20 ವರ್ಷಗಳಾದ್ರೂ ವಿಲೇವಾರಿ ಮಾಡಿಲ್ಲ


Team Udayavani, Jun 4, 2020, 7:57 AM IST

scrap vech

ಕೋಲಾರ: 20 ವರ್ಷಗಳಿಂದಲೂ ಬಳಕೆಯಾಗದೇ 13 ವಾಹನಗಳು ದೂಳು ಹಿಡಿಯುತ್ತಿದ್ದು, ಜಿಪಂ ಕಚೇರಿ ಆವರಣ ಹಳೆಯ ವಾಹನಗಳ ಗುಜರಿಯಾಗಿದೆ. ಜಿಲ್ಲಾ ಪರಿಷತ್‌ ಇದ್ದ ಕಾಲದಲ್ಲಿ ಖರೀದಿ ಸಿದ್ದ ವಾಹನಗಳನ್ನು ಹೊಸ  ವಾಹನ ಖರೀದಿ ನಂತರ ಮೂಲೆ ಗುಂಪು ಮಾಡಲಾ ಗಿದ್ದು, ಅವುಗಳನ್ನು ಜಿಪಂ ಅಧಿಕಾರಿಗಳು ವಿಲೇವಾರಿ ಮಾಡಿಲ್ಲ. ಇದರಿಂದ ಜಿಪಂ ಆವರಣದಲ್ಲಿ ತುಕ್ಕು ಹಿಡಿಯುತ್ತಿವೆ.

ಹಳೆಯ ವಾಹನಗಳ ಬಳಕೆ ನಿಲ್ಲಿಸಿದಾಗಲೇ ಮಾರಾಟ ಮಾಡಿದ್ದರೆ ಅವುಗಳಿಗೆ ಕಿಂಚಿತ್ತಾ ದರೂ ಮೌಲ್ಯ ಸಿಗುತ್ತಿತ್ತು. ಆದರೆ, ಸಾರ್ವಜನಿಕ ಹಣ ಬಳಕೆ ಮಾಡಿ ಖರೀದಿ ಮಾಡಿರುವ ವಾಹನಗಳನ್ನು ಗಾಳಿ ಮಳೆಗೆ ತುಕ್ಕು ಹಿಡಿಯಲು ಬಿಟ್ಟಿ  ರುವುದರಿಂದ ಈಗ ಅವು ಚಲಾವಣೆಗೆ ಸೂಕ್ತವಲ್ಲದ ಗುಜರಿ ವಸ್ತುಗಳಾಗಿವೆ.

ಎಂಬತ್ತರ ದಶಕದಲ್ಲಿ ನೋಂದಣಿ: ಜಿಪಂ ಆವ ರಣದಲ್ಲಿ ನಿಂತಿರುವ 13 ವಾಹನಗಳ ಪೈಕಿ ಕೇವಲ ಎಂಟು ವಾಹನಗಳಿಗೆ ಮಾತ್ರವೇ ನೋಂದಣಿ ದಾಖಲೆಗಳು ಲಭ್ಯವಾಗಿದ್ದು, ಈ ಪೈಕಿ  ಒಂದೆರೆಡು ವಾಹನಗಳನ್ನು ಎಪ್ಪತ್ತು, ಎಂಬತ್ತರ  ದಶಕದಲ್ಲಿ ನೋಂದಣಿ ಮಾಡಲಾಗಿದೆ. ಉಳಿದವು ತೊಂಬತ್ತರ ದಶಕದಲ್ಲಿ ನೋಂದಣಿಯಾಗಿವೆ. ಅಂದರೆ ಖರೀದಿಯ ನಂತರ ಹತ್ತಿಪ್ಪತ್ತು ವರ್ಷ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಹೊತ್ತು ತಿರುಗಿದ ವಾಹನಗಳು ಅಷ್ಟೇ  ವರ್ಷಗಳ ಕಾಲ ಜಿಪಂ ಆವರಣದಲ್ಲಿ ದೂಳು ತಿನ್ನುವಂತಾಗಿದೆ.

ವಿಲೇವಾರಿಗೆ ಸಿದ್ಧತೆ: ಕೋಲಾರ ಜಿಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ರ ಗಮನಕ್ಕೆ ಈ ಹಳೆ ವಾಹನಗಳು ಬಂದಿದ್ದು, ವಿಲೇವಾರಿ ಮಾಡು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈಗ ಡೀಸಿ ಕಚೇರಿಯಿಂದ ಅನುಮತಿ ಸಿಕ್ಕರೆ ಹಳೇ  ವಾಹನಗಳಿಗೆ ಮುಕ್ತಿ ಸಿಗಲಿದೆ.

ಕೋಲಾರ ಜಿಪಂ ಹಳೆಯ ವಾಹನಗಳು ಉಪಯೋಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವುದರಿಂದ ವಾಹನಗಳನ್ನು ಅನುಪಯುಕ್ತಗೊಳಿಸಲು ದೃಢೀಕರಿಸಲಾಗಿದೆ. ವಾಹನಗಳ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಲಾಗಿದೆ.  
-ವಿಶ್ವಜೀತ್‌ ಮಲಾಜರೆ, ಮೋಟಾರು ವಾಹನ ನಿರೀಕ್ಷಕರು. ಆರ್‌ಟಿಒ

ಜಿಪಂ ಆವರಣದಲ್ಲಿರುವ ಹಳೆ ವಾಹನಗಳನ್ನು ಗಮನಿಸಿ ತುರ್ತು ವಿಲೇವಾರಿಗೆ ಸೂಚನೆ ನೀಡಿದ್ದೆ. ಆರ್‌ಟಿಒದಿಂದ ಅನುಮತಿ ಪಡೆದುಕೊಳ್ಳಲಾಗಿದೆ. ಡೀಸಿಯಿಂದ ಅನುಮತಿ ನಿರೀಕ್ಷಿಸಲಾಗುತ್ತಿದೆ. ಬಂದ ತಕ್ಷಣ ವಿಲೇವಾರಿ  ಮಾಡಲಾಗುವುದು.
-ಸಿ.ಎಸ್‌.ವೆಂಕಟೇಶ್‌, ಜಿಪಂ ಅಧ್ಯಕ್ಷ, ಕೋಲಾರ

* ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ನರಗುಂದ ಹತ್ಯೆ ಘಟನೆ: ನ್ಯಾಯಾಂಗ ತನಿಖೆಗೆ ವಹಿಸಲು ಸಲೀಂ ಆಹಮದ್‌ ಒತ್ತಾಯ

ನರಗುಂದ ಹತ್ಯೆ ಘಟನೆ: ನ್ಯಾಯಾಂಗ ತನಿಖೆಗೆ ವಹಿಸಲು ಸಲೀಂ ಆಹಮದ್‌ ಒತ್ತಾಯ

ಒಂದೇ ದಿನ 46,426 ಕೋವಿಡ್‌ ಸೋಂಕು ದೃಢ: 32 ಸಾವು

ಒಂದೇ ದಿನ 46,426 ಕೋವಿಡ್‌ ಸೋಂಕು ದೃಢ: 32 ಸಾವು

ಗಣರಾಜ್ಯೋತ್ಸವ ಪರೇಡ್‌ ನೇರ ಪ್ರಸಾರಕ್ಕೆ ದೂರದರ್ಶನ ಸಿದ್ಧತೆ : 59 ಕ್ಯಾಮೆರಾ, 160 ಸಿಬ್ಬಂದಿ

ಗಣರಾಜ್ಯೋತ್ಸವ ಪರೇಡ್‌ ನೇರ ಪ್ರಸಾರಕ್ಕೆ ದೂರದರ್ಶನ ಸಿದ್ಧತೆ : 59 ಕ್ಯಾಮೆರಾ, 160 ಸಿಬ್ಬಂದಿ

ಅನುಭವ ಮಂಟಪ ನಿರ್ಮಾಣ ಶೀಘ್ರ ಆರಂಭಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ

ಅನುಭವ ಮಂಟಪ ನಿರ್ಮಾಣ ಶೀಘ್ರ ಆರಂಭಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ

ಮುಖ್ಯಮಂತ್ರಿಗಳ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ : ಸಚಿವ ‌ಶಿವರಾಮ ಹೆಬ್ಬಾರ್

ಉತ್ತರ ಕನ್ನಡ ನನ್ನ ಕರ್ಮ ಭೂಮಿ ಅದರ ಅಭಿವೃದ್ಧಿಗೆ ಸದಾ ಶ್ರಮಿಸುವೆ :ಸಚಿವ ‌ಶಿವರಾಮ ಹೆಬ್ಬಾರ್

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಸಕ, ತಹಶೀಲ್ದಾರ್‌ ವಾಗ್ವಾದ ಆಡಿಯೋ ವೈರಲ್‌

ಶಾಸಕ, ತಹಶೀಲ್ದಾರ್‌ ವಾಗ್ವಾದ ಆಡಿಯೋ ವೈರಲ್‌

ಕೆಲಸ ಒಬ್ಬರದು, ಪ್ರಚಾರ ಪಡೆಯುತ್ತಿರುವುದು ಇನ್ನೊಬ್ಬರು

ಕೆಲಸ ಒಬ್ಬರದು, ಪ್ರಚಾರ ಪಡೆಯುತ್ತಿರುವುದು ಇನ್ನೊಬ್ಬರು

1500 ಕೋಟಿ ರೂ.ಬೆಳೆ ಸಾಲಕ್ಕೆ ಬೇಡಿಕೆ

1500 ಕೋಟಿ ರೂ.ಬೆಳೆ ಸಾಲಕ್ಕೆ ಬೇಡಿಕೆ

ವಿಶ್ವಕರ್ಮ ಸಮುದಾಯಕ್ಕೆ ಅನುದಾನ ಸೀಮಿತ: ಖಂಡನೆ

ವಿಶ್ವಕರ್ಮ ಸಮುದಾಯಕ್ಕೆ ಅನುದಾನ ಸೀಮಿತ: ಖಂಡನೆ

3 ಸಾವಿರಕ್ಕೂ ಅಧಿಕ ಮಂದಿಗೆ ಮನೆಯಲ್ಲೇ ಚಿಕಿತ್ಸೆ : ‌ ಮನೆಗಳಿಗೆ ಔಷಧಿ ವಿತರಿಸಲು ಸೂಚನೆ

3 ಸಾವಿರಕ್ಕೂ ಅಧಿಕ ಮಂದಿಗೆ ಮನೆಯಲ್ಲೇ ಚಿಕಿತ್ಸೆ : ‌ ಮನೆಗಳಿಗೆ ಔಷಧಿ ವಿತರಿಸಲು ಸೂಚನೆ

MUST WATCH

udayavani youtube

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ಯತ್ನಾಳ್

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

ಹೊಸ ಸೇರ್ಪಡೆ

ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ನರಗುಂದ ಹತ್ಯೆ ಘಟನೆ: ನ್ಯಾಯಾಂಗ ತನಿಖೆಗೆ ವಹಿಸಲು ಸಲೀಂ ಆಹಮದ್‌ ಒತ್ತಾಯ

ನರಗುಂದ ಹತ್ಯೆ ಘಟನೆ: ನ್ಯಾಯಾಂಗ ತನಿಖೆಗೆ ವಹಿಸಲು ಸಲೀಂ ಆಹಮದ್‌ ಒತ್ತಾಯ

ಒಂದೇ ದಿನ 46,426 ಕೋವಿಡ್‌ ಸೋಂಕು ದೃಢ: 32 ಸಾವು

ಒಂದೇ ದಿನ 46,426 ಕೋವಿಡ್‌ ಸೋಂಕು ದೃಢ: 32 ಸಾವು

ಗಣರಾಜ್ಯೋತ್ಸವ ಪರೇಡ್‌ ನೇರ ಪ್ರಸಾರಕ್ಕೆ ದೂರದರ್ಶನ ಸಿದ್ಧತೆ : 59 ಕ್ಯಾಮೆರಾ, 160 ಸಿಬ್ಬಂದಿ

ಗಣರಾಜ್ಯೋತ್ಸವ ಪರೇಡ್‌ ನೇರ ಪ್ರಸಾರಕ್ಕೆ ದೂರದರ್ಶನ ಸಿದ್ಧತೆ : 59 ಕ್ಯಾಮೆರಾ, 160 ಸಿಬ್ಬಂದಿ

ಅನುಭವ ಮಂಟಪ ನಿರ್ಮಾಣ ಶೀಘ್ರ ಆರಂಭಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ

ಅನುಭವ ಮಂಟಪ ನಿರ್ಮಾಣ ಶೀಘ್ರ ಆರಂಭಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.