Udayavni Special

ಪೈಪ್‌ಲೈನ್‌ ಒಡೆದು 18 ಗಂಟೆ ಹಳ್ಳದಂತೆ ಹರಿದ ನೀರು

Team Udayavani, Jul 10, 2019, 4:04 PM IST

kopala-tdy-4..

ಕುಷ್ಟಗಿ: ವ್ಹಾಲ್ ಬಿರುಕಿನಿಂದ ಕಾರಂಜಿಯಂತೆ ಚಿಮ್ಮುತ್ತಿರುವ ಕೃಷ್ಣಾ ನದಿ ನೀರು.

ಕುಷ್ಟಗಿ: ಆಲಮಟ್ಟಿ ಜಲಾಶಯದಿಂದ ಜಿಂದಾಲ್ಗೆ ಸರಬರಾಜಾಗುವ ಪೈಪ್‌ಲೈನ್‌ ಒಡೆದು ರೈತರ ಜಮೀನುಗಳಲ್ಲಿ ಹಳ್ಳದಂತೆ ಹರಿದಿದ್ದು, ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಚೇತರಿಕೆ ಹಂತದ ಬೆಳೆಗಳು ಜಲಾವೃತಗೊಂಡಿದ್ದು ಅಪಾರ ಹಾನಿ ಸಂಭವಿಸಿದ ಘಟನೆ ಕುಷ್ಟಗಿ ಸೀಮಾದಲ್ಲಿ ನಡೆದಿದೆ.

10 ವರ್ಷಗಳ ಹಿಂದೆ ಆಲಮಟ್ಟಿ ಜಲಾಶಯದಿಂದ ಕುಷ್ಟಗಿ ಮೂಲಕ ಜಿಂದಾಲ್ (ಜೆಎಸ್‌ಡಬ್ಲ್ಯೂ) ಕೈಗಾರಿಕಾ ಸಮೂಹಕ್ಕೆ ಬೃಹತ್‌ ಪೈಪ್‌ಲೈನ್‌ ಅಳವಡಿಸಲಾಗಿದೆ. ಪೈಪಲೈನ್‌ ಮಾರ್ಗದಲ್ಲಿ ಅಲ್ಲಲ್ಲಿ ನೀರಿನ ರಭಸ ನಿಯಂತ್ರಿಸಲು ವ್ಹಾಲ್ ಅಳವಡಿಸಲಾಗಿದೆ. ಕುಷ್ಟಗಿ ವ್ಯಾಪ್ತಿಯಲ್ಲಿ ರೇಣವ್ವ ಕಂದಗಲ್ ಅವರ ಜಮೀನಿನಲ್ಲಿ ವ್ಹಾಲ್ ಅಳವಡಿಸಲಾಗಿದ್ದು ಕಳೆದ ಸೋಮವಾರ ಪೈಪ್‌ಲೈನ್‌ ನೀರಿನ ಒತ್ತಡಕ್ಕೆ ಒಡೆದಿದೆ. ನೀರು ಸುಮಾರು ಆರು ಅಡಿ ಎತ್ತರ ಚಿಮ್ಮಿದ್ದು, ಅಪಾರ ಪ್ರಮಾಣದಲ್ಲಿ ನೀರು 18 ಗಂಟೆಗಳ ಕಾಲ ಹರಿದಿದೆ. ಮಂಗಳವಾರ ಬೆಳಗ್ಗೆ ಜಮೀನು, ಹಳ್ಳದಲ್ಲಿ ನೀರು ಹರಿಯುತ್ತಿರುವುದು ಅಚ್ಚರಿ ಮೂಡಿಸಿತು. ನಂತರ ಗಮನಿಸಿದಾಗ ರೇಣವ್ವ ಕಂದಗಲ್ ಅವರ ಜಮೀನಿನಲ್ಲಿರುವ ಪೈಪ್‌ಲೈನ್‌ ಒಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೈಪ್‌ಲೈನ್‌ ಮೇಲುಸ್ತುವಾರಿಯ ಜಿಂದಾಲ್ ಕಂಪನಿಯ ಸಂತೋಷ ಮೂಲಿಮನಿ, ಇಲಕಲ್ ಮೇಲುಸ್ತುವಾರಿಯ ಸಿದ್ರಾಮಪ್ಪ ಅವರ ಗಮನಕ್ಕೆ ತಂದು ನೀರು ಸರಬರಾಜು ನಿಲ್ಲಿಸುವಂತೆ ಒತ್ತಾಯಿಸಲಾಯಿತು. ನಂತರ ಆಗಮಿಸಿದ ಮೇಲುಸ್ತುವಾರಿ ಸಿಬ್ಬಂದಿ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸಂಪೂರ್ಣ ನಿಯಂತ್ರಣಕ್ಕೆ ಬಂತು.

ನೀರಿನ ರಭಸಕ್ಕೆ ರೇಣವ್ವ ಕಂದಗಲ್ ಅವರ 4 ಎಕರೆ, ಚಂದಪ್ಪ ಕಂದಗಲ್ ಅವರ 3 ಎಕರೆ, ಮಂಜುನಾಥ ಮಹಾಲಿಂಗಪೂರ, ರಮೇಶ ಮಹಾಲಿಂಗಪುರ ಅವರ 10 ಎಕರೆ, ಹುಸೇನಸಾಬ್‌ ಕಾಯಿಗಡ್ಡಿ ಅವರ 3 ಎಕರೆಯಲ್ಲಿ ಬಿತ್ತನೆ ಮಾಡಿದ್ದ ಹೆಸರು ಬೆಳೆ ಜಲಾವೃತಗೊಂಡಿದೆ. ಜಿಂದಾಲ್ ಪೈಪ್‌ಲೈನ್‌ ವ್ಹಾಲ್ ಇರುವ ಪ್ರದೇಶಕ್ಕೆ ಪಿಎಸ್‌ಐ ವಿಶ್ವನಾಥ ಹಿರೇಗೌಡ್ರು, ಗ್ರಾಮ ಲೆಕ್ಕಾಧಿಕಾರಿ ಶರಣಪ್ಪ ದಾಸರ ಭೇಟಿ ನೀಡಿ ಪರಿಶೀಲಿಸಿದರು.

ಪೈಪ್‌ಲೈನ್‌ ವ್ಹಾಲ್ ಯಾರೋ ದುಷ್ಕರ್ಮಿಗಳು ಕಲ್ಲಿನಿಂದ ಧ್ವಂಸಗೊಳಿಸಿದ್ದರಿಂದಲೇ ಈ ರೀತಿಯಾಗಿದೆ ಎಂದು ಸಂತೋಷ ಮೂಲಿಮನಿ ರೆೈತರಿಗೆ ತಿಳಿಸಿದರು, ನಂತರ ಪಿಎಸ್‌ಐ ವಿಶ್ವನಾಥ ಹಿರೇಗೌಡ್ರು ಆಗಮಿಸಿದ್ದ ವೇಳೆ ಪೈಪ್‌ನಲ್ಲಿ ವ್ಹಾಲ್ಗೆ ಪ್ಲಾಸ್ಟಿಕ್‌ ಇತರೇ ತ್ಯಾಜ್ಯ ಕಟ್ಟಿಕೊಂಡಾಗ ವ್ಹಾಲ್ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ತಿಳಿಸಿದರು. ಈ ಧ್ವಂದ್ವ ಹೇಳಿಕೆ ಪ್ರಶ್ನಾರ್ಹವಾಗಿದೆ. ಇಲಕಲ್ ಪೈಪ್‌ಲೈನ್‌ ಮೇಲುಸ್ತುವಾರಿ ಸಿಬ್ಬಂದಿ ಸಿದ್ರಾಮಪ್ಪ ಅವರು ವ್ಹಾಲ್ನಿಂದ ನೀರು ಹರಿದು ಜಮೀನು ಹಾಳಾಗಿರುವ ಬಗ್ಗೆ ಮೇಲಾಧಿಕಾರಿಗಳ ಚಿತ್ರ ಸಮೇತ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಜಿಂದಾಲ್ ಕಂಪನಿಯ ಪೈಪ್‌ಲೈನ್‌ ವ್ಹಾಲ್ ಬಿರುಕು ತಾಂತ್ರಿಕ ದೋಷದಿಂದ ನೀರು ಹರಿದು ಬೆಳೆ, ಜಮೀನು ಹಾಳಾಗಿರುವ ಬಗ್ಗೆ ರೆೈತರು ದೂರು ನೀಡಿದರೆ, ಸಂಬಂಧಿಸಿದ ಕಂಪನಿ ಅಧಿಕಾರಿಯನ್ನು ಕರೆಸಿ ವಿಚಾರಿಸಲಾಗುವುದು.•ಕೆ.ಎಂ. ಗುರುಬಸವರಾಜ್‌, ತಹಶೀಲ್ದಾರ್‌

ಟಾಪ್ ನ್ಯೂಸ್

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

rwytju11111111111

ಶುಕ್ರವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಕೇರಳದಲ್ಲಿ ಮತ್ತೆ ಮಳೆ

ಕೇರಳದಲ್ಲಿ ಮತ್ತೆ ಮಳೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gangavathi news

ಸಿಂದಗಿ, ಹಾನಗಲ್ ನಲ್ಲಿ ಬಿಜೆಪಿಗೆ ಗೆಲುವು: ಸಚಿವ ಬಿ. ಶ್ರೀರಾಮುಲು

ಕಾಂಗ್ರೆಸ್‌ಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ: ಹಾಲಪ್ಪ ಆಚಾರ್

ಕಾಂಗ್ರೆಸ್‌ಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ: ಹಾಲಪ್ಪ ಆಚಾರ್

Untitled-1

ಮೃತ್ಯುಕೂಪವಾಗಿರುವ ಸಾಣಾಪೂರ ಕೆರೆ: ಪ್ರವಾಸಿಗರ ಜೀವ ಉಳಿಸಲು ಜಿಲ್ಲಾಡಳಿತ ಮುಂದಾಗಲಿ

fhfcghftyt

ಕೆಟ್ಟು ನಿಂತ ಆಂಬ್ಯುಲೆನ್ಸ್‌  | ಮೈಮರೆತ ಕಿಮ್ಸ್‌  

ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಕೀಯ ಗಂಜಿಗಿರಾಕಿಗಳ ಸ್ಪರ್ಧೆ ಶಂಕರ ಹೂಗಾರ ಆರೋಪ

ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಕೀಯ ಗಂಜಿ ಗಿರಾಕಿಗಳ ಸ್ಪರ್ಧೆ ಶಂಕರ ಹೂಗಾರ ಆರೋಪ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

rwytju11111111111

ಶುಕ್ರವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.