ಸೋಂಕು ಹರಡದಂತೆ ಕ್ರಮ ಕೈಗೊಳ್ಳಿ


Team Udayavani, Jun 13, 2020, 6:15 AM IST

sonku-krama

ಕೋಲಾರ: ಕೋವಿಡ್‌-19 ಸಂಕಷ್ಟದ ನಡುವೆ ಜಿಲ್ಲೆಯ 72 ಕೇಂದ್ರಗಳಲ್ಲಿ 20906 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಯಾವುದೇ ಗೊಂದಲ, ಸಮಸ್ಯೆಗಳು ಎದುರಾ ಗದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಹಕಾರ  ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚನೆ ನೀಡಿದರು. ತಮ್ಮ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಶುಕ್ರವಾರ ಜೂ.25 ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧ ಕೈಗೊಳ್ಳಬೇಕಿರುವ ಪೂರ್ವಸಿದತೆ  ಕುರಿತು ಚರ್ಚಿಸಲು ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ತಾಗದಂತೆ ಎಲ್ಲಾ ಎಚ್ಚರಿಕಾ ಕ್ರಮ ಕೈಗೊಂಡು ಜಿಲ್ಲೆಗೆ ಕಪ್ಪುಚುಕ್ಕೆ ಬಾರದಂತೆ ಚುನಾವಣಾ ಕಾರ್ಯದ  ರೀತಿಯಲ್ಲಿ ಪರೀಕ್ಷೆ ನಡೆಸಿ ಉತ್ಕೃಷ್ಟತೆಗೆ ಸಾಕ್ಷಿಯಾಗೋಣ ಎಂದು ಹೇಳಿದರು.

ಕೆಎಸ್ಸಾರ್‌ಟಿಸಿ, ಬೆಸ್ಕಾಂಗೆ ಸೂಚನೆ: ಜೂ.18 ರಂದು ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಹಾಗೂ ಜೂ.25 ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ  ಸಂದರ್ಭದಲ್ಲಿ ನಿರಂತರ ವಿದ್ಯುತ್‌ ಪೂರೈಕೆಗೆ ಬೆಸ್ಕಾಂ ಎಇ ಸುಬ್ರಮಣಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ ಓಡಿಸಲು ಸಾರಿಗೆ ಸಂಸ್ಥೆಗೆ ಸೂಚಿಸಿದಾಗ ಇದಕ್ಕೆ ಉತ್ತರಿಸಿದ ಸಾರಿಗೆ ಸಂಸ್ಥೆ ಡೀಸಿ ಚಂದ್ರಶೇಖರ್‌, ಶಿಕ್ಷಣ ಇಲಾಖೆ ಡಿಡಿಪಿಐ ಅವರು ಯಾವ ಮಾರ್ಗದಲ್ಲಿ ಬಸ್ಸಿನ ಅಗತ್ಯವಿದೆ ಎಂದು   ಅಂಕಿಅಂಶ ನೀಡಿದಲ್ಲಿ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಥರ್ಮಲ್‌ ಸ್ಕ್ಯಾನರ್‌: ಡಿಡಿಪಿಐ ಕೆ.ರತ್ನಯ್ಯ ಮಾತನಾಡಿ, ಪರೀಕ್ಷಾ ಕೇಂದ್ರದಲ್ಲಿ ಪ್ರತಿ 200 ಮಂದಿಗೆ ಒಂದು ಥರ್ಮಲ್‌ ಸ್ಕ್ಯಾನರ್‌ ಇಟ್ಟಿರುವ ಕುರಿತು ತಿಳಿಸಿದಾಗ ಮತ್ತೂಂದು ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದ ಡೀಸಿಯವರು  ನಗರ ವ್ಯಾಪ್ತಿಯ 34 ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೆ„ಸ್‌ ಮಾಡಿಸಿಕೊಡಲು ನಗರಾಭಿವೃದಿಟಛಿ ಯೋಜನಾ ನಿರ್ದೇಶಕ ರಂಗಸ್ವಾಮಿಗೆ ಸೂಚಿಸಿ, ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂಗಳು ಈ ಕಾರ್ಯ ನಡೆಸಲು ತಾಪಂ ಇಒಗೆ  ಆದೇಶಿಸಿದರು.ಡಿಡಿ ಪಿಐ ರತ್ನಯ್ಯ ಮಾಹಿತಿ ನೀಡಿ, ಎಲ್ಲಾ ದೈಹಿಕ ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನೇಮಿಸಿ ಕೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವರು ಶ್ರಮಿಸುವರು ಎಂದು ತಿಳಿಸಿದರು.

ಸಭೆಯಲ್ಲಿ ವೀಕ್ಷಕ  ರಘುನಾಥರೆಡ್ಡಿ, ಪರೀಕ್ಷಾ  ನೋಡಲ್‌ ಅಧಿಕಾರಿ ಎ.ಎನ್‌. ನಾಗೇಂದ್ರ ಪ್ರಸಾದ್‌, ಡಿವೈಪಿಸಿ ಮೋಹನ್‌ ಬಾಬು, ಇಒ ಸಿ.ಆರ್‌.ಅಶೋಕ್‌, ಬಿಇಒಗಳಾದ ಕೆ.ಎಸ್‌ .ನಾಗರಾಜಗೌಡ, ಕೆಂಪಯ್ಯ, ಉಮಾದೇವಿ, ಗಿರಿಜೇಶ್ವರಿದೇವಿ,  ಕೃಷ್ಣಮೂರ್ತಿ, ಶಂಕರ್‌ ಕಾವಲಿ, ಬಿಆರ್‌ಸಿ ರಾಮಕೃಷ್ಣಪ್ಪ, ಎವೈಪಿಸಿ ಸಿದ್ದೇಶ್‌, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯತ್ರಿ, ತಾಲೂಕು ನೋಡಲ್‌ ಅಧಿಕಾರಿಗಳಾದ ಸಿ.ಎಂ.ವೆಂಕಟರಮಣಪ್ಪ,  ಮುನಿರತ್ನಯ್ಯಶೆಟ್ಟಿ, ಶ್ರೀನಿವಾಸ್‌, ಅಂಜಿತಾ,  ತಿಮ್ಮರಾಯಪ್ಪ, ಬಾಬಾಜಾನ್‌, ಸಿರಾಜುದ್ದೀನ್‌,  ತಾಪಂನ ಕಾಮತ್‌, ರೋಟರಿ ಸಂಸ್ಥೆಯ  ವಿ.ಪಿ.ಸೋಮಶೇಖರ್‌, ಜಿ.ಶ್ರೀನಿವಾಸ್‌, ಆರ್‌.ಶ್ರೀನಿವಾಸನ್‌, ತಹಶೀಲ್ದಾರರು, ತಾಪಂ ಇಒ ಸಭೆಯಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

heavy rain; holiday for schools in dharwad

ಮುಂದುವರಿದ ಮಳೆ: ಧಾರವಾಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

11 ಕೋಟಿ ರೂ. ಆಸ್ತಿ ದಾನ ಮಾಡಿದ ಕುಟುಂಬ: ಕಾರಣವೇನು ಗೊತ್ತೇ?

astrology

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಸಿದ ಶಾಲೆ: ಮರದ ಕೆಳಗೆ ಮಕ್ಕಳಿಗೆ ಪಾಠ

ಕುಸಿದ ಶಾಲೆ: ಮರದ ಕೆಳಗೆ ಮಕ್ಕಳಿಗೆ ಪಾಠ

ಬೆಲೆ ಏರಿಕೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ಮಳೆ ಆರ್ಭಟಕ್ಕೆ ನಷ್ಟವಾಗಿರುವ ಬೆಳೆ ಸಮೀಕ್ಷೆ ನಡೆಸಿ

ಮಳೆ ಆರ್ಭಟಕ್ಕೆ ನಷ್ಟವಾಗಿರುವ ಬೆಳೆ ಸಮೀಕ್ಷೆ ನಡೆಸಿ

ಅಧಿಕಾರಿಗಳ ಕಿರುಕುಳ: ಆತ್ಮಹತ್ಯೆಗೆ ರೈತರ ನಿರ್ಧಾರ

ಅಧಿಕಾರಿಗಳ ಕಿರುಕುಳ: ಆತ್ಮಹತ್ಯೆಗೆ ರೈತರ ನಿರ್ಧಾರ

Untitled-1

ಪತ್ರಕರ್ತರ ಹೊರಗಿಟ್ಟು ಕೆಡಿಪಿ ಸಭೆ ನಡೆಸಿದ ಸಚಿವ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

bc-road

ಬಿ.ಸಿ.ರೋಡ್‌: ನೀರಲ್ಲೇ ಬಸ್‌ಗೆ ಕಾಯಬೇಕಾದ ಸ್ಥಿತಿ

manikkara

ಅಂದು ಬಿಸಿಲಾಯಿತು ಇಂದು ಮಳೆಗೆ ಒದ್ದೆಯಾಗಿ ಪಾಠ ಕೇಳುವ ಸ್ಥಿತಿ

kallumutlu

ವಿವಿಧೆಡೆ ಮುಂದುವರಿದ ಮಳೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.