ಸೋಂಕಿತನ ಪತ್ತೆಗೆ ಇನ್ನೂ ಹುಡುಕಾಟ


Team Udayavani, Jun 9, 2020, 7:06 AM IST

sonkita-hudukata

ಕೋಲಾರ: ಐದು ದಿನಗಳ ಹಿಂದೆ ಜಿಲ್ಲೆಯಿಂದ ನಾಪತ್ತೆಯಾಗಿರುವ ಕೋವಿಡ್‌ 19 ಪಾಸಿಟಿವ್‌ ವ್ಯಕ್ತಿಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಹುಡುಕಾಟ ಮುಂದುವರಿಸಿದೆ. ನಗರದ ಎಪಿಎಂಸಿ ಸಮೀಪದ ಹೋಟೆಲ್‌ ಒಂದರಲ್ಲಿ  ಕೆಲಸ ಮಾಡಲು ಆಗಮಿಸಿದ್ದ ಮಂಡ್ಯ ಜಿಲ್ಲೆ ಮೂಲದ ನಲವತ್ತು ವರ್ಷದ ವ್ಯಕ್ತಿ ತಾನಾಗಿಯೇ ಕೋವಿಡ್‌ 19 ಪರೀಕ್ಷೆಗಾಗಿ ಗಂಟಲ ದ್ರವ ನೀಡಿದ್ದನು.

ಈತನಿಗೆ ಕೋವಿಡ್‌ 19 ಪಾಸಿಟಿವ್‌ ಇರುವುದು ಪತ್ತೆಯಾದ ಕ್ಷಣದಿಂದ ತನ್ನ ಮೊಬೈಲ್‌  ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದನು. ಕೊನೆಯ ಕರೆ ಸ್ಪೀಕರಿಸಿದ ಸಂದರ್ಭದಲ್ಲಿ ತಾನು ಬಂಗಾರಪೇಟೆಯಲ್ಲಿದ್ದೇನೆ ಎಂದು ತಿಳಿಸಿದ್ದ ವ್ಯಕ್ತಿ, ಆನಂತರ ಮೊಬೈಲ್‌ ಆಫ್ ಮಾಡಿಕೊಂಡು ಜಿಲ್ಲಾಡಳಿತ ಹಾಗೂ ಪೊಲೀಸ್‌  ಇಲಾಖೆಯ ತಲೆಬಿಸಿಗೆ ಕಾರಣವಾಗಿದ್ದಾನೆ.

ದೂರು ದಾಖಲು: ಕೋವಿಡ್‌ 19 ಪಾಸಿಟಿವ್‌ ವ್ಯಕ್ತಿ ನಾಪತ್ತೆಯಾದ ಘಟನೆಯನ್ನು ಗಂಭೀರವಾಗಿ ಸ್ಪೀಕರಿಸಿರುವ ಜಿಲ್ಲಾ ಆರೋಗ್ಯ ಇಲಾಖೆಯು ಪಾಸಿಟಿವ್‌ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗೆಯೇ  ಈತನನ್ನು ಹೋಟೆಲ್‌ ಕೆಲಸಕ್ಕೆ ಇಟ್ಟುಕೊಂಡು ಮೂರು ದಿನ ಕೆಲಸ ಮಾಡಿಸಿಕೊಂಡು ಊಟ ಹಾಕಿ, ಹೋಟೆಲ್‌ ಪಾರ್ಸೆಲ್‌ ಕಟ್ಟಿಕೊಡುವ ಕೆಲಸ ನೀಡಿ, ಅಂತಿಮವಾಗಿ 600 ರೂ. ನೀಡಿ ನಾಪತ್ತೆಯಾಗಲು ಕಾರಣರಾಗಿರುವ ಹೋಟೆಲ್‌  ಮಾಲಿಕ ಚೇತನ್‌ ಎಂಬುವರ ಮೇಲೂ ಮಾಹಿತಿ ನೀಡದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.

ಹೋಟೆಲ್‌ ಮಾಲಿಕ ಚೇತನ್‌ ತನ್ನ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಪಾಸಿಟಿವ್‌ ಎಂದು ತಿಳಿಯುತ್ತಿದ್ದಂತೆಯೇ ಹೋಟೆಲ್‌  ಮುಚ್ಚಿಸುತ್ತಾರೆಂಬ ಭೀತಿಯಲ್ಲಿ ಆತನನ್ನು ಕಳುಹಿಸಿಕೊಟ್ಟಿದ್ದಾರೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೂರುತ್ತಾರೆ. ಆದರೂ, ಇದೀಗ ಹೋಟೆಲ್‌ ಮುಚ್ಚಿಸಿದ್ದು, ಅದರ ಮಾಲೀಕರು ಹಾಗೂ ಪಾರ್ಸೆಲ್‌ ಪಡೆದವರನ್ನು ಗುರುತಿಸಿ  ಕ್ವಾರಂಟೈನ್‌ ಮಾಡಲಾಗಿದೆ.

ತಂಡ ರಚನೆ: ಕೋವಿಡ್‌ 19 ಪಾಸಿಟಿವ್‌ ವ್ಯಕ್ತಿ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತಲೆ ಮರೆಸಿಕೊಂಡಿರಬಹುದು ಎಂಬ ಶಂಕೆಯ ಮೇಲೆ ಆತನನ್ನು ಹುಡುಕಲು ಪೊಲೀಸ್‌ ಇಲಾಖೆ ತಂಡವೊಂದನ್ನು ರಚಿಸಿದೆ.  ಇಲಾಖೆಯ ಮೇಲಧಿಕಾರಿಗಳು ನೆರೆ ರಾಜ್ಯಗಳ ಪೊಲೀಸ್‌ ಇಲಾಖೆಗೂ ಈ ಕುರಿತು ಮಾಹಿತಿ ನೀಡಿ ಹುಡುಕಾಟಕ್ಕೆ ಸಹಕರಿಸುವಂತೆ ಕೋರಿದ್ದಾರೆ. ಕೋವಿಡ್‌ 19 ಪಾಸಿಟಿವ್‌ ವ್ಯಕ್ತಿಯ ಮೊಬೈಲ್‌ನಿಂದ ಹೊರ ಹೋಗಿರುವ ಕರೆಗಳ ಜಾಡು ಹಿಡಿದು ತನಿಖೆ ಮುಂದುವರಿಸುತ್ತಿರುವ ಪೊಲೀಸರಿಗೆ  ಪಾಸಿಟಿವ್‌ ವ್ಯಕ್ತಿ ಆಂಧ್ರಪ್ರದೇಶದ ಕುಪ್ಪಂನಲ್ಲಿರಬಹುದು ಎಂಬ ಸುಳಿವು ದೊರೆ  ತಿದ್ದು, ಹುಡುಕಾಟ ಸಾಗಿದೆ.

ಮತ್ತೂಂದು ಮೂಲದ ಪ್ರಕಾರ ನಾಪತ್ತೆಯಾಗಿರುವ ವ್ಯಕ್ತಿ ಕಳ್ಳತನ  ಮಾಡುವ ಹವ್ಯಾಸ ಹೊಂದಿದ್ದು, ತನ್ನ ಜಾಡು ಪೊಲೀಸರಿಗೆ ಸಿಗಬಾರದೆಂಬ ಉದ್ದೇಶ ದಿಂದಲೇ ನಾಪತ್ತೆಯಾಗಿದ್ದಾನೆಂಬ ಮಾಹಿತಿ ಯೂ ಹೊರ ಬಿದ್ದಿದೆ. ಒಂದು ವೇಳೆ ಈತ ಗಡಿಯ ಮೂರು ರಾಜ್ಯಗಳಲ್ಲಿ ಓಡಾಡಿದ್ದರೆ ಈತನ  ಜಾಡನ್ನು ಪತ್ತೆ ಹಚ್ಚಿ ಈತನಿಂದ ಸೋಂಕು ಹರಡಿರಬಹುದಾದ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್‌ ಮಾಡುವುದು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಪೊಲೀಸ್‌ ಅಧಿಕಾರಿಗಳಿಗೆ ದೊಡ್ಡ ಕೆಲಸವಾಗಲಿದೆ.

ಕೋಲಾರ ಜಿಲ್ಲೆಯಿಂದ ಕೋವಿಡ್‌ 19 ಪಾಸಿಟಿವ್‌ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಹಾಗೂ ಈತನ ಮಾಹಿತಿ ಮುಚ್ಚಿಟ್ಟ ಹೋಟೆಲ್‌ ಮಾಲೀಕರ ಮೇಲೆ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿದೆ. ಪಾಸಿಟಿವ್‌ ವ್ಯಕ್ತಿಯನ್ನು ನೆರೆಯ  ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಲ್ಲಿ ಹುಡುಕಲಾಗುತ್ತಿದೆ.
-ಡಾ.ಚಾರಿಣಿ, ಕೋವಿಡ್‌-19, ಜಿಲ್ಲಾ ನೋಡಲ್‌ ಅಧಿಕಾರಿ

* ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

covid-1

ರಾಜ್ಯದಲ್ಲಿ ಕಡಿಮೆಯಾಗುತ್ತಿರುವ ಕೋವಿಡ್ ಪ್ರಕರಣಗಳು : ಇಂದು 49 ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆದ್ದಾರಿ ರಸ್ತೆ ವಿಭಜಕ ನಾಶ: ಅಧಿಕಾರಿಗಳ ಮೌನ

ಹೆದ್ದಾರಿ ರಸ್ತೆ ವಿಭಜಕ ನಾಶ: ಅಧಿಕಾರಿಗಳ ಮೌನ

ಬಂಗಾರಪೇಟೆ: ಹೆಚ್ಚಿದ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ

ಬಂಗಾರಪೇಟೆ: ಹೆಚ್ಚಿದ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ

ಶಾಸಕ, ತಹಶೀಲ್ದಾರ್‌ ವಾಗ್ವಾದ ಆಡಿಯೋ ವೈರಲ್‌

ಶಾಸಕ, ತಹಶೀಲ್ದಾರ್‌ ವಾಗ್ವಾದ ಆಡಿಯೋ ವೈರಲ್‌

ಕೆಲಸ ಒಬ್ಬರದು, ಪ್ರಚಾರ ಪಡೆಯುತ್ತಿರುವುದು ಇನ್ನೊಬ್ಬರು

ಕೆಲಸ ಒಬ್ಬರದು, ಪ್ರಚಾರ ಪಡೆಯುತ್ತಿರುವುದು ಇನ್ನೊಬ್ಬರು

1500 ಕೋಟಿ ರೂ.ಬೆಳೆ ಸಾಲಕ್ಕೆ ಬೇಡಿಕೆ

1500 ಕೋಟಿ ರೂ.ಬೆಳೆ ಸಾಲಕ್ಕೆ ಬೇಡಿಕೆ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.