ರೈತ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿ
Team Udayavani, Nov 24, 2020, 4:50 PM IST
ಕೋಲಾರ: ದೇಶದ ಬೆನ್ನೆಲುಬು ರೈತರ ಸಮಗ್ರ ಏಳಿಗೆಗಾಗಿ ರೈತ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಡಿಯ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿ ಸ್ನೇಹಾ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿ ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಆ ಬಳಿಕ ಅಧಿಕಾರದಲ್ಲಿದ್ದಾಗ ರೈತರ ಸಮಸ್ಯೆ ಕಣ್ಣಿಗೆ ಕಾಣಿಸುವುದಿಲ್ಲ.ಇತ್ತೀಚಿನ ದಿನಗಳಲ್ಲಿ ಯಾವ ಕಾರಣಕ್ಕಾಗಿ ಜಾತಿಗೆ ಒಂದು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುತ್ತಿದ್ದಾರೆ ಎನ್ನುವುದು ಯಾರಿಗೂ ಅರ್ಥವಾಗದ ವಿಚಾರವೆಂದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡಮಾತನಾಡಿ, ರೈತರ ಸಮಗ್ರ ಏಳಿಗೆಗಾಗಿರೈತ ಅಭಿವೃದ್ಧಿ ಪ್ರಾಧಿಕಾರವನ್ನುಮೊದಲು ಸರ್ಕಾರ ರಚನೆ ಮಾಡಲಿ. ಇದುವರೆಗಿನ ಸರ್ಕಾರಗಳು ರೈತರಅನುಕೂಲಕ್ಕಾಗಿ ಹೇಳಿಕೊಳ್ಳುವಂತಹಯಾವುದೇ ಕೆಲಸ ಮಾಡಿಕೊಟ್ಟಿಲ್ಲ.ಈಗಿನ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದಿದ್ದೇ ಆದಲ್ಲಿ ಜಾತಿಗೊಂದು ಅಭಿವೃದ್ಧಿ ಪ್ರಾಕಾರ ರಚಿಸುವ ಮುನ್ನ ರೈತರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಿ ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸ್ನೇಹ, ಮನವಿಯನ್ನು ಕೂಡಲೇ ಸರ್ಕಾರಕ್ಕೆಕಳುಹಿಸುವ ಭರವಸೆ ನೀಡದರು. ತಾಲೂಕಾಧ್ಯಕ್ಷ ಈಕಂಬಳ್ಳಿ ಮಂಜು ನಾಥ್, ಬಂಗಾರಪೇಟೆ ತಾಲೂಕಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಚಾಂದ್ ಪಾಷಾ, ನವಾಜ್, ಜಮೀರ್, ಕಿರಣ್, ಜಾವೇದ್, ಸ್ವಸ್ತಿಕ್ ಶಿವು, ಪೊಮ್ಮರಹಳ್ಳಿ ನವೀನ್ ಮತ್ತಿತರರಿದ್ದರು.
26ಕ್ಕೆ ಜಿಲ್ಲಾ ಬಂದ್: ರೈತಸಂಘ :
ಶ್ರೀನಿವಾಸಪುರ: ಕೇಂದ್ರ-ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಯಿಂದ ಕೃಷಿ ರಂಗ ದಿವಾಳಿಯಾಗುತ್ತಿದೆ ಎಂದು ಅಖೀಲ ಭಾರತ ಕ್ರಿಯಾ ಸಮಿತಿ ಮುಖಂಡ ಪಿ.ಆರ್.ಸೂರ್ಯನಾರಾಯಣ ವಿಷಾದಿಸಿದರು.
ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ, ಹಸಿರು ಸೇನೆ ಸಂಯಕ್ತಾಶ್ರಯದಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆಗೆಮುನ್ನಮೋದಿಅವರುಸುಮಾರು ಬಹಿರಂಗ ಸಭೆಗಳಲ್ಲಿ ರೈತರನ್ನು ಉದ್ಧಾರ ಮಾಡುವುದಾಗಿ ಹೇಳಿ ರೈತರಿಗೆ ಮಾರಕವಾಗುವ ಸುಗ್ರೀವಾಜ್ಞೆ ಜಾರಿ ಮಾಡಿದ್ದಾರೆ. ಈ ಬಗ್ಗೆ ರೈತಪರಸಂಘಟನೆಗಳು ಈಗಾಗಲೇ ದೇಶವ್ಯಾಪ್ತಿ ಪ್ರತಿಭಟನೆ ನಡೆಸಿ ಖಂಡಿಸಿವೆ. ಹೀಗಾಗಿ ಸುಗ್ರೀವಾಜ್ಞೆ ಹಿಂಪಡೆಯಬೇಕೆಂದು ಒತ್ತಾಯಿಸಿ ನ.26 ರಂದು ಅಖೀಲ ಭಾರತ ಬಂದ್‌ಕರೆಮೇರೆಗೆಜಿಲ್ಲೆಯನ್ನುಬಂದ್ ಮಾಡಲಾಗುತ್ತದೆ. ನ.27 ರಂದು ಜಿಲ್ಲಾ ಕೇಂದ್ರಗಳ ಕೇಂದ್ರ ಸರ್ಕಾರಿ ಕಚೇರಿಗಳ ಮುಂದೆ ಪಿಕೆಟಿಂಗ್ ನಡೆಸಲಾಗುತ್ತದೆ ಹೇಳಿದರು.
ರೈತ ಸಂಘ, ಹಸಿರು ಸೇನೆ ತಾಲೂಕು ಅಧ್ಯಕ್ಷ ಎನ್.ಜಿ.ಶ್ರೀರಾಮರೆಡ್ಡಿ ಮಾತನಾಡಿ, ನ.26 ರಂದು ರೈತರ ಬೇಡಿಕೆಗಳಿಗಾಗಿ, ಸುಗ್ರೀವಾಜ್ಞೆ ಹಿಂತೆಗೆದುಕೊಳ್ಳ ಬೇಕೆಂದುಒತ್ತಾಯಿಸಿ ಬಂದ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 50 ಕಡೆ ಹಾಗೂ ತಾಲೂಕಿನಲ್ಲಿ 7 ಕಡೆ ರಾಜ್ಯ ಹೆದ್ದಾರಿ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ.ಬಂದ್‌ದಿನ ಸಾರ್ವಜನಿಕರು ಸಹಕಾರ ನೀಡಬೇಕೆಂದರು.ಪಾತಕೋಟೆ ನವೀನ್ ಕುಮಾರ್, ನಂಜಪ್ಪ, ಎನ್ .ನಾಗಭೂಷಣ್, ಮಂಜುಳಾ ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ
ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,
ಹೊಸ ಸೇರ್ಪಡೆ
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್
ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್
ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು
ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ
ಮತದಾರರ ಕೈ ಸೇರಲಿದೆ ಡಿಜಿಟಲ್ ಓಟರ್ ಕಾರ್ಡ್