ಮಳೆ, ಚಳಿ ಗಾಳಿಗೆ ಕೋಲಾರ ಜಿಲ್ಲೆ ಜರ್ಜರಿತ


Team Udayavani, Nov 16, 2021, 3:56 PM IST

ಮಳೆ, ಚಳಿ ಗಾಳಿಗೆ ಕೋಲಾರ ಜಿಲ್ಲೆ ಜರ್ಜರಿತ

ಕೋಲಾರ: ನಾಲ್ಕೈದು ದಿನಗಳಿಂದಲೂ ಸತತ ಜಡಿ ಮಳೆಗೆ ಕಂಗೆಟ್ಟಿದ್ದ ಜಿಲ್ಲೆಯ ಜನತೆ ಸೋಮವಾರ ಬಿಸಿಲುಕಂಡುಉಲ್ಲಾಸಿತರಾದರು.ಬಂಗಾಳಕೊಲ್ಲಿ ಯಲ್ಲಿ ಎದ್ದ ಚಂಡಮಾರುತದ ಪರಿಣಾಮದಿಂದ ಜಿಲ್ಲಾದ್ಯಂತ ನಾಲ್ಕೈದು ದಿನಗಳಿಂದಲೂ ಎಡೆಬಿಡದೆ ಸುರಿಯುತ್ತಿದ್ದ ಜಡಿ ಮಳೆ, ಚಳಿ ಗಾಳಿ ಜನ ಜೀವ ಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು.

ಜಡಿ ಮಳೆಯ ಕಾರಣದಿಂದಾಗಿ ರಸ್ತೆಗಳು ಹಾಳಾಗಿದ್ದವು. ಇತ್ತೀಚಿಗೆ ಹಾಕಿದ್ದ ಡಾಂಬರು ಕಿತ್ತು ಬಂದು ಗುಂಡಿಗಳನ್ನು ಮೂಡಿಸಿತ್ತು. ಈ ಮೂಲಕ ಕಾಮಗಾರಿಯ ಗುಣಮಟ್ಟವನ್ನು ಸಾರ್ವಜನಿಕವಾಗಿ ಸಾರಿ ಹೇಳಿತ್ತು. ಜಿಲ್ಲಾ ಕೇಂದ್ರ ಸೇರಿದಂತೆ ಬಹುತೇಕ ಗ್ರಾಮೀಣ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದ್ದವು.

ರಸ್ತೆಗಳ ಗುಣಮಟ್ಟ ಬಹಿರಂಗ: ಮಣ್ಣು ರಸ್ತೆಗಳನ್ನಂತೂ ಕೇಳುವಂತೆಯೇ ಇರಲಿಲ್ಲ. ಕೆಸರುಗದ್ದೆಗಳಾಗಿ ಮಾರ್ಪಟ್ಟಿದ್ದವು. ಸಾರ್ವಜನಿಕರು ವಾಹನ ಸವಾರಿ ಮಾಡಲು ಮತ್ತು ಸಂಚರಿಸಲು ಪರದಾಡುವಂತಾಗಿದ್ದು. ಒಟ್ಟಾರೆ ಜಡಿಮಳೆಯು ಕೋಲಾರ ಜಿಲ್ಲೆಯ ರಸ್ತೆಗಳ ಗುಣಮಟ್ಟವನ್ನು ಬಹಿರಂಗಗೊಳಿಸಿತ್ತು. ಕೃಷಿಕರ ಆಸೆಗೆ ನೀರು: ಕೋಲಾರ ನಗರದ ಪ್ರಮುಖ ರಸ್ತೆಗಳ ಅಗಲೀಕರಣ, ಡಾಂಬರೀಕರಣ ನಡೆಯುತ್ತಿದ್ದು, ಜಲ್ಲಿ ಕಲ್ಲುಗಳ ರಸ್ತೆಯಲ್ಲಿ ಜಡಿ ಮಳೆಯಲ್ಲಿ ಸಂಚರಿಸುವುದು ಸಾರ್ವಜನಿಕರಿಗೆ ಸವಾಲಿನ ಕೆಲಸವಾಗಿತ್ತು, ರಸ್ತೆಗಳ ಪಾಡು ಇದಾದರೆ,ಈ ಬಾರಿ ಉತ್ತಮ ಮಳೆಯಾಗುತ್ತಿದೆಯೆಂದು ಕೃಷಿ ಚಟುವಟಿಕೆಗಳಲ್ಲಿ ಚುರುಕಿನಿಂದಲೇ ಭಾಗವಹಿಸಿ ಒಂದಷ್ಟು ರಾಗಿ ಪೈರು ಬೆಳೆಯುವ ಆಸೆ ತೋರಿದ್ದಕೃಷಿಕರ ಆಸೆಗೆ ಜಡಿ ಮಳೆ ನೀರೆರೆಯಿತು.

ಮೂಡಿದ ಆಶಾಕಿರಣ: ಆರಂಭದ ಮಳೆಗೆ ಬಿತ್ತನೆ ಮಾಡಿದ್ದ ರಾಗಿ ಪೈರು ಬೆಳೆದು ಫ‌ಸಲಿನ ಹಂತಕ್ಕೆ ಬಂದಿದ್ದು, ಜಡಿ ಮಳೆಯಿಂದಾಗಿ ಫ‌ಸಲಿನ ಕೊಯ್ಲು ಸಾಧ್ಯವಿಲ್ಲದಂತಾಗಿತ್ತು. ಇದರಿಂದ ರಾಗಿ ಪೈರು ನೆಲಕ್ಕೆ ಕಚ್ಚಿ ಕೊಂಡಿತ್ತು. ಇದರಿಂದ ರೈತಾಪಿ ವರ್ಗವು ಬೆಳೆದು ನಿಂತ ಬೆಳೆ ಕಣ್ಣ ಮುಂದೆಯೇ ಹಾಳಾಗುತ್ತಿರುವುದನ್ನು ನೋಡಬೇಕಾಯಿತು. ಸೋಮವಾರ ಮಳೆಗೆ ಬಿಡುವು ನೀಡಿ ಬಿಸಿಲು ಬಂದಿದ್ದು, ರೈತರಲ್ಲಿ ಕೊಂಚ ಆಶಾಕಿರಣ ಮೂಡೀಸಿತು.

ಕಾರ್ಯಕಲಾಪಗಳು ಚೇತರಿಕೆ: ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಯಾವುದೇ ರಜೆ ಘೋಷಣೆ ಮಾಡದೇ ಇದ್ದುದ್ದರಿಂದ ಜಡಿ ಮಳೆಯಲ್ಲಿಯೇ ಮಕ್ಕಳು ಶಾಲೆಗೆ ಹೋಗುವಂತಾಗಿತ್ತು. ಕೆಲವು ಶಾಲೆಗಳಲ್ಲಿ ಮಕ್ಕಳು ಶಾಲಾ ಆವರಣದಲ್ಲಿ ಜಾರಿ ಬಿದ್ದು ಕೈಕಾಲು ಮುರಿದ ಘಟನೆಗಳು ನಡೆದಿವೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಓಡಾಟ ತೀರಾ ಕಡಿಮೆಯಾಗಿತ್ತು. ಸೋಮವಾರ ಕಚೇರಿ ಕಾರ್ಯಕಲಾಪಗಳುಕೊಂಚ ಚೇತರಿಕೆಕಂಡವು. ಜಡಿ ಮಳೆ ಚಳಿಗಾಳಿಯ ಪ್ರಭಾವದಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದವು. ಜ್ವರ, ನೆಗಡಿ, ಕೆಮ್ಮಿನಂತಹ ಪ್ರಕರಣಗಳು ವಿಪರೀತ ಕಂಡು ಬಂದು ರೋಗಿಗಳು ಕ್ಲಿನಿಕ್‌, ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಮುಗಿಬೀಳುತ್ತಿದ್ದುದುಕಂಡು ಬಂದಿತು.

ವ್ಯಾಪಾರಕ್ಕೂ ಪೆಟ್ಟು: ಮಳೆ, ಗಾಳಿಯ ಕಾರಣದಿಂದ ದೇಹವನ್ನು ಬೆಚ್ಚಗಿರಿಸಲು ಜನತೆ ಉಣ್ಣೆಯ ಬಟ್ಟೆಗಳು, ಜರ್ಕಿನ್‌, ಶಾಲು, ಟೋಪಿಗಳಿಗೆ ಮೊರೆ ಹೋದರು. ತೀರಾ ಅಗತ್ಯವಿದ್ದರೆ ಮಾತ್ರವೇ ಮನೆಗಳಿಂದ ಹೊರ ಬರುತ್ತಿದ್ದರು. ಸಂಜೆಯ ವೇಳೆಯ ವ್ಯಾಪಾರ ವಹಿವಾಟು ತೀರಾಕಡಿಮೆ ಎನ್ನುವಂತಿತ್ತು.

ದೊಡ್ಡ ಕಾರ್ಯಕ್ರಮ ಮುಂದಕ್ಕೆ: ಜಡಿಮಳೆ, ಚಳಿಗಾಳಿಯ ಪರಿಣಾಮದಿಂದ ಬಹುತೇಕ ದೊಡ್ಡ ಕಾರ್ಯಕ್ರಮಗಳು ಮುಂದೂಡಲ್ಪಟ್ಟವು. ನಿಗದಿತವಾಗಿದ್ದ ಮದುವೆಗಳು ನಡೆದವಾದರೂ, ನಿರೀಕ್ಷಿತ ಜನರ ಆಗಮನ ಕಾಣಿಸುತ್ತಿರಲಿಲ್ಲ. ನಿತ್ಯವೂ ಪಾರ್ಕ್‌ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ವಾಕಿಂಗ್‌, ಯೋಗ, ಕರಾಟೆ, ಜಿಮ್‌ಗೆ ತೆರಳುತ್ತಿದ್ದವರು ಜಡಿ ಮಳೆಯಿಂದ ತಮ್ಮ ನಿತ್ಯದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದು ಸಾಮಾನ್ಯವಾಗಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ಬಿಸಿಲು ಕಾಣಿಸಿಕೊಂಡು ಸಂಜೆಯವರೆಗೂ ಬಿಸಿಲಿನ ವಾತಾವರಣಇದ್ದುದ್ದರಿಂದ ಜನತೆಕೊಂಚ ಮಟ್ಟಿಗೆ ಜಡಿಮಳೆಕಾಟದಿಂದಚೇತರಿಸಿಕೊಳ್ಳುವಂತಾಗಿತ್ತು.

ನೆನೆದ ಕಡತಗಳು: ಮಳೆಯಿಂದಾಗಿ ಶಿಥಿಲಗೊಂಡಿ ರುವ ಕಟ್ಟಡಗಳು ಕೆಲವೆಡೆ ಕುಸಿದು ಬಿದ್ದಿದ್ದು, ಕೆಲವು ಬೀಳುವ ಸಾಧ್ಯತೆಯಿಂದ ಭೀತಿ ಹುಟ್ಟಿಸಿವೆ. ಹಳೆಯ ಕಟ್ಟಡದ ಸರಕಾರಿ ಕಚೇರಿಗಳು ಮಳೆಯಿಂದಾಗಿ ಸೋರುತ್ತಿದ್ದ ಕಾರಣ ಕಡತಗಳು ಸಂಪೂರ್ಣ ನೆನೆದು ಹೋಗಿರುವ ಘಟನೆಗಳು ನಡೆದಿವೆ. ಸೋಮವಾರ ಕಂಡು ಬಂದ ಬಿಸಿಲಿಗೆ ಕಡತಗಳನ್ನು ಬಿಸಿಲಿಗಿಟ್ಟು ಒಣಗಿಸುತ್ತಿದ್ದ ದೃಶ್ಯವುಹಳೇಡೀಸಿ ಕಚೇರಿಆವರಣದ ಕಚೇರಿಗಳಲ್ಲಿಕಂಡುಬಂದಿತು. ಆದರೂ, ಸೋಮವಾರ ಸಂಜೆ ವೇಳೆಗೆ ಮತ್ತೆ ಮೋಡಕವಿದ ವಾತಾವರಣಕಂಡು ಬಂದಿದ್ದರಿಂದ ಸಾರ್ವಜನಿಕರು ಇನ್ನೆಷ್ಟು ದಿನ ಈ ಜಡಿಮಳೆ ಚಳಿಗಾಳಿಯಕಾಟ ಎಂದು ಗೊಣಗುವಂತಾಗಿದೆ.

ಜ್ವರದಿಂದ ಬಳಲಿದ ಜನ : ಕೊರೊನಾ ನೆಗೆಟಿವ್‌ ಇದ್ದರೂ ಜ್ವರ ಬಾಧೆಯಿಂದ ಜನರು ನರಳುತ್ತಿರುವುದು, ಒಬ್ಬರಿಗೆ ಜ್ವರಕಾಣಿಸಿಕೊಂಡು ಇಡೀ ಕುಟುಂಬ ಜ್ವರದಿಂದ ನರಳುತ್ತಿದ್ದುದು ಸಾಮಾನ್ಯ ಎನ್ನುವಂತಾಗಿತ್ತು. ಇದು ಜನರ ಆತಂಕಕ್ಕೂಕಾರಣವಾಗಿತ್ತು. ಆದರೆ, ಹೆಚ್ಚಿನ ಪ್ರಾಣಹಾನಿ ಇಲ್ಲದೆ ಒಂದಷ್ಟು ಸಾವಿರ ರೂ. ಖರ್ಚು ಮಾಡಿಸಿ ಒಂದು ವಾರದೊಳಗೆ ಜ್ವರ ವಾಸಿಯಾಗುತ್ತಿದ್ದುದು ಜನರನ್ನುಕೊಂಚ ಸಮಾಧಾನವಾಗುವಂತೆ ಮಾಡಿತು.

-ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.