ಬೇತಮಂಗಲ ಪಾಲಾರ್‌ ಕೆರೆಗೆ ನೀರು: ಶೀಘ್ರ ಭರ್ತಿ


Team Udayavani, Sep 13, 2020, 4:30 PM IST

ಬೇತಮಂಗಲ ಪಾಲಾರ್‌ ಕೆರೆಗೆ ನೀರು: ಶೀಘ್ರ ಭರ್ತಿ

ಬೇತಮಂಗಲ: ಜಿಲ್ಲೆಗೆ ಎರಡನೇ ಅತಿ ದೊಡ್ಡ ಕೆರೆಯಾದ ಬೇತ ಮಂಗಲ ಪಾಲಾರ್‌ ಕೆರೆಗೆ ಸುತ್ತಮುತ್ತಲಿನ ಕೆರೆಗಳ ಹಾಗೂ ರಾಜ ಕಾಲುವೆಗಳಿಂದ ನೀರು ಹರಿಯುತ್ತಿದ್ದು, ಎಲ್ಲರ ಚಿತ್ತ ಬೇತಮಂಗಲ ಕಡೆ ವಾಲಿದೆ.

ಗ್ರಾಮದ ಪಾಲಾರ್‌ ಕೆರೆಯು 1200ಕ್ಕೂ ಅಧಿಕ ಎಕರೆ ಪ್ರದೇಶ ಹೊಂದಿದ್ದು, ಈ ಕೆರೆ ಚೋಳರ ಕಾಲದಲ್ಲಿ ಕೆಜಿಎಫ್ ಮತ್ತು ಬೇತ ಮಂಗಲ ನಗರಕ್ಕೆ ಕುಡಿಯುವ ನೀರಿಗಾಗಿ ನಿರ್ಮಿಸಲಾಗಿದೆ. ಈ ಕೆರೆ ಒಮ್ಮೆ ತುಂಬಿದರೆ ಕನಿಷ್ಠ 5 ವರ್ಷ ಸಮೃದ್ಧಿಯಿಂದ ಜೀವನ ನಡೆಸುತ್ತಾರೆ.

ಇತ್ತೀಚೆಗೆ ಸತತವಾಗಿ ಮಳೆಯಾಗುತ್ತಿದ್ದು, ಸಣ್ಣ ಕುಂಟೆ, ಕೆರೆಗಳಿಗೆ ಬಹುತೇಕ ನೀರು ಹರಿದಿದ್ದು, ನಲ್ಲೂರು-ಕಳ್ಳಿಕುಪ್ಪ ಗ್ರಾಮದ ಕೆರೆಯ ಕೋಡಿ ಹರಿಯಲು ಕ್ಷಣಗಣನೆ ಶುರುವಾಗಿದೆ. ಈ ಕೆರೆಯ ಆಜು ಬಾಜು ನೀರು ಬೇತಮಂಗಲ ಕೆರೆಗೆ ಬೃಹತ್‌ ಪೈಪ್‌ಗ್ಳಿಂದ ಬರುತ್ತಿದ್ದು,ಸುತ್ತಮುತ್ತಲಿನ ಜನರು ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.ಬೇತಮಂಗಲ ಪಾಲಾರ್‌ ಕೆರೆ ದಶಕಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಿಂದ ಮೂಲಕ ಜಿಲ್ಲೆಯ ರಾಜಕಾಲುವೆಗಳಿಂದ ಈ ಬೇತಮಂಗಲ, ರಾಮಸಾಗರ ಪಾಲಾರ್‌ ಕೆರೆಗಳಿಗೆ ನೀರುಹರಿ ಯುತ್ತಿತ್ತು ಎಂಬ ಇತಿಹಾಸವಿದೆ. ಆದರೆ ಇತ್ತೀಚೆಗೆ ಕೆರೆ,ರಾಜಕಾಲುವೆಗಳು ಒತ್ತುವರಿಯಾದ ಹಿನ್ನೆಲೆ ನೀರು ಬರುತ್ತಿದ್ದ ನಾಲೆಗಳು ಕಣ್ಮರೆಯಾಗಿವೆ.

2017ರ ವರ್ಷಾಂತ್ಯದಲ್ಲಿ ಸುರಿದ ಮಳೆಯಿಂದ ಬೇತಮಂಗಲ ಕೆರೆ ಕೋಡಿ ಹರಿದಿತ್ತು. ಈ ಬಾರಿಯೂ ತುಂಬಿ ಹರಿಯುವ ಲಕ್ಷಣಗಳಿವೆ.ಬ್ರಿಟೀಷರ ಆಳ್ವಿಕೆ ದಿನಗಳಲ್ಲಿ ಈ ಬೇತಮಂಗಲ ಕೆರೆಯ ದಡದಲ್ಲೇ ಇರುವ ನಗರ ನೀರು ಸರಬರಾಜು ಮಂಡಳಿ ಕಚೇರಿ ಹಾಗೂ ಬೃಹತ್‌ ಪ್ರವಾಸಿ ತಾಣವಿದೆ.

ಕೆರೆಗೆ ಕಾಯಕಲ್ಪ: ಶಾಸಕಿ ಎಂ.ರೂಪಕಲಾ ಅವರು ಇತ್ತೀಚೆಗೆ ಗಿಡ ಗಂಟಿಗಳ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಹೆಚ್ಚು ನೀರು ಶೇಖರಣೆಯಾಗಲು ಸಹಕಾರಿಯಾಗಿದೆ. ಶೀಘ್ರ ಕೆ.ಸಿ ವ್ಯಾಲಿ: 1 ತಿಂಗಳೊಳಗೆಈ ಕೆರೆಗೆ ಕೆ.ಸಿ.ವ್ಯಾಲಿ ಯೋಜನೆ ನೀರು ತುಂಬಿಸಲು ಯೋಜನೆ ರೂಪಿಸಿದ್ದು, ಮಳೆ ಹೆಚ್ಚಾದರೆ ವಾರದಲ್ಲಿ ಕೋಡಿ ಹರಿಯಲಿದೆ ಎಂಬ ವಿಶ್ವಾಸವಿದೆ.

ಇಲಾಖೆ ಸಜ್ಜು: 2017ರಲ್ಲಿ ಕೋಡಿ ಹರಿದಾಗ ನೀರು ಪೋಲಾಗಿತ್ತು. ನಂತರ ಇದಕ್ಕೆ ಕ್ರಿಯಾ ಯೋಜನೆ ರೂಪಿಸಿ ಕೆರೆ ಕಟ್ಟೆ ದುರಸ್ತಿ ಮಾಡಿ ನೀರು ಹೆಚ್ಚಾದರೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಈ ಬಗ್ಗೆ ಮತ್ತೂಮ್ಮೆ ಪರಿಶೀಲನೆ ನಡೆಸಿ ಮುನ್ನೆಚ್ಚರಿಕೆ ವಹಿಸಬೇಕೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

 

-ಆರ್‌.ಪುರುಷೋತ್ತಮ್‌ ರೆಡ್ಡಿ

ಟಾಪ್ ನ್ಯೂಸ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

sagara news

ಅಕ್ರಮ ಗೋವು ಕಳ್ಳತನ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

incident held at sagara

ಬಸ್ಸಿಗೆ ಕಾಯುತ್ತಿದ್ದವರಿಗೆ ಢಿಕ್ಕಿ ಹೊಡೆದ ಕಾರು: ಚಾಲಕ ಸಾವು, ಉಳಿದವರ ಸ್ಥಿತಿ ಗಂಭೀರ

ಅಲ್ಪಸಂಖ್ಯಾತರನ್ನು ಮುಗಿಸುವುದೇ ಕುಮಾರಸ್ವಾಮಿ ಗುರಿ: ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

ಅಲ್ಪಸಂಖ್ಯಾತರನ್ನು ಮುಗಿಸುವುದೇ ಕುಮಾರಸ್ವಾಮಿ ಗುರಿ: ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

1-dd

ನಿರುದ್ಯೋಗ ನಿವಾರಣೆಗೊಂದು ಉಪಾಯವಿದೆ: ಡಿಕೆಶಿ ಹೇಳಿದ್ದೇನು ?

GENERAL BIPIN RAWAT

ಅಫ್ಘಾನ್‌ ಪ್ರಭಾವ: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಉಲ್ಬಣಿಸುವ ಎಚ್ಚರಿಕೆ..!

hdk

ನಾನು ಹಿಂದೆ ಕಸ ಸಂಗ್ರಹಿಸುವ ಗುತ್ತಿಗೆ ಪಡೆದು ವ್ಯಾಸಂಗ ಮಾಡಿದವ:ಎಚ್ ಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳಿಸಿ

ತಂತ್ರಜ್ಞಾನದ ಬಗ್ಗೆ ರೈತರಿಗೆ ತಿಳಿಸಿ

ನಕಲಿ food inspector

ಫುಡ್‌ ಇನ್ಸ್‌ಪೆಕ್ಷರ್‌ ಎಂದು ನಂಬಿಸಿ ಮೋಸ

chinthamani news

ನಗರಸಭೆ ಜೆ.ಇ ಪ್ರಸಾದ್ ವಿರುದ್ಧ ಗರಂ ಆದ ಸದಸ್ಯ ಜೈ ಭೀಮ್ ಮುರಳಿ

Protest against cancellation of BPL card

ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದ್ದಕ್ಕೆ  ಪ್ರತಿಭಟನೆ

MUST WATCH

udayavani youtube

ಕುಮ್ಕಿ ಹಕ್ಕು ಅಂದ್ರೇನು?

udayavani youtube

ಉಕ್ಕಿ ಹರಿಯುತ್ತಿದೆ ಚಿಕ್ಕಬಳ್ಳಾಪುರದ ರಂಗಧಾಮ ಕೆರೆ..!

udayavani youtube

ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

1-2-aa’

ಅತಿಯಾದ ಲೈಂಗಿಕ ಗೀಳು: ಸ್ತ್ರೀ ಹಾರ್ಮೋನ್ ಚುಚ್ಚಿಸಿಕೊಂಡ ಸ್ಪೇನ್‌ನ ಮಾಜಿ ರಾಜ !

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

sagara news

ಅಕ್ರಮ ಗೋವು ಕಳ್ಳತನ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

incident held at sagara

ಬಸ್ಸಿಗೆ ಕಾಯುತ್ತಿದ್ದವರಿಗೆ ಢಿಕ್ಕಿ ಹೊಡೆದ ಕಾರು: ಚಾಲಕ ಸಾವು, ಉಳಿದವರ ಸ್ಥಿತಿ ಗಂಭೀರ

23kannada

ಕನ್ನಡಕ್ಕಾಗಿ ಗೀತಗಾಯನ ಅಭಿಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.