Udayavni Special

ಕುಡಿವ ನೀರಿಗೆ ಸಿಡಿದೆದ್ದ ನಾಗರಿಕರು

ಕೋಲಾರ ನಗರಸಭೆ ಮುಂದೆ ಧರಣಿ, ಆಕ್ರೋಶ • 5, 15, 16ನೇ ವಾರ್ಡಿನ ನಿವಾಸಿಗಳಿಂದ ಪ್ರತಿಭಟನೆ

Team Udayavani, Jul 30, 2019, 3:28 PM IST

kolar-tdy-1

ಕೋಲಾರ: ನಗರಸಭೆ ಅಕ್ರಮಗಳಿಂದ ನಾರುತ್ತಿದೆ, ಜನರ ಕಷ್ಟಗಳನ್ನು ಕೇಳುವವರು ಇಲ್ಲವಾಗಿದೆ. 5ನೇ ವಾರ್ಡ್‌ನಲ್ಲಿ ಕುಡಿಯುವ ನೀರು ನೀಡಿ ತಿಂಗಳುಗಳೇ ಉರುಳಿವೆ. ಈ ಎಲ್ಲಾ ಸಮಸ್ಯೆಗಳಿಗೆ ಕಡಿವಾಣ ಹಾಕಿ ಎಂದು ಆಗ್ರಹಿಸಿ ಅಂಬೇಡ್ಕರ್‌ ಸೇವಾ ಸಮಿತಿ ಕಾರ್ಯಕರ್ತರು ನಗರಸಭೆ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್‌, 5ನೇ ವಾರ್ಡ್‌ನ ಅಂಬೇಡ್ಕರ್‌ ಕಾಲೋನಿಯಲ್ಲಿ ಕುಡಿಯುವ ನೀರಿಲ್ಲದೆ ಜನತೆ ಪರದಾಡುವಂತಾಗಿದೆ. 600 ರೂ. ನೀಡಿ ಖಾಸಗಿ ಟ್ಯಾಂಕರ್‌ ನೀರು ಪಡೆಯುವ ಸ್ಥಿತಿಯಲ್ಲಿ ಬಡ ನಿವಾಸಿಗಳಿಲ್ಲ. ಎಂಟು ತಿಂಗಳ ಹಿಂದೆ ಇದ್ದ ನೀರಿನ ಸಂಪರ್ಕ ಕಡಿತ ಮಾಡಿ ಹೊಸಲೈನ್‌ ಎಳೆದಿದ್ದರೂ ನೀರೇ ಬರುತ್ತಿಲ್ಲ ಎಂದು ಆರೋಪಿಸಿದರು.

ನೀರುಗಂಟಿ ಬದಲಿಸಿ: ನೀರಿನ ಸಮಸ್ಯೆ ಇದ್ದರೂ ನೀರುಗಂಟಿ ಸ್ಪಂದಿಸುತ್ತಿಲ್ಲ, ಪ್ರಶ್ನಿಸಿದರೆ ನಗರಸಭೆ ಪೌರಾಯುಕ್ತ, ಡಿ.ಸಿ.ಗೆ ದೂರು ನೀಡ್ತಿರೋ ನೀಡಿ ಎಂದು ಬೇಜವಾಬ್ದಾರಿಯಿಂದ ಉತ್ತರಿಸುತ್ತಿದ್ದಾರೆ. ಈ ಕೂಡಲೇ ಇವರನ್ನು ಬದಲಿಸಬೇಕು ಎಂದು ಒತ್ತಾಯಿಸಿದರು.

ಕಳಪೆ ಕಾಮಗಾರಿ: ನಗರಸಭೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದೆ. ಹಲವು ಬೋರ್‌ವೆಲ್ಗಳಲ್ಲಿ ಪಂಪ್‌ಮೋಟಾರ್‌ ಕಾಣೆಯಾಗಿದೆ, ದುರಸ್ತಿಗೆ 1 ಲಕ್ಷ ರೂ. ಖರ್ಚು ಮಾಡಿರುವ ರೀತಿ ಬಿಲ್ ಸಿದ್ದಪಡಿಸಿ ದ್ದಾರೆ. ನಗರಸಭೆ ಆರೋಗ್ಯ ವಿಭಾಗದಲ್ಲಿ ರೋಗಗಳ ನಿಯಂತ್ರಣಕ್ಕೆ ತಂದಿರುವ ನೈರ್ಮಲ್ಯ ಸಾಮಗ್ರಿ ಬಳಸಿಲ್ಲ. ಚಿಕ್ಕಚನ್ನಂಜಪ್ಪ ಉದ್ಯಾನದಲ್ಲಿ ಕಳಪೆ ಕಾಮ ಗಾರಿ ನಡೆದಿದೆ ಎಂದು ಆರೋಪಿಸಿದರು.

ಕಟ್ಟಡ ಪರವಾನಗಿ ಸಂಬಂಧ ನಗರಸಭೆಯ ಎಇಇ ಬಳಿ ಇರಬೇಕಾದ ಯೋಜನೆ ಅನುಮೋದನೆ ನಕಾಶೆಯ ಆನ್‌ಲೈನ್‌ ಕೀ ಖಾಸಗಿ ವ್ಯಕ್ತಿಯ ಬಳಿ ಇದ್ದು, ಕಟ್ಟಡ ಪರವಾನಗಿಗೆ 1ರಿಂದ 2 ಲಕ್ಷ ರೂ. ಹಣ ವಸೂಲಿ ಮಾಡಲಾಗುತ್ತಿದೆ. ಉಚಿತವಾಗಿ ನೀಡಬೇಕಿರುವ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ದತಿಯ ರಸೀದಿದೆ 100 ರಿಂದ 200 ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಆಪಾದಿಸಿದ ಅವರು ಈ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸಿ ಪೌರಾಯುಕ್ತರು, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಗ್ರೇಡ್‌2 ತಹಶೀಲ್ದಾರ್‌ ಸುಜಾತ ಅವರಿಗೆ ಮನವಿ ಸಲ್ಲಿಸಿದರು. ಸಮಿತಿ ಯುವ ಘಟಕದ ರಾಜ್ಯಾಧ್ಯಕ್ಷ ನವೀನ್‌ ಮಹರಾಜ್‌, ಪದಾಧಿಕಾರಿ ಗಳಾದ ವಿಜಯಕುಮಾರ್‌, ಶ್ರೀನಿವಾಸ್‌, ಸಿದ್ಧಿಕ್‌ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಟಾಪ್ ನ್ಯೂಸ್

Srilanka covid case

ಲಂಕಾದಲ್ಲಿ ಕೋವಿಡ್ ಹೆಚ್ಚಳ; ಭಾರತ ಪ್ರವಾಸ ಅನುಮಾನ

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಆನೆಗೊಂದಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಆರೋಪ : ನಾಲ್ವರ ವಿರುದ್ಧ ಪ್ರಕರಣ

ಆನೆಗೊಂದಿ : ವೈದ್ಯರ ಕರ್ತವ್ಯಕ್ಕೆ ಅಡ್ಡಿ ಆರೋಪ ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

cats

ಸಲ್ಲು ಸಿನಿಮಾ ವಿರುದ್ಧ ಸಿಡಿದೆದ್ದ ಸುಶಾಂತ್ ಸಿಂಗ್ ಅಭಿಮಾನಿಗಳು

ಅಲೆಗಳ ಹೊಡೆತಕ್ಕೆ ಟಗ್‌ ಸಮುದ್ರಪಾಲು : ಓರ್ವ ಸಾವು, ಇಬ್ಬರು ಪಾರು, 5 ಮಂದಿ ನಾಪತ್ತೆ

ಅಲೆಗಳ ಹೊಡೆತಕ್ಕೆ ಟಗ್‌ ಸಮುದ್ರಪಾಲು : ಓರ್ವ ಸಾವು, ಇಬ್ಬರು ಪಾರು, 5 ಮಂದಿ ನಾಪತ್ತೆ

ಇರಾನ್‌ ಅಧ್ಯಕ್ಷೀಯ ಚುನಾವಣೆಗೆ ಧುಮುಕಿದ ಇಬ್ರಾಹಿಂ ರೈಸಿ

ಇರಾನ್‌ ಅಧ್ಯಕ್ಷೀಯ ಚುನಾವಣೆಗೆ ಧುಮುಕಿದ ಇಬ್ರಾಹಿಂ ರೈಸಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cleanup campaign

ಕೊಂಡರಾಜನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ 

covid effect

ಸರ್ಕಾರಗಳು ವಿಫ‌ಲವಾಗಿದ್ದೆ 2ನೇ ಅಲೆ ತೀವ್ರತೆಗೆ ಕಾರಣ

13_mbl_ph_1_1305bg_2

ಗಡಿ ಚೆಕ್‌ಪೋಸ್ಟ್‌ಗೆ ಶಾಸಕ ಎಚ್‌.ನಾಗೇಶ್‌  ಭೇಟಿ

12_mst_04__1205bg_2

ಚಿಂದಿ ಆಯುತ್ತಿದ್ದ ವೃದ್ಧ ರಸ್ತೆ ಬದಿಯಲ್ಲಿ ಸಾವು

1205klrp_2_1205bg_2

ಪರೀಕ್ಷೇಗೊಳಪಟ್ಟವರು ಸರಿಯಾದ ವಿಳಾಸ ನೀಡುತ್ತಿಲ್ಲ

MUST WATCH

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

udayavani youtube

ತೌಖ್ತೆ ಚಂಡಮಾರುತ ಎಫೆಕ್ಟ್ ; ಕಡಲ್ಕೊರೆತದ ಅಬ್ಬರಕ್ಕೆ ಸಮುದ್ರ ಪಾಲಾದ ಮನೆ!

udayavani youtube

ಕೋವಿಡ್ ಸೋಂಕಿತರೊಂದಿಗೆ ಡ್ಯಾನ್ಸ್ ಮಾಡಿ ರಂಜಿಸಿದ ಜೆಡಿಎಸ್ ಶಾಸಕ ಅನ್ನದಾನಿ

ಹೊಸ ಸೇರ್ಪಡೆ

Srilanka covid case

ಲಂಕಾದಲ್ಲಿ ಕೋವಿಡ್ ಹೆಚ್ಚಳ; ಭಾರತ ಪ್ರವಾಸ ಅನುಮಾನ

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಆನೆಗೊಂದಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಆರೋಪ : ನಾಲ್ವರ ವಿರುದ್ಧ ಪ್ರಕರಣ

ಆನೆಗೊಂದಿ : ವೈದ್ಯರ ಕರ್ತವ್ಯಕ್ಕೆ ಅಡ್ಡಿ ಆರೋಪ ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

cats

ಸಲ್ಲು ಸಿನಿಮಾ ವಿರುದ್ಧ ಸಿಡಿದೆದ್ದ ಸುಶಾಂತ್ ಸಿಂಗ್ ಅಭಿಮಾನಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.