ಭೂ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹ
Team Udayavani, Sep 26, 2020, 3:27 PM IST
ಬಂಗಾರಪೇಟೆ: ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಿರುವ ರೈತವಿರೋಧಿ ಎಪಿಎಂಸಿ ಭೂ ಸುಧಾರಣಾ ಹಾಗೂ ವಿದ್ಯುತ್ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆಯನ್ನು ರೈತರ ಹಿತದೃಷ್ಟಿಯಿಂದ ಹಿಂಪಡೆಯಬೇಕೆಂದು ರೈತ ಸಂಘದಿಂದ ತಾಲೂಕುಕಚೇರಿಯ ಮುಂದೆ ಹೋರಾಟ ಮಾಡಿ ರಾಷ್ಟ್ರಪತಿಗಳನ್ನು ಒತ್ತಾಯಿಸಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಯಾವುದೇ ಚರ್ಚೆಯಿಲ್ಲದೆ ಏಕಾಏಕಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿರುವುದು ರೈತ ಸಂಕುಲವನ್ನು ನಾಶ ಮಾಡಿ ಕಾರ್ಪೊರೇಟ್ ಕಂಪನಿಗಳ ಪರವಾಗಿ ಸರ್ಕಾರಗಳಿರುವುದು ಎನ್ನುವುದನ್ನು ಸಾಬೀತುಪಡಿಸುವುದಕ್ಕೆ ಹೊರತು ರೈತರ ಪರವಾಗಿಲ್ಲ. ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯಿಂದಾಗಿ ಕೃಷಿ ಜಮೀನಿನ ಮೇಲೆ ಕಪ್ಪು ಹಣ ಹೂಡಿಕೆಯಾಗಲಿದೆ ಎಂದು ಆರೋಪಿಸಿದರು.
ರೈತ ಸಂಘದ ಗೌರವಾಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಮಾತನಾಡಿ, ಸರ್ಕಾರಗಳು ರೈತ ವಿರೋಧಿ, ದಲಿತ ವಿರೋಧಿ, ಜನವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆ ವಾಪಸ್ಸು ಪಡೆಯದಿದ್ದರೆ ಸೋಮವಾರ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಉಪ ತಹಶೀಲ್ದಾರ್ ಮುಕ್ತಾಂ ಭರವರು ಮನವಿ ಸ್ವೀಕರಿಸಿದರು. ಪ್ರತಿಭನೆಯಲ್ಲಿ ಧನುಷ್, ಸುದರ್ಶನ್, ಸತೀಶ್, ಮಿಥುನ್, ಅಮರೇಶ್, ಪ್ರಕಾಶ್, ಶಿವು, ಮುನೇಗೌಡ, ಶ್ರೀನಿವಾಸ್, ವೆಂಕಟೇಶ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೃದಯಾಘಾತದಿಂದ ಹಿರಿಯ ಕಾಂಗ್ರೆಸ್ ಮುಖಂಡ ಪಾಪೇಗೌಡ ನಿಧನ
ಫ್ರಾನ್ಸ್ ನಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಶಿರಸಿಯ ಪ್ರೇರಣಾ
ಯಾರು ಭ್ರಷ್ಟರು, ಯಾರು ಭ್ರಷ್ಟರಲ್ಲ ಎಂದು ಜನರಿಗೆ ಗೊತ್ತಿದೆ : ಸಿಎಂ ಬೊಮ್ಮಾಯಿ
ಪಾಣೆಮಂಗಳೂರು : ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ, ಕಾರಣ ನಿಗೂಢ
ರಾಜ್ಯದಲ್ಲಿ 155 ಪಾಸಿಟಿವ್ ವರದಿ: ಸೋಂಕಿನ ಪಾಸಿಟಿವ್ ದರ ಶೇ.77ಕ್ಕೆ ಏರಿಕೆ