ಹಾಲು ಖರೀದಿ ದರ 2 ರೂ. ಹೆಚ್ಚಳ

Team Udayavani, Feb 14, 2020, 1:14 PM IST

kolar-tdy-1

ಕೋಲಾರ: ಅವಿಭಜಿತ ಜಿಲ್ಲೆಯ ಜೀವನಾಡಿಯಾಗಿರುವ ಹೈನೋದ್ಯಮ ಅವಲಂಬಿಸಿರುವವರಿಗೆ ಒಕ್ಕೂಟ ಸಿಹಿ ಸುದ್ದಿ ನೀಡುತ್ತಿದ್ದು, ರೈತರಿಂದ ಖರೀದಿಸುವ ಹಾಲಿನ ದರ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದ್ದು, ಈ ತಿಂಗಳಿಂದಲೇ ಜಾರಿಗೆ ಬಂದಿದೆ ಎಂದು ಕೋಚಿಮುಲ್‌ ಅಧ್ಯಕ್ಷ ಹಾಗೂ ಶಾಸಕ ಕೆವೈ. ನಂಜೇಗೌಡ ತಿಳಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದೇ ತಿಂಗಳು ನೂತನ ಪರಿಷ್ಕೃತ ದರ ಜಾರಿಗೆ ಬರುತ್ತದೆ. ರೈತರು ಹಾಲಿನ ಉದ್ಪಾದನೆ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ದರ ಪರಿಸ್ಕೃತಗೊಳಿಸಲಾಗಿದೆ ಎಂದು ಹೇಳಿದರು.

ಮನಸ್ಸು ಗೆಲ್ಲುವ ತೀರ್ಮಾನ: ಜಿಲ್ಲೆಯಲ್ಲಿ ಹಾಲು ಕಡಿಮೆ ಅಗಿರುವುದು ದುರಾದೃಷ್ಟಕರ ಸಂಗತಿ. ಹೀಗಾಗಿ ಉತ್ಪಾದಕರಿಗೆ ಹಾಲು ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಎರಡು ತಿಂಗಳು ಕಾಲ ಅಧಿಕಾರಿಗಳೊಂದಿಗೆ ಸರ್ವೆ ನಡೆಸಿ ಉತ್ಪಾದಕರ ಮನಸ್ಸು ಗೆಲ್ಲುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಷೇರುದಾರರಿಗೆ ಮಾತ್ರ ಮೇವಿನ ಬೀಜ: ಮೇವಿನ ಬೀಜಜಿಲ್ಲೆಯಲ್ಲಿ ಹಸಿರು ಮೇವಿನ ಕೊರತೆ ನೀಗಿಸಲು ಉಚಿತವಾಗಿ ಮೇವಿನ ಬೀಜ ವಿತರಣೆ ಮಾಡಲಾಗುವುದು. ಜತೆಗೆ ಒಂದು ಎಕರೆಗೆ 3 ಸಾವಿರ ಸಹಾಯ ಧನ ನೀಡಲಾಗುವುದು. ಮೇವು ಬೀಜ ಪಡೆದು ಕೊಳ್ಳುವವರು ಕಡ್ಡಾಯವಾಗಿ ಸಂಘದ ಶೇರುದಾರ ನಾಗಿರಬೇಕು ಎಂದು ಹೇಳಿದರು.

ಹಳೇ ಮಾನದಂಡ ಪಾಲನೆ: ಹಾಲಿನ ಗುಣಮಟ್ಟದ ಶೇಖರಣೆಯನ್ನು ಹೆಚ್ಚಿಸಲು ಉತ್ತೇಜಿಸುವ ಸಲು ವಾಗಿ ಉತ್ಪಾದಕರಿಗೆ 26 ರೂ.ಅನ್ನು ಶೇ.3.5 ಫ್ಯಾಟ್‌ ಆಧಾರದ ಮೇರೆಗೆ ಪಾವತಿಸಲಾಗುತ್ತಿದ್ದು, ಈಗಲೂ ಅದೇ ಮಾನದಂಡಗಳನ್ನು ಪಾಲಿಸಲಾಗುತ್ತಿದೆ ಎಂದು ವಿವರಿಸಿದರು. ಹಿಂದೆ ಜಿಲ್ಲೆಯಲ್ಲಿ ನಡೆದ ಹಸಿವು ಮೇವು ಅಂದೋಲನ ಇಡೀ ರಾಜ್ಯಕ್ಕೆ ಮಾದರಿಯಾಗಿತ್ತು. ಅದೇ ರೀತಿ ಹಾಲು ಉತ್ಪಾದನೆಯಲ್ಲೂ ದ್ವಿತೀಯ ಸ್ಥಾನದಲ್ಲಿತ್ತು. ಒಕ್ಕೂಟದ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಹಾಲು ಉತ್ಪಾದನೆ ಮಾಡಲು ಆಸಕ್ತಿಯುಳ್ಳ ಅರ್ಹ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಒಕ್ಕೂಟದ ಸಹಭಾಗಿತ್ವದಲ್ಲಿ ಡಿಸಿಸಿ ಬ್ಯಾಂಕ್‌ ಮೂಲಕ ಕಾಯಕ ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ 75 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಮಿಶ್ರತಳಿ ಹಸು ಖರೀದಿಸಲು ಸಾಲ ನೀಡುವ ಒಕ್ಕೂಟ ಮುಂದಾಗಿದೆ ಎಂದು ಹೇಳಿದರು.

ತಾತ್ಕಾಲಿಕ ತಡೆ: ಒಕ್ಕೂಟದಲ್ಲಿ ಹಿಂದೆ ಪ್ರತಿ ದಿನ 11.50 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿತ್ತು. ಪ್ರಸ್ತುತ ಹಾಲು ಶೇಖರಣೆ ಕಡಿಮೆಯಾಗಿರುವ ಕಾರಣ ಸಿಬ್ಬಂದಿಯ ವೆಚ್ಚವನ್ನು ಕಡಿಮೆ ಮಾಡಲು ಪ್ರೋರೇಟಾ ಆಧಾರದಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದರು.

ಒಕ್ಕೂಟದ ನಿರ್ದೇಶಕರಾದ ವಿ.ಮಂಜುನಾಥರೆಡ್ಡಿ, ಕಾಂತರಾಜ್‌, ಅಶ್ವಥರೆಡ್ಡಿ, ಡಿ.ವಿ.ಹರೀಶ್‌, ಹನುಮೇಶ್‌, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್‌.ವಿ.ತಿಪ್ಪಾರೆಡ್ಡಿ ಹಾಜರಿದ್ದರು.

ಟಾಪ್ ನ್ಯೂಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಇಂದಿನ ಸ್ಥಿತಿ “ಮನೆಯೊಂದು 100 ಬಾಗಿಲು’: ಮುನಿಸ್ವಾಮಿ ವ್ಯಂಗ್ಯ

Congress ಇಂದಿನ ಸ್ಥಿತಿ “ಮನೆಯೊಂದು 100 ಬಾಗಿಲು’: ಮುನಿಸ್ವಾಮಿ ವ್ಯಂಗ್ಯ

Students: ಗೋಡೆ ಒಡೆಯಲು ಎಸ್ಸೆಸ್ಸೆಲ್ಸಿ ಮಕ್ಕಳ ಬಳಕೆ: ಕ್ರಮಕ್ಕೆ ಆಗ್ರಹ

Students: ಗೋಡೆ ಒಡೆಯಲು ಎಸ್ಸೆಸ್ಸೆಲ್ಸಿ ಮಕ್ಕಳ ಬಳಕೆ: ಕ್ರಮಕ್ಕೆ ಆಗ್ರಹ

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

ಕಾಡು ಪ್ರಾಣಿ ದಾಳಿ: ಕೋಲಾರದ ಯೋಧ ಗುಜರಾತ್‌ನಲ್ಲಿ ಸಾವು

ಕಾಡು ಪ್ರಾಣಿ ದಾಳಿ: ಕೋಲಾರದ ಯೋಧ ಗುಜರಾತ್‌ನಲ್ಲಿ ಸಾವು

Kolar Lok Sabha constituency: ಅಲೆಗಳು ಗೌಣ, ಸ್ಥಳೀಯ ಲೆಕ್ಕಾಚಾರಗಳೇ ನಿರ್ಣಾಯಕ

Kolar Lok Sabha constituency: ಅಲೆಗಳು ಗೌಣ, ಸ್ಥಳೀಯ ಲೆಕ್ಕಾಚಾರಗಳೇ ನಿರ್ಣಾಯಕ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.