ಅಪಾಯಕ್ಕೆಆಹ್ವಾನ ನೀಡುವ ಕೆರೆಕಟ್ಟೆ ರಸ್ತೆ

Team Udayavani, May 24, 2018, 3:17 PM IST

kol-3.jpg

ಮುಳಬಾಗಿಲು: ತಾಲೂಕಿನ ಮಂಡಿಕಲ್‌ ಗ್ರಾಮದ ಕೆರೆ ಕಟ್ಟೆ ಮೇಲೆ ದಶಕಗಳ ಹಿಂದೆ ನಿರ್ಮಿಸಲಾಗಿರುವ ರಸ್ತೆಯಲ್ಲಿ ಮಣ್ಣು ಕುಸಿದು ಹಳ್ಳ ದಿನ್ನೆಗಳು ಉಂಟಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದರೂ ಸಂಬಂಧಿಸಿದ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ತಾಲೂಕಿನ ದುಗ್ಗಸಂದ್ರ ಹೋಬಳಿ ಮಂಡಿಕಲ್‌ ದೊಡ್ಡಕೆರೆ ಕಟ್ಟೆ ಮೇಲೆ ತಿರುವುಗಳಂತೆ ನಿರ್ಮಿಸಿರುವ ಕಿರಿದಾದ ರಸ್ತೆಯಲ್ಲಿ ಭಾರೀ ವಾಹನಗಳ ಅತಿಯಾಗಿ ಒಡಾಟದಿಂದ ಕಟ್ಟೆಯ ಇಕ್ಕೆಲಗಳಲ್ಲಿನ ಮಣ್ಣು ಕುಸಿದು ಹಳ್ಳಗಳು ಉಂಟಾಗಿವೆ. ಈ ರಸ್ತೆಯಲ್ಲಿ ನಿಧಾನವಾಗಿ ಸಂಚರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಒಂದು ವಾಹನ ಬಂದಾಗ ಮತ್ತೂಂದು ವಾಹನ ಸಾಕಷ್ಟು ಪರದಾಡಬೇಕಾಗುತ್ತದೆ. ಒಂದು ವೇಳೆ ಯಾವುದೇ ವಾಹನ ಅತೀ ವೇಗದಿಂದ ಸಂಚರಿಸಿದರೆ 20 ಅಡಿಗಳ ಆಳದ ಕೆರೆ ಅಥವಾ ಗದ್ದೆಗಳಲ್ಲಿ ಬೀಳುವ ಸಂಭವವಿದೆ. 

ಆದರೂ, ಪ್ರತಿನಿತ್ಯ ಈ ಭಾಗದ ಅಗರಂ, ಕೊಲದೇವಿ, ಮಂಡಿಕಲ್‌ ಸೇರಿದಂತೆ ವಿವಿಧ ಗ್ರಾಮಗಳಿಂದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಮುಳಬಾಗಿಲಿಗೆ ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಹೋಗಬೇಕು. ಅದರೊಂದಿಗೆ ಖಾಸಗಿ ಶಾಲಾ ವಾಹನಗಳು ಈ ಭಾಗದ ಮಕ್ಕಳನ್ನು ಕರೆದುಕೊಂಡು ಮುಳಬಾಗಿಲಿಗೆ ಸಂಚರಿಸುತ್ತವೆ. 

ಅಲ್ಲದೇ, ರಾಮಸಂದ್ರ ರಸ್ತೆಯಿಂದ ರಾ.ಹೆ.234ಕ್ಕೆ ಮುಡಿಯನೂರು ಸೇರುವ ಪ್ರಮುಖ ರಸ್ತೆಯು ಇದಾಗಿದೆ. ಪ್ರಮುಖವಾಗಿ ಮಂಡಿಕಲ್‌ ಶ್ರೀ ಚೌಡೇಶ್ವರಿ ದೇವಾಲಯ, ಕೊಲದೇವಿ ಗರುಡ ದೇವಾಲಯ, ಹರಪನಾಯಕನಹಳ್ಳಿ ಕೋಟೆ ಸ್ಥಳಗಳು ಇದೇ ಮಾರ್ಗದಲ್ಲಿ ಇರುವುದರಿಂದ ಪ್ರತಿನಿತ್ಯ ವಾಹನಗಳ ಸಂಚಾರ ಹೆಚ್ಚಾಗಿಯೇ ಇರುತ್ತದೆ.
 
ಈ ಕೆರೆ ಕಟ್ಟೆಯ ಮೇಲೆ ಹಲವಾರು ದಶಕಗಳ ಹಿಂದೆ ರಸ್ತೆ ನಿರ್ಮಿಸಿದ್ದರೂ ಉತ್ತಮವಾಗಿದ್ದ ರಸ್ತೆಯಲ್ಲಿ ಹಲವು ವರ್ಷಗಳ ಹಿಂದೆ ನಿರಂತರವಾಗಿ ಮರಳು ಲಾರಿಗಳು ರಾತ್ರಿ ವೇಳೆ ಓಡಾಟ ನಡೆಸಿದ್ದರಿಂದ ಕಿರಿದಾದ ಕಟ್ಟೆಯ ಮೇಲಿನ ಮಣ್ಣು ಕೆಳಗಡೆ ಕುಸಿದು ಇಂತಹ ದುಸ್ತಿತಿಗೆ ಕಾರಣವಾಗಿದೆ. 

3 ವರ್ಷದ ಹಿಂದೆ ಡೆಕ್ಕನ್‌ ವಿದ್ಯಾ ಸಂಸ್ಥೆಯ ಬಸ್‌ ಎದುರಿಗೆ ಬಂದ ಮತ್ತೂಂದು ವಾಹನಕ್ಕೆ ಸ್ಥಳಾವಕಾಶ ನೀಡಲು ಪಕ್ಕಕ್ಕೆ ನಿಲ್ಲುತ್ತಿದ್ದಂತೆ ಎಡಗಡೆ ಕುಸಿದು ಹಳ್ಳಕ್ಕೆ ಬಿದ್ದಿತ್ತು. ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯವಿಲ್ಲದಿದ್ದರೂ 40-50 ಮಕ್ಕಳು ಗಾಯಗೊಂಡಿದ್ದರು. ಆಗ ಜನರ ಆಕ್ರೋಶಕ್ಕೆ ತಲ್ಲಣ ಗೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಮಾಡಲಾಗುವುದೆಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಪ್ರಯೋ ಜನವಾಗಿಲ್ಲ. ಇನ್ನಾದರೂ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುವರೇ ಎಂಬುದನ್ನು ಕಾದುನೋಡಬೇಕಾಗಿದೆ.

ಎಷ್ಟೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಮಾರ್ಗದಲ್ಲಿ ದೇವಾಲಯಕ್ಕೆ ಬಂದು ಹೋದರೂ ಸಂಪೂರ್ಣವಾಗಿ ಹಾಳಾಗಿರುವ ರಸ್ತೆಗೆ ಯಾರೊಬ್ಬರೂ ಕಾಯಕಲ್ಪ ನೀಡದಿರುವುದು ವಾಹನಗಳ ಸಂಚಾರಕ್ಕೆ ತೊಂದರೆ ಯುಂಟಾಗಿದೆ. ಶೀಘ್ರವೇ ಕೆರೆ ಕಟ್ಟೆಯೊಂದಿಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು.  ನಾಗರಾಜ್‌, ಮಂಡಿಕಲ್‌ ತಾಲೂಕಿನ ಮಂಡಿಕಲ್‌ ಕೆರೆ ಕಟ್ಟೆ ರಸ್ತೆಗೆ ಪ್ರಸ್ತುತ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಮುಂದಿನ 6 ತಿಂಗಳೊಳಗೆ ಅನುದಾನ ಬಿಡುಗಡೆಯಾದರೆ ಕ್ರಿಯಾ ಯೋಜನೆ ತಯಾರಿಸಿ ಈ ರಸ್ತೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.  ಬೋಗೇಗೌಡ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು 

ಟಾಪ್ ನ್ಯೂಸ್

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಇಂದಿನ ಸ್ಥಿತಿ “ಮನೆಯೊಂದು 100 ಬಾಗಿಲು’: ಮುನಿಸ್ವಾಮಿ ವ್ಯಂಗ್ಯ

Congress ಇಂದಿನ ಸ್ಥಿತಿ “ಮನೆಯೊಂದು 100 ಬಾಗಿಲು’: ಮುನಿಸ್ವಾಮಿ ವ್ಯಂಗ್ಯ

Students: ಗೋಡೆ ಒಡೆಯಲು ಎಸ್ಸೆಸ್ಸೆಲ್ಸಿ ಮಕ್ಕಳ ಬಳಕೆ: ಕ್ರಮಕ್ಕೆ ಆಗ್ರಹ

Students: ಗೋಡೆ ಒಡೆಯಲು ಎಸ್ಸೆಸ್ಸೆಲ್ಸಿ ಮಕ್ಕಳ ಬಳಕೆ: ಕ್ರಮಕ್ಕೆ ಆಗ್ರಹ

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

ಕಾಡು ಪ್ರಾಣಿ ದಾಳಿ: ಕೋಲಾರದ ಯೋಧ ಗುಜರಾತ್‌ನಲ್ಲಿ ಸಾವು

ಕಾಡು ಪ್ರಾಣಿ ದಾಳಿ: ಕೋಲಾರದ ಯೋಧ ಗುಜರಾತ್‌ನಲ್ಲಿ ಸಾವು

Kolar Lok Sabha constituency: ಅಲೆಗಳು ಗೌಣ, ಸ್ಥಳೀಯ ಲೆಕ್ಕಾಚಾರಗಳೇ ನಿರ್ಣಾಯಕ

Kolar Lok Sabha constituency: ಅಲೆಗಳು ಗೌಣ, ಸ್ಥಳೀಯ ಲೆಕ್ಕಾಚಾರಗಳೇ ನಿರ್ಣಾಯಕ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.