ನಾಳೆಯಿಂದ ಅವಳಿ ಜಿಲ್ಲೆ ಮಾರ್ಗದಲ್ಲಿ ರೈಲು ಸಂಚಾರ

ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಅನುಕೂಲ , ಮಾರ್ಚ್‌ ತಿಂಗಳಿಂದ ಸ್ಥಗಿತಗೊಂಡಿದ್ದ ರೈಲು

Team Udayavani, Jan 3, 2021, 2:05 PM IST

ನಾಳೆಯಿಂದ ಅವಳಿ ಜಿಲ್ಲೆ ಮಾರ್ಗದಲ್ಲಿ ರೈಲು ಸಂಚಾರ

ಕೋಲಾರ/ಚಿಕ್ಕಬಳ್ಳಾಪುರ: ಕೋವಿಡ್ ಸೋಂಕು ಕಾರಣದಿಂದ 2020 ಮಾರ್ಚ್‌ 23 ರಿಂದ ಸ್ಥಗಿತಗೊಂಡಿದ್ದ ಡೆಮು ರೈಲು ಸಂಚಾರ 2021ರ ಜ.4 ಸೋಮವಾರದಿಂದ ಆರಂಭವಾಗುತ್ತಿದೆ.

ರೈಲ್ವೆ ಇಲಾಖೆಯು ಈಗಾಗಲೇ ಜಿಲ್ಲೆಯ ಮಾರಿಕುಪ್ಪಂನಿಂದ ಬೆಂಗಳೂರಿಗೆ ಡೆಮು ರೈಲುಸಂಚಾರ ಡಿಸೆಂಬರ್‌ನಲ್ಲಿ ಆರಂಭಿಸಿದ್ದು, ಇದೀಗಬಂಗಾರಪೇಟೆಯಿಂದ ಕೋಲಾರ ಮತ್ತುಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಗಳ ಮೂಲಕಬೆಂಗಳೂರಿನ ಯಶವಂತಪುರ, ಮೆಜೆಸ್ಟಿಕ್‌ ಹಾಗೂಕಂಟೋನ್ಮೆಂಟ್‌ ರೈಲು ನಿಲ್ದಾಣಗಳಿಗೆ ಸಂಚಾರ ಆರಂಭವಾಗಲಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಮೂಲಕ ಎರಡು ರೈಲುಗಳ ಬಂದು ಹೋಗುವ ಸಂಚಾರ ಆರಂಭಿಸಲು ನಿರ್ಧರಿಸಿರುವ ರೈಲ್ವೆ ಇಲಾಖೆಯು ಭಾನುವಾರ ಹೊರತುಪಡಿಸಿಪ್ರತಿದಿನದ ವೇಳಾಪಟ್ಟಿ ಪ್ರಕಟಿಸಿದೆ.

ಮಾರ್ಗ-1: ರೈಲು ಸಂಖ್ಯೆ 06270 ಪ್ರತಿದಿನ ಬೆಳಗ್ಗೆ 5.30 ಕ್ಕೆ ಬಂಗಾರಪೇಟೆ ಬಿಟ್ಟು ಕೋಲಾರ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಳಗ್ಗೆ 9.25ಕ್ಕೆಯಶವಂತಪುರ ರೈಲು ನಿಲ್ದಾಣ ಸೇರುತ್ತದೆ. ಈ ರೈಲಕೋಲಾರವನ್ನು 5.50 ತಲುಪಿ 6 ಕ್ಕೆ ಬಿಡಲಿದೆ. ಚಿಕ್ಕಬಳ್ಳಾಪುರವನ್ನು 7.53 ಕ್ಕೆ ಬಿಟ್ಟು 7.55 ಕ್ಕೆ ಬಿಡಲಿದೆ.

ಮಾರ್ಗ-2: ರೈಲು ಸಂಖ್ಯೆ 06279 ಪ್ರತಿ ದಿನ ಬೆಳಗ್ಗೆ 8.30 ಕ್ಕೆ ಬೆಂಗಳೂರು ಯಶವಂತಪುರ ರೈಲು ನಿಲ್ದಾಣ ಬಿಟ್ಟು ಬಂಗಾರಪೇಟೆ ಮಧ್ಯಾಹ್ನ 12.30ಕ್ಕೆತಲುಪಲಿದೆ. ಚಿಕ್ಕಬಳ್ಳಾಪುರ ನಿಲ್ದಾಣ 9.45 ಕ್ಕೆ ತಲುಪಿ9.55 ಕ್ಕೆ ಬಿಡಲಿದೆ. ಕೋಲಾರವನ್ನು 11.28 ಕ್ಕೆ ತಲುಪಿ 11.30 ಕ್ಕೆ ಬಿಡಲಿದೆ.

ಮಾರ್ಗ-3: ರೈಲು ಸಂಖ್ಯೆ 0680 ಪ್ರತಿ ನಿತ್ಯವೂ ಸಂಜೆ 4 ಗಂಟೆಗೆ ಬಂಗಾರಪೇಟೆ ಬಿಟ್ಟುರಾತ್ರಿ 8.20 ಕ್ಕೆ ಬೆಂಗಳೂರುಮೆಜೆಸ್ಟಿಕ್‌ ತಲುಪಲಿದೆ. ಈರೈಲು ಕೋಲಾರವನ್ನು 4.22 ಕ್ಕೆತಲುಪಿ 4.23 ಕ್ಕೆ ಬಿಡಲಿದೆ.ಚಿಕ್ಕಬಳ್ಳಾಪುರ 6.07 ಕ್ಕೆ ತಲುಪಿ 6.08 ಕ್ಕೆ ಬಿಡಲಿದೆ.

ಮಾರ್ಗ-4: ರೈಲು ಸಂಖ್ಯೆ 06269 ಪ್ರತಿ ನಿತ್ಯವೂ ಸಂಜೆ 5.55 ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ರೈಲುನಿಲ್ದಾಣ ಬಿಟ್ಟು ರಾತ್ರಿ 9.45 ಕ್ಕೆ ಬಂಗಾರಪೇಟೆತಲುಪಲಿದೆ. ಚಿಕ್ಕಬಳ್ಳಾಪುರವನ್ನು ರಾತ್ರಿ 7.28 ಕ್ಕೆತಲುಪಿ 7.30 ಕ್ಕೆ ಬಿಡಲಿದೆ. ಕೋಲಾರವನ್ನು ರಾತ್ರಿ 9.10 ತಲುಪಿ 9.12 ಕ್ಕೆ ಬಿಡಲಿದೆ.

ಪ್ರಯಾಣಿಕರಿಗೆ ಅನುಕೂಲ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ರೈಲುಗಳಸಂಚಾರವಾಗುವುದು ನಿತ್ಯವೂ ಸರ್ಕಾರಿ ಮತ್ತುಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ತೆರಳುವ ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ.ಹಾಗೆಯೇ ತಾವು ಬೆಳೆದ ತರಕಾರಿಗಳನ್ನು ರೈಲುಮೂಲಕ ಬೆಂಗಳೂರು ಮಾರುಕಟ್ಟೆಗೆ ಸಾಗಿಸಲು ರೈತಾಪಿ ವರ್ಗಕ್ಕೂ ಪ್ರಯೋಜನಕಾರಿಯಾಗಿದೆ.ಜೊತೆಗೆ ಬಸ್‌ಗಳಲ್ಲಿ 70 ರಿಂದ 80 ರೂ.ಟಿಕೆಟ್‌ ಖರೀದಿಸಿ ಪ್ರಯಾಣಿಸಲು ಕಷ್ಟವಾಗುವ ಬಡ ಹಾಗೂ ಸಾಮಾನ್ಯ ವರ್ಗದ ಪ್ರಯಾಣಿಕರುಇದಕ್ಕಿಂತಲೂಕಡಿಮೆ ಮೊತ್ತದಲ್ಲಿ ಬಂಗಾರಪೇಟೆಯಿಂದ ಬೆಂಗಳೂರಿನ ನಿಲ್ದಾಣಗಳಿಗೆ ಹೋಗಿ ವಾಪಸ್‌ ಬರಲು ಅನುಕೂಲವಾಗುತ್ತದೆ.

ಸಿದ್ಧತೆಗಳೇನು?: ಸತತ ಒಂಬತ್ತು ತಿಂಗಳಿನಿಂದಲೂಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಈಹಿನ್ನೆಲೆಯಲ್ಲಿ ಹೊಸದಾಗಿ ರೈಲು ಸಂಚಾರ ಆರಂಭವಾಗುತ್ತಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ

ಇಲಾಖೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ. ಟ್ರ್ಯಾಕ್‌ ಸುರಕ್ಷತೆ ಖಚಿತಪಡಿಸಿಕೊಳ್ಳಲು ರೈಲುಗಳ ಓಡಾಟ ಸ್ಥಗಿತಗೊಂಡಿದ್ದಾಗಲೂ ಪ್ರತಿ ಹದಿನೈದುದಿನಗಳಿಗೊಮ್ಮೆ ಟ್ರಯಲ್‌ ರೈಲುಗಳ ಸಂಚಾರ ನಡೆಸಿಟ್ರ್ಯಾಕ್‌ ಸುರಕ್ಷತೆ ದೃಢಪಡಿಸಿಕೊಳ್ಳಲಾಗುತ್ತಿತ್ತು.ಇದೀಗ ಪ್ರಯಾಣಿಕರ ಓಡಾಟ ಆರಂಭವಾಗುವಹಿನ್ನೆಲೆಯಲ್ಲಿ ಸ್ಟೇಷನ್‌ ಮಾಸ್ಟರ್‌ಗಳು ಕಡ್ಡಾಯವಾಗಿಫೇಸ್‌ ಮಾಸ್ಕ್ ಧರಿಸಿಯೇ ಟಿಕೆಟ್‌ ನೀಡಬೇಕೆಂದು ಸೂಚಿಸಲಾಗಿದೆ.

ಹಾಗೆಯೇ ಪ್ರಯಾಣಿಕರು ಸಾಮಾನ್ಯವಾಗಿ ಇರುವ ಕೋವಿಡ್‌ಮಾರ್ಗಸೂಚಿಗಳಾದ ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಇತ್ಯಾದಿಗಳನ್ನು ತಪ್ಪದೇ ಬಳಸಲುಸೂಚಿಸಲಾಗಿದೆ.

ಒಟ್ಟಾರೆ ಕೋಲಾರ ಚಿಕ್ಕಬಳ್ಳಾಪುರ ಮಾರ್ಗದಲ್ಲಿಮತ್ತೇ ರೈಲುಗಳ ಸಂಚಾರ ಆರಂಭವಾಗುತ್ತಿರುವುದುಅವಿಭಜಿತ ಕೋಲಾರ ಜಿಲ್ಲೆಯ ನೂರಾರು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ

ಒಂಬತ್ತು ತಿಂಗಳ ನಂತರ ಕೋಲಾರ ಮತ್ತುಚಿಕ್ಕಬಳ್ಳಾಪುರ ಮಾರ್ಗದಲ್ಲಿ ಡೆಮುರೈಲುಗಳ ಸಂಚಾರ ಆರಂಭವಾಗಲಿದೆ. ಕೋವಿಡ್‌ಮಾರ್ಗಸೂಚಿಗಳ ಪ್ರಕಾರ ಸುರಕ್ಷತೆಗೆ ಮಾರ್ಗಸೂಚಿ ಬಂದಿದೆ. ಜೋಡಿಜಿಲ್ಲೆಯ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರಯೋಜನ ಪಡೆಯಲು ಕೋರಿದೆ. – ಅಮರೇಶ್‌, ಸ್ಟೇಷನ್‌ ಮಾಸ್ಟರ್‌

ಕೋಲಾರ ಮತ್ತು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಡೆಮು ರೈಲುಗಳ ಸಂಚಾರಆರಂಭವಾಗುತ್ತಿರುವುದು ಸಂತೋಷ. ಬಡವರು ಮತ್ತು ವ್ಯಾಪಾರಿ, ಕೃಷಿಕರು ತಮ್ಮ ಸರಕುಸಾಗಾಣಿಕೆಗಾಗಿ ಸುಲಭ ದರದಲ್ಲಿ ಬೆಂಗಳೂರಿಗೆ ಹೋಗಿ ಬರಲು ಅನುಕೂಲವಾಗುತ್ತದೆ. ಕೋಲಾರದಿಂದ ಬೆಳಗ್ಗೆ 7 ಗಂಟೆ ವೇಳೆಗೆಮತ್ತೂಂದು ರೈಲು ಸಂಚಾರ ಆರಂಭಿಸಿದರೆಮತ್ತಷ್ಟು ಅನುಕೂಲವಾಗುತ್ತದೆ. – ಚಾನ್‌ಪಾಷಾ, ರೈಲ್ವೆ ಪ್ರಯಾಣಿಕರು. ಕೋಲಾರ

 

 -ಕೆ.ಎಸ್‌.ಗಣೇಶ್‌/ತಮೀಮ್‌ ಪಾಷ

ಟಾಪ್ ನ್ಯೂಸ್

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿರ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

covid-1

ರಾಜ್ಯದಲ್ಲಿ ಕಡಿಮೆಯಾಗುತ್ತಿರುವ ಕೋವಿಡ್ ಪ್ರಕರಣಗಳು : ಇಂದು 49 ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆದ್ದಾರಿ ರಸ್ತೆ ವಿಭಜಕ ನಾಶ: ಅಧಿಕಾರಿಗಳ ಮೌನ

ಹೆದ್ದಾರಿ ರಸ್ತೆ ವಿಭಜಕ ನಾಶ: ಅಧಿಕಾರಿಗಳ ಮೌನ

ಬಂಗಾರಪೇಟೆ: ಹೆಚ್ಚಿದ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ

ಬಂಗಾರಪೇಟೆ: ಹೆಚ್ಚಿದ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ

ಶಾಸಕ, ತಹಶೀಲ್ದಾರ್‌ ವಾಗ್ವಾದ ಆಡಿಯೋ ವೈರಲ್‌

ಶಾಸಕ, ತಹಶೀಲ್ದಾರ್‌ ವಾಗ್ವಾದ ಆಡಿಯೋ ವೈರಲ್‌

ಕೆಲಸ ಒಬ್ಬರದು, ಪ್ರಚಾರ ಪಡೆಯುತ್ತಿರುವುದು ಇನ್ನೊಬ್ಬರು

ಕೆಲಸ ಒಬ್ಬರದು, ಪ್ರಚಾರ ಪಡೆಯುತ್ತಿರುವುದು ಇನ್ನೊಬ್ಬರು

1500 ಕೋಟಿ ರೂ.ಬೆಳೆ ಸಾಲಕ್ಕೆ ಬೇಡಿಕೆ

1500 ಕೋಟಿ ರೂ.ಬೆಳೆ ಸಾಲಕ್ಕೆ ಬೇಡಿಕೆ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಮನೆಗಳಿಂದ ಅಸಮರ್ಪಕ ತ್ಯಾಜ್ಯ ಸಂಗ್ರಹ 

ಮನೆಗಳಿಂದ ಅಸಮರ್ಪಕ ತ್ಯಾಜ್ಯ ಸಂಗ್ರಹ 

ನೂತನ ಕಿಂಡಿ ಅಣೆಕಟ್ಟಿನಿಂದ ಸಮೃದ್ಧ ಜಲ

ನೂತನ ಕಿಂಡಿ ಅಣೆಕಟ್ಟಿನಿಂದ ಸಮೃದ್ಧ ಜಲ

ಕಿಂಡಿ ಅಣೆಕಟ್ಟಿನ ನಿರ್ವಹಣೆ: ಜಲ ಸಂರಕ್ಷಣೆಗೆ ಪೂರಕ

ಕಿಂಡಿ ಅಣೆಕಟ್ಟಿನ ನಿರ್ವಹಣೆ: ಜಲ ಸಂರಕ್ಷಣೆಗೆ ಪೂರಕ

ಇಂದು ಪಾಲಿಕೆ ಬಜೆಟ್‌: ಬಹುನಿರೀಕ್ಷೆಯ ಲೆಕ್ಕಾಚಾರ

ಇಂದು ಪಾಲಿಕೆ ಬಜೆಟ್‌: ಬಹುನಿರೀಕ್ಷೆಯ ಲೆಕ್ಕಾಚಾರ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.