ನರೇಗಾ ಹಣ ದುರ್ಬಳಕೆ: ಕ್ರಮಕ್ಕೆ ವೈ.ಎನ್. ಆಗ್ರಹ
Team Udayavani, Feb 9, 2021, 2:28 PM IST
ಕೋಲಾರ: ನರೇಗಾ ಯೋಜನೆಯಡಿ ಜಿಲ್ಲೆಯ ವಿವಿಧೆಡೆ ಹಣ ದುರುಪಯೋಗ ಪಡಿಸಿಕೊಂಡಿರುವ ಅ ಧಿಕಾರಿಗಳನ್ನು ಅಮಾನತು ಮಾಡಿ, ಸಂಬಂಧಿ ಸಿದ ಜನಪ್ರತಿನಿಧಿ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಪರಿಷತ್‌ನಲ್ಲಿ ವೈ.ಎ. ನಾರಾಯಣಸ್ವಾಮಿ ಅವರಿಗೆ ಆಶ್ವಾಸನೆ ನೀಡಿದರು.
ವಿಧಾನಪರಿಷತ್‌ನಲ್ಲಿ ಸದಸ್ಯ ನಾರಾಯಣಸ್ವಾಮಿ ಅವರು ವಿವಿಧ ಯೋಜನೆಗ ಳಡಿ ಜಿಲ್ಲೆಯ ಗ್ರಾಪಂಗಳಿಗೆ ಬಂದಿರುವ ಹಣ, ದುರುಪಯೋಗವಾದ ಅನುದಾನ ಎಷ್ಟು, ದುರುಪಯೋಗ ಪಡಿಸಿಕೊಂಡವರ ಮಾಹಿತಿ, ಕೈಗೊಂಡ ಕ್ರಮದ ಕುರಿತು ಸದನದಲ್ಲಿ ಕೇಳಿದ ಪ್ರಶ್ನೆಗೆ ಸಚಿವ ಈಶ್ವರಪ್ಪ ಈ ಉತ್ತರ ನೀಡಿದರು. ಆಶ್ವಾಸನೆ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ ಮತ್ತು ನೆಲವಂಕಿ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಆಗಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ತಂಡ ರಚಿಸಿದ್ದು, ಅದು ನೀಡುವ ವರದಿ ಆಧಾರದ ಮೇಲೆ ಸಂಬಂಧಿ ಸಿದ ಅಧಿಕಾರಿಗಳ ಅಮಾನತ್ ಹಾಗೂ ಗ್ರಾಪಂ ಅಧ್ಯಕ್ಷರಾಗಿದ್ದವರ ಮೇಲೆಯೂ ಕಾನೂನು ಕ್ರಮ ಜರುಗಿಸುವುದಾಗಿ ಸಚಿವ ಈಶ್ವರಪ್ಪ ಆಶ್ವಾಸನೆ ನೀಡಿದರು.
ಅನುದಾನ ದುರುಪಯೋಗ: ಡಾ. ವೈ.ಎ.ಎನ್ ಪ್ರಶ್ನೆಗೆ ಉತ್ತರಿಸಿ ಮಾಹಿತಿ ನೀಡಿದ ಸಚಿವ ಈಶ್ವರಪ್ಪ, ನರೇಗಾ ಯೋಜನೆಯ ಹಣ ದುರ್ಬಳಕೆ ಮಾಡಿಕೊಂಡಿರುವ ಅ ಧಿಕಾರಿ, ಸಿಬ್ಬಂದಿ, ಗ್ರಾಪಂ ಅಧ್ಯಕ್ಷರ ಮಾಹಿತಿಯನ್ನು ಸದನಕ್ಕೆ ಒದಗಿಸಿದರು. ನೆಲವಂಕಿ ಮತ್ತು ಲಕ್ಷ್ಮಿಪುರ ಗ್ರಾಪಂಗಳ ಹಿಂದಿನ ಪಿಡಿಒ ಪಿ.ವಿ.ವಿಶ್ವನಾಥರೆಡ್ಡಿ, ಈಗ ಅವರು ಗೌನಿಪಲ್ಲಿ ಗ್ರಾ.ಪಂನಲ್ಲಿ ಗ್ರೇಡ್-2 ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೋಲಾರದ ಲೋಕೋಪ ಯೋಗಿ ಎಇ ಚಂದ್ರಶೇಖರ್, ಶ್ರೀನಿವಾಸಪುರ ಪಂಚಾಯತ್ ರಾಜ್ ಇಂಜಿನಿ ಯರಿಂಗ್ ವಿಭಾಗದ ಕಿರಿಯ ಅಭಿಯಂತರ ಕೃಷ್ಣಪ್ಪ, ಶ್ರೀನಿವಾಸಪುರ ತಾಪಂ ಪ್ರಭಾರ ಇಒ ಆಗಿ ನಿವೃತ್ತಿ ಹೊಂದಿರುವ ಶಿವಶಂಕರಯ್ಯ, ಶ್ರೀನಿವಾಸಪುರ ರೇಷ್ಮೆ ವಲಯ ಅಧಿಕಾರಿ ಶ್ರೀನಿವಾಸಯ್ಯ ಸೇರಿದ್ದಾರೆ. ಶ್ರೀನಿವಾಸಪುರ ರೇಷ್ಮೆ ವಿಸ್ತರಣಾಧಿಕಾರಿ ರಘುನಾಥಗೌಡ, ಶ್ರೀನಿವಾಸಪುರ ಹಿಂದಿನ ತಾಪಂ ಇಒ ಲಕ್ಷ್ಮಿಮೋಹನ್, ಲಕ್ಷ್ಮಿಪುರ ಗ್ರಾಪಂನ ಕಂಪೂಟರ್ ಆಪರೇಟರ್ ಆಗಿದ್ದು ಸೇವೆಯಿಂದ ವಜಾಗೊಂಡಿರುವ ರವಿ, ಶ್ರೀನಿವಾಸಪುರ ತಾಪಂ ಎಂ.ಐಎಸ್ ಸಂಯೋಜಕರಾಗಿದ್ದು ಸೇವೆಯಿಂದ ವಜಾಗೊಂಡಿರುವ ಮುನಿವೀರೇಗೌಡ, ತಾಪಂ ಟಿಎಇಗಳಾಗಿದ್ದು, ಇದೀಗ ಸೇವೆಯಿಂದ ವಜಾಗೊಂಡಿರುವ ನಾಗರಾಜ್, ಕೃಷ್ಣಮೂರ್ತಿ, ಶಿವರಾಜ್ ನರೇಗಾದಡಿ ಅನುದಾನ ದುರುಪಯೋಗ ಪಡಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಸದನದಲ್ಲಿ ಉತ್ತರಿಸಿದರು.
ಇದನ್ನೂ ಓದಿ :ಇಂದಿನ ಮಹಿಳೆಯರದು ಸೀತಾ ಮಾತೆ ಪಾಡು
ಇವರಲ್ಲದೇ ಜನಪ್ರತಿನಿ ಗಳಾಗಿದ್ದ ನೆಲವಂಕಿ ಗ್ರಾಮ ಪಂಚಾಯಿತಿ ಹಿಂದಿನ ಅಧ್ಯಕ್ಷೆ ಬಿ.ಎನ್. ಪ್ರಮೀಳಾ, ಲಕ್ಷ್ಮಿàಪುರ ಗ್ರಾ.ಪಂ ಹಿಂದಿನ ಅಧ್ಯಕ್ಷೆ ಆದಿಲಕ್ಷ್ಮಮ್ಮ ಸಹಾ ಹಣ ದುರುಪಯೋಗದ ಆರೋಪ ಎದುರಿಸುತ್ತಿದ್ದು, ಇವರೆಲ್ಲರ ವಿರುದ್ದ ವರದಿ ನಂತರ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ವೈ.ಎ .ನಾರಾಯಣಸ್ವಾಮಿ ಅವರಿಗೆ ಆಶ್ವಾಸನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
Live Update; ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ, ಸಭಾತ್ಯಾಗಕ್ಕೆ ಕಾಂಗ್ರೆಸ್ ನಿರ್ಧಾರ
ಮೀಸಲಿಗಾಗಿ ಪಂಚಮಸಾಲಿ ಹೋರಾಟ : ಸ್ವಾಮೀಜಿ ಮನವೊಲಿಕೆಗೆ ತೆರೆಮರೆ ಯತ್ನ?
ಕೊಡಗಿನಲ್ಲಿ ವ್ಯಾಘ್ರ ಅಟ್ಟಹಾಸ: 8 ವರ್ಷದ ಬಾಲಕನನ್ನು ಕೊಂದು ಹಾಕಿದ ಹುಲಿ
ಸುದ್ದಿ ಸುತ್ತಾಟ : ಹನಿಟ್ರ್ಯಾಪ್ ಮಾಯಾಜಾಲದ ಹಿಂದೆ – ಮುಂದೆ
ಬಜೆಟ್ ಗೂ ಮುನ್ನ ಬಿಎಸ್ ವೈ ಗೆ ಪ್ರತಿಭಟನೆ ಬಿಸಿ: ಸಿಎಂ ನಿವಾಸದೆದುರು ಮಹಿಳೆಯರ ಪ್ರತಿಭಟನೆ