Udayavni Special

ರಾಜ್ಯ ಪ್ರವಾಸಿ ತಂಡಕ್ಕೆ ಪ್ರಯಾಸದ ಅನುಭವ

ಆನ್‌ಲೈನ್‌ ಬುಕ್ಕಿಂಗ್‌ ಸಿಕ್ಕರೂ ಚಾರ್‌ಧಾಮ್‌ ದರ್ಶನಕ್ಕೆ ಅನೇಕ ಅಡೆತಡೆ ; ಕೋವಿಡ್‌ ಮಾರ್ಗಸೂಚಿಯಿಂದ ಪರದಾಟ

Team Udayavani, Sep 25, 2021, 4:33 PM IST

ರಾಜ್ಯ ಪ್ರವಾಸಿ ತಂಡಕ್ಕೆ ಪ್ರಯಾಸದ ಅನುಭವ

ಕೋಲಾರ: ಹಿಂದುಗಳ ಜನಪ್ರಿಯ ಚಾರ್‌ಧಾಮ್‌ ಪ್ರವಾಸ ಸಂಕಷ್ಟಗಳ ನಡುವೆ ಆರಂಭವಾಗಿದ್ದು, ಕರ್ನಾಟಕದಿಂದ ತೆರಳಿರುವ ಮೊದಲ ತಂಡಕ್ಕೆ ಉತ್ತರಾಖಂಡ ಸರ್ಕಾರದ ಬಿಗಿ ಕೋವಿಡ್‌ ಕ್ರಮಗಳು ಪರದಾಡುವಂತೆ ಮಾಡಿದೆ.

ಕೋವಿಡ್‌ ಕಾರಣದಿಂದಾಗಿ 2019 ದೀಪಾವಳಿಯಿಂದ ಸ್ಥಗಿತಗೊಂಡಿದ್ದ ಚಾರ್‌ಧಾಮ್‌ ಪ್ರವಾಸಕ್ಕೆ ನ್ಯಾಯಾಲಯವು 2021ಅ.18 ರಂದು ಷರತ್ತು ಬದ್ಧ ಅನುಮತಿ ನೀಡಿತ್ತು. ಈ ಬೆನ್ನಲ್ಲೆ ಕೋಲಾರ ಮತ್ತು ಬೆಂಗಳೂರಿನ ಕಾಡುಗೋಡಿಯಲ್ಲಿ ಶಾಖೆ ಹೊಂದಿರುವ ಸಮೃದ್ಧಿ ಟೂರ್‌ ಆ್ಯಂಡ್‌ ಟ್ರಾವೆಲ್ಸ್‌ ಸಂಸ್ಥೆಯು ಕರ್ನಾಟದಿಂದ ಮೊದಲ 32 ಜನರ ಪ್ರವಾಸಿಗರ ತಂಡವನ್ನು ಚಾರ್‌ಧಾಮ್‌ ಪ್ರವಾಸಕ್ಕೆ ಕರೆದೊಯ್ದಿದೆ.

ಪ್ರವಾಸಕ್ಕೆ ಹೋಗಬೇಕಾದಲ್ಲಿ ಎರಡು ಬಾರಿ ಕೋವಿಡ್‌ ಲಸಿಕೆ ಹಾಕಿಸಿರುವ ಪ್ರಮಾಣ ಪತ್ರ, ಕೋವಿಡ್‌ ನೆಗೆಟಿವ್‌ ಆರ್‌ಟಿಪಿಸಿಆರ್‌ ಪತ್ರ, ಆನ್‌ ಲೈನ್‌ ಬುಕ್ಕಿಂಗ್‌ ದಾಖಲೆ ಮತ್ತು ಉತ್ತರಾಖಂಡ ರಾಜ್ಯದ ವಿಶೇಷ ಪ್ರವೇಶ ಪತ್ರ ಇರಲೇಬೇಕಾಗುತ್ತದೆ. ಇಷ್ಟೆಲ್ಲಾ ದಾಖಲಾತಿ ಹೊಂದಿರುವ 67 ಮಂದಿ ಪ್ರವಾಸ ಭಾಗ್ಯ ಬಯಸಿದ್ದರಾದರೂ ಆನ್‌ಲೈನ್‌ನಲ್ಲಿ 32 ಮಂದಿ ಮಾತ್ರ ಬುಕ್‌ ಆಗಿದ್ದ ಕಾರಣದಿಂದ ಅಷ್ಟೇ ಮಂದಿ ತಂಡ ಪ್ರವಾಸಕ್ಕೆ ತೆರಳಿದೆ.

ಇದನ್ನೂ ಓದಿ:ಪಂಜಾಬ್ Vs ಹೈದರಾಬಾದ್- ಸೋತವರ ಹಣಾಹಣಿ: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

1000 ಮಂದಿಗೆ ಅವಕಾಶ: ಆನ್‌ಲೈನ್‌ ಬುಕ್ಕಿಂಗ್‌ ಸಿಕ್ಕ ತಕ್ಷಣ ಎಲ್ಲವೂ ಸುಗಮ ಎಂದು ಭಾವಿಸಿ ಹೊರಟ ತಂಡಕ್ಕೆ ಚಾರ್‌ಧಾಮ್‌ ಪ್ರವಾಸ ಸಂದರ್ಭದಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಎದುರಾಗುತ್ತಿವೆ. ಸೆ.22ರಂದು ಬೆಂಗಳೂರಿನಿಂದ ಹೊರಟ ಕರ್ನಾಟಕ ತಂಡವು ಬುಕ್ಕಿಂಗ್‌ ವೇಳಾಪಟ್ಟಿ ಪ್ರಕಾರ ಸೆ.24 ಯಮನೋತ್ರಿ, 26 ಗಂಗೋತ್ರಿ, 28 ಕೇದಾರ್‌ನಾಥ್‌ ಹಾಗೂ 30 ರಂದು ಬದರೀನಾಥ್‌ ದರ್ಶನಕ್ಕೆ ತೆರಳಬೇಕಾಗಿತ್ತು. ಆದರೆ, ಉತ್ತರಾಖಂಡ ಸರ್ಕಾರವು ಕೋವಿಡ್‌ ನಿಯಮಾವಳಿಗಳ ಪ್ರಕಾರ ನಿತ್ಯವೂ ಯಮನೋತ್ರಿಗೆ 400, ಗಂಗೋತ್ರಿಗೆ 600, ಕೇದಾರ್‌ನಾಥ್‌ಗೆ 800 ಹಾಗೂ ಬದರೀನಾಥ್‌ಗೆ 1000 ಮಂದಿ ಪ್ರವಾಸಿಗರಿಗೆ ಮಾತ್ರವೇ ಅವಕಾಶ ನೀಡಿದೆ.

ಸೀಮಿತ ಪ್ರವಾಸಿಗರು: ಈ ಸೀಮಿತ ಪ್ರವಾಸಿಗರಲ್ಲಿ ಸ್ಥಳೀಯರು ಸೇರಿಕೊಂಡರೆ ದೂರದ ರಾಜ್ಯಗಳಿಂದ ಬಂದಿರುವ ಪ್ರವಾಸಿಗರ ಸಂಖ್ಯೆಯನ್ನು ಉತ್ತರಾಖಂಡ ಸರ್ಕಾರ ಕಡಿತಗೊಳಿಸುತ್ತಿದೆ. ಇದೇ ಕಾರಣಕ್ಕೆ ಆನ್‌ ಲೈನ್‌ ಬುಕ್ಕಿಂಗ್‌ ಇದ್ದರೂ ಸೆ.24 ರಂದು ಯಮನೋತ್ರಿ ಪ್ರವಾಸ ಭಾಗ್ಯವನ್ನು ಕರ್ನಾಟಕದಿಂದ ತೆರಳಿರುವ ಮೊದಲ ತಂಡ ತಪ್ಪಿಸಿಕೊಂಡಿದೆ.

ಗೇಟ್‌ ಕಾಯಬೇಕಾದ ಅನಿವಾರ್ಯ: ಇದರಿಂದ ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ಆನ್‌ಲೈನ್‌ ಬುಕ್ಕಿಂಗ್‌ ಹೊಂದಿರುವ ಸಾವಿರಾರು ಮಂದಿ ಪ್ರವಾಸಿಗರು ಯಮನೋತ್ರಿ ಗಡಿಯಲ್ಲಿ ಅಲ್ಲಿನ ಸರ್ಕಾರದ ತಪಾಸಣಾ ಕೇಂದ್ರಗಳ ಬಳಿಯೇ ಕಾಲ ಕಳೆಯಬೇಕಾಗಿದೆ. ಆನ್‌ಲೈನ್‌ ಬುಕ್ಕಿಂಗ್‌ ಹೊಂದಿರುವ ಎಲ್ಲಾ ಪ್ರವಾಸಿಗರಿಗೂ ಪ್ರವಾಸ ಮಾಡಲು ಅನುಮತಿಸಬೇಕೆಂಬ ಕೂಗು ಪ್ರವಾಸಿಗರ ಗುಂಪಿನಲ್ಲಿ ಎದ್ದಿದೆ.

ಉತ್ತರಾಖಂಡ ಸರಕಾರದ ಈ ಧೋರಣೆಯಿಂದಾಗಿ ಚಾರ್‌ಧಾಮ ಪ್ರವಾಸ ಮಾಡಲು ಹೋಗಿರುವವರು ಎರಡು ಮೂರು ಧಾಮ್‌ಗಳನ್ನಷ್ಟೇ ದರ್ಶನ ಮಾಡಿ ವಾಪಸ್‌ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಹವಾಮಾನ ವೈಪರೀತ್ಯದಿಂದ ಬೆಟ್ಟ ಕುಸಿತದಿಂದ ಪ್ರವಾಸ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯೂ ಇದ್ದೇ ಇದೆ. ಹಿಂತಿರುಗುವ ವಿಮಾನ ಪ್ರಯಾಣ ದಿನಾಂಕವೂ ನಿಗದಿಯಾಗಿರುವುದರಿಂದ ಪ್ರವಾಸಿಗರು ಅಪೂರ್ಣ ಯಾತ್ರೆಯ ಮೂಲಕ ವಾಪಸ್ಸಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.

ಬುಕ್ಕಿಂಗ್‌ ತೆರೆದಿಲ್ಲ: ಈ ಬಾರಿಯ ಚಾರ್‌ಧಾಮ್‌ ಯಾತ್ರೆಗೆ ಕೇವಲ 33 ದಿನಗಳ ಕಾಲಾವಕಾಶ ಮಾತ್ರ ನೀಡಲಾಗಿದೆ. ಇದರಿಂದ ದೇಶಾದ್ಯಂತ ಪ್ರವಾಸಿಗರು ಚಾರ್‌ಧಾಮ್‌ ಯಾತ್ರೆಗೆ ಆನ್‌ಲೈನ್‌ ಬುಕ್ಕಿಂಗ್‌ಗೆ ಕಾಯುತ್ತಿದ್ದಾರೆ. ಈಗಾಗಲೇ ಅ.15 ರವರೆಗಿನ ಬುಕ್ಕಿಂಗ್‌ ಪೂರ್ಣಗೊಂಡಿದೆ. ಅ.15ರ ನಂತರದ ಬುಕ್ಕಿಂಗ್‌ ಅನ್ನು ವೆಬ್‌ಸೈಟ್‌ ತೆರೆದಿಲ್ಲ. ಬುಕ್ಕಿಂಗ್‌ಗಾಗಿ ದೇಶಾದ್ಯಂತ ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ. ಆನ್‌ಲೈನ್‌ ಬುಕ್ಕಿಂಗ್‌ ಆರಂಭವಾದ ಕಾರಣಕ್ಕೆ ಚಾರ್‌ಧಾಮ್‌ ಯಾತ್ರೆ ಆರಂಭವಾದರೂ, ಪ್ರವಾಸಿಗರು ಉತ್ತರಾಖಂಡ ಸರಕಾರದ ಬಿಗಿ ನಿಲುವಿನಿಂದಾಗಿ ಯಾತ್ರೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲದಂತಾಗಿದೆ. ಆನ್‌ಲೈನ್‌ ಬುಕ್ಕಿಂಗ್‌ ಇಲ್ಲದೆ ನೇರವಾಗಿ ಚಾರ್‌ಧಾಮ್‌ ಯಾತ್ರೆ ಮಾಡಲು ತೆರಳಿರುವವರು ಮತ್ತಷ್ಟು ಸಂಕಷ್ಟಗಳಿಗೆ ಸಿಲುಕಿಕೊಂಡು ನಿರಾಸೆ ಅನುಭವಿಸುತ್ತಿದ್ದಾರೆ. ಇದರಿಂದ ಕರ್ನಾಟಕದಿಂದ ಪ್ರವಾಸಿಗರು ಆನ್‌ ಲೈನ್‌ ಬುಕ್ಕಿಂಗ್‌ ಸಿಕ್ಕಿತೆಂದು ಪ್ರವಾಸ ಹೊರಡಲು ಸಿದ್ಧರಾಗುವ ಮುನ್ನ ಪ್ರವಾಸಕ್ಕೆ ಎದುರಾಗುತ್ತಿರುವ ಅಡೆತಡೆಗಳ ಬಗ್ಗೆಯೂ ಅರಿತುಕೊಳ್ಳಬೇಕಾಗಿದೆ.

ಎರಡು ವರ್ಷಗಳ ನಂತರ ಅನುಮತಿ ಸಿಕ್ಕಿತೆಂದು ಕರ್ನಾಟಕದಿಂದ ಮೊದಲ ತಂಡವನ್ನು ಚಾರ್‌ಧಾಮ್‌ ಪ್ರವಾಸಕ್ಕೆ ಕರೆತಂದಿದ್ದು, ಉತ್ತರಾಖಂಡ ಸರ್ಕಾರದ ಬಿಗಿ ಕ್ರಮಗಳ ಜೊತೆಗೆ ಸ್ಥಳೀಯ ಪ್ರವಾಸಿಗರಿಗೆ ಹೆಚ್ಚಿನ ಅವಕಾಶ ಸಿಗುತ್ತಿರುವುರಿಂದ ದೂರದ ರಾಜ್ಯಗಳಿಂದ ಬಂದರಿವವರು ಯಮನೋತ್ರಿ ಗಡಿಯಲ್ಲೇ ಪರದಾಡುವಂತಾಗಿದೆ.
-ಎಸ್‌.ಸುಧಾಕರ್‌, ಪ್ರವಾಸಿ ಮಾರ್ಗದರ್ಶಿ.
ಕೋಲಾರ.

ಆನ್‌ಲೈನ್‌ಬುಕ್ಕಿಂಗ್‌ ಸೇರಿ ಎಲ್ಲಾ ದಾಖಲಾತಿ, ಅನುಮತಿಗಳಿದ್ದರೂ ಪ್ರವಾಸ ವಿಳಂಬವಾಗುತ್ತಿದೆ. ಸೀಮಿತ ಸಂಖ್ಯೆಯ ಪ್ರವಾಸಿಗರಿಗೆ ಇದ್ದ ಅವಕಾಶವನ್ನು ಸ್ಥಳೀಯರು ಬಳಸಿಕೊಳ್ಳುತ್ತಿರುವುದರಿಂದ ಕರ್ನಾಟಕ ಸೇರಿ ಹೊರರಾಜ್ಯಗಳ ತಂಡಗಳ ಪ್ರವಾಸ ವೇಳಾಪಟ್ಟಿಯಲ್ಲಿ ಏರುಪೇರುಂಟಾಗಿ ನಿರಾಸೆ ಅನುಭವಿಸುವಂತಾಗಿದೆ.
-ಕದಂಬ ಸೋಮಣ್ಣ, ಕರ್ನಾಟಕದಿಂದ
ತೆರಳಿರುವ ಪ್ರವಾಸಿಗ

– ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

ಶತಕೋಟಿ  ಡೋಸ್‌ ದಾಖಲೆ

ಶತಕೋಟಿ ಡೋಸ್‌ ದಾಖಲೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chinthamani news

ನಗರಸಭೆ ಜೆ.ಇ ಪ್ರಸಾದ್ ವಿರುದ್ಧ ಗರಂ ಆದ ಸದಸ್ಯ ಜೈ ಭೀಮ್ ಮುರಳಿ

Protest against cancellation of BPL card

ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದ್ದಕ್ಕೆ  ಪ್ರತಿಭಟನೆ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ: ಆಸ್ಪತ್ರೆಯ ಐಸಿಯು ಘಟಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ

ಗಾಳಿಯಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಗಾಳಿಯಲ್ಲಿ ಗುಂಡು ಹಾರಿಸಿ ಉತ್ಸವಕ್ಕೆ ಚಾಲನೆ

ಕೋಲಾರ ದಸರಾ

ಕೋಲಾರದಲ್ಲಿ ಸಂಭ್ರಮದ ವಿಜಯದಶಮಿ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

ದಾಖಲೆ ಡೋಸ್‌:  ಆರೋಗ್ಯ ಕ್ಷೇತ್ರದಲ್ಲಿ ಹೊಸ ಮನ್ವಂತರ

ದಾಖಲೆ ಡೋಸ್‌: ಆರೋಗ್ಯ ಕ್ಷೇತ್ರದಲ್ಲಿ ಹೊಸ ಮನ್ವಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.