗಿ ಪರಿ ಹಾರ,ಸಾವಿಗೀಡಾದವರಿಗೆ ನೀಡುವ ಪರಿ ಹಾರದ ಹಣ ಹೆಚ್ಚಿಸದೇ ನಿರ್ಲಕ್ಷ್ಯ ವಹಿಸಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ.

ಮನವಿ ಮಾಡಿದ್ದರೂ, ಪ್ರಯೋಜನವಿಲ್ಲ: ರೈತರು ಹಲವು ವರ್ಷದಿಂದಕಾಡಾನೆಗಳ ದಾಳಿಯಿಂದ ಬೇಸತ್ತುಕೆಲವು ಸೌಲಭ್ಯ ಕಲ್ಪಿಸುವಂತೆ ಹೋರಾಟಮಾಡಿ,ಹೊರರಾಜ್ಯದಿಂದ ಗಡಿಭಾಗ ಗಳಿಗೆಕಾಡಾನೆಗಳು ಪ್ರವೇಶವಾಗದಂತೆಕಾರಿಡಾರ್‌ ನಿರ್ಮಿಸಬೇಕು. ಬೆಳೆ ನಾಶಕ್ಕೆ ಸೂಕ್ತ ಬೆಲೆ ನಿಗದಿಪಡಿಸಬೇಕು. ಕಾಡಾನೆಗಳ ದಾಳಿಗೆ ಸಾವನ್ನಪ್ಪಿರುವ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕುಎಂದು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ‌ ,ಪ್ರಯೋಜನವಿಲ್ಲ. ಅಲ್ಲದೆ, ರೈತರು,ಸಾರ್ವಜನಿಕರ ಬೇಡಿಕೆಗಳ ಬಗ್ಗೆ ಸರ್ಕಾರಹಾಗೂ ಜಿಲ್ಲಾಡಳಿತ ಯಾವುದೇಕ್ರಮಕೈಗೊಂಡಿಲ್ಲ ಎನ್ನುವ ಕೊರಗು ರೈತರಲ್ಲಿ ಇದೆ.

ಕಾಡಾನೆಗಳನ್ನು ಈಗಾಗಲೇ ನಮ್ಮಸಿಬ್ಬಂದಿ ಯರಗೋಳ್‌ ಭಾಗದ ಅರಣ್ಯಪ್ರದೇಶಕ್ಕೆ ಓಡಿಸಿದ್ದು, ಮತ್ತೆ ಅವುಗಳುವಾಪಸ್ಸು ಬರದಂತೆ ಸಿಬ್ಬಂದಿ ಕಾವಲಿದ್ದಾರೆ. ಕಾಳಮ್ಮನಗುಡಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸೋಲಾರ್‌ ಪೆನ್ಸಿಂಗ್‌ಹಾಕಲು ಟೆಂಡರ್‌ ಕರೆಯಲಾಗಿದ್ದು,ಪ್ರಾಯೋಗಿಕವಾಗಿ ನಾಗರಹೊಳೆ,ಬಂಡೀಪುರ ಮಾದರಿಯಲ್ಲಿ ಆನೆಗಳುಬರದಂತೆ ಸೋಲಾರ್‌ ಪೆನ್ಸಿಂಗ್‌ಅಳವಡಿಸಲಾಗುತ್ತದೆ ಎನ್ನುವುದು ಬರೀ ಮಾತಿನಲ್ಲಿದೆ.

ಅಧಿಕಾರಿಗಳು ತೊಪ್ಪನಹಳ್ಳಿಗೆ ಬಂದು ರೈತರ ಸಮಸ್ಯೆಗೆ ಪರಿಹಾರ ನೀಡಲುವಿಫ‌ಲರಾಗಿದ್ದಾರೆ. ಇಲ್ಲಿ ಓರ್ವ ಅರಣ್ಯಾಧಿಕಾರಿ,4 ಗಾರ್ಡ್‌ ಇದ್ದರೆ. ಇವರಿಗಿಂತ ಆನೆಗಳೇ ಹೆಚ್ಚಿವೆ. ತೊಪ್ಪನಹಳ್ಳಿ ಸುತ್ತಮು ತ್ತಲಿನ ಗ್ರಾಮಗಳಲ್ಲಿ ಆನೆಹಾವಳಿ ಸುಮಾರು ಹತ್ತು ವರ್ಷಗಳಿಂದ ಇದೆ. ಆದರೂ, ಯಾವುದೇ ಯೋಜನೆ ರೂಪಿಸಿ ಪರಿಹಾರ ನೀಡಿಲ್ಲ. ಮಲ್ಲಿಕಾರ್ಜುನರೆಡ್ಡಿ, ರೈತರಪರ ಹೋರಾಟಗಾರ, ತೊಪ್ಪನಹಳ್ಳಿ

ತೊಪ್ಪನಹಳ್ಳಿ ಗಡಿಭಾಗದಲ್ಲಿ ಕಾಡಾನೆಗಳ ಹಾವಳಿ ತಡೆಗೆ ಸೋಲಾರ್‌ ಫೆನ್ಸಿಂಗ್‌ 5.5 ಕಿ.ಮೀ. ಕಾಮಗಾರಿ ಸೋಮವಾರದಿಂದ ಪ್ರಾರಂಭವಾಗಲಿದೆ. ಗಡಿಭಾಗದಲ್ಲಿ ಕಾಡಾನೆಗಳನ್ನುಹೊರ ರಾಜ್ಯಗಳಿಗೆ ಹಿಮ್ಮೆಟಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕಾಡಾನೆಗಳಿಂದ ರೈತರು, ಬೆಳೆ ರಕ್ಷಣೆಗೆಹಲವು ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೆ.ಎನ್‌.ರವಿಕೀರ್ತಿ, ವಲಯ ಅರಣ್ಯಾಧಿಕಾರಿಗಳು, ಬಂಗಾರಪೇಟೆ

 

ಎಂ.ಸಿ.ಮಂಜುನಾಥ್‌

ಟಾಪ್ ನ್ಯೂಸ್

fcdyryr

ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ

hfghdrr

ಉದ್ಯೋಗ ಖಾತ್ರಿ ಯೋಜನೆಯಡಿ ಗುದ್ದಲಿ ಹಿಡಿದ ಗ್ರಾಪಂ ಸದಸ್ಯ

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

fghydtyetyer

ಅಣ್ಣನ ಶವ ತಂಗಿ ಕಾರಿನಲ್ಲಿದ್ದರೂ ಗೊತ್ತಿರಲಿಲ್ಲವಂತೆ!

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕುವಂತಿಲ್ಲ: ಡಿಸಿಎಂ

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕುವಂತಿಲ್ಲ: ಡಿಸಿಎಂ

tutu

ನಾಳೆ ಕರ್ನಾಟಕ ಸೇರಿ 10 ರಾಜ್ಯಗಳ ಸಿಎಂಗಳ ಜೊತೆ ಪಿಎಂ ಸಭೆ

Untitled-2

ಸಿಡಿಲು ಬಡಿದು ಮನೆ ಕುಸಿದು ಒಂದೇ ಕುಟುಂಬ 7 ಮಂದಿ ಗಂಭೀರ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

social service

ಜನಸೇವೆಯಿಂದ ಜೀವನ ಪಾವನಗೊಳಿಸಿ: ಸುಬ್ಬು

The celebration of Ramanavami

ಅವಳಿ ಜಿಲ್ಲೆಯಲ್ಲಿ ರಾಮನವಮಿ ಆಚರಣೆ

ಕೋವಿಡ್ ಹೆಚ್ಚಳ: ಕೋಲಾರದಲ್ಲಿ ಅಂಗಡಿಗಳ ಬಾಗಿಲು ಮುಚ್ಚಿಸಿದ ಪೊಲೀಸರು

ಕೋವಿಡ್ ಹೆಚ್ಚಳ: ಕೋಲಾರದಲ್ಲಿ ಅಂಗಡಿಗಳ ಬಾಗಿಲು ಮುಚ್ಚಿಸಿದ ಪೊಲೀಸರು

The Transport Office does not follow the rule

ಸಾರಿಗೆ ಕಚೇರಿಯಲ್ಲಿ ನಿಯಮ ಪಾಲಿಸಿಲ್ಲ

incident held at kolara

ನಿಷೇಧಾಜ್ಞೆ ನಡುವೆ ಜೈಲು ಭರೋ ಚಳವಳಿಗೆ ಯತ್ನ

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

fcdyryr

ವಾಟ್ಸ್‌ಆ್ಯಪ್‌ ಫ್ರೆಂಡ್ಸ್‌ನಿಂದ ವಂಚನೆ: ಇಬ್ಬರ ಬಂಧನ

hfghdrr

ಉದ್ಯೋಗ ಖಾತ್ರಿ ಯೋಜನೆಯಡಿ ಗುದ್ದಲಿ ಹಿಡಿದ ಗ್ರಾಪಂ ಸದಸ್ಯ

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

fghydtyetyer

ಅಣ್ಣನ ಶವ ತಂಗಿ ಕಾರಿನಲ್ಲಿದ್ದರೂ ಗೊತ್ತಿರಲಿಲ್ಲವಂತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.