17ಕ್ಕೆ ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನ

ಮತ್ತೆ ದಲಿತ ಪ್ರಜ್ಞೆ, ದಲಿತ ಜ್ಞಾನ ನೆಲದಲ್ಲಿ ಚಿಗುರೊಡೆಸಬೇಕಿದೆ: ರಾಮಯ್ಯ

Team Udayavani, Aug 14, 2019, 3:29 PM IST

ಕೋಲಾರ ನಗರದಲ್ಲಿ ಆ.17 ಮತ್ತು 18 ರಂದು ನಡೆಯಲಿರುವ ದಲಿತ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಬಿಡುಗಡೆ ಮಾಡಿದರು.

ಕೋಲಾರ: ನಗರದಲ್ಲಿ ಐತಿಹಾಸಿಕ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಆ.17 ಮತ್ತು 18 ರಂದು ನಡೆಯುತ್ತಿದ್ದು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಈ ಜಿಲ್ಲೆಯಿಂದಲೇ ಪ್ರಾರಂಭವಾಗಿ ದಲಿತ ಪ್ರಜ್ಞೆ ಯನ್ನು ಆಕಾಶಕ್ಕೆ ಚಪ್ಪರ ಹರಡುವಂತಾಗಲಿ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ನುಡಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದಲಿತ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಗೋಷ್ಠಿ ನಡೆಸಲು ಹ.ಮಾ.ನಾ ನಿರಾಕರಿಸಿದ್ದರು. ಆದರೆ, ಈಗ ಕಸಾಪ ದಲಿತ ಸಾಹಿತ್ಯ ಸಮ್ಮೇಳನವನ್ನೇ ನಡೆಸಲು ಮುಂದಾಗಿರುವುದು 100 ವರ್ಷಗಳ ಅಂಬೇಡ್ಕರ್‌ ಆರಂಭಿಸಿದ ದಲಿತ ಹೋರಾಟಕ್ಕೆ ಧಕ್ಕಿರುವ ಫ‌ಲ ಎಂದು ಸ್ಮರಿಸಿಕೊಂಡರು.

ದಲಿತ ಎಂಬ ಹೆಸರಿನಿಂದಲೇ ನಾಯಕತ್ವ, ರಾಜಕೀಯ ಪಟ್ಟ, ಅನುಕೂಲ ಮಾಡಿಕೊಂಡವರು ದಲಿತರ ಪರ ಧ್ವನಿ ಎತ್ತದೆ, ಇನ್ನೂ ಮೃತ ವ್ಯವಸ್ಥೆಯಲ್ಲಿಯೇ ಇಟ್ಟಿದ್ದಾರೆಂದರು.

ಅವಮಾನದಿಂದಲೇ ಕಾಯಬೇಕಿದೆ:ಮತ್ತೆ ದಲಿತ ಪ್ರಜ್ಞೆ ಹಾಗೂ ದಲಿತ ಜ್ಞಾನವನ್ನು ಈ ನೆಲದಲ್ಲಿ ಚಿಗುರೊಡಿಸ‌ಬೇಕಾಗಿದೆ. ಆದರೆ ಈಗ ದಲಿತ ನುಡಿಕಾರರಿಗೆ ಮೂರು ಕಾಸಿನ ಬೆಲೆಯಿಲ್ಲ. ಅವಮಾನದಿಂದಲೇ ಅವಕಾಶಗಳಿಗೆ ಕಾಯು ವುದಾಗಿದೆ ಎಂದು ವಿಷಾದಿಸಿದರು.

ಸರಳವಾಗಿ ಆಚರಣೆ:ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿ, ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನವನ್ನು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ರಾಜ್ಯದಲ್ಲಿ ಭೀಕರ ಪ್ರವಾಹವಿರುವುದರಿಂದ 2 ದಿನ ಸಮ್ಮೇಳನವನ್ನು ಸರಳವಾಗಿ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯಮಟ್ಟದ ಪ್ರಥಮ ದಲಿತ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ದಲಿತರ ಪರ ಹೋರಾಟಗಾರ ಡಾ.ಎಲ್.ಹನುಮಂತಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಆ.17ರ ಬೆಳಗ್ಗೆ 9ಕ್ಕೆ ರಾಷ್ಟ್ರಧ್ವಜಾರೋ ಹಣವನ್ನು ಡೀಸಿ ಜೆ.ಮಂಜುನಾಥ್‌, ಪರಿಷತ್ತಿನ ಧ್ವಜ ನಾಡೋಜಾ ಡಾ.ಮನು ಬಳಿಗಾರ್‌ ಹಾಗೂ ನಾಡಧ್ವಜವನ್ನು ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ನೆರವೇರಿಸುವರು.

ಸಮ್ಮೇಳನಾಧ್ಯಕ್ಷರು ಬೆಳಗ್ಗೆ 9.30ಕ್ಕೆ ಬಂಗಾರಪೇಟೆ ವೃತ್ತದ ಅಂಬೇಡ್ಕರ್‌ ಪ್ರತಿಮೆಗೆ, ಗಾಂಧಿವನದ ಬಳಿ ಇರುವ ಮಹಾತ್ಮ ಗಾಂಧೀಜಿ ಪುತ್ಥಳಿ, ಕಾಲೇಜು ವೃತ್ತದಲ್ಲಿರುವ ಸರ್ವಜ್ಞ ಮೂರ್ತಿಗೆ ಮಾಲಾರ್ಪಣೆ ಮಾಡಿ ಕಾಲ್ನಡಿಗೆ ಮೂಲಕ ರಂಗಮಂದಿರಕ್ಕೆ ಬರುವರು ಎಂದು ಹೇಳಿದರು.

ನಾಟಕ ಪ್ರದರ್ಶನ:ಕೋಲಾರ ನಗರದ ನಿರ್ಮಾತೃ ಟಿ.ಚನ್ನಯ್ಯ ಹೆಸರನ್ನು ಸಮ್ಮೇಳನದ ಮಹಾಧ್ವಾರಕ್ಕೆ ಹಾಗೂ ವೇದಿಕೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ರ ಹೆಸರನ್ನು ಇಡಲಾಗಿದೆ. ಸಂಸದ ಎಸ್‌.ಮುನಿಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದಾರೆ. ದಲಿತ ಪರ ಗೋಷ್ಠಿ, ಕವಿಗೋಷ್ಠಿ, ಗೌರವ ಸನ್ಮಾನ ಇರುತ್ತದೆ. 17ರ ಸಂಜೆ 6ಕ್ಕೆ ಜಿಲ್ಲಾ ದಲಿತ ಕಲಾವಿದರಿಂದ ರಸಸಂಜೆ, 18ರಂದು ಡಾ.ಚಂದ್ರಶೇಖರ ವಸ್ತ್ರದ ತಂಡದಿಂದ ‘ನುಲಿಯ ಚಂದ್ರಯ್ಯ’ ನಾಟಕ ಹಾಗೂ ಕೋಟಿಗಾನಹಳ್ಳಿ ರಾಮಯ್ಯ ತಂಡದಿಂದ ‘ಸುಮ್‌ ಸುಮ್ಕೆ’ ನಾಟಕ ಇರುತ್ತದೆ ಎಂದು ವಿವರಿಸಿದರು.

24 ಜಿಲ್ಲಾಧ್ಯಕ್ಷರಿಂದ ನನಗೆ ಮತ:ರಾಜ್ಯ ಕಸಾಪ ನಿಯಮ ಹಾಗೂ ತಿದ್ದುಪಡಿಯಂತೆ ರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ಕಸಾಪದ ದಲಿತ ಪ್ರತಿನಿಧಿಯಾಗಿ ಪರಿಶಿಷ್ಟ ಜಾತಿಯಿಂದ ಇಬ್ಬರು, ಪರಿಶಿಷ್ಟ ಪಂಗಡದಿಂದ ಒಬ್ಬರು, ಮಹಿಳಾ ಪ್ರತಿನಿಧಿಯಾಗಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿಯೇ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ನಡೆಯುವಂತೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಕಾರ್ಯಕಾರಣಿ ಸಭೆಯಲ್ಲಿ ತನ್ನ ಪರ 24 ಜಿಲ್ಲಾಧ್ಯಕ್ಷರು ತಮಗೆ ಮತ ಚಲಾಯಿಸಿ ಈ ಕೆಲಸಕ್ಕೆ ನಾಂದಿ ಹಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಕಸಾಪ 105ವರ್ಷಗಳ ಇತಿಹಾಸ ದಲ್ಲಿಯೇ ದಲಿತ ಸಾಹಿತ್ಯ ಸಮ್ಮೇಳನ ಮಾಡುತ್ತಿರುವ ಮೂಲಕ ಗೌರವಕ್ಕೆ ಪಾತ್ರವಾಗಿದೆ. ದಲಿತ ಪರ 10ಸಂಪುಟ ಹೊರತಂದಿದ್ದು ಕೋಲಾರದಲ್ಲಿಯೇ 5ಸಂಪುಟ ಬಿಡುಗಡೆ ಮಾಡಲಾಗುವುದು. ಎಲ್ಲಾ ಸಂಘಟನೆಗಳು, ಎಲ್ಲಾ ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಎಸ್‌.ಮುನಿಯಪ್ಪ, ಕನ್ನಡಪರ ಹೋರಾಟಗಾರ ಕೋ.ನಾ.ಪ್ರಭಾಕರ್‌, ಕನ್ನಡಮಿತ್ರ ವೆಂಕಟಪ್ಪ, ಕಸಾಪ ತಾಲೂಕು ಗೌರವಾಧ್ಯಕ್ಷ ಪರಮೇಶ್ವರ್‌, ಪತ್ರಕರ್ತರ ಸಂಘದ ಅಧ್ಯಕ್ಷ‌ ವಿ.ಮುನಿರಾಜು, ಚುಸಾಪ ಅಧ್ಯಕ್ಷ‌ ನಾರಾಯಣಪ್ಪ, ಹಿರಿಯ ದಲಿತ ಹೋರಾಟಗಾರ ಟಿ.ವಿಜಯಕುಮಾರ್‌, ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಾಲೂರು: ಶಾಶ್ವತ ನೀರಾವರಿ ಯೋಜನೆಗಳ ಪೈಕಿ ಕೆ.ಸಿ.ವ್ಯಾಲಿಯು ಉಭಯ ಜಿಲ್ಲೆಯ ಜನರ ಪಾಲಿಗೆ ವರದಾನ ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು. ಪಟ್ಟಣದ ಅಶ್ರಯ ಬಡಾವಣೆಯ...

  • ಮುಳಬಾಗಿಲು: ಸಾಮಾನ್ಯವಾಗಿ ಜನಪ್ರತಿನಿಧಿಗಳು ತಮ್ಮ ಸರ್ಕಾರಿ ಕಚೇರಿಗಳನ್ನು ವಾಸ್ತು  ರೀತಿ ಬದಲಾಯಿಸಿಕೊಳ್ಳುವುದನ್ನು ನೋಡಿ ದ್ದೇವೆ. ಆದರೆ, ನಗರದಲ್ಲಿ ಸರ್ಕಾರಿ...

  • ಕೋಲಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಹಾಗೂ ಜೈ ಕರ್ನಾಟಕ ಮಾತೆ ಸಾಂಸ್ಕೃತಿಕ ಮತ್ತು ಕಲಾ ಭಜನೆ ಸಂಘ ತಾಲೂಕಿನ ಅಂಕತಟ್ಟಿ ಗ್ರಾಮದಲ್ಲಿ ಜಾನಪದ, ತತ್ವಪದ...

  • ಕೋಲಾರ: ಕರ್ನಾಟಕ ರಾಜ್ಯೋತ್ಸವದ ನವೆಂಬರ್‌ ಪೂರ್ತಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಬೇಕೆಂಬ ಜಿಲ್ಲಾಧಿಕಾರಿಗಳ ಸಭೆಯ ನಿರ್ಧಾರವನ್ನು ನಗರದ ಎರಡು ಚಿತ್ರಮಂದಿರಗಳು...

  • ಬಂಗಾರಪೇಟೆ: ಮಳೆ ನೀರು ಸಂಗ್ರಹಿಸುವ ಸಲುವಾಗಿ ಸರ್ಕಾರವೇ ಕೃಷಿ ಹೊಂಡಗಳ ನಿರ್ಮಾಣಕ್ಕೆ ಸಹಾಯಧನ ನೀಡುತ್ತಿದೆ. ಇದು ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವೇ...

ಹೊಸ ಸೇರ್ಪಡೆ