Udayavni Special

ಮಹಿಳಾ ಮೀಸಲು ಸದ್ಬಳಕೆ ಮಾಡಿಕೊಳ್ಳಿ: ಗೋವಿಂದಗೌಡ

Team Udayavani, Mar 9, 2021, 5:43 PM IST

ಮಹಿಳಾ ಮೀಸಲು ಸದ್ಬಳಕೆ ಮಾಡಿಕೊಳ್ಳಿ: ಗೋವಿಂದಗೌಡ

ಕೋಲಾರ: ಮೀಸಲಾತಿಗಾಗಿ ಹೋರಾಟ ನಡೆಸುವ ಮಹಿಳೆಯರು ಸಿಕ್ಕ ಅಧಿಕಾರದ ಜವಾಬ್ದಾರಿಯನ್ನು ಪುರುಷರಿಗೆ ವಹಿಸದೇ ಸವಾಲಾಗಿ ಸ್ವೀಕರಿಸಿ ಆಡಳಿತ ನಡೆಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಹರಿಸಿನ, ಕುಂಕುಮ, ಹೂವಿನೊಂದಿಗೆ “ಕಿಸಾನ್‌ ಶ್ರೀಲಕ್ಷ್ಮೀ’ ಠೇವಣಿ ಬಾಂಡ್‌ ವಿತರಿಸಿ ಅವರು ಮಾತನಾಡಿ, ಈಗಾಗಲೇ ಗ್ರಾಪಂ, ತಾಪಂ, ಜಿಪಂಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಇದೆ. ವಿಧಾನಸಭೆ, ಲೋಕಸಭೆಯಲ್ಲೂ ಶೇ.33 ಮೀಸಲಾತಿಗೆ ಒತ್ತಾಯ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಹಲವು ಮಹಿಳೆಯರು ಸಿಕ್ಕ ಅವಕಾಶವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಇಡೀಸಮಾಜವೇ ಒಪ್ಪುವಂತಹ ಜನಪರ ಆಡಳಿತ ನೀಡಿರುವ ಉದಾಹರಣೆಗಳೂ ಇವೆ ಎಂದರು.

ಸ್ಥಾನಮಾನ: ಸಂವಿಧಾನದಡಿ ಪುರುಷರಷ್ಟೇ ಮಹಿಳೆಯರಿಗೂ ಪ್ರತಿ ಕ್ಷೇತ್ರದಲ್ಲೂ ಸ್ಥಾನಮಾನ ಕಲ್ಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಪುರುಷರಷ್ಟೇ ಮಹಿಳೆಯರು ಇರುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಪುರುಷರಿಗೆ ಅಧಿಕಾರದ ಜವಾಬ್ದಾರಿ ವಹಿಸುವುದು ಸರಿಯಲ್ಲ ಎಂದರು.

ನಿಮ್ಮ ಅಧಿಕಾರ ನೀವೇ ಚಲಾಯಿಸಿ: ಸಂವಿಧಾನದಲ್ಲಿ ಮಹಿಳೆಯರಿಗೆ ನೀಡುವ ಮೀಸಲಾತಿ ಸದ್ಬಳಕೆ ಮಾಡಿಕೊಳ್ಳುವಂತಾಗ ಬೇಕು, ರಾಜಕಾರಣದಲ್ಲಿನ ನಿಮಗೆ ಸಿಕ್ಕ ಅಧಿಕಾರವನ್ನು ಪುರುಷ ರಿಗೆ ನೀಡಿ, ಸಂವಿಧಾನಕ್ಕೆ ದ್ರೋಹ ಬಗೆಯಬೇಡಿ. ನಿಮ್ಮ ಅಧಿಕಾರ ನೀವೆ ಚಲಾಯಿಸುವಂತಾದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

ತ್ಯಾಗಮಯಿ ಹೆಣ್ಣು ಸಕಲವೂ ಸ್ತ್ರೀಮಯ: ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ ಕುಮಾರ್‌ ಮಾತನಾಡಿ, ಭಾರತದಲ್ಲಿ ಹೆಣ್ಣನ್ನು ಆದಿಪರಾಶಕ್ತಿ ಎನ್ನುತ್ತಾರೆ. ಭಾರತಾಂಬೆ,ಕನ್ನಡಾಂಬೆ, ನದಿಗಳು, ಭೂಮಿ ಎಲ್ಲವೂ ಸ್ತ್ರೀಮಯವಾಗಿದೆ. ಅಕ್ಕ, ತಂಗಿ, ತಾಯಿಯಾಗಿ ಕುಟುಂಬವನ್ನು ಕಾಪಾಡುವ ಹೆಣ್ಣಿಗೆ ಬದುಕು ರೂಪಿಸಿಕೊಳ್ಳುವ ಶಕ್ತಿ ಇದೆ ಎಂದರು.ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗನಾಳ ಸೋಮಣ್ಣಮಾತನಾಡಿ, ಮಹಿಳೆಯರಿಗೆ ಜವಾಬ್ದಾರಿ ವಹಿಸಿದರೆ ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಬ್ಯಾಂಕ್‌ನಿಂದ ಪಡೆದಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದರು.

ಮಹಿಳೆಯರೆಂದರೆ ಸಾಧಕಿಯರು: ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡುವ ಮೂಲಕಇತರರಿಗೆ ಮಾದರಿಯಾಗಿದ್ದಾರೆ. ಸಾಧಕ ಮಹಿಳೆಯರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.

ಅಣ್ಣಿಹಳ್ಳಿ ಸೊಸೈಟಿ ಅಧ್ಯಕ್ಷ ನಾಗರಾಜ್‌, ಮುದುವಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ರಾಜಮ್ಮ, ಮುಖಂಡ ರಾಮಣ್ಣ, ಎಸ್‌.ವಿ. ಸುಧಾಕರ್‌, ಬ್ಯಾಂಕ್‌ ವ್ಯವಸ್ಥಾಪಕ ಅಂಬರೀಶ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

ಮೊಳಹಳ್ಳಿ: ಹುಂತನ ಕೆರೆಗೆ ಹಾಯಿಸಬೇಕಿದೆ ವಾರಾಹಿ ನೀರು

ಮೊಳಹಳ್ಳಿ: ಹುಂತನ ಕೆರೆಗೆ ಹಾಯಿಸಬೇಕಿದೆ ವಾರಾಹಿ ನೀರು

ಹಡಿಲು ಭೂಮಿ ಸರಕಾರದ ಸುಪರ್ದಿಗೆ: ಕಾಯ್ದೆಯಲ್ಲಿ ಅವಕಾಶ

ಹಡಿಲು ಭೂಮಿ ಸರಕಾರದ ಸುಪರ್ದಿಗೆ: ಕಾಯ್ದೆಯಲ್ಲಿ ಅವಕಾಶ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

ಧೋನಿ ಪಡೆ ಎದುರು ಮುಗ್ಗರಿಸಿದ ರಾಜಸ್ಥಾನ್: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ಚೆನ್ನೈ

ಧೋನಿ ಪಡೆ ಎದುರು ಮುಗ್ಗರಿಸಿದ ರಾಜಸ್ಥಾನ್: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ಚೆನ್ನೈಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Garbage is not disposed

ತಾಯಲೂರಲ್ಲಿ ಕಸ ವಿಲೇವಾರಿ ಮಾಡಿಲ್ಲ

no Treatment for Covid Influencers,

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ, ಆರೈಕೆ ಇಲ್ಲ

Hire staff

ಪಶು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನೇಮಿಸಿ

Foot Path Clearance in KGF

ಕೆಜಿಎಫ್ ನಲ್ಲಿ ಫ‌ುಟ್‌ ಪಾತ್‌ ತೆರವು

Worship by the villagers for Ganapathi

ಉದ್ಭವ ಗಣಪತಿಗೆ ಗ್ರಾಮಸ್ಥರಿಂದ ಪೂಜೆ

MUST WATCH

udayavani youtube

ಕೋವಿಡ್ ಆತಂಕ; ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ರದ್ದು

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

ಹೊಸ ಸೇರ್ಪಡೆ

ಮೊಳಹಳ್ಳಿ: ಹುಂತನ ಕೆರೆಗೆ ಹಾಯಿಸಬೇಕಿದೆ ವಾರಾಹಿ ನೀರು

ಮೊಳಹಳ್ಳಿ: ಹುಂತನ ಕೆರೆಗೆ ಹಾಯಿಸಬೇಕಿದೆ ವಾರಾಹಿ ನೀರು

ಹಡಿಲು ಭೂಮಿ ಸರಕಾರದ ಸುಪರ್ದಿಗೆ: ಕಾಯ್ದೆಯಲ್ಲಿ ಅವಕಾಶ

ಹಡಿಲು ಭೂಮಿ ಸರಕಾರದ ಸುಪರ್ದಿಗೆ: ಕಾಯ್ದೆಯಲ್ಲಿ ಅವಕಾಶ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ನಿಶ್ಶಬ್ದಕ್ಕೆ ಜಾರಿದ ಜಿ.ವಿ.

ನಿಶ್ಶಬ್ದಕ್ಕೆ ಜಾರಿದ ಜಿ.ವಿ.

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.