ಮರು ಮೌಲ್ಯ ಮಾಪನ: 135 ಶಾಲೆಗೆ ಶೇ.100 ಫ‌ಲಿತಾಂಶ


Team Udayavani, Oct 22, 2020, 3:00 PM IST

KOLAR-TDY-2

ಕೋಲಾರ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಜಿಲ್ಲೆಯಲ್ಲಿ ಶೇ.100 ಸಾಧನೆಯ ಶಾಲೆಗಳ ಸಂಖ್ಯೆ 113 ರಿಂದ 135ಕ್ಕೇರಿದೆ ಮತ್ತು ಪೂರಕ ಪರೀಕ್ಷೆಯಲ್ಲೂ ಶೇ. 76.40 ಫಲಿತಾಂಶ ಬಂದಿದೆ ಎಂದು ಡಿಡಿಪಿಐ ಕೆ. ಎಂ.ಜಯರಾಮರೆಡ್ಡಿ ತಿಳಿಸಿದರು.

ಈ ಸಂಬಂಧ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಮರುಮೌಲ್ಯಮಾಪನದಲ್ಲಿ 150 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕೋಲಾರ ತಾಲೂಕಿನಲ್ಲಿ 45, ಬಂಗಾರಪೇಟೆ 18, ಕೆಜಿಎಫ್‌ 17, ಮಾಲೂರು 33, ಶ್ರೀನಿವಾಸಪುರ 17, ಮುಳಬಾಗಿಲು ತಾಲೂಕಿನಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗುಣಾತ್ಮಕತೆಗೆ ಒತ್ತು ನೀಡಿದ್ದು, ಈ ಬಾರಿ ಜಿಲ್ಲೆಯಲ್ಲಿ 1239 ಮಂದಿ ಎ+ ಶ್ರೇಣಿ ಹಾಗೂ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಒಟ್ಟು ಶೇ.80.63 ಎಂದು ತಿಳಿಸಿದರು.

ಕಳೆದ 2019ರಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 12927 ಇತ್ತು. ಆದರೆ, ಈ ಬಾರಿ 14160ಕ್ಕೇರಿದೆ ಎಂದು ತಿಳಿಸಿದರು. ಅನೇಕ ಸರ್ಕಾರಿ ಶಾಲೆಗಳ ಶಿಕ್ಷಕರೂ ಆನ್‌ಲೈನ್‌ ಪಾಠಮಾಡುತ್ತಿದ್ದಾರೆ. ರಜೆ ನಡುವೆಯೂಅನೇಕರು ಮಕ್ಕಳಪರ ಕಾಳಜಿ ವಹಿಸಿ ವಾಟ್ಸಪ್‌ ಗ್ರೂಪ್‌ ಮಾಡಿಕೊಂಡು ಮಕ್ಕಳಿಗೆ ಗೃಹಪಾಠ ನೀಡಿ, ಅವರಿಂದ ಉತ್ತರ ಪಡೆದು ಮೌಲ್ಯಮಾಪನ ಮಾಡಿ ಕಲಿಸುತ್ತಿದ್ದಾರೆಂದರು.

ವಿದ್ಯಾಗಮ ಮುಂದುವರಿಕೆ ಸರ್ಕಾರದ ತೀರ್ಮಾನಕ್ಕೆ ಬಿಟ್ಟಿದ್ದು,ಕೋವಿಡ್‌ ಶೀಘ್ರ ನಾಶವಾಗಿಶಾಲೆಗಳು ಮತ್ತೆ ಪುನಾರಂಭವಾಗಬೇಕು ಎಂಬುದೇ ಇಲಾಖೆಯ ಆಶಯ ಎಂದರು. ಪರೀಕ್ಷಾ ನೋಡಲ್‌ ಅಧಿಕಾರಿ ಎ.ಎನ್‌. ನಾಗೇಂದ್ರಪ್ರಸಾದ್‌, ಇದಾದ ನಂತರ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲೂ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ಶೇ.76.40 ಫಲಿತಾಂಶ ಬಂದಿದೆ ಎಂದು ತಿಳಿಸಿದರು.

ಪರೀಕ್ಷೆಗೆ ಕುಳಿತ 1801 ವಿದ್ಯಾರ್ಥಿಗಳ ಪೈಕಿ 1376 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಕುಳಿತಿದ್ದ 1061 ಬಾಲಕರ ಪೈಕಿ773 ಮಂದಿ ಹಾಗೂ ಪರೀಕ್ಷೆಗೆ ಕುಳಿತಿದ್ದ 740 ಬಾಲಕಿಯರ ಪೈಕಿ 603 ಮಂದಿ ಉತ್ತೀರ್ಣರಾಗಿದ್ದಾರೆಂದರು. ಪೂರಕ ಪರೀಕ್ಷಾ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಿಗೆ ಶೇ.70.28 ಫಲಿತಾಂಶ ಬಂದಿದೆ. ಅನುದಾನಿತ ಶಾಲೆಗಳಿಗೆ 79.07, ಅನುದಾನ ರಹಿತ ಶಾಲೆಗಳಿಗೆ ಶೇ.87.07 ಫಲಿತಾಂಶ ಬಂದಿದೆ ಎಂದು ತಿಳಿಸಿದರು.

ಒಟ್ಟಾರೆ ಫ‌ಲಿತಾಂಶ ಶೇ.1 ಹೆಚ್ಚಳ :  ಮರು ಮೌಲ್ಯಮಾಪನದ ನಂತರ ರಾಜ್ಯದಲ್ಲೇ6ನೇ ಸ್ಥಾನ ಪಡೆದಿದ್ದ ಜಿಲ್ಲೆಯ ಒಟ್ಟಾರೆ ಫಲಿತಾಂಶವೂ ಶೇ.1 ಹೆಚ್ಚಳವಾಗಿದೆ. ಜತೆಗೆ ನಗರದ ಬೆಂಗಳೂರು ಮಾಂಟೋಸ್ಸರಿ ಶಾಲೆ ವಿದ್ಯಾರ್ಥಿನಿ ಸಾಯಿಮೇಘನಾ625ಕ್ಕೆ625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹಿರಿಮೆಯೂ ಸೇರಿಕೊಂಡಿದೆ. ಮರು ಮೌಲ್ಯಮಾಪನದಲ್ಲಿ11 ಸರ್ಕಾರಿ,3 ಅನುದಾನಿತ ಹಾಗೂ 8 ಅನುದಾನ ರಹಿತ ಶಾಲೆಗಳು ಶೇ.100 ಸಾಧನೆ ಗೌರವಕ್ಕೆ ಪಾತ್ರವಾಗಿವೆ ಎಂದು ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ ತಿಳಿಸಿದರು

ಟಾಪ್ ನ್ಯೂಸ್

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತ ಅರ್ಜಿಗಳು : ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತ ಅರ್ಜಿಗಳು :ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆದ್ದಾರಿ ಪಕ್ಕದಲ್ಲಿ ಅಕ್ರಮವಾಗಿ ತೆರೆದಿದ್ದ ಅಂಗಡಿಗಳ ತೆರವು

ಹೆದ್ದಾರಿ ಪಕ್ಕದಲ್ಲಿ ಅಕ್ರಮವಾಗಿ ತೆರೆದಿದ್ದ ಅಂಗಡಿಗಳ ತೆರವು

ರೈತರಿಗೆ ಇ-ಪಾವತಿ ವ್ಯವಸ್ಥೆ ಪರಿಶೀಲನೆ

ರೈತರಿಗೆ ಇ-ಪಾವತಿ ವ್ಯವಸ್ಥೆ ಪರಿಶೀಲನೆ

ಕರಾವಳಿ ಸಂಸ್ಕೃತಿ, ಆಚಾರ ವಿಚಾರ ಪ್ರಸಿದ್ಧ

ಕರಾವಳಿ ಸಂಸ್ಕೃತಿ, ಆಚಾರ ವಿಚಾರ ಪ್ರಸಿದ್ಧ

alugadde

ಮಳೆ: ಆಲೂಗಡ್ಡೆಗೆ ಅಂಗಮಾರಿ ಕಾಟ

ದರೋಡೆ

ಪೊಲೀಸರ ಮೇಲೆಯೇ ದರೋಡೆ ಆರೋಪ..!

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.