ಜಿಲ್ಲೆಯ ಮನ್ಸೂರೆ ನಿರ್ದೇಶಿಸಿದ ಚಿತ್ರಕ್ಕೆ ಐದು ರಾಷ್ಟ್ರ ಪ್ರಶಸ್ತಿ ಗರಿ

Team Udayavani, Aug 10, 2019, 2:20 PM IST

ಕೋಲಾರ: ಜಿಲ್ಲೆಯ ಮನ್ಸೂರೆ ನಿರ್ದೇಶಿಸಿದ ನಾಚಿಚರಾಮಿ ಕನ್ನಡ ಚಿತ್ರವು 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಐದು ಪ್ರಶಸ್ತಿ ಗಳನ್ನು ಬಾಚಿಕೊಂಡಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮ ಮೂಲದ ಮನ್ಸೂರೆ (ಮಂಜುನಾಥರೆಡ್ಡಿ) ತಾನು ನಿರ್ದೇ ಶಿಸಿದ ಮೊಟ್ಟ ಮೊದಲ ಚಿತ್ರ ಹರಿವು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಕನ್ನಡ ಚಿತ್ರವೆಂಬ ಪ್ರಶಸ್ತಿಗೆ ಪಾತ್ರವಾ ಗಿತ್ತು. ಇದೀಗ ಮನ್ಸೂರೆ ನಿರ್ದೇಶಿಸಿ ರುವ ಎರಡನೇ ಚಿತ್ರ ನಾತಿ ಚರಾಮಿಗೆ ಒಟ್ಟು ಐದು ಪ್ರಶಸ್ತಿಗಳು ದೊರಕಿರು ವುದು ಜಿಲ್ಲೆಯ ಅವರ ಬಂಧು ಮಿತ್ರ ಬಳಗಕ್ಕೆ ಸಂಭ್ರಮಕ್ಕೆ ಕಾರಣವಾಗಿದೆ.

ನಾತಿಚರಾಮಿ ಚಲನ ಚಿತ್ರವು ಪ್ರಾದೇಶಿಕ ಭಾಷೆಗಳಲ್ಲಿ ಅತ್ಯುತ್ತಮ ಕನ್ನಡ ಚಿತ್ರ, ಶ್ರೇಷ್ಠ ಉಲ್ಲೇಖ ವಿಶೇಷ ಪಾತ್ರ ಪ್ರಶಸ್ತಿಗೆ ಚಿತ್ರದ ನಾಯಕಿ ಶ್ರುತಿ ಹರಿಹರನ್‌, ಶ್ರೇಷ್ಠಗಾಯಕಿಯಾಗಿ ಬಿಂದು ಮಾಲಿನಿ, ಶ್ರೇಷ್ಠ ಗೀತರಚನೆ ಕಾರ ಹಾಗೂ ಶ್ರೇಷ್ಠ ಸಂಕಲನಕಾರ ಪ್ರಶಸ್ತಿಗಳನ್ನು ನಾಚಿಚರಾಮಿ ಬಾಚಿ ಕೊಂಡಿದೆ. ತಾವು ನಿರ್ದೇಶಿಸಿದ ನಾತಿಚರಾಮಿ ಚಲನ ಚಿತ್ರವು ಐದು ಪ್ರಶಸ್ತಿ ಗ ಳನ್ನು ಗೆದ್ದುಕೊಂಡಿ ದ್ದರೂ, ಇದರ ಸಂಭ್ರಮ ದಲ್ಲಿ ತೊಡಗದೆ ತಮ್ಮ ಗೆಳೆಯರ ಸಂಸ್ಕೃತಿ ಚಾರಿಟಬಲ್ ಟ್ರಸ್ಟ್‌ ಮೂಲಕ ಉತ್ತರ ಕರ್ನಾ ಟಕವನ್ನು ಉಳಿಸಿ ಹೆಸರಿನಲ್ಲಿ ನೆರೆ ಸಂತ್ರಸ್ಥರಿಗೆ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿ ಸುವ ಕಾಯಕ ದಲ್ಲಿ ಮನ್ಸೂರೆ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಬದ್ಧತೆ ಮೆರೆ ಯುತ್ತಿರು ವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.


ಈ ವಿಭಾಗದಿಂದ ಇನ್ನಷ್ಟು

  • ಟೇಕಲ್‌: ಕಳೆದ ವಾರ 60 ರಿಂದ 80 ರೂ. ಇದ್ದ ಈರುಳ್ಳಿ ಬೆಲೆ ಈಗ 1 ಕೆ.ಜಿ. 90 ರೂ.ರಿಂದ 160 ರೂ.ವರೆಗೂ ಮಾರಾಟವಾಗುತ್ತಿದ್ದು, ಗ್ರಾಮೀಣ ಜನರು ತತ್ತರಿಸಿದ್ದಾರೆ. ಈರುಳ್ಳಿ ಬೆಲೆ...

  • ಮುಳಬಾಗಿಲು: ನಗರಸಭೆ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಸಂಬಂಧ ಈಗಾಗಲೇ ತಾಲೂಕು ಆಡಳಿತ 5 ಕಿ.ಮೀ. ವ್ಯಾಪ್ತಿಯನ್ನು ನಿರ್ಧರಿಸಿದೆ. ಆದರೆ, ನಿಗದಿ ಮಾಡಿರುವ ವ್ಯಾಪ್ತಿಗೆ...

  • ಕೋಲಾರ: ಜಿಲ್ಲೆಯಲ್ಲಿ 6 ಖರೀದಿ ಕೇಂದ್ರ ತೆರೆದು ಪ್ರತಿ ಕ್ವಿಂಟಾಲ್‌ಗೆ 3150 ರೂ. ಬೆಂಬಲ ಬೆಲೆ ನೀಡಿ ರೈತರಿಂದ ರಾಗಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ....

  • ಮುಳಬಾಗಿಲು: ಹಾಲಿನ ಉಷ್ಣಾಂಶ 28 ಡಿಗ್ರಿ ಬರಲಿಲ್ಲವೆಂದು ಚಿಕ್ಕಗೊಲ್ಲಹಳ್ಳಿ ಗ್ರಾಮದಲ್ಲಿ ಉತ್ಪಾದನೆಯಾಗುವ 6 ಕ್ಯಾನ್‌ ಹಾಲನ್ನೇ ತೆಗೆದುಕೊಳ್ಳದ ಸಂಘದ ಕಾರ್ಯವೈಖರಿ...

  • ಬೇತಮಂಗಲ/ಕೆಜಿಎಫ್: ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಬಿಳ್ಳೇರಳ್ಳಿ, ಬೇತಮಂಗಲ ಮಾರ್ಗದಲ್ಲಿ 8 ಆನೆಗಳ ಹಿಂಡು ಕಾಣಿಸಿಕೊಂಡು, ರೈತರು ಬೆಳೆದಿದ್ದ ಹುರುಳಿ, ಟೊಮೆಟೋ...

ಹೊಸ ಸೇರ್ಪಡೆ