ಗಡಿ ಚೆಕ್‌ಪೋಸ್ಟ್‌ಗೆ ಶಾಸಕ ಎಚ್.ನಾಗೇಶ್ ಭೇಟಿ
Team Udayavani, May 14, 2021, 3:38 PM IST
ಮುಳಬಾಗಿಲು: ಜನಸಾಮಾನ್ಯರು ನೆಗಡಿ, ಕೆಮ್ಮು, ಜ್ವರ ತೀವ್ರಗೊಂಡಾಗ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಇದು ತಪ್ಪು, ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ತಪಾಸಣೆಗೆ ಒಳಪಟ್ಟರೆ ಕೊರೊನಾ ಸೋಂಕು ಬೇಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡ ಬಹುದು ಎಂದು ಶಾಸಕ ಎಚ್.ನಾಗೇಶ್ ತಿಳಿಸಿದರು.
ರಾಜ್ಯದ ಗಡಿಭಾಗ ನಂಗಲಿ ಗ್ರಾಮದ ಕೊರೊನಾ ತನಿಖಾ ಠಾಣೆಗೆ ಭೇಟಿ ನೀಡಿ ಮಾತನಾಡಿ, ಜ್ವರ, ನೆಗಡಿ ಕಂಡು ಬಂದ ತಕ್ಷಣ ವೈದ್ಯರ ಬಳಿ ತೋರಿಸಿಕೊಂಡರೆ ಕೊರೊನಾ ಅಥವಾ ಇನ್ನಿತರೆ ಕಾಯಿಲೆ ಬಗ್ಗೆ ತಿಳಿಯುತ್ತದೆ. ಆದರೆ, ಉಸಿರಾಟದ ಸಮಸ್ಯೆ ಅಪಾಯದ ಹಂತ ತಲುಪಿದಾಗ ಕೊರೊನಾ ಸೋಂಕನ್ನು ಪರೀಕ್ಷಿಸಿಕೊಳ್ಳಲು ವೈದ್ಯರ ಬಳಿ ಹೋಗುತ್ತಾರೆ. ಇದು ಜನ ಮಾಡುವ ಸ್ವಯಂ ಅಪರಾಧ ಎಂದು ಹೇಳಿದರು.
ಆಂಧ್ರ, ತೆಲಂಗಾಣ, ತಮಿಳುನಾಡು, ನೆರೆ ರಾಜ್ಯದ ಜನ ತಾಲೂಕಿಗೆ ಬಂದು ಹೋಗುವುದರಿಂದ ಸೋಂಕು ಸುಲಭವಾಗಿ ಹರಡುತ್ತದೆ. ನಂಗಲಿ ತನಿಖಾ ಠಾಣೆ ಗಡಿಯಲ್ಲಿದ್ದು, ಸಿಬ್ಬಂದಿ ಪ್ರತಿಯೊಬ್ಬರನ್ನು ಸೂಕ್ಷ್ಮವಾಗಿ ಗಮನಿಸಿ ಸೋಂಕಿನ ಲಕ್ಷಣಗಳು ಬಂದವರನ್ನು ಕೂಡಲೇ ಅವರ ರಾಜ್ಯಗಳಿಗೆ ವಾಪಸ್ ಕಳುಹಿಸಬೇಕು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಎನ್. ರಾಜಶೇಖರ್, ಡಿವೈಎಸ್‌ಪಿ ಗಿರಿ, ಸಿಪಿಐ ಗೋಪಾಲ್ ನಾಯಕ್, ಇಒ ಶ್ರೀನಿವಾಸ್, ದರಖಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ನಗರಸಭೆ ಪೌರಾಯುಕ್ತ ಶ್ರೀನಿವಾಸಮೂರ್ತಿ, ಉಪತಹಶೀಲ್ದಾರ್ ಕೆ.ಟಿ.ವೆಂಕಟೇಶಯ್ಯ, ರಾಜಸ್ವ ನಿರೀಕ್ಷಕ ಉಮೇಶ್, ಪಿಎಸ್‌ಐಗಳಾದ ಚೌಡಪ್ಪ, ಸೀತಯ್ಯ, ಪಿಡಿಒ ಸಿ.ಪಿ.ಅಶ್ವತ್ಥನಾರಾಯಣ, ಕಾರ್ಯದರ್ಶಿ ವಿಶ್ವನಾಥ್, ಎಸ್‌ಐ ಶ್ರೀಧರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹರೀಶ್, ಶಂಕರಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆಯ ಅಬ್ಬರ : ಉಡುಪಿ, ದ.ಕನ್ನಡದಲ್ಲಿ ನಾಳೆಯೂ ಶಾಲಾ – ಕಾಲೇಜುಗಳಿಗೆ ರಜೆ
ಅಂಜನಾದ್ರಿಯನ್ನು ಹೈಜಾಕ್ ಮಾಡಲು ಬಿಜೆಪಿ-ಸಂಘಪರಿವಾರದವರಿಗೆ ಬಿಡಲ್ಲ: ಎಚ್.ಆರ್.ಶ್ರೀನಾಥ
ಚಾ.ನಗರದಲ್ಲಿ ʼಬೈರಾಗಿʼ ವೀಕ್ಷಿಸಿದ ಶಿವಣ್ಣ: ಚಿತ್ರ ಪ್ರದರ್ಶನ ಯಾತ್ರೆಗೆ ಅದ್ದೂರಿ ಸ್ವಾಗತ
ಚಂದ್ರಶೇಖರ್ ಗುರೂಜಿ ಹತ್ಯೆ : ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಲು ಕ್ರಮ : ಬೊಮ್ಮಾಯಿ
ಶಿವಮೊಗ್ಗ: ಮಂಡಗದ್ದೆ ಬಳಿಯ ಚಂದ್ರಶೇಖರ ಗುರೂಜಿ ಹೆಂಡತಿ ಮನೆಯಲ್ಲಿ ನೀರವ ಮೌನ
MUST WATCH
ಹೊಸ ಸೇರ್ಪಡೆ