ಆಧುನಿಕತೆಗೆ ತೆರೆದುಕೊಳ್ಳದ ಗ್ರಂಥಾಲಯ

Team Udayavani, Oct 21, 2019, 3:40 PM IST

kopala-tdy-1

ಕುಷ್ಟಗಿ: ಜ್ಞಾನ ವಿಕಾಸದ ಪ್ರೇರಣೆಯಾಗಿರುವ ಪಟ್ಟಣದ ಶಾಖಾ ಗ್ರಂಥಾಲಯ ಹೊಸ ಕಟ್ಟಡವಾಗಿ ನಾಲ್ಕು ವರ್ಷಗಳಾಗಿವೆ. ಮಾಹಿತಿ ತಂತ್ರಜ್ಞಾನದ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳದೇ ಸರ್ಕಾರದ ಇತಿಮಿತಿಯಲ್ಲಿ ಅದೇ ವ್ಯವಸ್ಥೆಯಲ್ಲಿರುವುದೇ ಓದುಗರ ನಿರಾಸಕ್ತಿಗೆ ಕಾರಣವಾಗಿದೆ.

ಬಹುತೇಕ ಓದುಗರು ಮೊಬೈಲ್‌ ಗೆ ಮುಖಮಾಡಿರುವ ಹಿನ್ನೆಲೆಯಲ್ಲಿ ಗ್ರಂಥಾಲಯಕ್ಕೆ ಓದುಗರು ಭೇಟಿ ನೀಡುವುದು ವಿರಳರಾಗುತ್ತಿದ್ದು, ಇದನ್ನು ತಪ್ಪಿಸಲು ಓದುಗರ ನಿರೀಕ್ಷಿಸದಂತೆ ಕಾಲಕ್ಕೆ ತಕ್ಕಂತೆ ಇ-ಗ್ರಂಥಾಲಯಕ್ಕೆ ಬೇಡಿಕೆ ವ್ಯಕ್ತವಾಗಿದೆ. ಪಟ್ಟಣದಲ್ಲಿ 1982ರಿಂದ ಮಂಡಲ ಗ್ರಂಥಾಲಯ ಅಸ್ತಿತ್ವದಲ್ಲಿದ್ದು, 15 ವರ್ಷಗಳ ಹಿಂದೆ ಶಾಖಾ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಮಂಡಲ ಗ್ರಂಥಾಲಯ ಹಳೆ ಕಟ್ಟಡ ತೆರವುಗೊಳಸಿ ಈ ಹೊಸ ಕಟ್ಟಡ ನಿರ್ಮಾಣವಾಗಲು 10 ವರ್ಷ ಹಿಡಿಯಿತು. 2015ರಲ್ಲಿ ನಿರ್ಮಾಣಗೊಂಡಿರುವ ಈ ಹೊಸ ಕಟ್ಟಡದಲ್ಲಿ ಈಗಿನ ಓದುಗರ ನಿರಾಸಕ್ತಿಗೆ, ಸದ್ಯದ ಪರಿಸ್ಥಿತಿಗೆ ಸರಿ ಹೊಂದಿದೆ.

26 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದ ಈ ಗ್ರಂಥಾಲಯದಲ್ಲಿ 600 ಜನ ಸದಸ್ಯತ್ವ ಹೊಂದಿದ್ದಾರೆ. ಇವರಲ್ಲಿ ಪುಸ್ತಗಳನ್ನು ತೆಗೆದುಕೊಂಡು ಹೋಗಿ, ಓದಿ ವಾಪಸ್‌ ಕೊಡುವುದನ್ನು ರೂಢಿಸಿಕೊಂಡವರು 150 ಜನ ಮಾತ್ರ. ಕೇವಲ 20 ಜನರಿಗೆ ಸೀಮಿತವಾಗಿರುವ ಈ ಗ್ರಂಥಾಲಯದ ಆಸನದ ವ್ಯವಸ್ಥೆಯಲ್ಲಿ ಟಿವಿ, ಮೊಬೈಲ್‌, ಸಾಮಾಜಿಕ ಜಾಲತಾಣದ ಪರಿಣಾಮದಿಂದ ಓದುಗರು ನಿಯತ ಕಾಲಿಕೆಗೆ ಸೀಮಿತವಾಗಿದ್ದಾರೆ.

ದಿನ ಪತ್ರಿಕೆ, ವಾರಪತ್ರಿಕೆ, ಮಾಸಿಕ ಓದಲಷ್ಟೇ ಗ್ರಂಥಾಲಯಕ್ಕೆ ಬರುತ್ತಿದ್ದು, ಕೊಠಡಿಯಲ್ಲಿರುವ 17,185 ಪುಸ್ತಕಗಳ ಭಂಡಾರವನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಆಸನದ ಅಭಾವವಿದೆ. ಕಥೆ, ಕವನ, ಕಾದಂಬರಿ, ಸಾಹಿತ್ಯ ಕೃತಿಗಳನ್ನು ಅಲ್ಲಿ ಓದುವ ಪೂರಕ ವಾತಾವರಣ ಇಲ್ಲದ ಹಿನ್ನೆಲೆಯಲ್ಲಿ ಓದುಗರು ಪುಸ್ತಕಗಳ ವಿನಿಮಯಕ್ಕೆ ಗ್ರಂಥಾಲಯಕ್ಕೆ ಭೇಟಿ ನೀಡುವುದು ರೂಢಿಸಿಕೊಂಡಿದ್ದಾರೆ.

ಗ್ರಂಥಾಲಯದ ಎದುರಿಗೆ ಇರುವ ಪುರಸಭೆ ಆವರಣ, ಹೋಟಲ್‌ ಗಳಲ್ಲಿ ಗಂಟೆಗಟ್ಟಲೇ ಹರಟೆಯಲ್ಲಿ ಸಮಯ ಕಳೆಯುವ ಯುವಕರು ಗ್ರಂಥಾಲಯಕ್ಕೆ ಬರುವುದು ಅಪರೂಪವೆನಿಸಿದೆ. ನಿವೃತ್ತರು, ವೃದ್ಧರು, ಉದ್ಯೋಗ ಆಕಾಂಕ್ಷಿಗಳು, ಕೆಲ ಸಾಹಿತ್ಯಾಸಕ್ತರು ಓದುವ ಹಸ್ಯಾವ ರೂಢಿಸಿಕೊಂಡಿದ್ದು, ಈ ಪರಿಸ್ಥಿತಿಯಲ್ಲೂ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪುಸ್ತಕಗಳಿಗಾಗಿಹುಡುಕಿಕೊಂಡು ಗ್ರಂಥಾಲಯಕ್ಕೆ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ.

ಅವ್ಯವಸ್ಥೆ: ಗ್ರಂಥಾಲಯದ ಹಿಂಬದಿ ಜಾಗೆಯಲ್ಲಿ ಪುರಸಭೆ ವಿರೋಧ ಲೆಕ್ಕಿಸದೇ ಚರಂಡಿ ನಿರ್ಮಿಸಲಾಗಿದೆ.  ಇದರಿಂದಾಗಿ ಚರಂಡಿ ನೀರು ಗ್ರಂಥಾಲಯದ ಆವರಣ ಮೂಲಕ ಹೊರಗೆ ಹರಿಯುತ್ತಿದ್ದು, ಚರಂಡಿ ಮುಚ್ಚಿಸಲು ಗ್ರಂಥಾಲಯ ಸಿಬ್ಬಂದಿ ಸ್ಥಳೀಯ ನಿವಾಸಿಗರ ವಿರೋಧ ಕಟ್ಟಿಕೊಳ್ಳುವಂತಾಗಿದೆ. ಚರಂಡಿ ನೀರಿನ ದುರ್ವಾಸನೆ ಒಂದೆಡೆಯಾದರೆ, ಪಕ್ಕದ ಮಟನ್‌ ಮಾರ್ಕೆಟ್‌ ತ್ಯಾಜ್ಯವನ್ನು ಗ್ರಂಥಾಲಯದ ಪಕ್ಕದಲ್ಲಿ ಹಾಕುತ್ತಿರುವುದು ಅಸನೀಯವೆನಿಸಿದೆ.

ಇನ್ನೂ ಗ್ರಂಥಾಲಯದ ಹೊರಗೆ ಖಾಸಗಿ ವಾಹನಗಳ ಪಾರ್ಕಿಂಗ್‌ ಹಿನ್ನೆಲೆಯಲ್ಲಿ ರವಿವಾರ ವಾರದ ಸಂತೆಯಂದು ಗ್ರಂಥಾಲಯಕ್ಕೆ ದಾರಿಯೇ ಇರುವುದಿಲ್ಲ. ಕಳೆದ 2015ರಲ್ಲಿ ಗ್ರಂಥಾಲಯ ಇಲಾಖೆಯ ಅನುದಾನದ 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿದ ಗ್ರಂಥಾಲಯದ ಹೊಸ ಕಟ್ಟಡ ಉದ್ಘಾಟನೆಯಾದಾಗಿನಿಂದ ಮಳೆಗಾಲದಲ್ಲಿ ಸೋರುತ್ತಿದೆ. ಗ್ರಂಥಾಲಯದ ಮೇಲ್ಛಾವಣಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಳೆ ನೀರು ಸೋರಿ ಗ್ರಂಥಾಲದಲ್ಲಿರುವ ಪುಸ್ತಕಗಳು ಹಾಳಾಗುವ ಅಪಾಯದ ಹಿನ್ನೆಲೆಯಲ್ಲಿ ಸಂಬಂಧಿಸಿದವರಿಗೆ ಮಾಹಿತಿ ನೀಡಿದರೂ ಸರಿಪಡಿಸಿಲ್ಲ.

ಗ್ರಂಥಾಲಯದ ಆವರಣದಲ್ಲಿ ಕಿರು ಉದ್ಯಾನ ನಿರ್ಮಿಸಿ, ಅಲ್ಲಿ ಓದುಗರಿಗೆ ಅನುಕೂಲವಾಗಲು ವಿಶ್ರಾಂತಿ ಆಸನ ನಿರ್ಮಿಸುವ ಉದ್ದೇಶವಿದೆ. ಆದರೆ ಅಕ್ಕಪಕ್ಕದ ಗಲೀಜು ವ್ಯವಸ್ಥೆಯಿಂದ ಸಾಧ್ಯವಾಗಿಲ್ಲ. ಶರಣಪ್ಪ ವಡಿಗೇರಿ,ಗ್ರಂಥಾಲಯ ಮೇಲ್ವಿಚಾರಕ

ಗ್ರಂಥಾಲಯದಲ್ಲಿ ಓದುಗರಿಗೆ ಅಲ್ಲಿಯೇ ಓದುವ ವ್ಯವಸ್ಥೆ ಇದ್ದು, ಪುಸ್ತಕದ ಪುಟಗಳ ಝೆರಾಕ್ಸ್‌ ಮಾಡಿಕೊಳ್ಳಲು ಜೆರಾಕ್ಸ್‌ ಯಂತ್ರ, ವಿದ್ಯುತ್‌ ಇಲ್ಲದ ಸಂದರ್ಭದಲ್ಲಿ ಯುಪಿಎಸ್‌ ಹಾಗೂ ಇಂಟರ್‌ನೆಟ್‌, ಕಂಪ್ಯೂಟರ್‌ ಸೇವೆ ಅಗತ್ಯವಾಗಿದೆ. ಓದುಗರ ಸಂಖ್ಯೆಗೆ ಅನುಗುಣವಾಗಿ ಆಸನದ ಕೊರತೆ ಇದ್ದು, ಮೇಲ್ಮಹಡಿ ಸಭಾಂಗಣ ನಿರ್ಮಿಸಿ ಉನ್ನತೀಕರಿಸುವ ಅಗತ್ಯವಿದೆ. ಕೆ.ಎಸ್‌. ಬಿರಾದಾರ, ಓದುಗ

-ಮುಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.