Udayavni Special

ಬೆಳೆ ಬೆಳೆಯುವ ರೈತರಿಗೆ ಸಾಲ ನೀಡಲು ಆದ್ಯತೆ


Team Udayavani, Jul 6, 2021, 2:33 PM IST

ಬೆಳೆ ಬೆಳೆಯುವ ರೈತರಿಗೆ ಸಾಲ ನೀಡಲು ಆದ್ಯತೆ

ಕೋಲಾರ: ಅನ್ನದಾತರು ಸಂಕಷ್ಟದಲ್ಲಿದ್ದಾರೆ, ಅವರ ನೆರವಿಗೆ ಬ್ಯಾಂಕ್‌ ನಿಲ್ಲಬೇಕಾಗಿದೆ, ಬೆಳೆ ಬೆಳೆಯುವಪ್ರಾಮಾಣಿಕ ರೈತರನ್ನು  ಗುರುತಿಸಿ ಅವರಿಗೆ ಸಾಲ ಸೌಲಭ್ಯ ನೀಡುವ ಜವಾಬ್ದಾರಿ ನಮ್ಮದಾಗಿದ್ದು, ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿ ಠೇವಣಿ ಸಂಗ್ರಹಕ್ಕೂ ಒತ್ತು ನೀಡಿ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.

ಬ್ಯಾಂಕಿನ ಸಭಾಂಗಣದಲ್ಲಿ ಉಭಯ ಜಿಲ್ಲೆಗಳ ಎಲ್ಲಾ ಶಾಖೆಗಳ ಅಧಿಕಾರಿ, ಸಿಬ್ಬಂದಿಯೊಂದಿಗೆ ಆನ್‌ಲೈನ್‌ ಸಭೆ ನಡೆಸಿ ಮಾತನಾಡಿದ ಅವರು, ಸಣ್ಣ, ಅತಿಸಣ್ಣರೈತರಿಗೆ ಸಾಲ ನೀಡಲು ಆದ್ಯತೆ ನೀಡಿ, ಬಡವರುಎಂದೂ ಬ್ಯಾಂಕಿಗೆ ವಂಚನೆ ಮಾಡುವುದಿಲ್ಲ, 10 ಗುಂಟೆ, 20 ಗುಂಟೆ ಜಮೀನಿನಲ್ಲೂ ಬದುಕು ಕಟ್ಟಿಕೊಳ್ಳುವ ಸಣ್ಣ ರೈತರಿದ್ದಾರೆ. ಅವರಿಗೆ ಮೊದಲು ಸಾಲ ನೀಡಿ ಕೈಹಿಡಿಯೋಣ ಎಂದು ಹೇಳಿದರು.

ಪ್ರಸ್ತಾವನೆ ಸಿದ್ಧಮಾಡಿಕೊಳ್ಳಿ: ಸಾಲ ನೀಡಿಕೆಗೆ ಜಾತಿ, ಧರ್ಮ, ಪಕ್ಷ ನೋಡದಿರಿ, ನಿಜವಾಗಿಯೂ ಬೆಳೆಬೆಳೆಯುವ ರೈತರೇ ನಮ್ಮ ಆದ್ಯತೆಯಾಗಬೇಕು, ಸೊಸೈಟಿಗಳಿಗೆ ಸಾಲಕ್ಕೆ ಪ್ರಸ್ತಾವನೆ ಸಿದ್ಧಪಡಿಸಿಕೊಳ್ಳಲು ತಿಳಿಸಿ ಎಂದ ಅವರು, ಈ ಕೂಡಲೇ ಉಪನೋಂದಣಾಧಿಕಾರಿಗಳಿಗೂ ಬ್ಯಾಂಕಿನ ಕೇಂದ್ರ ಕಚೇರಿಯಿಂದ ಪತ್ರಬರೆದು ಸಾಲಕ್ಕಾಗಿ ಜಮೀನುಮಾರ್ಟ್‌ಗೇಜ್‌ ಮಾಡುವ ರೈತರನ್ನು ಅಲೆಸದೇ ಅರ್ಜಿ ಹಾಕಿದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೋರಲು ತಿಳಿಸಿದರು.

ಠೇವಣಿ ಸಂಗ್ರಹ ಗುರಿ ಸಾಧಿಸಿ: ನಿಮಗೆ ಬ್ಯಾಂಕ್‌ ಅನ್ನ ನೀಡುತ್ತಿದೆ, ನಿಮ್ಮ ಕುಟುಂಬ ಪೋಷಿಸುತ್ತಿದೆ.ಆದ್ದರಿಂದ ನಿಮಗೆ ಜವಾಬ್ದಾರಿ ಇರಬೇಕು, ಠೇವಣಿ ಸಂಗ್ರಹದಲ್ಲಿ ನಾವು ಹಿಂದುಳಿದರೆ ರೈತರು, ಮಹಿಳೆಯರಿಗೆ ನೆರವಾಗಲು ಕಷ್ಟವಾಗುತ್ತದೆ. ಅಪೇಕ್ಸ್‌ ಬ್ಯಾಂಕ್‌, ನಬಾರ್ಡ್‌ಗಳಲ್ಲಿ ನಮ್ಮ ಬ್ಯಾಂಕಿಗೆ ಹೆಚ್ಚಿನ ಗೌರವವಿದೆ. ಅದಕ್ಕೆ ಚ್ಯುತಿಯಾಗಬಾರದು, ನಾವು ತಲೆಯೆತ್ತಿ ಅಲ್ಲಿಗೆ ಹೋಗುವ ವಾತಾವರಣ ನಿರ್ಮಿಸುವುದು ನಿಮ್ಮ ಹೊಣೆ ಎಂದು ಹೇಳಿದರು.

ಜು.30ರೊಳಗೆ ಇ-ಶಕ್ತಿ ಮುಗಿಸಿ: ಎರಡೂ ಜಿಲ್ಲೆಗಳ ಬ್ಯಾಂಕಿನ ಎಲ್ಲಾ ಶಾಖೆಗಳು ಜು.30ರೊಳಗೆ ಇ-ಶಕ್ತಿಅನುಷ್ಠಾನವನ್ನು ಶೇ.100 ಮುಗಿಸಿರಬೇಕು, ಇ-ಶಕ್ತಿಅನುಷ್ಠಾನದ ಹೊಣೆ ಹೊತ್ತಿರುವ 235 ಪ್ರೇರಕರನ್ನು ಮುಂದಿನ ಸಭೆಗೆ ಕರೆ ತನ್ನಿ, ಅದು ಬ್ಯಾಂಕ್‌ ಮ್ಯಾನೇಜರ್‌ಗಳ ಜವಾಬ್ದಾರಿ ಎಂದ ಅವರು, ಮಹಿಳಾಸ್ವಸಹಾಯ ಸಂಘಗಳ ಸಾಲಗಳ ನವೀಕರಣ ಪ್ರಸ್ತಾವನೆಶೀಘ್ರ ಸಲ್ಲಿಸಿ, ಯಾವುದೇ ಸಾಲ ಎನ್‌ಇಎಸ್‌ ಆಗದಂತೆವಸೂಲಾಗಿ ಬದ್ಧತೆಯಿಂದ ಮಾಡಿ, ರಜೆ, ಸ್ವಂತ ಕೆಲಸಬಿಟ್ಟು ಬ್ಯಾಂಕಿನಕೆಲಸ ಮಾಡಿ ಎಂದರು.

ಸಭೆಯಲ್ಲಿ ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ಅರುಣ್‌ಕುಮಾರ್‌, ಸಿಬ್ಬಂದಿ ಹ್ಯಾರೀಸ್‌,ಜಬ್ಟಾರ್‌, ಶುಭಾ, ಮಮತಾ, ಬಾಲಾಜಿ, ಬೇಬಿ ಶಾಮಿಲಿ ಮತ್ತಿತರರಿದ್ದರು.

ಟಾಪ್ ನ್ಯೂಸ್

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ: ಕರಾವಳಿಯಲ್ಲಿ ಗರಿಗೆದರಿದೆ ಕುತೂಹಲ!‌

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ: ಕರಾವಳಿಯಲ್ಲಿ ಗರಿಗೆದರಿದೆ ಕುತೂಹಲ!‌

ಹೊಸಬರ ನಿರೀಕ್ಷೆ , ಹಳಬರ ಆತಂಕ

ಹೊಸಬರ ನಿರೀಕ್ಷೆ , ಹಳಬರ ಆತಂಕ

Untitled-1

ಪಿಯು ಉಪನ್ಯಾಸಕರ ವರ್ಗಾವಣೆಗೆ ಅಧ್ಯಾದೇಶಕ್ಕೆ ಸಿದ್ಧತೆ

ನೂತನ ಸಂಪುಟ ಸೇರುವ ನಿರೀಕ್ಷೆಯಲ್ಲಿ ಹಲವು ಆಕಾಂಕ್ಷಿಗಳು

ನೂತನ ಸಂಪುಟ ಸೇರುವ ನಿರೀಕ್ಷೆಯಲ್ಲಿ ಹಲವು ಆಕಾಂಕ್ಷಿಗಳು

Untitled-1

ದೀದಿ-ಸೋನಿಯಾ ಭೇಟಿ :ಮುನಿಸು ಮರೆತು ಬೆರೆತರು

ಆಗಮನ-ನಿರ್ಗಮನಗಳ ಹಿಂದಿನ ರಾಜಕೀಯ ಕಸರತ್ತು

ಆಗಮನ-ನಿರ್ಗಮನಗಳ ಹಿಂದಿನ ರಾಜಕೀಯ ಕಸರತ್ತು

34 ಕೋಟಿ ರೂ. ಲಾಭ ನಿರೀಕ್ಷೆಯಲ್ಲಿದ್ದ ಕುಂದ್ರಾ

34 ಕೋಟಿ ರೂ. ಲಾಭ ನಿರೀಕ್ಷೆಯಲ್ಲಿದ್ದ ಕುಂದ್ರಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road development

7.50 ಕೋಟಿ ರೂ.ನಲ್ಲಿ ರಸ್ತೆ ಅಭಿವೃದ್ಧಿ

Government Hospital

ಕೋಲಾರ: ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಒತ್ತು

kolara incident

ಉಳುಮೆ ಭೂಮಿ ಕಬಳಿಕೆಗೆ ಯತ್ನ

Road Transport Divisional Control Officer suspended

ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣ ಅಧಿಕಾರಿ ಅಮಾನತು

kolara news

ನಕಲಿ ಕಟ್ಟಡ ಕಾರ್ಮಿಕರ ವಿರುದ್ದ ಕ್ರಮಕೈಗೊಳ್ಳಿ

MUST WATCH

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

udayavani youtube

ಶುಭಾಶಯಗಳು ಮಾಮ : ಬಸವರಾಜ್ ಬೊಮ್ಮಾಯಿಗೆ ಕಿಚ್ಚ ಸುದೀಪ್ ಹಾರೈಕೆ

udayavani youtube

ಹಳ್ಳಿಯ ಹೋಟೆಲ್ ಉದ್ಯಮದಲ್ಲಿ ತೃಪ್ತಿ ಕಂಡುಕೊಂಡ IT ಉದ್ಯೋಗಿಗಳು!

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

ಹೊಸ ಸೇರ್ಪಡೆ

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ: ಕರಾವಳಿಯಲ್ಲಿ ಗರಿಗೆದರಿದೆ ಕುತೂಹಲ!‌

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ: ಕರಾವಳಿಯಲ್ಲಿ ಗರಿಗೆದರಿದೆ ಕುತೂಹಲ!‌

ಹೊಸಬರ ನಿರೀಕ್ಷೆ , ಹಳಬರ ಆತಂಕ

ಹೊಸಬರ ನಿರೀಕ್ಷೆ , ಹಳಬರ ಆತಂಕ

Untitled-1

ಪಿಯು ಉಪನ್ಯಾಸಕರ ವರ್ಗಾವಣೆಗೆ ಅಧ್ಯಾದೇಶಕ್ಕೆ ಸಿದ್ಧತೆ

ಮಂಗಳೂರು: ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೊಲೀಸ್‌ ಸೆರೆ

ಮಂಗಳೂರು: ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೊಲೀಸ್‌ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.