ನ್ಯಾಪ್‌ಕಿನ್‌ ಸುಡುವ ಯಂತ್ರ ಕೊಡುಗೆ

Team Udayavani, Jun 15, 2019, 11:49 AM IST

ಬಂಗಾರಪೇಟೆ: ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳಿಗೆ ವಿತರಿಸುವ ನ್ಯಾಪ್‌ಕಿನ್‌ಗಳನ್ನು ಸುರಕ್ಷಿತವಾಗಿ ಶೇಖರಿಸಿಟ್ಟುಕೊಳ್ಳಲು ಹಾಗೂ ಬಳಕೆ ಮಾಡಿದ್ದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಯಂತ್ರಗಳನ್ನು ಜಿಪಂ ಸದಸ್ಯ ಶಾಹಿದ್‌ ಕಾಮಸಮುದ್ರ ಕ್ಷೇತ್ರದ ಶಾಲೆಗಳಿಗೆ ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ.

ಋತುಮತಿಯಾದ ಹೆಣ್ಣು ಮಕ್ಕಳು ಶಾಲೆಯ ಅವಧಿಯಲ್ಲಿ ಬಳಸಿದ ಪ್ಯಾಡ್‌ಅನ್ನು ಕೆಲವೊಮ್ಮೆ ಶೌಚಾಲಯದಲ್ಲೇ ಹಾಕುತ್ತಿದ್ದರಿಂದ ಶೌಚಾಲಯ ಕಟ್ಟಿಕೊಂಡು ಸಮಸ್ಯೆಯಾಗುತ್ತಿತ್ತು. ಕೆಲವೊಮ್ಮೆ ದುರಸ್ತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ತಪ್ಪಿಸಲು ಕಾಮಸಮುದ್ರ ಜಿಪಂ ಕ್ಷೇತ್ರದ ಸದಸ್ಯ ಶಾಹಿದ್‌, ನ್ಯಾಪ್‌ಕಿನ್‌ ಶೇಖರಿಸಿಡಲು ಹಾಗೂ ಬಳಸಿದ್ದನ್ನು ಸುಟ್ಟುಹಾಕುವ ಯಂತ್ರಗಳನ್ನು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಉಚಿತವಾಗಿ ವಿತರಣೆ ವಿತರಿಸುತ್ತಿದ್ದಾರೆ.

ಇತರರಿಗೆ ಮಾದರಿ: ಹೆಣ್ಣು ಮಕ್ಕಳು ತರಗತಿ ಸಮಯದಲ್ಲಿ ಋತುಮತಿಯಾದ್ರೆ ತಾವೇ ಶೇಖರಣೆ ಮಾಡಿಟ್ಟ ಬಾಕ್ಸ್‌ ತೆಗೆದು ಉಪಯೋಗಿಸಬಹುದು. ಮತ್ತೆ ಬಳಸಿದ್ದನ್ನು ಸುಟ್ಟುಹಾಕಲು ಮತ್ತೂಂದು ಯತ್ರವನ್ನು ಅಲ್ಲೇ ಜೋಡಿಸಲಾಗಿದೆ. ಸದ್ಯ ತಾಲೂಕಿನ ಕಾಮಸಮುದ್ರ ಶಾಲೆಯ ಹೆಣ್ಣು ಮಕ್ಕಳ ಶೌಚಾಲಯದಲ್ಲಿ ತಮ್ಮ ಸ್ವಂತ 50 ಸಾವಿರ ರೂ. ಖರ್ಚಿನಲ್ಲಿ ಸದಸ್ಯರು ಈ ವ್ಯವಸ್ಥೆ ಮಾಡಿದ್ದು, ಇತರರಿಗೆ ಮಾದರಿಯಾಗಿದೆ.

ತಾಲೂಕಿನ ಕಾಮಸಮುದ್ರ ಹೋಬಳಿಯು ರಾಜ್ಯದ ಗಡಿಭಾಗದಲ್ಲಿದ್ದು, ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿದೆ. ಈ ಭಾಗದಲ್ಲಿ ಹೆಚ್ಚಾಗಿ ಅರಣ್ಯ ಪ್ರದೇಶವಿದ್ದು, ಈ ಶಾಲೆಗೆ 10 ಕಿ.ಮೀ. ದೂರದಿಂದಲೂ ಬಡ ಹೆಣ್ಣು ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಾರೆ. ತರಗತಿ ನಡೆಯುವ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಇಂತಹ ಸಮಸ್ಯೆ ಉಂಟಾದಾಗ ತಕ್ಷಣಕ್ಕೆ ಆಸರೆಯಾಗಿ ಯಾರೂ ಬರುವುದಿಲ್ಲ. ಈ ಯಂತ್ರ ಬಳಸುವುದರಿಂದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಅನುಕೂಲವೇ ಆಗಿದೆ.

ಕಾಮಸಮುದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಯಂತ್ರಗಳಿಗೆ ಜಿಲ್ಲಾ ಮಹಿಳಾ , ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೋಸಲಿನ್‌ ಸತ್ಯ ಚಾಲನೆ ನೀಡಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಮಾಲೂರು: ತಾಲೂಕಿನ ಸರ್ಕಾರಿ ಗೋಮಾಳ ಮತ್ತು ಸರ್ಕಾರಿ ಅಸ್ತಿಗಳ ಅಕ್ರಮವಾಗಿ ಪರಭಾರೆ ಮಾಡಿರುವ ಕ್ರಮ ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಕಾರ್ಯಕರ್ತರು...

  • ಮುಳಬಾಗಿಲು: ನೋಂದಣಿ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ, ದಲ್ಲಾಳಿಗಳಿಗೆ ಕಡಿವಾಣ, ಅಕ್ರಮಗಳಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ...

  • ಕೋಲಾರ: ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ನಗರ ಹೊರವಲಯದ ಅಂತರಗಂಗೆಯಲ್ಲಿ ಮಂಗಳವಾರ ರಾತ್ರಿ ನಡೆದ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವ ನೋಡಲು ಸಹಸ್ರಾರು...

  • ಟೇಕಲ್‌: ಕಳೆದ ವಾರ 60 ರಿಂದ 80 ರೂ. ಇದ್ದ ಈರುಳ್ಳಿ ಬೆಲೆ ಈಗ 1 ಕೆ.ಜಿ. 90 ರೂ.ರಿಂದ 160 ರೂ.ವರೆಗೂ ಮಾರಾಟವಾಗುತ್ತಿದ್ದು, ಗ್ರಾಮೀಣ ಜನರು ತತ್ತರಿಸಿದ್ದಾರೆ. ಈರುಳ್ಳಿ ಬೆಲೆ...

  • ಮುಳಬಾಗಿಲು: ನಗರಸಭೆ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಸಂಬಂಧ ಈಗಾಗಲೇ ತಾಲೂಕು ಆಡಳಿತ 5 ಕಿ.ಮೀ. ವ್ಯಾಪ್ತಿಯನ್ನು ನಿರ್ಧರಿಸಿದೆ. ಆದರೆ, ನಿಗದಿ ಮಾಡಿರುವ ವ್ಯಾಪ್ತಿಗೆ...

ಹೊಸ ಸೇರ್ಪಡೆ