ತಾಯಿಗೇ ತಾಯಿಯಾದ ಹೆಣ್ಣು ಮಗು

ಭಿಕ್ಷೆ ಬೇಡಿ ತಾಯಿಗೆ ಉಣಿಸಿದ ಮಗು

Team Udayavani, May 27, 2019, 9:19 AM IST

ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯಲ್ಲಿ ತಾಯಿಯ ಆರೈಕೆ ಮಾಡುತ್ತಿರುವ ಮಗು ಭಾಗ್ಯ.

ಕೊಪ್ಪಳ: ಮಾನಸಿಕವಾಗಿ ನೊಂದು ಆಸ್ಪತ್ರೆಗೆ ದಾಖಲಾಗಿದ್ದ ತಾಯಿಗೆ 6 ವರ್ಷದ ಹೆಣ್ಣು ಮಗುವೇ ತಾಯ್ತನ ಪ್ರೀತಿ ತೋರಿದ್ದಲ್ಲದೆ, ಅವರಿವರ ಬಳಿ ಭಿಕ್ಷೆ ಬೇಡಿ ತಾಯಿಗೆ ಊಟ ಮಾಡಿಸುತ್ತಿರುವ ಪ್ರಸಂಗ ನಾಲ್ಕು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿದೆ.

ಹೌದು. ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ದುರ್ಗಮ್ಮ ಮಾನಸಿಕವಾಗಿ ನೊಂದು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿ ಅರ್ಜುನ್‌ ಕಳೆದ ನಾಲ್ಕು ದಿನದಿಂದ ಪತ್ನಿ ಹಾಗೂ ಆರು ವರ್ಷದ ಹೆಣ್ಣು ಮಗು ಭಾಗ್ಯಾಳನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ್ದಾನೆ. ಆಸ್ಪತ್ರೆಯಲ್ಲಿ ತಾಯಿ-ಮಗಳು ಇಬ್ಬರೇ ಇದ್ದಾರೆ. ನಿತ್ಯವೂ ಆಸ್ಪತ್ರೆಯಲ್ಲಿ ಊಟ, ಉಪಚಾರಕ್ಕೆ ಯಾರೂ ಇಲ್ಲದಂತಾಗಿದ್ದರಿಂದ ಆರು ವರ್ಷದ ಮಗು ಆಸ್ಪತ್ರೆಯ ಆವರಣದಲ್ಲಿಯೇ ಅವರಿವರ ಬಳಿ ಭಿಕ್ಷೆ ಬೇಡಿ ಕೊಟ್ಟಷ್ಟು ಊಟವನ್ನು ತಾಯಿ ದುರ್ಗಮ್ಮಳಿಗೆ ಉಣ ಬಡಿಸುತ್ತಿದ್ದಾಳೆ.

ಆಸ್ಪತ್ರೆಗೆ ಬರುವ ಜನರಿಂದ, ಸಿಕ್ಕಷ್ಟು ಆಹಾರವನ್ನು ಪಡೆದು ತಾಯಿಗೆ ನೀಡಿ, ತಾಯ್ತನದ ಪ್ರೀತಿ ತೋರುತ್ತಿದ್ದಾಳೆ. ಈ ಘಟನೆ ಮನ ಕಲಕುವಂತಿದ್ದರೂ ಪತಿ ಅರ್ಜುನ್‌ ಇತ್ತ ಇಣುಕಿ ನೋಡಿಲ್ಲ. ದುರ್ಗಮ್ಮಳಿಗೆ ಆರೋಗ್ಯದಲ್ಲಿ ಸ್ವಲ್ಪ ತೊಂದರೆಯಿದ್ದಿದ್ದರಿಂದ ಕೂಗಾಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ಪಡೆದು ಊರಿಗೆ ತೆರಳುವಂತೆ ಹೇಳಿದ್ದಾರೆ. ಆದರೆ ಆ ಮಹಿಳೆ ಆಸ್ಪತ್ರೆಯ ಆವರಣದಲ್ಲೇ ವಾಸ ಮಾಡಿದ್ದಾಳೆ. ನಾಲ್ಕು ದಿನದಿಂದಲೂ ಮಗುವೇ ತಾಯಿಯನ್ನು ನೋಡಿಕೊಳ್ಳುತ್ತಿದೆ.

ಮಾಹಿತಿ ತಿಳಿದ ಸಂಘಟಕನಾಕಾರ ಬಸವರಾಜ ಶೀಲವಂತರ್‌ ಆಸ್ಪತ್ರೆಗೆ ಭೇಟಿ ನೀಡಿ ಆ ಮಹಿಳೆಗೆ ಕೂಡಲೇ ಚಿಕಿತ್ಸೆ ನೀಡಬೇಕು. ಶಿಕ್ಷಣ ಪಡೆಯಬೇಕಾದ ಮಗು ಭಿಕ್ಷೆ ಬೇಡಿ ತಾಯಿಗೆ ಊಟ ಮಾಡಿಸುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಗುವಿಗೆ ಶಿಕ್ಷಣ ಕೊಡಿಸಬೇಕು. ತಾಯಿಗೆ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಲಬುರ್ಗಾ: ಬೆಂಗಳೂರಿನಲ್ಲಿ ನಡೆದ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಹೋರಾಟದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ದೇಶ ದ್ರೋಹಿ ಯುವತಿ ಅಮೂಲ್ಯ ಹಾಗೂ ಅರ್ದ್ರಾ ವಿರುದ್ಧ...

  • ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ನಾಲ್ಕೈದು ವರ್ಷಗಳಿಂದ ಮಳೆ ಕೊರತೆ,...

  • ಕೊಪ್ಪಳ: ಪಾಕಿಸ್ತಾನ್‌ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ಅಶೋಕ ವೃತ್ತದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು...

  • ಕಾರಟಗಿ: ಗ್ರಾಪಂನಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದರೂ ಪಟ್ಟಣದ ಕೆಲ ವಾರ್ಡ್‌ ಗಳಲ್ಲಿ ಮೂಲಸೌಕರ್ಯ ಇಲ್ಲದಂತಾಗಿವೆ. ಪಟ್ಟಣದ 2 ಮತ್ತು 3ನೇ ವಾರ್ಡ್‌ನಲ್ಲಿ ಕುಡಿವ...

  • ಗಂಗಾವತಿ: ಮಿನಿಗೋವಾ, ದೇಶ ವಿದೇಶದ ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದ ಹಂಪಿ ಸಮೀಪದಲ್ಲಿರುವ ತಾಲೂಕಿನ ವಿರೂಪಾಪೂರಗಡ್ಡಿ ಸಂಪೂರ್ಣ ಖಾಲಿ ಖಾಲಿಯಾಗಿದ್ದು,...

ಹೊಸ ಸೇರ್ಪಡೆ