ಠೇವಣಿ ಸಂಗ್ರಹ ಗಂಭೀರವಾಗಿ ಪರಿಗಣಿಸಿ
Team Udayavani, Mar 30, 2021, 5:00 PM IST
ಕೋಲಾರ: ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಬ್ಯಾಂಕಿಂಗ್ ವಹಿವಾಟು,ಗಣಕೀಕರಣ, ಮೊಬೈಲ್ ಬ್ಯಾಂಕಿಂಗ್, ಮೈಕ್ರೋ ಎಟಿಎಂ ಎಲ್ಲದರಲ್ಲೂ ಅಪ್ರತಿಮಸಾಧನೆ ಮಾಡಿದೆ. ಕುಂಠಿತಗೊಂಡಿರುವ ಠೇವಣಿ ಸಂಗ್ರಹವನ್ನು ಗಂಭೀರವಾಗಿಪರಿಗಣಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿಗೆ ನಬಾರ್ಡ್‌ಎಜಿಎಂ ನಟರಾಜನ್ ಕಿವಿಮಾತು ಹೇಳಿದರು.
ಸೋಮವಾರ ಬ್ಯಾಂಕಿನ ಸಭಾಂಗಣದಲ್ಲಿ ಆರ್ಥಿಕ ವರ್ಷದ ಕೊನೆಯ ಜಿಲ್ಲಾ ಮಟ್ಟದ ಟಾಸ್ಕ್ಪೋರ್ಸ್ ಸಭೆಯಲ್ಲಿ ಭಾಗವಹಿಸಿ, ಬ್ಯಾಂಕಿನ ಪ್ರಗತಿ ಪರಿಶೀಲನೆ ನಡೆಸಿ ಅವರುಮಾತನಾಡಿ, ಕಳೆದ ಏಳೂವರೆ ವರ್ಷಗಳಹಿಂದೆ ಈ ಬ್ಯಾಂಕ್ ಕಥೆ ಮುಗಿಯಿತು ಎಂದೇ ಭಾವಿಸಲಾಗಿತ್ತು. ಆದರೆ, ಇದೀಗಬ್ಯಾಂಕ್ ಅತ್ಯಂತ ವೇಗವಾಗಿ ಬೆಳೆಯುವಮೂಲಕ ದೇಶದ ಸಹಕಾರ ವ್ಯವಸ್ಥೆಯೇ ಇತ್ತ ತಿರುಗಿ ನೋಡುವಂತೆ ಮಾಡಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕಿಗೆ ಅತ್ಯುತ್ತಮ ಸ್ಥಾನ:ಬ್ಯಾಂಕಿನ ಈ ಸಾಧನೆಯಲ್ಲಿ ಡಿಸಿಸಿ ಬ್ಯಾಂಕ್ ಮತ್ತು ಈ ವ್ಯಾಪ್ತಿಯ ಎಲ್ಲಾ ಪ್ಯಾಕ್ಸ್‌ಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪರಿಶ್ರಮಶ್ಲಾಘನೀಯ. ಇಂದು ಕೋಲಾರ ಡಿಸಿಸಿಬ್ಯಾಂಕ್ ಅತ್ಯುತ್ತಮ ಸ್ಥಾನದಲ್ಲಿದೆ. ಇದುಹೀಗೆ ಮುಂದುವರಿಯಲು ಠೇವಣಿಸಂಗ್ರಹ, ವೈಯಕ್ತಿಕ ಖಾತೆಗಳನ್ನುತೆರೆಯುವುದು, ಸಹಕಾರ ಸಂಘಗಳ ಖಾತೆಗಳನ್ನು ಹೆಚ್ಚಿಸುವುದು ಅಗತ್ಯವಾಗಿದೆ. ನೀವು ಇಡುವ ಪ್ರತಿ ಹೆಜ್ಜೆ ಎಚ್ಚರದಿಂದಿಡಿ,ಠೇವಣಿ ಹೆಚ್ಚಳದಿಂದ ಬ್ಯಾಂಕಿನ ಪ್ರಗತಿಮತ್ತಷ್ಟು ಹೆಚ್ಚಲಿದೆ ಎಂಬ ಸತ್ಯ ಅರಿತು ಕೆಲಸ ಮಾಡಿ ಎಂದರು.
ಪ್ರತಿ ಕುಟುಂಬಕ್ಕೂ ಬ್ಯಾಂಕ್ ಸೇವೆ ಗುರಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದಗೌಡ ಮಾತನಾಡಿ, ಬ್ಯಾಂಕಿಂಗ್‌ನಲ್ಲಿ ಪಾರದರ್ಶಕ ವಹಿವಾಟಿಗೆ ಏನೆಲ್ಲಾಸಾಧ್ಯವೋ ಅದೆಲ್ಲವನ್ನು ಶಕ್ತಿ ಮೀರಿಮಾಡಿದ್ದೇವೆ. ಆದರೆ, ಠೇವಣಿ ಸಂಗ್ರಹದಲ್ಲಿನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿ, ಇದನ್ನು ಗಂಭೀರವಾಗಿಪರಿಗಣಿಸುವುದಾಗಿ ತಿಳಿಸಿದರು.
ಎರಡು ಜಿಲ್ಲೆಗಳ ಪ್ರತಿ ಕುಟುಂಬಕ್ಕೂಡಿಸಿಸಿ ಬ್ಯಾಂಕಿನ ಸೇವೆ ತಲುಪಬೇಕು. ಆಗಮಾತ್ರ ತೃಪ್ತಿ ಸಿಗಲು ಸಾಧ್ಯ. ಸಾಲಕ್ಕಾಗಿಮಾತ್ರ ಡಿಸಿಸಿ ಬ್ಯಾಂಕ್ ಕಡೆ ಬರುವ ಜನಠೇವಣಿಯನ್ನೂ ಇಲ್ಲೇ ಇಡುವಂತಾದರೆ, ಮತ್ತಷ್ಟು ಬಡವರಿಗೆ ನೆರವಾಗಲು ಸಾಧ್ಯವಿದೆ ಎಂದರು.
ಬ್ಯಾಂಕಿನ ಋಣ ತೀರಿಸುವ ಪ್ರಯತ್ನ ಮಾಡಿ: ದಿವಾಳಿಯಾಗಿದ್ದ ಬ್ಯಾಂಕನ್ನುಇಂದು ಉಳಿಸಿ ಬೆಳೆಸಲಾಗಿದೆ. ಸಿಬ್ಬಂದಿಗೆಉತ್ತಮ ವೇತನ ನೀಡುತ್ತಿದ್ದೇವೆ. ಆರೋಗ್ಯವಿಮಾ ಸೌಲಭ್ಯ ಕಲ್ಪಿಸಿದ್ದೇವೆ. ಎಲ್ಲಾರೀತಿಯ ಸೌಕರ್ಯಗಳು ಸಿಕ್ಕ ನಂತರವೂನೀವು ಬ್ಯಾಂಕಿನ ಋಣ ತೀರಿಸುವ ಪ್ರಯತ್ನ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿ, ಈಬಾರಿಯಾದರೂ ಠೇವಣಿ ಸಂಗ್ರಹಕ್ಕೆ ಒತ್ತುನೀಡಿ ಎಂದು ತಾಕೀತು ಮಾಡಿದರು.
ಬ್ಯಾಂಕಿನ ಶಕ್ತಿ ಹೆಚ್ಚಿಸಿ: ಬ್ಯಾಂಕಿನ ಉಪಾಧ್ಯಕ್ಷ ಎ.ನಾಗರಾಜ್ ಮಾತನಾಡಿ, ನಾವು ಅಧಿ ಕಾರ ವಹಿಸಿಕೊಂಡಾಗ ಮುಳುಗಿದ್ದ ಸಂಸ್ಥೆಗೆಇವರು ನೇತೃತ್ವ ಎಂದು ಹೀಗಳೆದವರಿದ್ದರು.ಆದರೆ, ಇಂದು ಬ್ಯಾಂಕ್ ಬಗ್ಗೆ ಟೀಕಿಸಿದವರೇಇಂದು ಗೌರವದಿಂದ ಕಾಣುವಂತೆ ಬ್ಯಾಂಕ್ ಬೆಳೆದಿದೆ ಎಂದರು.
ಸಿಬ್ಬಂದಿ ಸಾಲ ನೀಡಿಕೆ, ಸಾಲ ವಸೂಲಾತಿಗೆ ಸೀಮಿತವಾಗದೇ ಠೇವಣಿ ಸಂಗ್ರಹಿ ಸುವ ಮೂಲಕ ಬ್ಯಾಂಕಿನ ಶಕ್ತಿ ಹೆಚ್ಚಿಸಬೇಕುಎಂದು ಸಲಹೆ ನೀಡಿದ ಅವರು, ಬ್ಯಾಂಕಿನಎನ್‌ಪಿಎ ಕಡಿಮೆಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕ ಚೆನ್ನರಾ ಯಪ್ಪ, ಎಂಡಿ ವೆಂಕಟೇಶ್, ಎಜಿಎಂಗಳಾದಬೈರೇಗೌಡ, ಶಿವಕುಮಾರ್,ನಾಗೇಶ್, ಖಲೀಮುಲ್ಲಾ ಮತ್ತಿತರರು ಹಾಜರಿದ್ದರು.