Udayavni Special

ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ: ಗ್ರಾಮಸ್ಥರ ಒತ್ತಾಯ


Team Udayavani, Feb 22, 2021, 2:57 PM IST

ಕಾಡು ಪ್ರಾಣಿಗಳ ಹಾವಳಿ ತಪ್ಪಿಸಿ: ಗ್ರಾಮಸ್ಥರ ಒತ್ತಾಯ

ಮಾಸ್ತಿ: ನೆರೆಯ ತಮಿಳುನಾಡು ಗಡಿಗೆ ಹೊಂದಿ ಕೊಂಡಿರುವ ಮಾಸ್ತಿ ಹೋಬಳಿಯ ಗೊಡಗಹಳ್ಳಿ ಗ್ರಾಮದಲ್ಲಿ ಮಾಲೂರು ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹಲವಾರು ಸಮಸ್ಯೆಗಳು ಅನಾವರಣಗೊಂಡ ಪ್ರಸಂಗ ನಡೆಯಿತು.

ತಹಶೀಲ್ದಾರ್‌ ಎಂ.ಮಂಜುನಾಥ್‌ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹದಗೆಟ್ಟ ರಸ್ತೆ, ಕೆಲವು ಮೂಲ ಸೌಲಭ್ಯ ಕೊರತೆಸೇರಿದಂತೆ ಹಲವಾರು ಸಮಸ್ಯೆಗಳ ಜೊತೆಗೆ ಕಾಡುಪ್ರಾಣಿಗಳ ಹಾವಳಿಯಿಂದ ಆತಂಕದಲ್ಲೇ ಜೀವನ ನಡೆಸುತ್ತಿರುವ ಗ್ರಾಮಸ್ಥರು, ತಾವು ಎದುರಿಸುತ್ತಿ ರುವ ಸಮಸ್ಯೆಗಳ ಕುರಿತು ಅಧಿಕಾರಿಗಳ ಮುಂದೆಅನಾವರಣಗೊಳಿಸುವ ಮೂಲಕ ಗಮನ ಸೆಳೆದರು.

ಇಂದಿಗೂ ಬಸ್‌ ಸೌಕರ್ಯ ಕೇಳುವ ದುಸ್ಥಿತಿ:  ದಿನ್ನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಮಮತಾರೆಡ್ಡಿ ಮಾತನಾಡಿ, ಕಾಡಾನೆ, ಕರಡಿ, ಚಿರತೆ ಸೇರಿದಂತೆ ಮತ್ತಿತರ ಕಾಡು ಪ್ರಾಣಿಗಳ ಹಾವಳಿ ಈ ಭಾಗದಲ್ಲಿ ಸಾಮಾನ್ಯವಾಗಿದೆ. ಆನೆ ಕಾರಿಡಾರ್‌ ನಿರ್ಮಾಣ ಮತ್ತಿತರ ಮೂಲಕ ಶಾಶ್ವತ ಪರಿಹಾರ ಕೈಗೊಳ್ಳುವುದಾಗಿ ಹೇಳಲಾಗುತ್ತಿದೆಯಾದರೂ, ಅನುಷ್ಠಾನಕ್ಕೆ ಬಂದಿಲ್ಲ. ಬಸ್‌ ವ್ಯವಸ್ಥೆಗಾಗಿ ಕೇಳುವ ದುಸ್ಥಿತಿ ಬಂದೊದಗಿದೆ ಎಂದರು.

ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಗಡಿ ಗ್ರಾಮವಾದ ಗೊಡಗಹಳ್ಳಿ ಗ್ರಾಮಕ್ಕೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸರ್ಕಾರದಿಂದ ರೈತರು, ಬಡ ಜನತೆಗೆ ಸಿಗುವಸವಲತ್ತುಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಶಾಸಕ ಕೆ.ವೈ.ನಂಜೇಗೌಡ ತಾಕೀತು ಮಾಡಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮಧ್ಯಾಹ್ನದ ನಂತರ ಆಗಮಿಸಿ ಗೊಡಗಹಳ್ಳಿಯಲ್ಲಿ ಸಂಚರಿಸಿ,ಸಮಸ್ಯೆಗಳನ್ನು ಆಲಿಸಿ ನಂತರ ಮಾತನಾಡಿದ ಅವರು, ಗೊಡಗಹಳ್ಳಿಯಲ್ಲಿ ಕಾಡಾನೆಗಳು ಸೇರಿದಂತೆ ಕಾಡು ಪ್ರಾಣಿಗಳಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸರ್ಕಾರಕ್ಕೆ ಸಮರ್ಪಕವಾದ ಮಾಹಿತಿ ನೀಡಿ ಸಹಕರಿಸುವಂತೆ ಸ್ಥಳದಲ್ಲಿದ್ದ ಅರಣ್ಯಾಧಿಕಾರಿ ಸುಧಾಕರ ಅವರಿಗೆ ಸೂಚನೆ ನೀಡಿದಕ್ಕೆ, ಕಾಡಾನೆಗಳ ಹಾವಳಿ ತಪ್ಪಿಸಲು ಬ್ಯಾರಿಕೇಡ್‌ ನಿರ್ಮಾಣಕ್ಕೆ ಪ್ರಸ್ತಾವನೆ ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ. ಕೋವಿಡ್‌ಕಾರಣದಿಂದಾಗಿ ಅನುದಾನ ಬಿಡುಗಡೆಯಾಗಿಲ್ಲ ಎಂದು ಉತ್ತರ ನೀಡಿದರು.

ತಹಶೀಲ್ದಾರ್‌ ಎಂ.ಮಂಜುನಾಥ್‌, ತಾಪಂ ಇಒ ಕೃಷ್ಣಪ್ಪ, ಜಿಪಂ ಸದಸ್ಯ ಎಚ್‌.ವಿ.ಶ್ರೀನಿವಾಸ್‌, ಗ್ರಾಪಂ ಅಧ್ಯಕ್ಷೆ ಉಮಾ ಜಲಂಧರ್‌, ಉಪಾಧ್ಯಕ್ಷೆಸುಧಾ, ತಾಲೂಕು ವೈದ್ಯಾಧಿಕಾರಿ ಡಾ.ಪ್ರಸನ್ನ,ಡಿಸಿಸಿ ಬ್ಯಾಂಕ್‌ ನಿರ್ದೇಶಕ ಚನ್ನರಾಯಪ್ಪ, ಸಹಾಯಕ ಕೃಷಿ ನಿರ್ದೇಶಕ ಚಂದ್ರಪ್ಪ, ಬಿಇಒಕೃಷ್ಣಮೂರ್ತಿ, ಜಿಪಂ ಎಇಇ ವೆಂಕಟೇಶ್‌, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಹಾವು ಪ್ರತ್ಯಕ್ಷ: ಶಾಸಕ ಕೆ.ವೈ.ನಂಜೇಗೌಡ ಅವರು ಗ್ರಾಮದಲ್ಲಿ ಸಂಚರಿಸಿ, ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತು ಮಾತನಾಡುತ್ತಿದ್ದಂತೆಸ್ಥಳದಲ್ಲಿ ಹಾವು ಪ್ರತ್ಯಕ್ಷಗೊಂಡು ನೆರೆದಿದ್ದವರಲ್ಲಿಆತಂಕಕ್ಕೆ ಕಾರಣವಾಯಿತು. ಅರಣ್ಯ ಅಧಿಕಾರಿಗಳು ಹಾವು ಹಿಡಿದು ಹೊರಗೆ ಬಿಟ್ಟ ಪ್ರಸಂಗ ನಡೆಯಿತು.

ಟಾಪ್ ನ್ಯೂಸ್

ಮೈದಾನಕ್ಕೆ ಸರ್ದಾರ್ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರಿಟ್ಟಿದ್ದು ಸರಿಯಲ್ಲ: ಉಗ್ರಪ್ಪ

ಮೈದಾನಕ್ಕೆ ಸರ್ದಾರ್ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರಿಟ್ಟಿದ್ದು ಸರಿಯಲ್ಲ: ಉಗ್ರಪ್ಪ

Sony TV

ಮಾರುಕಟ್ಟೆಗೆ ಸೋನಿ ಬ್ರಾವಿಯಾ ಟಿವಿ ಲಗ್ಗೆ, Bravia A8H ವಿಶೇಷತೆ ಏನು ?

ಚಳಿಗಾಲದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ: ಸಚಿವ ಧರ್ಮೇಂದ್ರ ಪ್ರಧಾನ್

ಚಳಿಗಾಲದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ: ಸಚಿವ ಧರ್ಮೇಂದ್ರ ಪ್ರಧಾನ್

k-s-eshwarappa

ತೈಲ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ: ಈಶ್ವರಪ್ಪ

Sun glass For summer

ಬೇಸಿಗೆಯಲ್ಲಿ ಕಣ್ಣುಗಳ ರಕ್ಷಣೆಗೆ ಟ್ರೆಂಡಿ ಸನ್ ಗ್ಲಾಸ್ ..!  

Alcohal

ಅತೀಯಾದ ‘ಮದ್ಯ’ ಸೇವನೆಯಿಂದ ‘ಸ್ತನ ಕ್ಯಾನ್ಸರ್’ ..ಮಹಿಳೆಯರೇ ಹುಷಾರ್   

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tamilunadu

ತರಬೇತಿಗೆ 2 ತಿಂಗಳ ಹಸುಗೂಸುವಿನೊಂದಿಗೆ ಬಂದ ಗ್ರಾಪಂ ಸದಸ್ಯೆ!

Crushar

ಕೋಲಾರ ಅಧಿಕಾರಿಗಳಿಂದ ಕ್ರಷರ್‌, ಕ್ವಾರಿ ಮಾಲೀಕರ ಸಭೆ

ಕೃಷಿ ಕಾಯ್ದೆ ತಿದ್ದುಪಡಿ ತಿರಸ್ಕರಿಸಲು ಆಗ್ರಹ

ಕೃಷಿ ಕಾಯ್ದೆ ತಿದ್ದುಪಡಿ ತಿರಸ್ಕರಿಸಲು ಆಗ್ರಹ

ಗ್ರಾಮ ಪಂಚಾಯ್ತಿ ಸದಸ್ಯರಿಗೆ 2ನೇ ಬಾರಿ ತರಬೇತಿ

ಗ್ರಾಮ ಪಂಚಾಯ್ತಿ ಸದಸ್ಯರಿಗೆ 2ನೇ ಬಾರಿ ತರಬೇತಿ

ಕೆರೆ, ಕಲ್ಯಾಣಿ, ಪುಷ್ಕರಣಿ ಸುಂದರಗೊಳಿಸಿ

ಕೆರೆ, ಕಲ್ಯಾಣಿ, ಪುಷ್ಕರಣಿ ಸುಂದರಗೊಳಿಸಿ

MUST WATCH

udayavani youtube

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

udayavani youtube

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ

udayavani youtube

ಕೋಟ್ಟಾ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿ ವಿರೋಧಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ

udayavani youtube

ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

udayavani youtube

ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ

ಹೊಸ ಸೇರ್ಪಡೆ

ಮೈದಾನಕ್ಕೆ ಸರ್ದಾರ್ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರಿಟ್ಟಿದ್ದು ಸರಿಯಲ್ಲ: ಉಗ್ರಪ್ಪ

ಮೈದಾನಕ್ಕೆ ಸರ್ದಾರ್ ಪಟೇಲ್ ಹೆಸರು ಬದಲಾಯಿಸಿ ಮೋದಿ ಹೆಸರಿಟ್ಟಿದ್ದು ಸರಿಯಲ್ಲ: ಉಗ್ರಪ್ಪ

Sony TV

ಮಾರುಕಟ್ಟೆಗೆ ಸೋನಿ ಬ್ರಾವಿಯಾ ಟಿವಿ ಲಗ್ಗೆ, Bravia A8H ವಿಶೇಷತೆ ಏನು ?

Sun and life

ಸೂರ್ಯನಂತೆ ಹೊಳೆಯಲು ಮೊದಲು ಉರಿಯಬೇಕು

Tagor

ಭಾರತದ ಕಿರೀಟಕ್ಕೆ ನೊಬೆಲ್‌ ಗರಿ ತಂದುಕೊಟ್ಟ ರವೀಂದ್ರನಾಥ ಠಾಗೋರ್‌

1,800 ಕೋಟಿ ರೂ. ಮೊತ್ತದ ಟೆಂಡರ್‌ ರದ್ದು ವಿಚಾರ: ಸಚಿವ ಸುಧಾಕರ್ ಗೆ ಹೈಕೋರ್ಟ್ ನೋಟಿಸ್

1,800 ಕೋಟಿ ರೂ. ಮೊತ್ತದ ಟೆಂಡರ್‌ ರದ್ದು ವಿಚಾರ: ಸಚಿವ ಸುಧಾಕರ್ ಗೆ ಹೈಕೋರ್ಟ್ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.