ನಾಪತ್ತೆ ಆಗಿದ್ದ ಸೋಂಕಿತ ಬೆಂಗಳೂರಲ್ಲಿ ಪತ್ತೆ

Team Udayavani, May 16, 2020, 6:25 AM IST

napatte

ಕೋಲಾರ: ಮಂಡ್ಯ ಮೂಲದ ವ್ಯಕ್ತಿಯಿಂದ ಜಿಲ್ಲಾ ಕೇಂದ್ರ ಕೋಲಾರಕ್ಕೂ ಕೋವಿಡ್‌ 19 ಸೋಂಕು ಕಾಲಿಟ್ಟಿದ್ದು, ನಾಪತ್ತೆ ಆಗಿದ್ದ ಸೋಂಕಿತ ವ್ಯಕ್ತಿ ಬೆಂಗಳೂರಿನ ಬನಶಂಕರಿಯಲ್ಲಿ ಪತ್ತೆ ಆಗಿದ್ದಾನೆ.

ನಗರದ ಗಾಂಧಿನಗರದಲ್ಲಿ ಎರಡು  ವರ್ಷಗಳಿಂದಲೂ ಬಾಡಿಗೆಗೆ ಮನೆಯೊಂದರಲ್ಲಿ ವಾಸವಾಗಿದ್ದ ಸೋಂಕಿತವ್ಯಕ್ತಿ, ಲಾಕ್‌ಡೌನ್‌ಗಿಂತಲೂ ಮುಂಚಿತ ವಾಗಿಯೇ ಅಪಘಾತದಲ್ಲಿ ಕಾಲು ಗಾಯಗೊಂಡು ಮಂಡ್ಯಕ್ಕೆ ತೆರಳಿದ್ದ ಎನ್ನಲಾಗಿದೆ. ಮೇ 11 ರಂದು  ಕೋಲಾರದ ಮನೆಗೆ ವಾಪಸ್ಸಾಗಿದ್ದ ಆತನನ್ನು ಕ್ವಾರಂಟೈನ್‌ ನಲ್ಲಿಟ್ಟು, ಅವರ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ ಪ್ರಯೋಗಾಲಯದ ವರದಿಯಲ್ಲಿ ಪಾಸಿಟಿವ್‌ ಎಂದು ಬಂದಿದೆ.

ಮೊಬೈಲ್‌ ನಂಬರ್‌ ಟ್ರ್ಯಾಕ್‌: ಈ ಹಿನ್ನೆಲೆಯಲ್ಲಿ ಪಾಸಿಟಿವ್‌ ವ್ಯಕ್ತಿಯ ಮನೆಯ ಸುತ್ತಮುತ್ತಲೂ ಕಟ್ಟೆಚ್ಚರವಹಿಸಲು ಆಗಮಿಸಿದ ಆರೋಗ್ಯ ಹಾಗೂ ಪೊಲೀಸ್‌ ಸಿಬ್ಬಂದಿಗೆ ಆಚ್ಚರಿ ಕಾದಿತ್ತು. ಸೋಂಕಿತ ವ್ಯಕ್ತಿ ಮನೆಯಲ್ಲಿರದೆ  ನಾಪತ್ತೆಯಾಗಿದ್ದು, ತೀವ್ರ ಹುಡುಕಾಟ ನಡೆಸಿದ್ದು, ಪತ್ತೆ ಆಗಲಿಲ್ಲ. ನಂತರ ಆತ ಬೆಂಗಳೂರಿಗೆ ತೆರಳಿರುವ ಮಾಹಿತಿ ತಿಳಿದಿದೆ. ನಂತರ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಮೊಬೈಲ್‌ ನಂಬರ್‌ ಟ್ರ್ಯಾಕ್‌ ಮಾಡಿ ಬೆಂಗಳೂರಿನ  ಬನಶಂಕರಿಯಲ್ಲಿ ಹಿಡಿದು ಸ್ಥಳೀಯ ಕೊವಿಡ್‌-19 ಆಸ್ಪತ್ರೆಗೆ ಸೇರಿಸಿದ್ದಾರೆ.

ಮನೆ ಸುತ್ತ ಕಟ್ಟೆಚ್ಚರ: ಸಂಜೆ ವೇಳೆಗೆ ಗಾಂಧಿನಗರದಲ್ಲಿ ಅವರು ವಾಸವಾಗಿದ್ದ ಮನೆಯ ಸುತ್ತಮುತ್ತ ಹಾಗೂ ರಸ್ತೆಯಲ್ಲಿ ವಾಹನಗಳ ಓಡಾಟ ಮತ್ತು ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ  ಮಾಡಿ ಕಟ್ಟೆಚ್ಚರ ವಹಿಸಲಾಗಿದೆ.

ಮತ್ತೂಂದು ಪ್ರಕರಣ: ಮುಳಬಾಗಿಲು ತಾಲೂಕಿನಲ್ಲಿ ಐದು ಪಾಸಿಟಿವ್‌ ಪ್ರಕರಣಗಳು ಪತ್ತೆಯಾದ ನಂತರ ಕೆಜಿಎಫ್ ತಾಲೂಕಿನ ರಾಬರ್ಟ್‌ಸನ್‌ಪೇಟೆ ಹೋಬಳಿ ಬೈನೇನಪಲ್ಲಿ ಗ್ರಾಮದಲ್ಲಿ ಪಾಸಿಟಿವ್‌ ಪ್ರಕರಣವೊಂದು ಯುವಕನಲ್ಲಿ  ಪತ್ತೆಯಾಗಿದೆ.

992 ಸಂಖ್ಯೆಯ ಈತನು ಚನ್ನೈಗೆ ತೆರಳಿದ್ದ ಇತಿಹಾಸ ಹೊಂದಿದ್ದು, ಈ ಸಂದರ್ಭದಲ್ಲಿ ಪಾಸಿಟಿವ್‌ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ. ಈತನನ್ನು ಅಧಿಕೃತ ಕೊವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.  ಸದ್ಯಕ್ಕೆ ಬೈನೇಪಲ್ಲಿಯಲ್ಲಿ ಈತನ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ. ಇದರಿಂದ ಜಿಲ್ಲೆಯ ಪಾಸಿಟಿವ್‌ ಪ್ರಕರಣಗಳು ಅಧಿಕೃತವಾಗಿ 7ಕ್ಕೇರಿದೆ.

ಟಾಪ್ ನ್ಯೂಸ್

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

KGF: ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು;  98 ಕೇಸ್‌ ದಾಖಲು

ಕಾಡು ಪ್ರಾಣಿ ದಾಳಿ: ಕೋಲಾರದ ಯೋಧ ಗುಜರಾತ್‌ನಲ್ಲಿ ಸಾವು

ಕಾಡು ಪ್ರಾಣಿ ದಾಳಿ: ಕೋಲಾರದ ಯೋಧ ಗುಜರಾತ್‌ನಲ್ಲಿ ಸಾವು

Kolar Lok Sabha constituency: ಅಲೆಗಳು ಗೌಣ, ಸ್ಥಳೀಯ ಲೆಕ್ಕಾಚಾರಗಳೇ ನಿರ್ಣಾಯಕ

Kolar Lok Sabha constituency: ಅಲೆಗಳು ಗೌಣ, ಸ್ಥಳೀಯ ಲೆಕ್ಕಾಚಾರಗಳೇ ನಿರ್ಣಾಯಕ

Kolar: ಕುರ್ಚಿಗೆ ಅಧಿಕಾರಿಗಳಿಬ್ಬರ ತಿಕ್ಕಾಟ; ಕೆಲಸ ಸ್ಥಗಿತ

Kolar: ಕುರ್ಚಿಗೆ ಅಧಿಕಾರಿಗಳಿಬ್ಬರ ತಿಕ್ಕಾಟ; ಕೆಲಸ ಸ್ಥಗಿತ

11

Drinking water: ಜಾತ್ರೆಗೆ ಬಂದ ರಾಸುಗಳಿಗೆ ಕುಡಿಯಲು ನೀರಿಲ!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.