ರಸ್ತೆದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ


Team Udayavani, Oct 14, 2020, 3:46 PM IST

KOLAR-TDY-1

ಕೋಲಾರ: ನಗರದ ಬಹಳಷ್ಟು ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆಯೂ ಹಳ್ಳ ಗಳಿಂದಕೂಡಿದ್ದು ಹದಗೆಟ್ಟ ರಸ್ತೆಗಳನ್ನು ಸರಿಪ ಡಿಸಲು ಒತ್ತಾಯಿಸಿ ಮಂಗಳವಾರಕೋಲಾರ ಪ್ರಗತಿಪರ ಸಂಘಟನೆಗಳ ಮುಖಂಡರು, ಎಂ.ಬಿ.ರಸ್ತೆ ವಿನಯ್‌ ಸಭಾಂಗಣದ ಮುಂಭಾಗ ರಸ್ತೆಯನ್ನು ಸಂಪೂರ್ಣ ಬಂದ್‌ ಮಾಡಿ ಪ್ರತಿಭಟಿಸಿದರು.

ಪ್ರತಿಭಟನಾಕಾರರು ಸುಮಾರು ಒಂದು ಗಂಟೆ ಕಾಲ ರಸ್ತೆ ಬಂದ್‌ ಮಾಡಿ ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರುವರೆಗೂ ಪ್ರತಿಭಟನೆ ಮುಂದು ವರಿಸುವುದಾಗಿ ಪಟ್ಟು ಹಿಡಿದರು.

ಕಾಲಹರಣ: ಒಂದು ಗಂಟೆ ನಂತರ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಅಧಿಕಾ ರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ನಗರಸಭೆ ಅಧಿಕಾರಿಗಳು ಪಿಡಬ್ಲ್ಯೂಡಿ ಅಧಿಕಾರಿಗಳ ಮೇಲೆ, ಪಿಡಬ್ಲ್ಯೂಡಿ ಅಧಿಕಾರಿಗಳು ನಗರಸಭೆಯ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿರುವ ಕಾರಣ ನಗರದ ಎಲ್ಲಾ ರಸ್ತೆ ಹಾಳಾಗಿದ್ದು, ಜನ ಓಡಾಡಲು ಪರಿತಪಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ವಿಫ‌ಲ: ಸುಮಾರು 2 ವರ್ಷಗಳ ಹಿಂದೆ ಈ ವಿಷಯದಲ್ಲಿ ಕೋಲಾರ ಬಂದ್‌ಗೆಕರೆ ನೀಡಿದಾಗ ಆಗಿನ ಜಿಲ್ಲಾಧಿಕಾರಿ ತಿಂಗಳೊಳಗಾಗಿ ರಸ್ತೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂಇದುವರೆಗೂ ನಗರದ ರಸ್ತೆ ಸರಿಪಡಿಸುವಲ್ಲಿ ಲೋಕೋಪ ಯೋಗಿ ಇಲಾಖೆ ಮತ್ತು ನಗರಸಭೆ ಸಂಪೂ ರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಕೇಬಲ್‌ ಅಳವಡಿಕೆ: ಈಗಾಗಲೇ ಕೋಲಾರನಗರದ ಅಗಲೀಕರಣವಾಗುತ್ತಿರುವ ರಸ್ತೆಗಳಎರಡೂ ಬದಿ ಚರಂಡಿ ಪಕ್ಕದಲ್ಲಿ ವಿವಿಧ ರೀತಿಯ ಕೇಬಲ್‌ ಹಾದುಹೋಗಲು ಪ್ರತ್ಯೇಕ ಡ್ರೈನೇಜ್‌ ವ್ಯವಸ್ಥೆ ಮಾಡಲು ಪ್ರತಿಭಟನಾಕಾರರು ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಅಧಿಕಾರಿಗಳು,ಪ್ರಗತಿಪರ ಸಂಘಟನೆಗಳ ಮುಖಂಡರನ್ನು ಶನಿವಾರ ಸಭೆ ಕರೆದು ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಹೊಳಲಿಪ್ರಕಾಶ್‌, ಕುರುಬರಪೇಟೆ ವೆಂಕಟೇಶ್‌, ರೈತಸಂಘಗಳ ಮುಖಂಡ‌ರಾದ ನಾರಾಯಣ ಗೌಡ, ನಳಿನಿಗೌಡ, ಜಿ.ನಾರಾಯಣಸ್ವಾಮಿ, ರಾಮು ಶಿವಣ್ಣ , ಚಿನ್ನಿ ಶ್ರೀನಿವಾಸ್‌, ಕರವೇ

ಸಂಘಟನೆಯ  ನ‌ವೀನ್‌, ಲೋಕೇಶ್‌, ಮಂಜುನಾಥ್‌, ಸೈಯದ್‌, ಶ್ರೀನಿವಾಸ್‌, ಶೇಷಾದ್ರಿಶಾಸ್ತ್ರಿ, ಮಾನವ ಹ‌ಕ್ಕುಗಳ ಶಿವಕುಮಾರಗೌಡ, ದಿಂಬಚಾಮನಹಳ್ಳಿ ಅಂಬರೀಶ್‌, ಚರ್ಚ್‌ ಛೇರ್ಮನ್‌ ಸುಧೀರ್‌, ಜಬೀ, ಸೈಯದ್‌ ಫಿರ್ದೋಸ್‌, ಅತಾವುಲ್ಲಾ, ಸಾಬಿರ್‌ ಪಾಷಾ, ಸಾದಿಕ್‌ ಪಾಷಾ, ಇಮ್ರಾನ್‌ ಖಾನ್‌ ಮತ್ತಿತರರಿದ್ದರು.

ಅಧಿಕಾರಿಗಳಿಗೆ ಮುಖಂಡರ ಎಚ್ಚರಿಕೆ :  ರಸ್ತೆ ಸರಿಪಡಿಸಲು ನಿರ್ಲಕ್ಷ್ಯ ಧೋರಣೆ ತಾಳಿರುವ ಅಧಿಕಾರಿ ಮತ್ತು ಜನಪ್ರತಿನಿಧಿಗಳನ್ನು ಜನ ಪ್ರತಿನಿತ್ಯ ಛೀಮಾರಿ ಹಾಕುತ್ತಾ ದಾರಿಯಲ್ಲಿ ಹೋಗುತ್ತಿದ್ದಾರೆ. ಸಂಬಂಧಪಟ್ಟವರಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಮುಂದುವರಿದರೆ 15 ದಿನಗಳಲ್ಲಿಕೋಲಾರ ನಗರ ಬಂದ್‌ಕರೆ ನೀಡುತ್ತೇವೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಎಚ್ಚರಿಸಿದರು.

ಟಾಪ್ ನ್ಯೂಸ್

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

kedhara

ಚಾರ್ ಧಾಮ್ ಯಾತ್ರೆ : 2 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಭೇಟಿ

mamata

ಫಾಲೆರೊ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ : ಅ.28ಕ್ಕೆ ಗೋವಾಕ್ಕೆ ಮಮತಾ ಬ್ಯಾನರ್ಜಿ

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

Deepika Padukone, Ranveer Singh Set To Bid For New IPL Team

ಹೊಸ ಐಪಿಎಲ್ ತಂಡ ಖರೀದಿಸುತ್ತಾರಂತೆ ದೀಪಿಕಾ- ರಣವೀರ್

12-asasa

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chinthamani news

ನಗರಸಭೆ ಜೆ.ಇ ಪ್ರಸಾದ್ ವಿರುದ್ಧ ಗರಂ ಆದ ಸದಸ್ಯ ಜೈ ಭೀಮ್ ಮುರಳಿ

Protest against cancellation of BPL card

ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದ್ದಕ್ಕೆ  ಪ್ರತಿಭಟನೆ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಗಾಳಿಯಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಗಾಳಿಯಲ್ಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಕೋಲಾರ ದಸರಾ

ಕೋಲಾರದಲ್ಲಿ ಸಂಭ್ರಮದ ವಿಜಯದಶಮಿ

MUST WATCH

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

ಹೊಸ ಸೇರ್ಪಡೆ

Inauguration of Maharishi Valmiki Jayanti Program

ಮಹಾಕಾವ್ಯ ರಾಮಾಯಣ ಎಂದಿಗೂ ಪ್ರಸ್ತುತ: ಸಚಿವ

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

DCC Bank has not been involved in any transactions

ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿಲ್ಲ

Warrior M Jayaram Nayak honored with Presidential Medal of Honor

ಯೋಧರಿಗೆ ಗೌರವ ಸಲ್ಲಿಕೆ ಎಲ್ಲರ ಕರ್ತವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.