Udayavni Special

ಎಸ್ಸೆಸ್ಸೆಲ್ಸಿ: ಜಿಲ್ಲೆ ಪ್ರಥಮ ಸ್ಥಾನಕ್ಕೆ ಶ್ರಮಿಸಿ

Team Udayavani, Feb 27, 2021, 3:04 PM IST

ಎಸ್ಸೆಸ್ಸೆಲ್ಸಿ: ಜಿಲ್ಲೆ ಪ್ರಥಮ ಸ್ಥಾನಕ್ಕೆ ಶ್ರಮಿಸಿ

ಕೋಲಾರ: ಮಕ್ಕಳಿಗೆ ಯೋಗ್ಯತಾ ಪತ್ರನೀಡುವುದಕ್ಕಿಂತ ಯೋಗ್ಯರನ್ನಾಗಿಸಿ, ಬೋಧನೆ ಮಾಡುವ ಶಿಕ್ಷಕರನ್ನು ಹುರಿ  ದುಂಬಿಸಿ, ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಎಸ್ಸೆಸ್ಸೆಲ್ಸಿ ಫಲಿತಾಂಶಲ್ಲಿ ಜಿಲ್ಲೆ ಪ್ರಥಮ ಸ್ಥಾನಗಳಿಸಲು ಶ್ರಮಿಸಿ ಎಂದು ರಾಜ್ಯ ಶಿಕ್ಷಣ, ಸಂಶೋಧನಾ, ತರಬೇತಿ ಸಂಸ್ಥೆ ಜಂಟಿ ನಿರ್ದೇಶಕಿ ಹಾಗೂ ಜಿಲ್ಲಾ ನೋಡಲ್‌ ಅಧಿಕಾರಿ ಗಾಯತ್ರಿದೇವಿ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಹೇಳಿದರು.

ಶುಕ್ರವಾರ ನಗರದ ಸೆಂಟ್‌ಆನ್ಸ್‌ ಶಾಲೆ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ, ಶಾಲೆಗಳಲ್ಲಿ ಹಾಜರಾತಿ ಉತ್ತಮಪಡಿಸಲುಮತ್ತು ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕುರಿತಂತೆ ಚರ್ಚಿಸಲು ಕರೆದಿದ್ದ ಕೋಲಾರ, ಮುಳಬಾಗಿಲು ತಾಲೂಕು ಸರ್ಕಾರಿ, ಅನುದಾ ನಿತ, ಖಾಸಗಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಅನುತ್ತೀರ್ಣ ಆಗಬಾರದು: ಕಳೆದ ಬಾರಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 5ನೇ ಸ್ಥಾನ ಮತ್ತು ಗುಣಾತ್ಮಕ ಫಲಿತಾಂಶದಲ್ಲಿ ರಾಜ್ಯದಲ್ಲೇ 2ನೇ ಸ್ಥಾನದ ಹೆಗ್ಗಳಿಕೆ ಪಡೆದಿದೆ. ಈ ಬಾರಿ ಎರಡರಲ್ಲೂ ಜಿಲ್ಲೆ ಪ್ರಥಮ ಸ್ಥಾನ ಗಳಿಸಬೇಕು, ಯಾವೊಬ್ಬ ವಿದ್ಯಾರ್ಥಿಯೂ ಅನುತ್ತೀರ್ಣವಾಗಬಾರದು ಎಂದರು.

 1.5ಕೋಟಿ ಮಕ್ಕಳ ದೊಡ್ಡ ಇಲಾಖೆ: 1.5 ಕೋಟಿ ಮಕ್ಕಳು, 85 ಸಾವಿರ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು, 5 ಲಕ್ಷ ಶಿಕ್ಷಕರು ಮತ್ತು 2.5 ಕೋಟಿ ಪೋಷಕರ ಸಂಪರ್ಕದಲ್ಲಿರುವ ಅತಿ ದೊಡ್ಡ ಇಲಾಖೆ ನಮ್ಮದು, ಸಮಾಜಕ್ಕೆ ಮಾರ್ಗದರ್ಶನ, ಮಾನವ ಸಂಪನ್ಮೂಲ ನೀಡುವ ಹೊಣೆ ಶಿಕ್ಷಣ ಇಲಾಖೆಯದ್ದಾಗಿದೆ ಎಂದರು.

ಡಯಟ್‌ ಪ್ರಾಂಶುಪಾಲ ನಾಗೇಶ್‌, ಜೂ.14 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ, ಕಾಲಾವಕಾಶ ಕಡಿಮೆ ಇದೆ, ಎಲ್ಲರ ಸಹಕಾರ ಪಡೆದು ಜಿಲ್ಲೆ ಪ್ರಥಮ ಸ್ಥಾನ ಗಳಿಸಲು ಶ್ರಮಿಸೋಣ ಎಂದರು.ಬಿಇಒ ನಾಗರಾಜಗೌಡ, ಜಿಪಂ ಸಿಇಒ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕಿ ಗಾಯತ್ರಿದೇವಿ, ಡಯಟ್‌ ಪ್ರಾಂಶುಪಾಲ ನಾಗೇಶ್‌ರನ್ನು ಜಿಲ್ಲಾ ಮುಖ್ಯಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ದೈಹಿಕ ಶಿಕ್ಷಣ ಅ ಧೀಕ್ಷಕ ಮಂಜುನಾಥ್‌,ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಂಜಿತ್‌ ಕುಮಾರ್‌, ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರವಿ,ದಾಸಪ್ಪ, ಶಂಕರೇಗೌಡ, ಸಿ.ಎನ್‌.ಪ್ರದೀಪ್‌ ಕುಮಾರ್‌, ಗಾಯತ್ರಮ್ಮ, ಚೆಂಗಲರಾಯಪ್ಪ, ಚಂದ್ರಪ್ಪ, ವೇಣುಗೋಪಾಲ್‌ ಸೇರಿದಂತೆ ಕೋಲಾರ, ಮುಳಬಾಗಿಲು ತಾಲೂಕಿನ ಮುಖ್ಯಶಿಕ್ಷಕರು ಹಾಜರಿದ್ದರು.

20,228 ಮಕ್ಕಳು ಪರೀಕ್ಷೆಗೆ ನೋಂದಣಿ :

ಜಿಲ್ಲಾ ಪರೀಕ್ಷಾ ನೋಡಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌, ಇಲಾಖೆಯ ಕ್ರಿಯಾಯೋಜನೆ ಪಾಲಿಸಿ, ಅಧ್ಯಾಯವಾರು ಪ್ರಶ್ನೆಪತ್ರಿಕೆ ನೀಡಿದ್ದೇವೆ, ತೆರೆದ ಪುಸ್ತಕ ಪರೀಕ್ಷೆ ನಡೆಸಿ, ಕಲಿಕೆ ದೃಢೀಕರಣ ಮಾಡಿಕೊಂಡು ನಂತರ ನೋಡದೇ ಉತ್ತರ ಬರೆಸಿ ಎಂದರು. ಕೋವಿಡ್‌ ಹಿನ್ನಲೆಯಲ್ಲಿ ಪ್ರಶ್ನೆಪತ್ರಿಕೆ ಸುಲಭವಾಗಲಿದೆ, ಪಠ್ಯದ ಅಭ್ಯಾಸದ ಪ್ರಶ್ನೆಗಳಿಗೆ ಮಕ್ಕಳು ಸಿದ್ಧರಾದರೆ ಯಶಸ್ಸು ಖಚಿತ. ಶೇ.10 ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರಲಿದೆ ಎಂದರು. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈವರೆಗೂ 20228 ಮಕ್ಕಳು ನೋಂದಾಯಿಸಿದ್ದಾರೆ, ಅದರಲ್ಲಿ ಶಾಲಾ ವಿದ್ಯಾರ್ಥಿಗಳೇ 19,342 ಇದ್ದಾರೆ. ಆದರೆ ಸ್ಯಾಟ್ಸ್‌ನಲ್ಲಿ ಮಕ್ಕಳ ಹಾಜರಾತಿ ದಾಖಲು ಸರಿಯಾಗಿ ಮಾಡುತ್ತಿಲ್ಲ. ಮುಖ್ಯಶಿಕ್ಷಕರು ಕನಿಷ್ಠ 12 ತರಗತಿ ತೆಗೆದುಕೊಳ್ಳಿ ಎಂದು ತಿಳಿಸಿದರು.

ಟಾಪ್ ನ್ಯೂಸ್

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

ಧೋನಿ ಪಡೆ ಎದುರು ಮುಗ್ಗರಿಸಿದ ರಾಜಸ್ಥಾನ್: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ಚೆನ್ನೈ

ಧೋನಿ ಪಡೆ ಎದುರು ಮುಗ್ಗರಿಸಿದ ರಾಜಸ್ಥಾನ್: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ಚೆನ್ನೈ

3 ಸಾವಿರ ಕೋಟಿ ಮೌಲ್ಯದ ಡ್ರಗ್ಸ್‌ ವಶ : ಕೇರಳದ ಅರಬ್ಬೀ ಕಡಲಲ್ಲಿ ನೌಕಾಪಡೆ ಕಾರ್ಯಾಚರಣೆ

3 ಸಾವಿರ ಕೋಟಿ ಮೌಲ್ಯದ ಡ್ರಗ್ಸ್‌ ವಶ : ಕೇರಳದ ಅರಬ್ಬೀ ಕಡಲಲ್ಲಿ ನೌಕಾಪಡೆ ಕಾರ್ಯಾಚರಣೆ

“ಇಂಡಿಯಾ ಓಪನ್‌ ಸೂಪರ್‌-500 ಬ್ಯಾಡ್ಮಿಂಟನ್‌’ ಟೂರ್ನಿ ಮುಂದಕ್ಕೆ

“ಇಂಡಿಯಾ ಓಪನ್‌ ಸೂಪರ್‌-500 ಬ್ಯಾಡ್ಮಿಂಟನ್‌’ ಟೂರ್ನಿ ಮುಂದಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Garbage is not disposed

ತಾಯಲೂರಲ್ಲಿ ಕಸ ವಿಲೇವಾರಿ ಮಾಡಿಲ್ಲ

no Treatment for Covid Influencers,

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ, ಆರೈಕೆ ಇಲ್ಲ

Hire staff

ಪಶು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನೇಮಿಸಿ

Foot Path Clearance in KGF

ಕೆಜಿಎಫ್ ನಲ್ಲಿ ಫ‌ುಟ್‌ ಪಾತ್‌ ತೆರವು

Worship by the villagers for Ganapathi

ಉದ್ಭವ ಗಣಪತಿಗೆ ಗ್ರಾಮಸ್ಥರಿಂದ ಪೂಜೆ

MUST WATCH

udayavani youtube

ಕೋವಿಡ್ ಆತಂಕ; ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ರದ್ದು

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

ಹೊಸ ಸೇರ್ಪಡೆ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ನಿಶ್ಶಬ್ದಕ್ಕೆ ಜಾರಿದ ಜಿ.ವಿ.

ನಿಶ್ಶಬ್ದಕ್ಕೆ ಜಾರಿದ ಜಿ.ವಿ.

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ಕನ್ನಡವನ್ನು ಉಸಿರಾಡಿದ ಜೀವಿ

ಕನ್ನಡವನ್ನು ಉಸಿರಾಡಿದ ಜೀವಿ

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.