ಕೋಲಾರ: ಕೋವಿಡ್‌ 19 ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆ


Team Udayavani, Jun 21, 2020, 7:19 AM IST

akka-tamma

ಕೋಲಾರ: ಜಿಲ್ಲೆಯಲ್ಲಿ ಶನಿವಾರ ನಾಲ್ಕು ಕೋವಿಡ್‌ 19 ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 56 ತಲುಪಿದೆ. ಮೂವರು ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 32 ಆಗಿದೆ. ಕೋಲಾರ ತಾಲೂಕಿನ  ಪಿ.4863, ಪಿ.6170 ಮತ್ತು ಬಂಗಾರ ಪೇಟೆಯ ಪಿ.6175 ರೋಗಿಗಳು ಕೋವಿಡ್‌ 19ದಿಂದ ಗುಣಮುಖರಾಗಿ ಕೋವಿಡ್‌ ಆಸ್ಪತ್ರೆಯಿಂದ ಮನೆಯಲ್ಲಿ ಕ್ವಾರಂಟೈನ್‌ಗೆ ಬಿಡುಗಡೆ ಹೊಂದಿದ್ದಾರೆ.

ದೆಹಲಿಯಿಂದ ಕೆಜಿಎಫ್ಗೆ ಆಗಮಿಸಿರುವ 43  ವರ್ಷದ ಮಹಿಳೆಗೆ ಸೋಂಕು ಕಂಡು ಬಂದಿದ್ದು, ಆರ್‌.ಎಲ್‌.ಜಾಲಪ್ಪ ಕೋವಿಡ್‌-19 ಆಸ್ಪತ್ರೆಗೆ ಸೇರಿ ಸಲಾಗಿದೆ. ಕೋಲಾರದಲ್ಲಿ ಪಿ.8060 ಸಂಪರ್ಕ ದಿಂದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯಲ್ಲಿಯೇ 27 ಮತ್ತು 29ವರ್ಷದ ಪುರುಷರು  ಹಾಗೂ 26 ವರ್ಷದ ಯುವತಿಗೆ ಕೋವಿಡ್‌ 19 ಸೋಂಕು ಪತ್ತೆ ಯಾಗಿದೆ. ಶನಿವಾರ ಸಂಜೆ ಬಿಡುಗಡೆಯಾದ ಆರೋಗ್ಯ ಬುಲೆಟಿನ್‌ನಲ್ಲಿ ಕೋಲಾರ ಜಿಲ್ಲೆಯ ಸೋಂಕಿತರ ಸಂಖ್ಯೆ 56 ಆಗಿದ್ದು, ಇದರ ಜೊತೆಗೆ ಕೋಲಾರ ಗಲ್‌ಪೇಟೆಯ 31  ವರ್ಷದ ಪುರುಷರಿಗೆ ಕೋವಿಡ್‌ 19 ಪತ್ತೆಯಾಗಿದೆ.

ಇದೇ ರೀತಿ ಬಂಗಾರಪೇಟೆ ಪಟ್ಟಣಕ್ಕೆ ಬೆಂಗಳೂರಿನಿಂದ ಬಂದಿರುವ 19 ವರ್ಷದ ಯುವಕ ಹಾಗೂ 26 ವರ್ಷದ ಯುವತಿಯಲ್ಲಿ ಕೋವಿಡ್‌ 19 ಪತ್ತೆಯಾಗಿದೆ. ಈ ಮೂವರು  ಸೇರಿದಂತೆ  ಜಿಲ್ಲೆಯ ಸೋಂಕಿತರ ಪಟ್ಟಿ 59ಕ್ಕೇರಿದಂತಾಗಿದ್ದು, ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ. ಈ ಪಟ್ಟಿಗೆ ಮತ್ತಷ್ಟು ಸೋಂಕಿತರು ಸೇರುವ ಸಾಧ್ಯತೆಗಳಿದ್ದು, ಭಾನುವಾರದ ವೇಳೆಗೆ ಸೋಂಕಿತರ ಸಂಖ್ಯೆ 60 ದಾಟುವ ಸಾಧ್ಯತೆಗಳಿವೆ.

ಅಕ್ಕ-ತಮ್ಮನಿಗೆ ಕೋವಿಡ್‌ 19 ಪಾಸಿಟಿವ್‌
ಬಂಗಾರಪೇಟೆ: ಬೆಂಗಳೂರಿನ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಯುವಕ, ಯುವತಿಯಲ್ಲಿ ಕೋವಿಡ್‌ 19 ಪಾಸಿಟಿವ್‌ ಬಂದಿದ್ದು, ಪಟ್ಟಣದಲ್ಲಿ ಸದ್ಯಕ್ಕೆ ನಾಲ್ಕು ಕೇಸುಗಳು ಸಕ್ರಿಯವಾದಂತಾಗಿದೆ. ಪಟ್ಟಣದ  ವಿವೇಕಾನಂದರ ನಗರದಲ್ಲಿ ಮೂರು ವಾರಗಳ ಹಿಂದೆ ಮಲೇಷ್ಯಾದಿಂದ ಬಂದ ವ್ಯಕ್ತಿಯೊಬ್ಬ ರಿಗೆ ಕೋವಿಡ್‌ 19 ಪಾಸಿ ಟಿವ್‌ ಬಂದಿತ್ತು. ಹೀಗಾಗಿ ನಗರವನ್ನು ಸೀಲ್‌ ಡೌನ್‌ ಮಾಡಲಾಗಿತ್ತು.

ಈ ವ್ಯಕ್ತಿಯ ಪರೀಕ್ಷಾ ವರದಿಯು ಪ್ರಸ್ತುತ  ನೆಗೆಟಿವ್‌ ಬಂದಿರುವು ದರಿಂದ ಶನಿವಾರ ಬೆಳಗ್ಗೆ ತಾಲೂಕು ಆಡಳಿತವು ಆ ಪ್ರದೇಶವನ್ನು ಮುಕ್ತ ಮಾಡಿತ್ತು. ಇದರ ಬೆನ್ನಲ್ಲೆ ಸಂಜೆ ಮತ್ತೆರೆಡು ಕೋವಿಡ್‌ 19 ಪಾಸಿಟಿವ್‌ ಇದೇ ವಾರ್ಡ್‌ನಲ್ಲಿ ಬಂದಿರುವುದರಿಂದ ಮತ್ತೆ ಸೀಲ್‌ಡೌನ್‌ ಮಾಡಲಾಗಿದೆ. ವಿವೇಕಾನಂದನಗರದ ಬಾಲಾಜಿಸಿಂಗ್‌ ಲೇಔಟ್‌ನಲ್ಲಿ ವಾಸವಾಗಿ ರುವ 25 ವರ್ಷ ಯುವತಿ ಹಾಗೂ ಈಕೆಯ ತಮ್ಮ 22 ವರ್ಷದ ಯುವಕನಿಗೆ ಸೋಂಕು ಬಂದಿದೆ.

ಬೆಂಗಳೂರಿನ ಯಲ ಹಂಕದಲ್ಲಿ ವಾಸವಾಗಿ ರುವ ತಮ್ಮ  ದೊಡ್ಡ ಪ್ಪನ ಮಗ ಎಲ್‌ಐಸಿ ಏಜೆಂಟ್‌ ಆಗಿರುವ 30 ವರ್ಷದ ಯುವಕನಿಗೆ ಶುಕ್ರವಾರ ಬೆಳಗ್ಗೆ ಕೋವಿಡ್‌ 19 ಪಾಸಿಟಿವ್‌ ಬಂದಿತ್ತು. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆಯು ಅಕ್ಕ, ತಮ್ಮನನ್ನು ಪತ್ತೆಹಚ್ಚಿ ಕೋವಿಡ್‌ 19 ಪರೀಕ್ಷೆಗೆ ಒಳಪಡಿಸಿತ್ತು. ವರದಿಯಲ್ಲಿ ಕೋವಿಡ್‌ 19 ಪಾಸಿಟಿವ್‌ ದೃಢಪಟ್ಟಿದೆ.

ಶುಕ್ರವಾರದಿಂದ ಹೋಮ್‌ ಕ್ವಾರಂಟೈನ್‌ ನಲ್ಲಿದ್ದ ಇವರಿಬ್ಬರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್‌ ಕೆ.ಬಿ.ಚಂದ್ರಮೌಳೇಶ್ವರ್‌, ತಾಲೂಕು ಆರೋಗ್ಯಾಧಿಕಾರಿ ಡಾ. ಸುನೀಲ್‌, ಆರೋಗ್ಯ ನಿರೀಕ್ಷಕ ಆರ್‌. ರವಿ, ಆದರ್ಶ, ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್‌, ಆರೋಗ್ಯಾಧಿಕಾರಿ ಗೋವಿಂದರಾಜ್‌ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

ಕಾಡು ಪ್ರಾಣಿ ದಾಳಿ: ಕೋಲಾರದ ಯೋಧ ಗುಜರಾತ್‌ನಲ್ಲಿ ಸಾವು

ಕಾಡು ಪ್ರಾಣಿ ದಾಳಿ: ಕೋಲಾರದ ಯೋಧ ಗುಜರಾತ್‌ನಲ್ಲಿ ಸಾವು

Kolar Lok Sabha constituency: ಅಲೆಗಳು ಗೌಣ, ಸ್ಥಳೀಯ ಲೆಕ್ಕಾಚಾರಗಳೇ ನಿರ್ಣಾಯಕ

Kolar Lok Sabha constituency: ಅಲೆಗಳು ಗೌಣ, ಸ್ಥಳೀಯ ಲೆಕ್ಕಾಚಾರಗಳೇ ನಿರ್ಣಾಯಕ

Kolar: ಕುರ್ಚಿಗೆ ಅಧಿಕಾರಿಗಳಿಬ್ಬರ ತಿಕ್ಕಾಟ; ಕೆಲಸ ಸ್ಥಗಿತ

Kolar: ಕುರ್ಚಿಗೆ ಅಧಿಕಾರಿಗಳಿಬ್ಬರ ತಿಕ್ಕಾಟ; ಕೆಲಸ ಸ್ಥಗಿತ

11

Drinking water: ಜಾತ್ರೆಗೆ ಬಂದ ರಾಸುಗಳಿಗೆ ಕುಡಿಯಲು ನೀರಿಲ!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.