Udayavni Special

ನಗರಸಭೆ ಅಧಿಕಾರ ಕಾಂಗ್ರೆಸ್‌ಗೆ ನಿಶ್ಚಿತ


Team Udayavani, Oct 31, 2020, 4:22 PM IST

KOLAR-TDY-2

ಕೆಜಿಎಫ್: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಭಾನುವಾರ ನಡೆಯಲಿದ್ದು, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದ್ದು, ಬಹುತೇಕ ಅವಿರೋಧ ಆಯ್ಕೆಯಾಗುವ ಸಂಭವ ಇದೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ವಳ್ಳಲ್‌ ಮುನಿಸ್ವಾಮಿ ಮತ್ತು ಬಿ.ಮಾಣಿಕ್ಯಂ ತೀವ್ರ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷೆ ಸ್ಥಾನವು ಮಹಿಳೆ ( ಎ) ಗುಂಪಿಗೆ ಸೇರಿದ್ದು, ದೇವಿ ಗಣೇಶ್‌ ಹೆಸರು ಮುನ್ನೆಲೆಗೆ ಬಂದಿದೆ. ಶಾಸಕರ ನಿರ್ಧಾರಕ್ಕೆ ಬದ್ಧ: ಕಾಂಗ್ರೆಸ್‌ ಪಕ್ಷದಲ್ಲಿ ಅಂತಿಮ ನಿರ್ಧಾರವನ್ನು ಸ್ಥಳೀಯ ಹೈಕಮಾಂಡ್‌ ಆಗಿರುವ ಶಾಸಕಿ ಎಂ.ರೂಪಕಲಾ ಬೆಳಗ್ಗೆ ಪ್ರಕಟಿಸಲಿದ್ದಾರೆ. ಎಲ್ಲಾ 26 ಬೆಂಬಲಿಗರನ್ನು ಕೋಲಾರದ ಬಳಿಯ ರೆಸಾರ್ಟ್‌ನಲ್ಲಿ ಇರಿಸಲಾಗಿದ್ದು, ಶಾಸಕಿ ಎಲ್ಲರ ಜೊತೆ ವೈಯಕ್ತಿಕವಾಗಿ ಮಾತನಾಡಿ, ಅವರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಎಲ್ಲರೂ ಶಾಸಕಿಯ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಇವರ ಜೊತೆಗೆ ಇನ್ನೂ ಮೂವರು ಕಾಂಗ್ರೆಸ್‌ ಸದಸ್ಯರು ಸಹ ಅವಕಾಶ ಸಿಕ್ಕರೆ ತಾವು ಕೂಡ ಸಿದ್ಧ ಎಂದು ಬಿಂಬಿಸಲು ಹೊರಟಿದ್ದಾರೆ.

ಮಂಜುಳಾದೇವಿಗೆ ವಿಪ್‌ ಜಾರಿ: ಕಾಂಗ್ರೆಸ್‌ ಪಕ್ಷಕ್ಕೆ ಹೊರತುಪಡಿಸಿದರೆ ಜೆಡಿಎಸ್‌ ಎರಡು ಸ್ಥಾನ ಹೊಂದಿದ್ದು, ತಮ್ಮ ಬೆಂಬಲವನ್ನು ಈಗಾಗಲೇ ಕಾಂಗ್ರೆಸ್‌ ಪಕ್ಷಕ್ಕೆ ನೀಡಿದ್ದಾರೆ. ಆರ್‌ಪಿಐ ಇಬ್ಬರು ಸದಸ್ಯರನ್ನು ಹೊಂದಿದೆ. ಪಕ್ಷದ ಅಧ್ಯಕ್ಷ ಎಸ್‌.ರಾಜೇಂದ್ರನ್‌ ತಾವು ಸ್ಪರ್ಧೆಯಲ್ಲಿ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇನ್ನೊಬ್ಬ ಸದಸ್ಯೆ ಮಂಜುಳಾದೇವಿ ತನ್ನ ಒಲವನ್ನು ಕಾಂಗ್ರೆಸ್‌ ಪಕ್ಷದ ಕಡೆಗೆ ತೋರಿದ್ದಾರೆ. ಅವರು ಸಹ ಕ್ಯಾಂಪ್‌ನಲ್ಲಿ ಇದ್ದಾರೆ. ಈ ಮಧ್ಯೆ ಮಂಜುಳಾದೇವಿಗೆ ವಿಪ್‌ ಜಾರಿ ಮಾಡಿರುವ ಆರ್‌ಪಿಐ, ಪಕ್ಷವು ಸೂಚಿಸಿದ ರೀತಿಯಲ್ಲಿಯೇ ಮತದಾನ ಮಾಡಬೇಕು. ಕಾಂಗ್ರೆಸ್‌ ಅಥವಾ ಇನ್ಯಾವುದೋ ಪಕ್ಷಕ್ಕೆ ಮತದಾನ ಮಾಡಬಾರದು ಎಂದು ವಿಪ್‌ನಲ್ಲಿ ತಿಳಿಸಲಾಗಿದೆ.

ಬಿಜೆಪಿಯಲ್ಲಿ ಮೂವರು ಸದಸ್ಯರಿದ್ದು, ಅವರು ಇದುವರೆಗೂ ಚುನಾವಣೆ ಬಗ್ಗೆ ತಮ್ಮ ರಾಜಕೀಯ ದಾಳ ಉರುಳಿಸಿಲ್ಲ. ಕಾದು ನೋಡುವ ತಂತ್ರಕ್ಕೆ ಒಳಗಾಗಿದ್ದಾರೆ. ಪಕ್ಷದ ಹಿರಿಯ ನಾಯಕರು ತಮಗೆ ಬೆಂಬಲ ಇಲ್ಲದ ಪ್ರಯುಕ್ತ ಸಾಹಸ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದ ಹಾಗಿದೆ. ಬಹುತೇಕ ಪಕ್ಷೇತರರು ಈಗಾಗಲೇ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್ನೂ ಹಲವರು ಕೂಡ ಬೆಂಬಲ ನೀಡಲು ಮುಂದಾಗಿದ್ದಾರೆ.

ಚುನಾವಣೆ ಸಮಯ :  ಬೆಳಗ್ಗೆ 8ರಿಂದ 10 ಗಂಟೆ ವರೆಗೂ ನಾಮಪತ್ರ ಸಲ್ಲಿಸಲು ಅವಕಾಶ. ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಪರಿಶೀಲನೆ, ವಾಪಸಾತಿ, ಅಗತ್ಯವಿದ್ದರೆ ಚುನಾವಣೆ ಮತ್ತು ಫ‌ಲಿತಾಂಶ ಘೋಷಣೆ ನಡೆಯಲಿದೆ. ಸಹಾಯಕ ಕಮೀಷನರ್‌ ಸೋಮಶೇಖರ್‌ ಚುನಾವಣಾಧಿಕಾರಿಯಾಗಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ, ಎಲ್ಲವೂ ಊಹಾಪೋಹ : ಡಿಸಿಎಂ ಸವದಿ

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ, ಇಲ್ಲದ ವದಂತಿಗೆ ರೆಕ್ಕೆಪುಕ್ಕ‌ ಕಟ್ಟಲಾಗಿದೆ :ಡಿಸಿಎಂ ಸವದಿ

ಗ್ರಾ.ಪಂ ಸಾರ್ವತ್ರಿಕ ಚುನಾವಣೆಗೆ ಮುಹೂರ್ತ ನಿಗದಿ: ಎರಡು ಹಂತಗಳಲ್ಲಿ ನಡೆಯಲಿದೆ ಮತದಾನ

ಗ್ರಾ.ಪಂ ಸಾರ್ವತ್ರಿಕ ಚುನಾವಣೆಗೆ ಮುಹೂರ್ತ ನಿಗದಿ: ಎರಡು ಹಂತಗಳಲ್ಲಿ ನಡೆಯಲಿದೆ ಮತದಾನ

ಗಮನಿಸಿ: ಎಲ್ ಪಿಜಿ ದರ, ಇನ್ಸೂರೆನ್ಸ್ ಪಾಲಿಸಿ….ಡಿಸೆಂಬರ್ 1ರಿಂದ ನಾಲ್ಕು ಮಹತ್ವದ ಬದಲಾವಣೆ

ಗಮನಿಸಿ: ಎಲ್ ಪಿಜಿ ದರ, ಇನ್ಸೂರೆನ್ಸ್ ಪಾಲಿಸಿ….ಡಿಸೆಂಬರ್ 1ರಿಂದ ನಾಲ್ಕು ಮಹತ್ವದ ಬದಲಾವಣೆ

ಡಿಸಿ ರೋಹಿಣಿ ಸಿಂಧೂರಿ- ಶಾಸಕರ ಮುನಿಸಿಗೆ ಬಲಿಯಾದ ಜನಸ್ಪಂದನ ಕಾರ್ಯಕ್ರಮ!

ಡಿಸಿ ರೋಹಿಣಿ ಸಿಂಧೂರಿ- ಶಾಸಕರ ಮುನಿಸಿಗೆ ಬಲಿಯಾದ ಜನಸ್ಪಂದನ ಕಾರ್ಯಕ್ರಮ!

ಕೊಚ್ಚಿ: ಮರಕ್ಕೆ ಡಿಕ್ಕಿ ಹೊಡೆದ ಬಸ್ – ಚಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಬೆಳ್ಳಂಬೆಳಗ್ಗೆ ಮರಕ್ಕೆ ಡಿಕ್ಕಿ ಹೊಡೆದ ಬಸ್ : ಚಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಎಚ್ಚರ!…ಸಾರ್ವಜನಿಕ ಸೆಂಟರ್‌ನಲ್ಲಿ ಮೊಬೈಲ್‌ ಚಾರ್ಜ್ ಮಾಡುವ ಮುನ್ನ ಇರಲಿ ಎಚ್ಚರ

ಎಚ್ಚರ!…ಸಾರ್ವಜನಿಕ ಸೆಂಟರ್‌ನಲ್ಲಿ ಮೊಬೈಲ್‌ ಚಾರ್ಜ್ ಮಾಡುವುದು ಎಷ್ಟು ಸುರಕ್ಷಿತ?

ಕೋವಿಡ್ ಸೋಂಕಿನಿಂದ ರಾಜಸ್ಥಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ನಿಧನ

ಕೋವಿಡ್ ಸೋಂಕಿನಿಂದ ರಾಜಸ್ಥಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

300 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌

300 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌

kolar-tdyt-2

ಬಡ ಕುಟುಂಬಗಳಿಗೆ ನಿವೇಶನ ನೀಡಿ

kolar-tdy-1

ಕಾಡಾನೆಗಳ ದಾಳಿ, ತೋಟದ ಬೆಳೆ ನಾಶ

ಎಕರೆಗೆ 5 ಲಕ್ಷ ಪರಿಹಾರಕ್ಕೆ ರೈತ ಸಂಘ ಒತ್ತಾಯ

ಎಕರೆಗೆ 5 ಲಕ್ಷ ಪರಿಹಾರಕ್ಕೆ ರೈತ ಸಂಘ ಒತ್ತಾಯ

30 ಕೋಟಿ ವೆಚ್ಚದಲ್ಲಿ ಸಬ್‌ ಸ್ಟೇಷನ್‌ ಕಾಮಗಾರಿ

30 ಕೋಟಿ ವೆಚ್ಚದಲ್ಲಿ ಸಬ್‌ ಸ್ಟೇಷನ್‌ ಕಾಮಗಾರಿ

MUST WATCH

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

ಹೊಸ ಸೇರ್ಪಡೆ

ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ, ಎಲ್ಲವೂ ಊಹಾಪೋಹ : ಡಿಸಿಎಂ ಸವದಿ

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ, ಇಲ್ಲದ ವದಂತಿಗೆ ರೆಕ್ಕೆಪುಕ್ಕ‌ ಕಟ್ಟಲಾಗಿದೆ :ಡಿಸಿಎಂ ಸವದಿ

ಯೋಧನಾದ ಕ್ರೇಜಿ ಸ್ಟಾರ್‌

ಯೋಧನಾದ ಕ್ರೇಜಿ ಸ್ಟಾರ್‌

ನಿರ್ಮಾಪಕ ಉಮಾಪತಿ ಮಾತು : 100% ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ ರಾಬರ್ಟ್‌

ನಿರ್ಮಾಪಕ ಉಮಾಪತಿ ಮಾತು : 100% ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ ರಾಬರ್ಟ್‌

ಸತ್ಯ ಹೇಳಿ ಮುಗಿಸುವೆ, ಚರ್ಚೆಬೇಡ

ಸತ್ಯ ಹೇಳಿ ಮುಗಿಸುವೆ, ಚರ್ಚೆಬೇಡ

ಜನವರಿ ಅಂತ್ಯಕ್ಕೆ ಕಾರ್ಗೋ ಟರ್ಮಿನಲ್‌ ಕಾರ್ಯಾರಂಭ

ಜನವರಿ ಅಂತ್ಯಕ್ಕೆ ಕಾರ್ಗೋ ಟರ್ಮಿನಲ್‌ ಕಾರ್ಯಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.