ಪಕ್ಷಿಗಳಿಗಾಗಿ ಹಣ್ಣಿನ ತೋಟ ಮೀಸಲು

ಅರ್ಧ ಎಕರೆ ಜಮೀನಿನಲ್ಲಿ ಹಣ್ಣಿನ ಗಿಡ ಬೆಳೆಸಿ ಪಕ್ಷಿಗಳಿಗೆ ಆಸರೆಯಾದ ವೃದ್ಧ ದಂಪತಿ

Team Udayavani, Jul 22, 2019, 12:14 PM IST

kolar-tdy-1

ಬಂಗಾರಪೇಟೆ ತಾಲೂಕಿನ ಮರಾಠಹೊಸಹಳ್ಳಿ ಗ್ರಾಮದ ಪರಿಸರವಾದಿ ಜಿ.ಬಿ.ರೆಡ್ಡಿ ಹಾಗೂ ಅವರ ಪತ್ನಿ ಪ್ರಾಣಿಪಕ್ಷಿಗಳಿಗೆ ಆಹಾರ ಹಾಕುತ್ತಿರುವುದು.

ಬಂಗಾರಪೇಟೆ: ಮರಗಿಡ ನಾಶ ಮಾಡಿದ್ದರಿಂದ ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗದೆ ಪರಿತಪಿಸುತ್ತಿರುವ ಇಂತಹ ದಿನಗಳಲ್ಲಿ, ವೃದ್ಧ ದಂಪತಿ ತಮ್ಮ ಜಮೀನಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿ ಆಸರೆಯಾಗಿದ್ದಾರೆ.

ತಾಲೂಕಿನ ಮರಾಠ ಹೊಸಹಳ್ಳಿಯ ಪರಿಸರ ಪ್ರೇಮಿಯೂ ಆದ ಜಿ.ಬಿ.ರೆಡ್ಡಿ ಹಾಗೂ ಇವರ ಪತ್ನಿ ತಮಗಿರುವ ಅರ್ಧ ಎಕರೆ ಭೂಮಿಯಲ್ಲಿ 15ಕ್ಕೂ ಹೆಚ್ಚು ವಿವಿಧ ತಳಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ದಾಳಿಂಬೆ, ಚೆರ್ರಿ, ಮೂಸಂಬಿ, ಸೀಬೆ, ನೇರಳೆ, ಸ್ಟಾರ್‌, ಅಂಜೂರ ಹೀಗೆ ಹತ್ತಾರು ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಿ, ಫ‌ಲವನ್ನು ಪ್ರಾಣಿ ಪಕ್ಷಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ.

ಇವರ ತೋಟದಲ್ಲಿ ಬಿಡುವ ಹಣ್ಣನ್ನೂ ಮಾರಾಟ ಮಾಡುವುದಾಗಲಿ, ಜನರಿಗೆ ತಿನ್ನುವುದಕ್ಕಾಗಲಿ ಬಿಡುವುದಿಲ್ಲ, ಇಲ್ಲಿ ಬೆಳೆದ ಪ್ರತಿ ಹಣ್ಣು ಪ್ರಾಣಿ ಪಕ್ಷಿಗಳಿಗೆ ಸೇರಬೇಕು ಅನ್ನೋದು ಇವರ ಉದ್ದೇಶ. ಹೀಗಾಗಿ ನಾಲ್ಕು ವರ್ಷಗಳಿಂದ ಬೆಳೆದ ವಿವಿಧ ಹಣ್ಣುಗಳನ್ನು ಪ್ರಾಣಿ ಪಕ್ಷಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ.

ಆಂಧ್ರದ ರಾಜಮಂಡ್ರಿಯಿಂದ ಹಣ್ಣಿನ ಸಸಿಗಳನ್ನು ತಂದು ನೆಟ್ಟು, ಪ್ರತಿ ದಿನ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮಳೆ ಇಲ್ಲದೆ, ತಮ್ಮ ಹೊಟ್ಟೆಗೆ ಬೆಳೆ ಬೆಳೆದುಕೊಳ್ಳಲು ಪರಿತಪಿಸುತ್ತಿರುವ ಈ ಕಾಲದಲ್ಲಿ ಸಾವಿರಾರು ರೂ.ಹಣ ಖರ್ಚು ಮಾಡಿ, ಟ್ಯಾಂಕರ್‌ ಮೂಲಕ ನೀರು ಹಾಯಿಸಿ, ಒಂದು ಹಣ್ಣನ್ನೂ ಮಾರಾಟ ಮಾಡದೇ, ಪಕ್ಷಿಗಳಿಗೆ ಆಹಾರ ಒದಗಿಸುತ್ತಿರುವುದು ಶ್ಲಾಘನೀಯ.

ಪಕ್ಷಿಗಳ ಕಲರವದೊಂದಿಗೆ ತಮ್ಮ ದಿನ ಪ್ರಾರಂಭಿಸುವ ರೆಡ್ಡಿ ಅವರು, ಪಕ್ಷಿಗಳ ಇಂಪಾದ ಧ್ವನಿಯನ್ನು ಕೇಳಲು ಮುಂಜಾನೆಯೇ ಎದ್ದು ಮನೆಯ ಸುತ್ತಲೂ ಓಡಾಡುತ್ತಾರಂತೆ.

ಸನ್ಯಾಸಿಯಿಂದ ಮನ ಪರಿವರ್ತನೆ: ಜಿ.ಬಿ.ರೆಡ್ಡಿ ಬದುಕಿನಲ್ಲಿ ಇಂಥಾದೊಂದು ಬದಲಾವಣೆಗೆ ಮುಖ್ಯ ಕಾರಣ ಒಬ್ಬ ಸನ್ಯಾಸಿ. ತಮ್ಮ ಜೀವನ ನಿರ್ವಹಣೆಗಾಗಿ ಮರಗಳನ್ನು ಕಡಿದು ಮಾರಾಟ ಮಾಡುವುದಾಗಿತ್ತು.

ಪರಿಸರಕ್ಕೆ ತಮ್ಮಿಂದ ಆಗುತ್ತಿರುವ ಅಪಚಾರದ ಬಗ್ಗೆ ಅವರ ಅರಿವಿಗೆ ಬರಲಿಲ್ಲ. ಪ್ರಕೃತಿಯಲ್ಲಿ ಬೆಳೆಯುವ ಬೆಲೆ ಬಾಳುವ ಬೃಹತ್ತಾದ ಮರಗಳನ್ನು ಕಡಿದು ಅದರಿಂದಲೇ ತನ್ನ ಅರ್ಧ ಜೀವನವನ್ನು ಸಾಗಿಸಿದ್ದರು.

ಹೀಗೆ ಜಿ.ಬಿ.ರೆಡ್ಡಿ ಅವರು ಒಮ್ಮೆ ಅಮರನಾಥ ಯಾತ್ರೆಗೆಂದು ಹೋಗಿದ್ದರು. ಈ ವೇಳೆ ಅಲ್ಲಿನ ಹವಮಾನ ವೈಪರೀತ್ಯದಿಂದ ಉಸಿರುಗಟ್ಟಿ ಅಲ್ಲೇ ಕುಸಿದು ಬಿದ್ದು, ಸಾಯುವ ಹಂತಕ್ಕೆ ತಲುಪಿದ್ದರಂತೆ. ಈ ವೇಳೆ ಅಲ್ಲೇ ಇದ್ದ ಸನ್ಯಾಸಿಯೊಬ್ಬರು ಅವರಿಗೆ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

ಹೀಗೆ ಸಾವಿನ ಕದತಟ್ಟಿ ಬಂದ ರೆಡ್ಡಿ ಅವರಿಗೆ ಆ ಸನ್ಯಾಸಿ ಕೆಲವು ಸಲಹೆಗಳನ್ನು ನೀಡಿದರಂತೆ. ನೀನು ಈ ಜನುಮದಲ್ಲಿ ಸಾಕಷ್ಟು ತಪ್ಪು ಮಾಡಿದ್ದೀರಿ, ಪ್ರಕೃತಿಯಲ್ಲಿನ ಲಕ್ಷಾಂತರ ಮರಗಳನ್ನು ಕಡಿದು ಅಮಾಯಕ ಜೀವಗಳಿಗೆ ತೊಂದರೆ ಕೊಟ್ಟಿದ್ದೀರಿ, ಹೀಗಾಗಿ ಇನ್ನು ಮುಂದೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮೂಕ ಪ್ರಾಣಿ ಪಕ್ಷಿಗಳಿಗೆ ನೆರವಾಗುವ ಕೆಲಸ ಮಾಡುವಂತೆ ಹೇಳಿದ್ದರಂತೆ.

ನಂತರ ಅಲ್ಲಿಂದ ತಮ್ಮೂರಿಗೆ ಹಿಂತಿರುಗಿದ ರೆಡ್ಡಿಯವರು, ಮರ ಕಡಿಯುವುದನ್ನು ಕೈಬಿಟ್ಟು, ಒಂದು ವರ್ಷದ ಹಿಂದೆ ತಮ್ಮ ಜಮೀನಿನಲ್ಲಿ ನಿಂಬೆ, ನೇರಳೆಗಿಡ ನೆಟ್ಟಿದ್ದು, ಗಿಡಗಳಿಗೆ ನೀರು ಕಟ್ಟುವ ಕಾಯಕದಲ್ಲಿ ನೀರತರಾಗಿದ್ದಾರೆ.

ನಮ್ಮ ಜೀವಿತಾವಧಿವರೆಗೂ ಪರಿಸರಕ್ಕೆ ಕೊಡುಗೆ ನೀಡಲು ನಿರ್ಧರಿಸಿದ್ದೇನೆ. ಬಿಡುವಿನ ಸಮಯದಲ್ಲಿ ರಸ್ತೆ ಬದಿ, ಸರ್ಕಾರಿ ಶಾಲೆ, ಕಚೇರಿ ಆವರಣದಲ್ಲಿ ಮರಗಿಡ ಬೆಳೆಸಲು ಸಿದ್ಧನಿದ್ದೇನೆ. ಈ ಮೂಲಕ ಪ್ರಕೃತಿಗೆ, ಪ್ರಾಣಿ ಪಕ್ಷಿಗಳಿಗೆ ಸಹಾಯವಾಗಲಿದೆ.
● ಜಿ.ಬಿ.ರೆಡ್ಡಿ, ಪರಿಸರ ಪ್ರೇಮಿ
● ಎಂ.ಸಿ.ಮಂಜುನಾಥ್‌

ಟಾಪ್ ನ್ಯೂಸ್

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

11

Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.