Udayavni Special

ಈ ವರ್ಷವೂ 28 ಕೋಟಿ ಅನುದಾನ ವಾಪಸ್‌!


Team Udayavani, Mar 29, 2021, 9:04 PM IST

lkjhgvcxz

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ವ್ಯಾಪ್ತಿಯ ರೈತರಿಗೆ ಪ್ರತ್ಯಕ್ಷ- ಪರೋಕ್ಷವಾಗಿ ನೆರವಾಗಲು ರಾಜ್ಯ ಸರಕಾರ ತನ್ನ ಬಜೆಟ್‌ನಲ್ಲಿ ಕೋಟ್ಯಂತರ ರೂ.ಗಳನ್ನು ಮೀಸಲಿಡುತ್ತದೆ. ಅಧಿಕಾರಿಗಳು- ಜನಪ್ರತಿನಿಧಿಗಳ ನಿರ್ಲಕ್ಷ್ಯದ ಫಲವಾಗಿ ಕಳೆದ 6 ವರ್ಷಗಳಿಂದ ಕ್ರಿಯಾಯೋಜನೆ ಇಲ್ಲದೇ ಅನುದಾನ ವಾಪಸ್‌ ಹೋಗುತ್ತಿದೆ.

2020-21 ನೇ ಸಾಲಿನಲ್ಲಿ ಕಾಡಾ ಪ್ರದೇಶದ ವ್ಯಾಪ್ತಿಯಲ್ಲಿ ಖರ್ಚು ಮಾಡಲು ರಾಜ್ಯ ಸರಕಾರ 28 ಕೋಟಿ ರೂ.ಗಳನ್ನು ಮೀಸಲಿರಿಸಿದ್ದರೂ ಅದನ್ನು ಖರ್ಚು ಮಾಡದೇ ನಿರ್ಲಕ್ಷé ವಹಿಸಿದ್ದರಿಂದ ಮಾರ್ಚ್‌ 31 ನಂತರ ಈ ಹಣವನ್ನು ಸರಕಾರ ವಾಪಸ್‌ ಪಡೆಯಲಿದೆ. ತುಂಗಭದ್ರಾ ಕಾಡಾ ವ್ಯಾಪ್ತಿಯ ರಾಯಚೂರು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರಿಗೆ ಮತ್ತು ಪರೋಕ್ಷವಾಗಿ ಕೃಷಿಗೆ ನೆರವಾಗಲು ಸರಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುತ್ತದೆ.

ಈ ಹಣವನ್ನು ಕಾಡಾ ಅ ಧಿಕಾರಿಗಳು ಕ್ರಿಯಾಯೋಜನೆ ಸಿದ್ಧ ಮಾಡಿ ಹಣ ಖರ್ಚು ಮಾಡಬೇಕಾಗುತ್ತದೆ. ಪ್ರಸಕ್ತ ವರ್ಷ ಸರಕಾರ 28 ಕೋಟಿ ರೂ.ಗಳನ್ನು ತುಂಗಭದ್ರಾ ಕಾಡಾಗೆ ಮಂಜೂರು ಮಾಡಿತ್ತು. ಸಿಬ್ಬಂದಿ ಕೊರತೆ ನೆಪದಲ್ಲಿ ಇಲ್ಲಿಯ ಆಡಳಿತಾಧಿಕಾರಿಗಳು ಕ್ರಿಯಾ ಯೋಜನೆ ತಯಾರು ಮಾಡದೇ ಇರುವ ಕಾರಣ ಹಣ ಮರಳಿ ಹೋಗುತ್ತಿದೆ.

ಈ ಕುರಿತು ಅಚ್ಚುಕಟ್ಟು ವ್ಯಾಪ್ತಿಯ ಸಂಸದರು ಶಾಸಕರು-ಸಚಿವರು-ವಿಧಾನ ಪರಿಷತ್‌ ಸದಸ್ಯರಿಗೆ ಮಾಹಿತಿ ಇದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಪ್ರಕ್ರಿಯೆ ಕಳೆದ ಆರು ವರ್ಷಗಳಿಂದ ನಡೆಯುತ್ತಿದ್ದರೂ ಈ ಭಾಗದ ರೈತರು ನೀರು ಬಳಕೆದಾರರ ಸಂಘದವರು ಚಕಾರವೆತ್ತುತ್ತಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಹೊಲ ಗದ್ದೆಗಳಿಗೆ ಹೋಗಲು ರಸ್ತೆ, ಗೋಡೌನ್‌, ನೀರು ಬಳಕೆದಾರರ ಸಹಕಾರಿ ಸಂಘದ ಕಟ್ಟಡ ನಿರ್ಮಾಣ ರಿಪೇರಿ, ಬೆಳೆ ಹೊಕ್ಕಲು ಕಣ, ಉಪಕಾಲುವೆಗಳ ಜಂಗಲ್‌ ಕಟಿಂಗ್‌, ಸಮಗ್ರ ಬೆಳೆ ಪದ್ಧತಿ ವೈಜ್ಞಾನಿಕ ಕೃಷಿ ಮಾಡಲು ರೈತರಿಗೆ ತರಬೇತಿ ಮತ್ತು ಸವಳು ಮತ್ತು ಬರಡು ಭೂಮಿಯನ್ನು ಫಲವತ್ತತೆ ಮಾಡುವ ಯೋಜನೆ ಮತ್ತು ಎಸ್ಸಿ-ಎಸ್ಟಿ ಕೆಟಗರಿ ಒಂದರಲ್ಲಿ ಬರುವ ರೈತರಿಗೆ ಸಾಮೂಹಿಕ ಪಂಪ್‌ಸೆಟ್‌ ಯೋಜನೆ ಮಾಡಿಕೊಳ್ಳಲು ಹಣ ನೀಡಲು ಕಾಡಾ ಯೋಜನೆಯಲ್ಲಿ ಅವಕಾಶವಿದೆ.

ರಾಜ್ಯ ಸರಕಾರ ಕೊಟ್ಟ ಹಣವನ್ನು ಪ್ರಸಕ್ತ ಹಣಕಾಸು ಯೋಜನೆಯಲ್ಲಿ ಖರ್ಚು ಮಾಡದಿದ್ದರೆ ಪ್ರತಿ ವರ್ಷ ಶೇ.25 ಅನುದಾನ ಕಡಿತವಾಗುತ್ತದೆ. ಕಳೆದ ವರ್ಷ 33 ಕೋಟಿ ರೂ. ಹಣ ಸರಕಾರಕ್ಕೆ ವಾಪಸ್‌ ಹೋಗಿದೆ. ಪ್ರಸಕ್ತ ಸಾಲಿನಲ್ಲಿ 7 ಕೋಟಿ ರೂ. ಕಡಿತವಾಗಿ 28 ಕೋಟಿ ರೂ. ಹಣ ತುಂಗಭದ್ರಾ ಕಾಡಾ ಗೆ ಮಂಜೂರಿಯಾಗಿದ್ದರೂ ಅಧಿ ಕಾರಿಗಳು ಸೂಕ್ತ ಕ್ರಿಯಾ ಯೋಜನೆ ಮಾಡಿ ಹಣ ಹಂಚಿಕೆ ಮಾಡದೇ ಇರುವುದರಿಂದ ಪುನಃ ಅನುದಾನ ವಾಪಸ್‌ ಹೋಗುತ್ತಿದೆ. ಸಿಬ್ಬಂದಿ ಕೊರತೆ: ತುಂಗಭದ್ರಾ ಕಾಡಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು 291 ಜನ ಅ ಧಿಕಾರಗಳು ಸೇರಿ ಸಿಬ್ಬಂದಿ ವರ್ಗದವರ ಅವಶ್ಯವಿದ್ದು, ಕಳೆದ 10 ವರ್ಷಗಳಿಂದ 98 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ.

ಅಚ್ಚುಕಟ್ಟು ವ್ಯಾಪ್ತಿ ದೊಡ್ಡದಿರುವುದರಿಂದ ಕೇವಲ 98 ಜನರಿಂದ ಕಾರ್ಯ ಮಾಡಲು ಆಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಜ್ಯ ಸರಕಾರ ಕಳೆದ ಹತ್ತು ವರ್ಷಗಳಿಂದ ತುಂಗಭದ್ರಾ ಕಾಡಾ ಕಚೇರಿಯ ಆಡಳಿತಾ  ಧಿಕಾರಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುವ ಆಡಳಿತಾ ಧಿಕಾರಿಗಳು ನಿವೃತ್ತಿಗೆ 6 ತಿಂಗಳು ಅವಧಿ ಇರುತ್ತದೆ. 6 ತಿಂಗಳ ಅವ ಧಿ ಇರುವ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಹಣಕಾಸು ಜವಾಬ್ದಾರಿ ತೆಗೆದುಕೊಳ್ಳಲು ಹಿಂದೇಟು ಹಾಕುವುದು ಸಹಜವಾಗಿದೆ. ಪ್ರಸ್ತುತ ಇರುವ ಆಡಳಿತಾಧಿ ಕಾರಿ ಸಿಬ್ಬಂದಿ ಹಾಗೂ ಕ್ರಿಯಾ ಯೋಜನೆ ನೆಪದಲ್ಲಿ 28 ಕೋಟಿ ರೂ. ಹಣ ವಾಪಸ್‌ ಹೋಗಲು ಕಾರಣರಾಗಿದ್ದಾರೆ ಎನ್ನಲಾಗುತ್ತಿದೆ.

ಟಾಪ್ ನ್ಯೂಸ್

ರಾಮನವಮಿ ಉತ್ಸವ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಐದು ರಾಜ್ಯಗಳ 9 ಕಲಾವಿದರಿಂದ ಚಿತ್ರಕಲಾ ಶಿಬಿರ

ರಾಮನವಮಿ ಉತ್ಸವ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಐದು ರಾಜ್ಯಗಳ 9 ಕಲಾವಿದರಿಂದ ಚಿತ್ರಕಲಾ ಶಿಬಿರ

gjjsddgdf

ಮರಾಠಿಗರು ಪಾಕ್‌ನವರಲ್ಲ,ಲಷ್ಕರಿಗಳಲ್ಲ : ಸಂಜಯ ರಾವುತ್‌

ಸದವದ್

ರಾಜ್ಯದಲ್ಲಿ ಕೋವಿಡ್ ಮಹಾಸ್ಪೋಟ : ಇಂದು 14738 ಪ್ರಕರಣಗಳು

ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಲಕ್ಷ್ಯ : ಐವನ್‌ ಡಿ’ಸೋಜಾ ಆರೋಪ

ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಲಕ್ಷ್ಯ : ಐವನ್‌ ಡಿ’ಸೋಜಾ ಆರೋಪ

ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ: ಅನುಮೋದನೆಯೊಂದೇ ಬಾಕಿ

ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ : ಅನುಮೋದನೆಯೊಂದೇ ಬಾಕಿ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

ಖಾಲಿ ಸಿಲಿಂಡರಿಗೆ ಅಡುಗೆ ಅನಿಲ ತುಂಬಿಸಿ ಮಾರಾಟ : ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಖಾಲಿ ಸಿಲಿಂಡರಿಗೆ ಅಡುಗೆ ಅನಿಲ ತುಂಬಿಸಿ ಮಾರಾಟ : ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-4

ಕೆರೆ ಒತ್ತುವರಿ ತೆರವುಗೊಳಿಸಲು ಮನವಿ

ಕಸಾಪ ಚುನಾವಣಾ ಪ್ರಚಾರ

ಕಸಾಪ ಚುನಾವಣಾ ಪ್ರಚಾರ

ಕನಕಗಿರಿಯ 22 ಹಳ್ಳಿಗಳಲ್ಲಿ ಹಾಹಾಕಾರ

ಕನಕಗಿರಿಯ 22 ಹಳ್ಳಿಗಳಲ್ಲಿ ಹಾಹಾಕಾರ

sdfgsfdggdfgg

ನಳೀನ್ ಕುಮಾರ್ ಕಟೀಲ್ ಒಬ್ಬ ಜೋಕರ್ : ಸಿದ್ದರಾಮಯ್ಯ

5 ದಿನ ಪೂರೈಸಿದ ಸಾರಿಗೆ ನೌಕರರ ಮುಷ್ಕರ

5 ದಿನ ಪೂರೈಸಿದ ಸಾರಿಗೆ ನೌಕರರ ಮುಷ್ಕರ

MUST WATCH

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

udayavani youtube

ಭಾರತದಲ್ಲಿ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳ

udayavani youtube

ವಾಹನ ಅಡ್ಡಗಟ್ಟಿ ಸುಲಿಗೆ ಪ್ರಕರಣ: ಮಂಗಳೂರಿನಲ್ಲಿ ಮತ್ತೆ ಆರು ಖದೀಮರ ಬಂಧನ

ಹೊಸ ಸೇರ್ಪಡೆ

fgdfgr

ಬಣ್ಣದ ಹೊಂಡ ತುಳುಕಿಸಿ ಯುಗಾದಿ ಹಬ್ಬದಾಚರಣೆ

15-5

ಆರ್ಥಿಕ ತಜ್ಞ  ಡಾ| ಅಂಬೇಡ್ಕರ್ ‌: ಡಾ| ಅಜಿತ್‌

15-4

ಮೀಸಲಾತಿ ಅರ್ಥಹೀನ ಮಾಡುವ ಹುನ್ನಾರ

ರಾಮನವಮಿ ಉತ್ಸವ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಐದು ರಾಜ್ಯಗಳ 9 ಕಲಾವಿದರಿಂದ ಚಿತ್ರಕಲಾ ಶಿಬಿರ

ರಾಮನವಮಿ ಉತ್ಸವ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಐದು ರಾಜ್ಯಗಳ 9 ಕಲಾವಿದರಿಂದ ಚಿತ್ರಕಲಾ ಶಿಬಿರ

15-3

ಡಾ|ಅಂಬೇಡ್ಕರ್‌ ಶ್ರೇಷ್ಠ ಮಾನವತಾವಾದಿ: ಪ್ರಸಾದ ಅಬ್ಬಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.