Udayavni Special

ಗ್ರಾಪಂ ನೌಕರರ ಬೇಡಿಕೆ ಈಡೇರಿಸಲು ಆಗ್ರಹ


Team Udayavani, Jul 24, 2019, 1:45 PM IST

kolar-tdy-3

ಗ್ರಾಪಂ ಸಿಬ್ಬಂದಿಗೆ ಸಕಾಲಕ್ಕೆ ವೇತನ ನೀಡಬೇಕೆಂದು ಆಗ್ರಹಿಸಿ ಶ್ರೀನಿವಾಸಪುರ ತಾಪಂ ಕಚೇರಿ ಮುಂದೆ ಗ್ರಾಪಂ ನೌಕರರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಶ್ರೀನಿವಾಸಪುರ: ಪಂಚಾಯ್ತಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಕನಿಷ್ಠ ವೇತನ ಕೊಡದೆ ವರ್ಷದಿಂದ ಸತಾಯಿಸಲಾಗುತ್ತಿದ್ದು ಅವರ ಕುಟುಂಬ ಗಳನ್ನು ಹೇಗೆ ಪೋಷಣೆ ಮಾಡಬೇಕು ಎಂದು ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಪಿ.ಆರ್‌.ಸೂರ್ಯನಾರಾಯಣ ಪ್ರಶ್ನಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಪಂ ಮುಂದೆ ಮಂಗಳವಾರ ಗ್ರಾಪಂ ನೌಕರರು ಮತ್ತು ಸಿಐಟಿಯು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಾಯಂಗೊಳಿಸಿಲ್ಲ:ಸಿಬ್ಬಂದಿಗೆ ವೇತನ ಸಮಯಕ್ಕೆ ಸರಿಯಾಗಿ ಕೊಡಬೇಕು. ಪ್ರತಿ ತಿಂಗಳು ದಿನಾಂಕ 5 ರೊಳಗೆ ಸಂಬಳ ಕೊಡಬೇಕು. ಈಗಾಗಲೆ ಬಾಕಿ ವೇತನ ಬಿಡುಗಡೆ ಮಾಡಿ ಎಲ್ಲಾ ಸಿಬ್ಬಂದಿಗೆ ಸಮವಸ್ತ್ರ ಸೇರಿದಂತೆ ಸೌಲಭ್ಯ ಕಲ್ಪಿಸ ಬೇಕೆಂದರು. ಪಂಚಾಯ್ತಿಗಳಲ್ಲಿ ದುಡಿಯುತ್ತಿರುವ ನೌಕರರನ್ನು 2018ರಲ್ಲಿ ಸರ್ಕಾರ ಕಾಯಂಗೊಳಿಸಿದೆ. ಆದರೆ ರಾಯಲ್ಪಾಡು, ಮುದಿ ಮಡುಗು, ಕೂರಿಗೇಪಲ್ಲಿ,ಯರ್ರಂವಾರಿಪಲ್ಲಿ ಪಂಚಾಯ್ತಿ ಗಳಲ್ಲಿ ಇನ್ನೂ ಹಾಗೆ ಉಳಿಸಿಕೊಂಡಿದ್ದಾರೆಂದರು.

ಆಗ್ರಹ: ಪಂಚಾಯ್ತಿಗಳಲ್ಲಿ ಎಲ್ಲಾ ಕೆಲಸಗಳಿಗೂ ಗ್ರಾಪಂ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವ ಅಧಿಕಾರಿಗಳಿಗೆ ನೇಮಕ ಮಾಡಿಕೊಂಡ ನೌಕರರಿಗೆ ಸಂಬಳ ಕೊಡ ಬೇಕೆನ್ನುವ ಕನಿಷ್ಠ ಜ್ಞಾನ ಮತ್ತು ಪ್ರಜ್ಞೆ ಇಲ್ಲವೆ ?. ಕೂಡಲೇ ಸರ್ಕಾರದ ಆದೇಶ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು 15 ದಿನದೊಳಗಾಗಿ ಎಲ್ಲರ ವೇತನ ನೀಡಬೇಕೆಂದು ಆಗ್ರಹಿಸಿದರು.

ಕೆಪಿಆರ್‌ಎಸ್‌ ತಾಲೂಕು ಅಧ್ಯಕ್ಷ ಪಾತಕೋಟೆ ನವೀನ್‌ಕುಮಾರ್‌ ಮಾತನಾಡಿ, 1993 ಕಾಯ್ದೆ ಅನ್ವಯ ಪಂಚಾಯ್ತಿಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸಿಬ್ಬಂದಿ ಸೇವೆ ಕಾಯಂಗಾಗಿ ಅನುಮೋದನೆಗೆ ಅವಕಾಶ ನೀಡಿ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲು ಪಿಡಿಒಗಳಿಗೆ ಸೂಚಿಸಬೇಕು. ಕಾರ್ಮಿಕ ಇಲಾಖೆ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಂತೆ ಕನಿಷ್ಠ ವೇತನ ನೀಡಿ ಎಲ್ಲಾ ಸಿಬ್ಬಂದಿ ಸೇವಾ ಪುಸ್ತಕ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಈ ವೇಳೆ ವಿವಿಧ 6 ಬೇಡಿಕೆಗಳ ಪಟ್ಟಿಯನ್ನು ತಾಪಂ ವ್ಯವಸ್ಥಾಪಕ ಸುರೇಶ್‌ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಾಪಂ ವ್ಯವಸ್ಥಾಪಕ ಸುರೇಶ್‌, ಅಧಿಕಾರಿಗಳ ಗಮನಕ್ಕೆ ತಂದು ಈಡೇರಿಕೆಗೆ ಆದ್ಯತೆ ನೀಡುತ್ತೇವೆಂದರು. ಪ್ರತಿಭಟನಾ ಕಾರರು ಬೇಡಿಕೆಗಳ ಪರ ಸ‌ರ್ಕಾರದ ಮತ್ತು ಪಾಲನೆಯಲ್ಲಿ ಅಧಿಕಾರಿಗಳ ವಿರೋಧಿ ಧೋರಣೆ ಖಂಡಿಸಿ ಘೋಷಣೆ ಕೂಗಿದರು. ಈಶ್ವರಪ್ಪ, ಶಂಕರಪ್ಪ ಇದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

DAVANAGERE

ದಾವಣಗೆರೆಯಲ್ಲಿ ಇಂದು 94 ಜನರಿಗೆ ಸೊಂಕು ದೃಢ: ಓರ್ವ ಸಾವು

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ-ಆಪರೇಷನ್ ಕಮಲದ ಭೀತಿ?

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ-ಆಪರೇಷನ್ ಕಮಲದ ಭೀತಿ?

sudhakar

ನಮ್ಮನ್ನೇ ದೂರವಿಟ್ಟ ಕಾಂಗ್ರೆಸ್‌ನವರು, ರಾಜ್ಯದ ಒಕ್ಕಲಿಗರ ಉದ್ಧಾರ ಮಾಡುತ್ತಾರಾ?: ಸುಧಾಕರ್

devara-gundi

ದೇವರಗುಂಡಿ ಜಲಪಾತದ ಬಳಿ ಅಶ್ಲೀಲ ಪೋಟೋಶೂಟ್: ನಟಿ ಬೃಂದಾ ಅರಸ್ ಕ್ಷಮೆಯಾಚನೆ !

cham-covid19

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಇಳಿಮುಖ

chikkaballapuara

ಚಿಕ್ಕಬಳ್ಳಾಪುರ ನಗರಸಭೆಯ ಚುನಾವಣೆ: ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲು ನಿರ್ಧಾರ !

chamarajanagar

ಚಾಮರಾಜನಗರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮ್ಮೇರಹಳ್ಳಿ ಕೆರೆ ಕಟ್ಟೆ ಬಿರುಕು ದೂರು: ಜಿಲ್ಲಾಧಿಕಾರಿ ಭೇಟಿ

ಅಮ್ಮೇರಹಳ್ಳಿ ಕೆರೆ ಕಟ್ಟೆ ಬಿರುಕು ದೂರು: ಜಿಲ್ಲಾಧಿಕಾರಿ ಭೇಟಿ

ಪಿಕಾರ್ಡ್‌ ಬ್ಯಾಂಕ್‌ನಿಂದ 1.46 ಕೋಟಿ ಸಾಲ ವಿತರಣೆ

ಪಿಕಾರ್ಡ್‌ ಬ್ಯಾಂಕ್‌ನಿಂದ 1.46 ಕೋಟಿ ಸಾಲ ವಿತರಣೆ

kolar-tdy-1

ಒಂದೇ ದಿನ 5 ಸಾವಿರ ರಾಸುಗಳಿಗೆ ಕಾಲುಬಾಯಿ ಲಸಿಕೆ

ಗ್ರಾಹಕರ ಮನೆ ಬಾಗಿಲಿಗೆ ಡಿಸಿಸಿ ಬ್ಯಾಂಕ್‌ ಸೇವೆ

ಗ್ರಾಹಕರ ಮನೆ ಬಾಗಿಲಿಗೆ ಡಿಸಿಸಿ ಬ್ಯಾಂಕ್‌ ಸೇವೆ

ಇನ್ನೂ ವಿತರಣೆ ಆಗದ ಬಿಸಿಯೂಟ ಪಡಿತರ

ಇನ್ನೂ ವಿತರಣೆ ಆಗದ ಬಿಸಿಯೂಟ ಪಡಿತರ

MUST WATCH

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

ಹೊಸ ಸೇರ್ಪಡೆ

DAVANAGERE

ದಾವಣಗೆರೆಯಲ್ಲಿ ಇಂದು 94 ಜನರಿಗೆ ಸೊಂಕು ದೃಢ: ಓರ್ವ ಸಾವು

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ-ಆಪರೇಷನ್ ಕಮಲದ ಭೀತಿ?

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆ-ಆಪರೇಷನ್ ಕಮಲದ ಭೀತಿ?

sudhakar

ನಮ್ಮನ್ನೇ ದೂರವಿಟ್ಟ ಕಾಂಗ್ರೆಸ್‌ನವರು, ರಾಜ್ಯದ ಒಕ್ಕಲಿಗರ ಉದ್ಧಾರ ಮಾಡುತ್ತಾರಾ?: ಸುಧಾಕರ್

devara-gundi

ದೇವರಗುಂಡಿ ಜಲಪಾತದ ಬಳಿ ಅಶ್ಲೀಲ ಪೋಟೋಶೂಟ್: ನಟಿ ಬೃಂದಾ ಅರಸ್ ಕ್ಷಮೆಯಾಚನೆ !

cham-covid19

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಇಳಿಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.