ರಾಜ್ಯ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣ: ಎಇಇ

Team Udayavani, Dec 1, 2019, 11:43 AM IST

ಬೇತಮಂಗಲ: ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಜ್ಯ ಹೆದ್ದಾರಿ ದ್ವಿಪಥ ಕಾಮಗಾರಿಯನ್ನು 15 ದಿನಗಳೊಳಗೆ ಡಾಂಬರೀಕರಣಗೊಳಿಸಲಾಗುವುದುಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಮಲ್ಲಿಕಾರ್ಜುನ ಮೊಲಕೇರಿ ಭರವಸೆ ನೀಡಿದರು.

ಹೋಬಳಿಯ ಮೂಲಕ ಆಂಧ್ರ ಗಡಿವರೆಗೂ ಕೈಗೊಂಡಿರುವ ಈ ಕಾಮಗಾರಿಯನ್ನು ಶಾಸಕಿಎಂ.ರೂಪಕಲಾ ವೀಕ್ಷಣೆಗೆ ಆಗಮಿಸಿದ್ದ ವೇಳೆ ರಸ್ತೆಅಭಿವೃದ್ಧಿಯ ಬಗ್ಗೆ ವಿವರಣೆ ನೀಡಿದರು. ಬಿಲ್‌ ಬಾಕಿಇದ್ದ ಕಾರಣ ಕಾಮಗಾರಿಯನ್ನು ಗುತ್ತಿಗೆದಾರರು ನಿಲ್ಲಿಸಿದ್ದರು. ಶಾಸಕಿ ಎಂ.ರೂಪಕಲಾ ಮತ್ತು ಹಿಂದಿನ ಸಂಸದ ಕೆ.ಎಚ್‌.ಮುನಿಯಪ್ಪ ಈ ಬಗ್ಗೆ ಅನೇಕ ಬಾರಿ ಚರ್ಚಿಸಿದ್ದ ಪರಿಣಾಮ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ ಕಾಮಗಾರಿ ಪ್ರಾರಂಭಿಸಿದ್ದು, 15 ದಿನಗಳಲ್ಲಿ ಡಾಂಬರೀಕರಣಗೊಳಿಸಿ ಪೂರ್ಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಶಾಸಕಿ ಎಂ.ರೂಪಕಲಾ ಮಾತನಾಡಿ, ಬೆಂಗಳೂರಿನಿಂದ ಚೆನೈಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಲೋಕೊಪಯೋಗಿ ಇಲಾಖೆಯ ರಸ್ತೆಯನ್ನು ರಾಜ್ಯ ಹೆದ್ದಾರಿ ರಸ್ತೆಯಾಗಿ ಮೇಲ್ದಜೇಗೇರಿಸಲಾಗಿದೆ. ಬಂಗಾರಪೇಟೆಯ ನೆರಳೇಕೆರೆಯಿಂದ ಬೇತಮಂಗಲ ಮೂಲಕ ವಿ.ಕೋಟೆಯ ಗಡಿವರೆಗೂ ಮತ್ತು ಕ್ಯಾಸಂಬಳ್ಳಿಯಿಂದ ರಾಜಪೇಟೆ ರಸ್ತೆವರೆಗೂ ಒಟ್ಟು44 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.

ಬಹುದಿನಗಳ ಕನಸು: ಬೇತಮಂಗಲದಿಂದ ವಿ. ಕೋಟೆವರೆಗಿನ ರಸ್ತೆಯಲ್ಲೇ ದಶಕಗಳಿಂದಲೂ ಗುಂಡಿ ಬಿದ್ದು, ಸವಾರರಿಗೆ ಸಮಸ್ಯೆ ಆಗುತ್ತಿತ್ತು. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡರೆ ಸಮಸ್ಯೆಯಾಗುತ್ತಿತ್ತು. ಬಿಸಿಲುಗಾಲದಲ್ಲಿಯೂರಸ್ತೆಯ ದೂಳು, ಜೆಲ್ಲಿ, ಮಣ್ಣಿನ ಸಮಸ್ಯೆಎದುರಿಸುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. ಈ ರಸ್ತೆಯ ಬಹುದಿನಗಳ ಕನಸು ಇದೀಗ ಈಡೇರಲು ಕಾಲ ಕೂಡಿ ಬಂದಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಈ ರಸ್ತೆಯ ಕಾಮಗಾರಿಯ ತಡೆ ಬಗ್ಗೆ ವಿವಿಧ ತಲೆ ಬರಹದಡಿಯಲ್ಲಿ ಪ್ರಕಟಿಸಿದ್ದ ವರದಿಯನ್ನು ಕಟ್‌ಮಾಡಿ ಅಧಿಕಾರಿಗಳ ಗಮನಕ್ಕೆ ತಂದು ಪ್ರತಿನಿತ್ಯ ಸವಾರರ ನರಕಯಾತನೆ ಬಗ್ಗೆ ವಿವರಿಸಿದ್ದೇವೆ. ತಾವು ಸಹ ಅಧಿಕಾರಿಗಳನ್ನು ಅನೇಕ ಬಾರಿ ಭೇಟಿ ಮಾಡಿ ಈ ಕೂಡಲೇ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದ್ದೆ, ಕಳೆದ ವಾರದಿಂದ ಕಾಮಗಾರಿ ಪ್ರಾರಂಭಿಸಿದ್ದು, ಇದೀಗ ಎಇಇ ಅಧಿಕಾರಿಗಳು ಭೇಟಿ ನೀಡಿ 15 ದಿನಗಳೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ಈ ಕೂಡಲೇ ಆಂಧ್ರದ ಗಡಿಭಾಗವಾದ ವೆಂಗಸಂದ್ರ ಕ್ರಾಸ್‌ ಮತ್ತು ಎನ್‌.ಜಿ ಹುಲ್ಕೂರುಮಾರ್ಗ ಮಧ್ಯೆ ರಸ್ತೆಯನ್ನು ಮೊದಲು ಡಾಂಬರೀಕರಣಗೊಳಿಸಿ ಈ 1 ಕಿ.ಮೀ. ರಸ್ತೆ ತೀರ ಹದಗಟ್ಟಿದ್ದು, ಸವಾರರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಶಾಸಕಿ ಎಂ.ರೂಪಕಲಾ ಸೂಚಿಸಿದರು. ನಾಳೆಯಿಂದಲೇ ಈ ರಸ್ತೆ ದುರಸ್ತಿ ಮಾಡಿ ಡಾಂಬರು ಹಾಕುವುದಾಗಿ ಎಇಇ ಮಲ್ಲಿಕಾರ್ಜುನ್‌ ತಿಳಿಸಿದರು.

ಹಳೇ ಮದ್ರಾಸ್‌ ರಸ್ತೆ, ರಾಜ್ಯ ಹೆದ್ದಾರಿ: ಬೇತಮಂಗಲ ಬಸ್‌ ನಿಲ್ದಾಣದಿಂದ ಆಂಧ್ರಗಡಿಗೆ ಹಾದು ಹೋಗುವ ಹಳೇ ಮದ್ರಾಸ್‌ ರಸ್ತೆಯನ್ನು ಈ ಹಿಂದೆ ಬಳಸಲಾಗುತ್ತಿತ್ತು. ಆದರೆ, ಕಾಲಕ್ರಮೇಣ ಈ ರಸ್ತೆ ಬಿಟ್ಟು ಬದಲಿ ರಸ್ತೆ ಕೈಗೊಂಡಿದ್ದು, ಈ ಹಳೇಮದ್ರಾಸ್‌ ರಸ್ತೆ ಸಂಪೂರ್ಣವಾಗಿ ಒತ್ತುವರಿಯಾಗಿದೆಎಂದು ಹಲವರು ಆರೋಪಿಸಿದರು. ನಕಾಶೆಯಲ್ಲಿ ಇದೇ ರಸ್ತೆಯಲ್ಲೇ ರಾಜ್ಯ ಹೆದ್ದಾರಿ ಇದ್ದು, ಈ 300 ಮೀಟರ್‌ ರಸ್ತೆಯ ಮೂಲಕವೇ ಅಭಿವೃದ್ಧಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್‌, ತಾಪಂ ಮಾಜಿ ಸದಸ್ಯ ವೆಂಕಟರಾಮ್‌,ಮುಖಂಡರಾದ ಬಲಿಜಪಲ್ಲಿ ಕೃಷ್ಣಮೂರ್ತಿ, ರಾಯಸಂದ್ರ ಮುನಿರಾಮ್‌, ಇತರೆ ಮುಖಂಡರು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕೋಲಾರ: ಸ್ವ-ಉದ್ಯೋಗ ರೂಪಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರುದ್ಯೋಗಿ ಗಳಿಗೆ ವಿವಿಧ ಯೋಜನೆ ಜಾರಿ ಮಾಡುತ್ತಿ ದ್ದರೂ ಅದಕ್ಕೆ ಬ್ಯಾಂಕ್‌ ಅಧಿಕಾರಿಗಳು...

  • ಶ್ರೀನಿವಾಸಪುರ (ಕೋಲಾರ): ತಾಲೂಕಿನ ದೊಡಮಲ ದೊಡ್ಡಿ ಮಾರ್ಗದಲ್ಲಿ ಸಿಗುವ ಅರಣ್ಯದಲ್ಲಿ ಶಿವಮೊಗ್ಗ, ಕಲಬುರಗಿ ಜಿಲ್ಲೆಯಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕರು...

  • ಕೋಲಾರ: ನಗರದಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಕೈಷಿ ಇಲಾಖೆ ಹಮ್ಮಿಕೊಂಡಿದ್ದ ಫಲ-ಪುಷ್ಪ ಪ್ರದರ್ಶನ ನೋಡಿಗರ ಕಣ್ಮನ ಸೆಳೆಯುತ್ತಿದೆ. ಗಣರಾಜ್ಯೋತ್ಸವ...

  • ಪ್ರತಿ ವರ್ಷದಂತೆ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜಿಲ್ಲಾದ್ಯಂತ ಅರ್ಥಪೂರ್ವವಾಗಿ ಆಚರಣೆ ಮಾಡಲಾಯಿತು. ಜಿಲ್ಲೆ ಮತ್ತು ತಾಲೂಕು ಮಟ್ಟದ ಕಚೇರಿಗಳ ಸಿಬ್ಬಂದಿ,...

  • ಕೋಲಾರ: ಸ್ವಚ್ಛ ಭಾರತ ಯೋಜನೆಯಡಿ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದರೂ, ಸಮರ್ಪಕವಾಗಿ ಬಳಸಿಕೊಂಡು ಸುಂದರ ನಗರ ಮಾಡುವಲ್ಲಿ ನಗರಸಭೆ ವಿಫ‌ಲವಾಗಿರುವುದು ಸರ್ವೇಕ್ಷಣೆ...

ಹೊಸ ಸೇರ್ಪಡೆ