ನಿಜವಾದ ಸಮಾಜ ಸೇವಕರ ಗುರುತಿಸಿ

Team Udayavani, Jul 15, 2019, 11:49 AM IST

ಬಂಗಾರಪೇಟೆ: ಯಾವುದೇ ಆಮಿಷಗಳಿಗೆ ಒಳಗಾಗದೇ ಎಲೆ ಮರೆ ಕಾಯಿಯಂತೆ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುತ್ತಿರುವವರನ್ನು ಕಸಾಪವು ಗುರುತಿಸಿ ಬೆಳಕಿಗೆ ತರುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ  ಕಾಲೇಜು ಆವರಣದಲ್ಲಿ ನಡೆಯುತ್ತಿರುವ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಯಾವುದೇ ಪ್ರಚಾರವನ್ನೂ ಬಯಸದೇ ಸೇವೆ ಮಾಡುವುದೇ ನಿಜವಾದ ಜನಸೇವೆಯಾಗಿದೆ ಎಂದರು.

ಸಾಧಕರ ಗುರುತಿಸಿ: ಆಧುನಿಕ ಯುಗದಲ್ಲಿ ಸರ್ಕಾರಿ ನೌಕರರೂ ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರಕ್ಕೆ ಒಳಗಾಗಿ ಕೆಲಸ ಮಾಡುತ್ತಿರುವ ಬಗ್ಗೆ ಸಾಕಷ್ಟು ಆರೋಪ ಕೇಳಿಬರುತ್ತಿದೆ. ಆದರೆ, ಕೆಲವು ಅಧಿಕಾರಿ, ಸಿಬ್ಬಂದಿ ತಮ್ಮ ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ತಮ್ಮ ಸೇವಾವಧಿಯಲ್ಲಿ ಅನುಸರಿಸಿಕೊಂಡು ಹೋಗುತ್ತಿರುವುದು ಸ್ವಾಗತರ್ಹ. ಯಾವುದೇ ಸೇವೆಯು ಪ್ರಾಮಾಣಿಕತೆಯಾಗಿದ್ದಲ್ಲಿ ಸಂಘ-ಸಂಸ್ಥೆಗಳು ಗುರ್ತಿಸಿ ಗೌರವಿಸುವುದೂ ಒಂದು ಸಾಮಾಜಿಕ ಸೇವೆಯೇ ಆಗಿದೆ ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಶಿಕ್ಷಣ ಮಾರಾಟದ ವಸ್ತುವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸರ್ಕಾರಿ ಶಾಲೆಗಳು ಅಸ್ತಿತ್ವದಲ್ಲಿರಬೇಕಾದರೆ ಮುಖ್ಯವಾಗಿ ಆಯಾಯ ಶಾಲೆಗಳ ಸರ್ಕಾರಿ ಶಿಕ್ಷಕರ ಪ್ರಾಮಾಣಿಕ ಸೇವೆಯೇ ಕಾರಣ ಎಂದು ಅವರು ಹೇಳಿದರು.

ಶಿಕ್ಷಕರ ಕಾರ್ಯ ಶ್ಲಾಘನೀಯ: ಸರ್ಕಾರ ಎಲ್ಲಾ ಖಾಸಗಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳನ್ನು ನೀಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಶಿಕ್ಷಕರು ಬೇರೆಯವರ ಆಸರೆಯನ್ನು ಪಡೆಯದೇ ತಮ್ಮ ಸಂಬಳದಲ್ಲಿ ಬರುವ ಹಣದಿಂದ ವಿದ್ಯಾರ್ಥಿಗಳಿಗೆ ಬಟ್ಟೆ, ಪುಸ್ತಕಗಳು, ಬ್ಯಾಗ್‌, ವಿವಿಧ ಸಲಕರಣಿಗಳನ್ನು ಕೊಡಿಸಿ ಅನುಕೂಲ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ: ಶಿಕ್ಷಕರಾದ ಹರ್ಷಿಯಾ ಭಾನು, ಎಂ.ಎಸ್‌.ನಾರಾಯಣಸ್ವಾಮಿ, ಗುಲ್ಲಹಳ್ಳಿ ರಮೇಶ್‌, ಹರ್ಷದ್‌, ರಾಜೇಶ್ಪರಿ ಪಡತಾರೆ, ಕಂದಾಯ ನಿರೀಕ್ಷಕ ಗೋಪಾಲ್, ಎಎಸ್‌ಐ ರವೀಂದ್ರ, ಚಿತ್ರ ಕಲಾವಿದ ಪಿ.ಮುನಿಯಪ್ಪ, ತಾಪಂ ನೌಕರ ಗೋವಿಂದಪ್ಪ, ಗ್ರಾಪಂ ನೌಕರ ಕೇಶವರಾವ್‌, ಗೃಹರಕ್ಷಕ ದಳದ ನಾಗೇಶ್‌, ಸಮಾಜ ಸೇವಕರಾದ ದೊಡ್ಡವಲಗಮಾದಿ ಲಕ್ಷ್ಮಮ್ಮ, ಮುಭಾರಕ್‌, ಭಗವಾನ್‌, ಬೆಮಲ್ ಎಂವಿಎನ್‌ ಮೂರ್ತಿ, ಪಿಡಿಒಗಳಾದ ಗುಲ್ಲಹಳ್ಳಿ ಕೆ.ವಿ.ರಾಧಾಕೃಷ್ಣ, ಕೇತಗಾನಹಳ್ಳಿ ಜಿ.ಸರಸ್ವತಿ, ಸಾಯಿಬಾಬ ದೇವಾಲಯದ ನಾಗರಾಜ್‌, ಪುರಸಭೆ ಅರೋಗ್ಯ ನಿರೀಕ್ಷಕ ಗೋವಿಂದರಾಜ್‌ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರಾದ ಸಾಧಿಕ್‌ಪಾಷ, ಗೋವಿಂದ, ಕಪಾಲಿ ಶಂಕರ್‌, ವಸಂತರೆಡ್ಡಿ, ರಾಕೇಶ್‌ಗೌಡ, ಸುನೀಲ್ಕುಮಾರ್‌, ಸುಹೇಲ್, ದೇಶಿಹಳ್ಳಿ ಪ್ರಭಾಕರ್‌ ಮುಂತಾದವರನ್ನು ಗೌರವಿಸಲಾಯಿತು. 2018-19ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಬಿ.ಎನ್‌.ಪ್ರಭುಲಿಂಗ ದೇವರು, ತಾಲೂಕು ಕಸಾಪ ಅಧ್ಯಕ್ಷ ತೇ.ಸಿ.ಬದರೀನಾಥ್‌, ಲಯನ್‌ ನಂದಾ, ಎಸ್ಸಿ.ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಟಿ.ಆರ್‌.ಮುನಿನಾರಾಯಣ, ಆರ್‌.ಸಂಜೀವಪ್ಪ, ಎನ್‌ಜಿಓ ವೆಂಕಟೇಶಪ್ಪ, ಶಿಕ್ಷಕ ರವಿ ಹಲಕರ್ಣಿ, ಮೈ.ಸತೀಶ್‌ಕುಮಾರ್‌ ಮುಂತಾದವರು ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ