Bangladesh ದಂಗೆಯಿಂದ ರಾಜ್ಯದ ಟೊಮೇಟೊ ಚಟ್ನಿ !

ಕೋಲಾರದ ಟೊಮೇಟೊ ಬೆಳೆಗಾರರಿಗೆ ಈಗ ನಷ್ಟ ಭೀತಿ

Team Udayavani, Aug 14, 2024, 7:15 AM IST

Bangladesh ದಂಗೆಯಿಂದ ರಾಜ್ಯದ ಟೊಮೇಟೊ ಚಟ್ನಿ !

ಕೋಲಾರ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಆಂತರಿಕ ದಂಗೆಯು ಕೋಲಾರದ ಟೊಮೇಟೊ ರೈತರು ಹಾಗೂ ವ್ಯಾಪಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ, ನಷ್ಟದ ಭೀತಿ ತಂದೊಡ್ಡಿದೆ! ಎತ್ತಣ ಬಾಂಗ್ಲಾದೇಶ, ಎತ್ತಣ ಕೋಲಾರ; ಹೇಗೆ ಸಂಬಂಧ ಎಂಬುದು ಕುತೂಹಲ ಕಾರಿಯೇ. ಆದರೆ ಕೋಲಾರದ ಟೊಮೇಟೊ ಮಾರುಕಟ್ಟೆಗೆ ಪ್ರಮುಖ ಆಧಾರ ಬಾಂಗ್ಲಾದೇಶ ಎನ್ನುವುದು ವಾಸ್ತವ.

ಕೋಲಾರ ಮಾರುಕಟ್ಟೆ ಏಷ್ಯಾ ಖಂಡದಲ್ಲೇ 2ನೇ ಅತೀ ದೊಡ್ಡ ಟೊಮೇಟೊ ಮಾರುಕಟ್ಟೆ ಎಂದು ಖ್ಯಾತಿ ಗಳಿಸಿದೆ. ಹಿಂದೆ ಪಾಕಿಸ್ಥಾನ, ಬಾಂಗ್ಲಾ ಹಾಗೂ ಶ್ರೀಲಂಕಾಗಳಿಗೆ ನೂರಾರು ಟನ್‌ ಟೊಮೇಟೊ ರಫ್ತಾಗುತ್ತಿತ್ತು. ಶ್ರೀಲಂಕಾದಲ್ಲಿ ಆಂತರಿಕ ಸಮಸ್ಯೆ ಮತ್ತು ಪಾಕ್‌ನೊಂದಿಗೆ ಭಾರತದ ಸಂಬಂಧ ಹಳಸಿದ ಬಳಿಕ ಕೋಲಾರ ಟೊಮೆಧೀಟೊಕ್ಕೆ ಬಾಂಗ್ಲಾ ದೇಶವೇ ಮುಖ್ಯ ವಿದೇಶಿ ಮಾರುಕಟ್ಟೆಯಾಗಿದೆ. ಕೆಲವು ವಾರಗಳಿಂದ ಏರುಗತಿಯಲ್ಲಿದ್ದ ಕೋಲಾರ ಟೊಮೇಟೊ ಧಾರಣೆ ಬಾಂಗ್ಲಾ ಬಿಕ್ಕಟ್ಟಿನ ಬಳಿಕ ಪ್ರತೀ ಬಾಕ್ಸ್‌ಗೆ 100ರಿಂದ 200 ರೂ. ಕುಸಿತ ಕಂಡಿದೆ.

500ರಿಂದ ಸಾವಿರ ಟನ್‌ ನಿರ್ಯಾತ

ಕೋಲಾರ ಎಪಿಎಂಸಿ ಟೊಮೇಟೊ ಮಾರುಕಟ್ಟೆಯಿಂದ ಪ್ರತೀ ನಿತ್ಯ ಬಾಂಗ್ಲಾ ದೇಶಕ್ಕೆ ಸಾಮಾನ್ಯವಾಗಿ 15ರಿಂದ 20 ಲೋಡ್‌ ಟೊಮೇಟೊ ನಿರ್ಯಾತವಾಗುತ್ತಿತ್ತು. ಬೇಡಿಕೆ ಹೆಚ್ಚಾಗಿರುವ ಸಂದರ್ಭಗಳಲ್ಲಿ ಇದು 30 ಲೋಡ್‌ ವರೆಗೂ ತಲುಪುತ್ತಿತ್ತು. ಪ್ರತೀ ಲೋಡ್‌ನ‌ಲ್ಲಿ 30 ಟನ್‌ನಂತೆ ಕೋಲಾರ ಮಾರುಕಟ್ಟೆಯಿಂದ ನಿತ್ಯ 500ರಿಂದ 1 ಸಾವಿರ ಟನ್‌ ಟೊಮೇಟೊ ಬಾಂಗ್ಲಾಕ್ಕೆ ಸಾಗಣೆಯಾಗುತ್ತಿತ್ತು. ವಿಶೇಷ ಲಾರಿಗಳು ಕೋಲಾರದಿಂದ ಬಾಂಗ್ಲಾ ಗಡಿಗೆ ಕೇವಲ 48 ತಾಸುಗಳಲ್ಲಿ ಟೊಮೇಟೋ ಮುಟ್ಟಿಸುತ್ತಿದ್ದವು. ಪ್ರತೀ ಲೋಡ್‌ಗೆ ಸುಮಾರು 2 ಲಕ್ಷ ರೂ. ವೆಚ್ಚ ತಗಲುತ್ತಿತ್ತು.

ಶೇ. 50ರಷ್ಟು ಕಡಿತ
ಬಾಂಗ್ಲಾ ದೇಶದಲ್ಲಿ ಆಂತರಿಕ ದಂಗೆ ಆರಂಭವಾದ ಅನಂತರ ಕೋಲಾರದಿಂದ ಅಲ್ಲಿಗೆ ಟೊಮೇಟೊ ರಫ್ತು ಶೇ. 50ರಷ್ಟು ಕುಸಿದಿದೆ. ಈಗ ಕೇವಲ 8ರಿಂದ 12 ಲೋಡ್‌ ಸಾಗಿಸಲಾಗುತ್ತಿದೆ. ಹೀಗೆ ಕಳುಹಿಸುವ ಟೊಮೆಧೀಟೊಗೂ ಹಣ ಸಿಗುವ ಗ್ಯಾರಂಟಿ ಇಲ್ಲವಾಗಿದೆ.

50ರಿಂದ 60 ಕೋಟಿ ರೂ. ವಹಿವಾಟು
ಕೋಲಾರ ಮಾರುಕಟ್ಟೆಯಿಂದ ಬಾಂಗ್ಲಾ ದೇಶಕ್ಕೆ ಟೊಮೇಟೊ ಕಳುಹಿಸುವ ನಾಲ್ವರು ಮುಖ್ಯ ವ್ಯಾಪಾರಿಗಳಿದ್ದು, ಇವರು ಪ್ರತೀ ವರ್ಷ ಕನಿಷ್ಠ 50ರಿಂದ 60 ಕೋಟಿ ರೂ. ಮೌಲ್ಯದ ಟೊಮೇಟೊ ಕಳುಹಿಸುತ್ತಿದ್ದರು. ಕಳೆದ ವರ್ಷ ಬಾಕ್ಸ್‌ ಧಾರಣೆ 2,500 ಸಾವಿರ ರೂ.ಗೆ ಏರಿದ್ದಾಗ 100 ಕೋಟಿ ರೂ.ಗೂ ಹೆಚ್ಚು ವಹಿವಾಟು ದಾಖಲಾಗಿದೆ. ಆದರೆ ಈಗ ಈ ವ್ಯಾಪಾರಿಗಳಿಗೆ ಬಾಂಗ್ಲಾದಿಂದ 15 ಕೋಟಿ ರೂ. ಬಾಕಿ ಬರಬೇಕಾಗಿದೆ. ಬಾಂಗ್ಲಾ ದೇಶದ ಬ್ಯಾಂಕ್‌ಗಳು ನಿತ್ಯದ ವಹಿವಾಟನ್ನು 2 ಲಕ್ಷ ಟಾಕಾಕ್ಕೆ ಮಿತಿಗೊಳಿಸಿರುವುದು ಟೊಮೇಟೊ ವ್ಯಾಪಾರಿಗಳಿಗೆ ಬಾಕಿ ಹಣ ಬಾರದಿರಲು ಪ್ರಮುಖ ಕಾರಣವಾಗಿದೆ. ಇದರ ನೇರ ಪರಿಣಾಮ ಕೋಲಾರ ಟೊಮೇಟೊ ಧಾರಣೆ ಮೇಲೆ ಬಿದ್ದಿದೆ.

ರೈತರ ಮೇಲೆ ಪರಿಣಾಮ
ಪ್ರತೀ ವರ್ಷ ಜೂನ್‌ನಿಂದ ಆಗಸ್ಟ್‌ವರೆಗೆ ಟೊಮೆಧೀಟೊ ಋತು ಆಗಿದ್ದು, ಆಗ ಎಷ್ಟು ಬೆಳೆದರೂ ಕೈತುಂಬಾ ಕಾಸು ಎನ್ನುವುದು ರೈತರ ಅನುಭವ. ಆದರೆ ಈಗ ಬಿಂಗಿ ರೋಗ, ಅತಿವೃಷ್ಟಿಯಿಂದ ಟೊಮೇಟೊ ಫಸಲು ಇಳಿಮುಖವಾಗಿದೆ. ಬಾಂಗ್ಲಾಕ್ಕೆ ಟೊಮೇಟೊ ಕಳುಹಿಸುವ ವ್ಯಾಪಾರಿಗಳು ಹರಾಜಿನಲ್ಲಿ ಭಾಗವಹಿಸದಿದ್ದರೆ ಪ್ರತೀ ಬಾಕ್ಸ್‌ ಮೇಲೆ 100ರಿಂದ 200 ರೂ. ತಾನಾಗಿಯೇ ಕುಸಿಯುತ್ತದೆ. ಹೀಗಾಗಿ ಕಳೆದ ತಿಂಗಳಿನಿಂದ ಪ್ರತೀ ಕೆ.ಜಿ.ಗೆ ಸರಾಸರಿ 20 ರೂ.ಗಿಂತ ಹೆಚ್ಚಿದ್ದ ಟೊಮೇಟೊ ಧಾರಣೆ ಮಂಗಳವಾರ 12 ರೂ.ಗೆ ಕುಸಿದಿದೆ

ಕೋಲಾರ ಮಾರುಕಟ್ಟೆಗೆ ಆವಕವಾಗಿ ಹರಾಜಾಗುವ ಟೊಮೇಟೊಗೆ ಬಾಂಗ್ಲಾ ದೇಶ ಪ್ರಮುಖ ಮಾರುಕಟ್ಟೆಯಾಗಿತ್ತು. ಅಲ್ಲಿ ಆಂತರಿಕ ಬಿಕ್ಕಟ್ಟು ಉಲ್ಬಣವಾಗಿದ್ದು, ಇದರಿಂದ ಟೊಮೇಟೊ ರಫ್ತು ಶೇ. 50ರಷ್ಟು ಕುಸಿದಿದೆ. ಪರಿಣಾಮವಾಗಿ ಕೋಲಾರ ಮಾರುಕಟ್ಟೆಯಲ್ಲಿ ಧಾರಣೆ ಶೇ. 25ರಷ್ಟು ಕುಸಿದಿದೆ. ಅಲ್ಲಿಂದ ನಮಗೆ 15 ಕೋಟಿ ರೂ.ಗೂ ಹೆಚ್ಚು ಹಣ ಬಾಕಿ ಬರಬೇಕಾಗಿದ್ದು, ಬರುವ ವಿಶ್ವಾಸವೇ ಇಲ್ಲವಾಗಿದೆ.
– ನವಾಜ್‌ ಪಾಷಾ, ಸಿಝಡ್‌ ಟ್ರೇಡರ್ಸ್‌; – ಖಲೀಲ್‌, ಪಿಒಟಿ ಟ್ರೇಡರ್ಸ್‌, ಕೋಲಾರ
(ಬಾಂಗ್ಲಾ ದೇಶಕ್ಕೆ ಟೊಮೇಟೊ ಕಳುಹಿಸುತ್ತಿದ್ದ ವ್ಯಾಪಾರಿಗಳು)

-ಕೆ.ಎಸ್‌. ಗಣೇಶ್‌

ಟಾಪ್ ನ್ಯೂಸ್

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

court

Fact check ಘಟಕ ಸ್ಥಾಪಿಸುವ ಐಟಿ ನಿಯಮ ರದ್ದು: ಹೈಕೋರ್ಟ್‌ ಆದೇಶ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

10

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

High-Court

Kolar: ಬಾಲಕಿಯರ ಖಾಸಗಿ ಫೋಟೋ ತೆಗೆದ ಶಿಕ್ಷಕ; ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.