Udayavni Special

ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿ: ಮುನಿಸ್ವಾಮಿ


Team Udayavani, Sep 6, 2020, 1:56 PM IST

ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿ: ಮುನಿಸ್ವಾಮಿ

ಕೋಲಾರ: ದೇಶಕ್ಕೆ ಅಮೂಲ್ಯ ಮಾನವ ಸಂಪನ್ಮೂಲ ನೀಡುವ ಗುರುಗಳ ಆಶಯ, ಶಿಷ್ಯರ ಅಭ್ಯುದಯವಾಗಿದ್ದು, ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೆ ಸರಕಾರದ ಮೇಲೆ ಒತ್ತಡ ತರುವುದಾಗಿ ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ನಗರದ ಸ್ಕೌಟ್ಸ್‌ ಭವನದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

ಶಿಕ್ಷಕರು ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ, ಅವರ ಕುಟುಂಬದಲ್ಲಿ ಗಂಡ ಒಂದು ಕಡೆ ಪತ್ನಿ ಒಂದು ಕಡೆಯಿದ್ದರೆ ಮಾನಸಿಕ ನೆಮ್ಮದಿ ಸಾಧ್ಯವೆ ಎಂದ ಅವರು, ವರ್ಗಾವಣೆ ನೀತಿಯ ಮೂಲಕ ಶಿಕ್ಷಕರು ಖುಷಿಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿ ಅಗತ್ಯ ಎಂದು ವಿವರಿಸಿದರು. ಗುರುಭವನ ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಕಳೆದ ಬಾರಿ ನೀಡಿದ ಭರವಸೆಯಂತೆ ಈಗಾಗಲೇ ಪಿಡಬ್ಲ್ಯೂಡಿ ಹಳೆ ಕಟ್ಟಡಗಳ ನೆಲಸಮಕ್ಕೆ ಮುಂದಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸುವುದಾಗಿ ನುಡಿದರು. ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಮೆಕಾಲೆ ಶಿಕ್ಷಣ ಪದ್ಧತಿ ಕೈಬಿಟ್ಟು, ದಾಸ್ಯದಿಂದ ಹೊರ ಬಂದು ಬಲಿಷ್ಠ ಭಾರತಕ್ಕಾಗಿ ಮೋದಿ ಜಾರಿಗೆ ತಂದಿರುವ 5+3+4ರ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಶಿಕ್ಷಕರು ಸಜ್ಜಾಗಬೇಕು ಎಂದು ಸಲಹೆ ನೀಡಿದರು.

50 ಸಾವಿರ ರೂ.: ವಿಧಾನಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಮುಂದಿನ ವರ್ಷದಿಂದ ಉತ್ತಮ ಶಿಕ್ಷಕರ ಆಯ್ಕೆಯಲ್ಲಿ ಜಿಲ್ಲೆಯ ಓರ್ವ ಶಿಕ್ಷಕರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದರು.

ವೃತ್ತಿಘನತೆ ಉಳಿಸಿಕೊಳ್ಳಿ: ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಶಿಕ್ಷಕರು ವಿದ್ಯಾಗಮದಡಿ ಹಳ್ಳಿಗಳಿಗೆ ಹೋಗಿ ಕಲಿಸುತ್ತಿದ್ದಾರೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಉತ್ಸಾಹದಿಂದ ಪಾಲ್ಗೊಂಡಿದ್ದೀರಿ ಎಂದು ಅಭಿನಂದಿಸಿದರು. ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ತಾವು ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಆಗ್ರಹಿಸುತ್ತಿದ್ದು, ನನ್ನ ಆಗ್ರಹಕ್ಕೆ ಇದೀಗ ಮನ್ನಣೆ ಸಿಕ್ಕಿದೆ ಎಂದು ತಿಳಿಸಿದರು.

ಈ ವೇಳೆ 57 ನಿವೃತ್ತ ಶಿಕ್ಷಕರು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ 18 ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಶ್ರೀನಿವಾಸಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ, ಶಿಕ್ಷಣಾಧಿಕಾರಿ ಎ.ಎನ್‌

.ನಾಗೇಂದ್ರಪ್ರಸಾದ್‌, ಸಿ.ಆರ್‌.ಅಶೋಕ್‌, ಬಿಇಒ ನಾಗರಾಜಗೌಡ, ಡಿವೈಪಿಸಿ ಮೋಹನ್‌ ಬಾಬು, ವಿಷಯ ಪರಿವೀಕ್ಷಕರಾದ ಶಶಿವಧನ, ಕೃಷ್ಣಪ್ಪ, ಗಾಯತ್ರಿ, ವೆಂಕಟೇಶಪ್ಪ, ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್‌, ಶಿಕ್ಷಕ ಸಂಘಟನೆಗಳ ಮುಖಂಡರಾದ ಕೆ.ವಿ.ಜಗನ್ನಾಥ್‌, ರುದ್ರಪ್ಪ, ಅನಿಲ್‌ಕುಮಾರ್‌, ಜಿ.ಶ್ರೀನಿವಾಸ್‌, ಶಂಕರಪ್ಪ, ಖಾಸಗಿ ಶಾಲೆಗಳ ರಾಜ್ಯ ಉಪಾಧ್ಯಕ್ಷ ಎಸ್‌.ಮುನಿಯಪ್ಪ ಮತ್ತಿತರರಿದ್ದರು.

ಟಾಪ್ ನ್ಯೂಸ್

ಕೋಲ್ಕತಾಕ್ಕೆ  ಶರಣಾದ ಮುಂಬೈ

ಕೋಲ್ಕತಾಕ್ಕೆ  ಶರಣಾದ ಮುಂಬೈ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ಮೇಕಪ್‌ ಸಾಮಗ್ರಿ ಕ್ಷೇತ್ರಕ್ಕೆ ರಿಲಯನ್ಸ್‌ ಲಗ್ಗೆ?

ಮೇಕಪ್‌ ಸಾಮಗ್ರಿ ಕ್ಷೇತ್ರಕ್ಕೆ ರಿಲಯನ್ಸ್‌ ಲಗ್ಗೆ?

ಲೋಕಸಭೆ ಸ್ಪೀಕರ್‌ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಲೋಕಸಭೆ ಸ್ಪೀಕರ್‌ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಮೋದಿ ವಿಚಾರದಲ್ಲಿ ಬಿಎಸ್‌ವೈ ಹೊಗಳಿಕೆ ಸಿದ್ದರಾಮಯ್ಯ ತೆಗಳಿಕೆ

ಮೋದಿ ವಿಚಾರದಲ್ಲಿ ಬಿಎಸ್‌ವೈ ಹೊಗಳಿಕೆ ಸಿದ್ದರಾಮಯ್ಯ ತೆಗಳಿಕೆ

ಬಳಸಿದ ಮಾಸ್ಕನ್ನೇ ಇನ್ನೊಬ್ಬರಿಗೆ ಹಾಕಿದ್ರು!

ಬಳಸಿದ ಮಾಸ್ಕನ್ನೇ ಇನ್ನೊಬ್ಬರಿಗೆ ಹಾಕಿದ್ರು!





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂಲಸೌಲಭ್ಯ ಒದಗಿಸಲು ವಿಶೇಷ ಅನುದಾನ ನೀಡಿ

ಮೂಲಸೌಲಭ್ಯ ಒದಗಿಸಲು ವಿಶೇಷ ಅನುದಾನ ನೀಡಿ

ಬಗರ್‌ಹುಕುಂ ಅರ್ಜಿ ವರ್ಗಾವಣೆ ವಿಳಂಬ

ಬಗರ್‌ಹುಕುಂ ಅರ್ಜಿ ವರ್ಗಾವಣೆ ವಿಳಂಬ

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

ನಾಡಕಛೇರಿಯ ವಿದ್ಯುತ್ ಸಂಪರ್ಕ ಕಡಿತ : ವಿದ್ಯಾರ್ಥಿಗಳು, ಪಿಂಚಣಿ ಆರ್ಜಿದಾರರ ಪರದಾಟ

kolara news

ಮೇಕೆದಾಟು ಯೋಜನೆಗೆ ಅವಳಿ ಜಿಲ್ಲೆ ಸೇರಿಸಿ

ಜೆಡಿಎಸ್‌ ಉಚ್ಛಾಟಿಸಿದೆ, ಕಾಂಗ್ರೆಸ್‌ ಸೇರುತ್ತೇನೆ

ಜೆಡಿಎಸ್‌ ಉಚ್ಛಾಟಿಸಿದೆ, ಕಾಂಗ್ರೆಸ್‌ ಸೇರುತ್ತೇನೆ

MUST WATCH

udayavani youtube

ಚರಂಡಿಯಲ್ಲಿ ಬಿದ್ದಿದ್ದ ಹೋರಿ ರಕ್ಷಣೆ

udayavani youtube

ಈ ಅಂಗಡಿಯಲ್ಲಿ ದೊರೆಯುವ ಎಲ್ಲಾ ಸಾಮಗ್ರಿಗಳು ಶೇ.100 ರಷ್ಟು ರಾಸಾಯನಿಕ ರಹಿತ!

udayavani youtube

LIVE : ವಿಧಾನಸಭೆ​ ಕಲಾಪ ನೇರ ಪ್ರಸಾರ | 15th Assembly | 10th Session | 23-09-2021

udayavani youtube

ಮಹಿಳೆಯಿಂದ ಮಸಾಜ್‌ ಮಾಡಿಸಿಕೊಂಡ ಶಿಕ್ಷಕ ಅಮಾನತು|

udayavani youtube

ಉಡುಪಿ ಮುಳುಗುತ್ತಾ ?

ಹೊಸ ಸೇರ್ಪಡೆ

Untitled-2

ಬಿ.ಸಿ.ರೋಡ್‌- ಪುಂಜಾಲಕಟ್ಟೆ ಹೆದ್ದಾರಿ: ಗಡುವು ಮುಗಿದರೂ ಪರಿಹಾರ ಇನ್ನೂ ಕೈ ಸೇರಿಲ್ಲ

Untitled-2

ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ 

ಕೋಲ್ಕತಾಕ್ಕೆ  ಶರಣಾದ ಮುಂಬೈ

ಕೋಲ್ಕತಾಕ್ಕೆ  ಶರಣಾದ ಮುಂಬೈ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.