ಚಿಂದಿ ಆಯುತ್ತಿದ್ದ ವೃದ್ಧ ರಸ್ತೆ ಬದಿಯಲ್ಲಿ ಸಾವು
Team Udayavani, May 13, 2021, 5:59 PM IST
ಮಾಸ್ತಿ: ಚಿಂದಿ ಆಯ್ದುಕೊಂಡು ಜೀವನ ಸಾಗಿಸುತ್ತಿದ್ದ ವೃದ್ಧನೊಬ್ಬ ರಸ್ತೆ ಬದಿಯಲ್ಲಿ ಮೃತಪಟ್ಟಿರುವ ಘಟನೆ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 65 ವರ್ಷದ ಮೃತ ವೃದ್ಧ ಚಿಂದಿ ಆಯ್ದು ಮಾರಾಟ ಮಾಡಿ, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಟೇಕಲ್ ಭಾಗದ ಬಸ್ ತಂಗುದಾಣ ಗಳಲ್ಲಿ ರಾತ್ರಿ ಕಳೆಯುತ್ತಿದ್ದ ಎನ್ನಲಾಗಿದೆ.
ಮಂಗಳವಾರ ಹುಳದೇನಹಳ್ಳಿಯಲ್ಲಿ ಪ್ಲಾಸ್ಟಿಕ್, ಇನ್ನಿತರೆ ಚಿಂದಿ ಆಯ್ದುಕೊಂಡು ತನ್ನ ಸೈಕಲ್‌ನಲ್ಲಿ ತುಂಬಿಕೊಂಡು ಟೇಕಲ್ ಕಡೆಗೆ ಹೊರಟಿದ್ದಾನೆ. ಸಂಜೆ ವೆಂಕಟರಾಜನಹಳ್ಳಿ ಕ್ರಾಸ್ ಸಮೀಪ ರಸ್ತೆ ಬದಿಯಲ್ಲಿ ಸೈಕಲ್ ಸಮೇತ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ ಎಂದು ಮಾಸ್ತಿ ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ವೃದ್ಧನಿಗೆ ವಾರಸುದಾರರು ಯಾರು ಇಲ್ಲದ ಕಾರಣ ಬುಧವಾರ ಮಾಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ, ಪುರಸಭೆ ವತಿಯಿಂದ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.