ಮಳೆ ಕೊಯ್ಲಿಗೆ 10 ಕಟ್ಟಡ ಗುರ್ತಿಸಿ

ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯ: ಡೀಸಿ ಮಂಜುನಾಥ್‌

Team Udayavani, Aug 7, 2019, 3:13 PM IST

•ಕೋಲಾರ ಜಿಲ್ಲೆಯಲ್ಲಿ ಜೂನ್‌, ಜುಲೈನಲ್ಲಿ ವಾಡಿಕೆ ಮಳೆಗಿಂತ ಶೇ.20 ಕೊರತೆ: ಜಿಲ್ಲಾಧಿಕಾರಿ ಮಂಜುನಾಥ್‌

ಕೋಲಾರ: ಜಲಶಕ್ತಿ ಅಭಿಯಾನದಡಿ ಮಳೆ ನೀರು ಸಂರಕ್ಷಣೆಗೆ ಒತ್ತು ನೀಡಿ, ಜಿಲ್ಲೆಯ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಇಲಾಖೆ ಅನುದಾನದಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳಬೇಕು ಎಂಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅನುದಾನ ಲಭ್ಯವಿರದಿದ್ದರೆ ಪಟ್ಟಿಸಿದ್ಧಪಡಿಸಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಲಶಕ್ತಿ ಅಭಿಯಾನದಡಿ ಮಳೆ ನೀರು ಇಂಗಿಸುವುದು, ಸಸಿ ನೆಡುವುದು, ಕೆರೆ, ಕಲ್ಯಾಣಿ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು ಎಂದರು.

ಮಳೆ ನೀರು ಕೊಯ್ಲು ಅಳವಡಿಸಿ: ಜಿಲ್ಲೆಯ ಪ್ರತಿ ತಾಲೂಕಿಲ್ಲೂ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳು ಒಂದು ಕೆರೆ, ಕಾಲುವೆ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿದ್ದು, ಚಾಲನೆ ನೀಡಲಾಗಿದೆ. ಅಂಗನವಾಡಿಯಿಂದ ಹಿಡಿದು ಎಲ್ಲಾ ಸರ್ಕಾರಿ ಕಚೇರಿಗಳ ಕಟ್ಟಡಗಳಲ್ಲಿ ಮಳೆ ಕೊಯ್ಲು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

10 ಕಟ್ಟಡ ಗುರುತಿಸಿ: ಯಾವ್ಯಾವ ಕಟ್ಟಡದಲ್ಲಿ ವ್ಯವಸ್ಥೆ ಇದೆ, ಇಲ್ಲ ಎಂಬುದನ್ನು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಆಯಾ ಇಲಾಖೆಗಳಲ್ಲಿ ಅನುದಾನ ಲಭ್ಯವಿರದಿದ್ದರೆ ವಿಶೇಷ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು, ಖಾಸಗಿ ಕಟ್ಟಡಗಳಾದ ಕಲ್ಯಾಣ ಮಂಟಪ, ಬೃಹತ್‌ ವಾಣಿಜ್ಯ ಮಳಿಗೆಗಳಲ್ಲಿ ಅಳವಡಿಸಿಕೊಳ್ಳಬೇಕು, ಈ ಬಗ್ಗೆ ಟಾಪ್‌ 10 ಕಟ್ಟಡ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸಸಿ ಪೂರೈಸಿ: ಕೆಜಿಎಫ್‌ನ ಬೆಮೆಲ್ನಲ್ಲಿ 6500 ಕಾರ್ಮಿಕರಿದ್ದಾರೆ. ಪ್ರತಿ ಇಬ್ಬರು ಒಂದೊಂದು ಸಸಿ ನೆಟ್ಟರೆ 6500 ಸಸಿಗಳನ್ನು ಬೆಳೆಸಬಹುದು. ಈ ದಿಸೆಯಲ್ಲಿ ಅಗತ್ಯ ಸಸಿಗಳನ್ನು ಪೂರೈಸುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.

ಟ್ಯಾಂಕರ್‌ ನೀರು ಪೂರೈಕೆ: ಜಿಲ್ಲೆಯ 143 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 71 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನಿತ್ಯ 181 ಟ್ರಿಪ್‌ ನೀರು ಸರಬರಾಜು ಮಾಡಲಾಗುತ್ತಿದೆ. 72 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಗರ, ಪುರಸಭೆ ವ್ಯಾಪ್ತಿಯ 28 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದ್ದು, 25 ಟ್ಯಾಂಕರ್‌ಗಳಲ್ಲಿ ನಿತ್ಯ 105 ಟ್ರಿಪ್‌ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಖಾಸಗಿ ಬೋರ್‌ವೆಲ್ಗೆ ಅವಕಾಶವಿಲ್ಲ: ಹೊಸ ಬೋರ್‌ವೆಲ್ ಕೊರೆಯಿಸಿದರೂ ಸಫಲತೆ ಪ್ರಮಾಣ ಕಡಿಮೆಯಾದ್ದರಿಂದ ಅವಕಾಶ ಇದ್ದೆಡೆ ಬೋರ್‌ವೆಲ್ ಕೊರೆಯಿಸಲು ಸೂಚಿಸಲಾಗಿದೆ. ಸಾರ್ವಜನಿಕ ಬಳಕೆಗೆ, ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಯಿಸಲು ಅನುಮತಿ ನೀಡಲಾಗಿದೆ. ಖಾಸಗಿಯಾಗಿ ಬೋರ್‌ವೆಲ್ ಕೊರೆಯಿಸಲು ಅನುಮತಿ ನೀಡುತ್ತಿಲ್ಲ. ಈ ಬಗ್ಗೆ ರಿಗ್‌ಮಾಲಿಕರಿಗೂ ಸೂಚನೆ ನೀಡಲಾಗಿದೆ ಎಂದರು. ಕಳೆದ ವರ್ಷ ಜಿಲ್ಲೆಯ ಎಲ್ಲ 6 ತಾಲೂಕುಗಳಲ್ಲೂ ಬರಪೀಡಿತವಾಗಿತ್ತು. ಈ ವರ್ಷವೂ ಜೂನ್‌, ಜುಲೈನಲ್ಲಿ ವಾಡಿಕೆ ಮಳೆಗಿಂತ ಶೇ.20 ಕೊರತೆ ಎದುರಾಗಿರುವುದ ರಿಂದ ಬರ ನಿರ್ವಹಣೆ ಮುಂದುವರಿಸುವಂತೆ ಸರ್ಕಾರ ಸೂಚಿಸಿದೆ ಎಂದರು.

ರಾಜ್ಯದ 65 ತಾಲೂಕುಗಳಲ್ಲಿ ತೀವ್ರ ಬರದ ಪರಿಸ್ಥಿತಿ ಇರುವ ತಾಲೂಕುಗಳ ಪೈಕಿ ಜಿಲ್ಲೆಯ ಮಾಲೂರು ಮತ್ತು ಬಂಗಾರ ಪೇಟೆಯನ್ನು ಗುರುತಿಸಲಾಗಿದೆ. ಜಿಲ್ಲೆ ಯಲ್ಲಿ 13 ವಾರಕ್ಕೆ ಸಾಕಾಗುವಷ್ಟು ಮೇವು ಲಭ್ಯವಿದ್ದರೂ ತೊಂದರೆ ಆಗದಂತೆ ಈ ಎರಡು ತಾಲೂಕುಗಳಲ್ಲಿ ಗೋಶಾಲೆ ತೆರೆ ಯುವಂತೆ ಅಥವಾ ಸ್ವಯಂಸೇನಾ ಸಂಸ್ಥೆಗಳು ನಡೆಸುತ್ತಿರುವ ಗೋ ಶಾಲೆಯಲ್ಲಿ ವ್ಯವಸ್ಥೆ ಮಾಡುವಂತೆ ಸರ್ಕಾರ ನಿರ್ದೇಶನ ನೀಡಿದೆ ಎಂದು ಜಿಲ್ಲಾಧಿಕಾರಿ ಮಂಜು ನಾಥ್‌ ತಿಳಿಸಿದರು.

ಮಾಲೂರಿನ ಗಂಗಾಪುರದಲ್ಲಿ ರಾಘ ವೇಂದ್ರ ಗೋ ಆಶ್ರಮ ಹಾಗೂ ಬಂಗಾರ ಪೇಟೆಯ ಬ್ಯಾಟರಾಯನಪುರದಲ್ಲಿನ ನಂದಿ ಗೋಶಾಲೆ ಇರುವುದರಿಂದ ಇವರ ಮೂಲಕ ಸ್ಥಳೀಯ ಗ್ರಾಮಗಳ ರೈತರ ಜಾನುವಾರುಗಳಿಗೆ ಮೇವು, ನೀರು ಸೌಲಭ್ಯ ಕಲ್ಪಿಸಲಾಗುವುದು. ಪ್ರತಿ ಜಾನು ವಾರಿಗೆ ದಿನಕ್ಕೆ 70 ರೂ.ನಂತೆ ಸರ್ಕಾರ ವೆಚ್ಚ ಭರಿಸುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.

ಮೇವಿನ ಕೊರತೆ ನೀಗಿಸಲು ನೀರಿನ ಸೌಲಭ್ಯವುಳ್ಳ ರೈತರಿಗೆ ಮಿನಿ ಕಿಟ್ ನೀಡಲಾಗುವುದು, ಕೆ.ಸಿ. ವ್ಯಾಲಿ ವ್ಯಾಪ್ತಿಯ ರೈತರಿಗೆ ಮೇವು ಬೆಳೆಸಲು ಪ್ರೋತ್ಸಾಹ ನೀಡಲಾಗುವುದು ಎಂದ ಅವರು, ಈ ಭಾಗದಿಂದ ಹೊರ ರಾಜ್ಯಗಳಿಗೆ ಮೇವು ಸರಬರಾಜು ನಿಷೇಧ ಮುಂದುವರಿದಿದೆ ಎಂದರು.

ಮಾಲೂರು, ಬಂಗಾರಪೇಟೆ ತೀವ್ರ ಬರ ತಾಲೂಕು:

ರಾಜ್ಯದ 65 ತಾಲೂಕುಗಳಲ್ಲಿ ತೀವ್ರ ಬರದ ಪರಿಸ್ಥಿತಿ ಇರುವ ತಾಲೂಕುಗಳ ಪೈಕಿ ಜಿಲ್ಲೆಯ ಮಾಲೂರು ಮತ್ತು ಬಂಗಾರ ಪೇಟೆಯನ್ನು ಗುರುತಿಸಲಾಗಿದೆ. ಜಿಲ್ಲೆ ಯಲ್ಲಿ 13 ವಾರಕ್ಕೆ ಸಾಕಾಗುವಷ್ಟು ಮೇವು ಲಭ್ಯವಿದ್ದರೂ ತೊಂದರೆ ಆಗದಂತೆ ಈ ಎರಡು ತಾಲೂಕುಗಳಲ್ಲಿ ಗೋಶಾಲೆ ತೆರೆ ಯುವಂತೆ ಅಥವಾ ಸ್ವಯಂಸೇನಾ ಸಂಸ್ಥೆಗಳು ನಡೆಸುತ್ತಿರುವ ಗೋ ಶಾಲೆಯಲ್ಲಿ ವ್ಯವಸ್ಥೆ ಮಾಡುವಂತೆ ಸರ್ಕಾರ ನಿರ್ದೇಶನ ನೀಡಿದೆ ಎಂದು ಜಿಲ್ಲಾಧಿಕಾರಿ ಮಂಜು ನಾಥ್‌ ತಿಳಿಸಿದರು. ಮಾಲೂರಿನ ಗಂಗಾಪುರದಲ್ಲಿ ರಾಘ ವೇಂದ್ರ ಗೋ ಆಶ್ರಮ ಹಾಗೂ ಬಂಗಾರ ಪೇಟೆಯ ಬ್ಯಾಟರಾಯನಪುರದಲ್ಲಿನ ನಂದಿ ಗೋಶಾಲೆ ಇರುವುದರಿಂದ ಇವರ ಮೂಲಕ ಸ್ಥಳೀಯ ಗ್ರಾಮಗಳ ರೈತರ ಜಾನುವಾರುಗಳಿಗೆ ಮೇವು, ನೀರು ಸೌಲಭ್ಯ ಕಲ್ಪಿಸಲಾಗುವುದು. ಪ್ರತಿ ಜಾನು ವಾರಿಗೆ ದಿನಕ್ಕೆ 70 ರೂ.ನಂತೆ ಸರ್ಕಾರ ವೆಚ್ಚ ಭರಿಸುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು. ಮೇವಿನ ಕೊರತೆ ನೀಗಿಸಲು ನೀರಿನ ಸೌಲಭ್ಯವುಳ್ಳ ರೈತರಿಗೆ ಮಿನಿ ಕಿಟ್ ನೀಡಲಾಗುವುದು, ಕೆ.ಸಿ. ವ್ಯಾಲಿ ವ್ಯಾಪ್ತಿಯ ರೈತರಿಗೆ ಮೇವು ಬೆಳೆಸಲು ಪ್ರೋತ್ಸಾಹ ನೀಡಲಾಗುವುದು ಎಂದ ಅವರು, ಈ ಭಾಗದಿಂದ ಹೊರ ರಾಜ್ಯಗಳಿಗೆ ಮೇವು ಸರಬರಾಜು ನಿಷೇಧ ಮುಂದುವರಿದಿದೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ