
ಸೀಲ್‌ಡೌನ್ ತೆರವಿಗೆ ಶಾಸಕ ಸೂಚನೆ
Team Udayavani, Jun 7, 2020, 6:19 AM IST

ಬಂಗಾರಪೇಟೆ: ಕೋವಿಡ್ 19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ, ತಹಶೀಲ್ದಾರ್, ಪೊಲೀಸ್, ಪುರಸಭೆ ಸಿಬ್ಬಂದಿ, ಜನಪ್ರತಿನಿಧಿಗಳು ಹಾಗೂ ಇತರೆ ಇಲಾಖೆ ನೌಕರರನ್ನು ಶಾಸಕ ಎಸ್. ಎನ್.ನಾರಾಯಣ ಸ್ವಾಮಿ ಅಭಿನಂದಿಸಿದರು. ಕೋವಿಡ್ 19 ಸೋಂಕಿನಿಂದ ಗುಣಮುಖರಾದ ಪಟ್ಟಣದ ವಿಜಯನಗರ, ಇಂದಿರಾ ಆಶ್ರಯ ಬಡಾವಣೆಯ ಇಬ್ಬರು ಮಹಿಳೆಯರು, ಹೆಣ್ಣು ಮಗುವನ್ನು ಎಸ್‌ಎನ್ ಸಿಟಿ ಬಳಿ ಶಾಸಕರು ಸ್ವಾಗತಿಸಿದರು.
ಚೆನ್ನೈ ತರಕಾರಿ ಮಾರುಕಟ್ಟೆಗೆ ಹೋಗಿ ಬಂದಿದ್ದ ವಿಜಯನಗರದ ಚಾಲಕ, ಆತನ ಅತ್ತೆ ಮತ್ತು ಮಗ, ಇಂದಿರಾ ಆಶ್ರಯ ಬಡಾವಣೆಯ ಚಾಲಕ ಹಾಗೂ ಆತನ ಪತ್ನಿ, ಮಗಳಿಗೆ ಕೋವಿಡ್ 19 ಸೋಂಕು ಬಂದಿತ್ತು. ಇವರು ವಾಸವಾಗಿದ್ದ ಎರಡೂ ಪ್ರದೇಶಗಳನ್ನೂ ಸೀಲ್ ಡೌನ್ ಮಾಡಲಾಗಿತ್ತು. ಇದರಿಂದ ಇತರೆ ಜನಸಾಮಾನ್ಯರಿಗೆ ಓಡಾಟ ನಡೆಸಲು ತೀವ್ರ ಕಷ್ಟಕರವಾಗಿದ್ದರಿಂದ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪಟ್ಟಣದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದ 7 ಜನರಲ್ಲಿ 6 ಮಂದಿ ಗುಣ ಮುಖರಾಗಿದ್ದಾರೆ. ಕೋವಿಡ್ 19 ಬಗ್ಗೆ ಎಚ್ಚರಿಕೆ ಇದ್ದರೆ ಸಾಕು, ಭಯ ಮತ್ತು ಆತಂಕ ಪಡುವ ಅವಶ್ಯಕತೆ ಇಲ್ಲ ಎಂಬುದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ರೀತಿ ಸ್ವಾಗತಿಸುತ್ತಿರುವುದಾಗಿ ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್, ಕೋವಿಡ್- 19 ಬಂಗಾರಪೇಟೆ ಉಸ್ತುವಾರಿ ನಾರಾಯಣಸ್ವಾಮಿ,
ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪುಣ್ಯಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್, ಸದಸ್ಯರಾದ ಕಪಾಲಿ ಶಂಕರ್, ಸಾಧಿಕ್ ಪಾಷಾ, ಆರೋಗ್ಯ ನಿರೀಕ್ಷಕರಾದ ರವಿ, ಗೋವಿಂದರಾಜು, ಸಿಎಒ ವೆಂಕಟೇಶ್, ಸಂತೋಷ್, ಸೋಮಣ್ಣ, ಆನಂದ್, ಹರೀಶ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
ಹೊಸ ಸೇರ್ಪಡೆ

Udupi Harsha Showroom: ‘ಐಎಫ್ ಬಿ ಡೀಪ್ ಕ್ಲೀನ್’ ವಾಷಿಂಗ್ ಮೆಷಿನ್ ಬಿಡುಗಡೆ

Partygate case: ಸಂಸತ್ ಸ್ಥಾನಕ್ಕೂ ರಾಜೀನಾಮೆ ನೀಡಿದ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್

Gangavathi: ಲಘುವಿಮಾನ ಹಾರಾಟ; ಗಾಬರಿಗೊಂಡ ಜನತೆ; ಅಧಿಕಾರಿಗಳಿಗೆ ಮೊಬೈಲ್ ಕರೆ

ವಿಮಾನ ಅಪಘಾತದಲ್ಲಿ ನಾಪತ್ತೆ: 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಪತ್ತೆಯಾದ 4 ಮಕ್ಕಳು

Balasore Tragedy; ಭೀಕರ ರೈಲ್ವೆ ದುರಂತದಲ್ಲಿ ಶವಾಗಾರವಾಗಿದ್ದ ಶಾಲೆ ನೆಲಸಮ