ತರಾತುರಿಯಲ್ಲಿ ಕ್ರಿಯಾಯೋಜನೆ ಅನುಮೋದನೆ: ಆರೋಪ

Team Udayavani, Jun 6, 2019, 2:45 PM IST

ಕನಕಗಿರಿ: ಪಟ್ಟಣ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್‌ ಸದಸ್ಯರು ಸಭೆ ನಡೆಸಿದರು.

ಕನಕಗಿರಿ: ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಶಾಸಕ ಬಸವರಾಜ ದಢೇಸುಗೂರು ಅವರು ಮುಖ್ಯಮಂತ್ರಿ ವಿಮೋಚನಾ ನಿಧಿಯಡಿ 2018-19ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನವನ್ನು ಸದಸ್ಯರ ಗಮಕ್ಕೆ ತರದೆ ಮೇ 24ರಂದು ಶಾಸಕರ ಅಧ್ಯಕ್ಷತೆಯಲ್ಲಿ ಪಪಂಯಲ್ಲಿ ಕ್ರಿಯಾ ಯೋಜನೆ ಮಾಡಿದ್ದಾರೆ. ತರಾತುರಿಯಲ್ಲಿ ಚುನಾವಣೆ ನೀತಿ ಸಂಹಿತೆಯಿರುವಾಗ ಕ್ರಿಯಾ ಯೋಜನೆ ಅವಸರವೇನಿತ್ತು ಎಂದು ಪಪಂ ಕಾಂಗ್ರೆಸ್‌ ಸದಸ್ಯ ಶರಣಪ್ಪ ಭತ್ತದ್‌ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ಬಂದಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸದಸ್ಯರ ಗಮನಕ್ಕೆ ತರದೇ ಕ್ರಿಯಾ ಯೋಜನೆ ಮಾಡದಿರುವುದು ಸರಿಯಲ್ಲ. ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಏಕ ಪಕ್ಷೀಯವಾಗಿ ಶಾಸಕರು ಈ ರೀತಿ ಮಾಡಿರುವುದು ಖಂಡನೀಯ. ಸಭೆ ಕರೆದು ಜೂ. 4ರಂದು ಕ್ರಿಯಾ ಯೋಜನೆ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಪಪಂ ಸದಸ್ಯರಾದ ಕಾಂಗ್ರೆಸ್‌ ಹುಲುಗಪ್ಪ ವಾಲೇಕಾರ, ರವಿ ಭಜಂತ್ರಿ, ಮಂಜುನಾಥ ಗಡಾದ್‌, ಸೈಯದ್‌ ಮಹ್ಮದ್‌ ಪಾಷಾ, ಹುಸೇನಸಾಬ್‌ ಸುಳೇಕಲ್, ಖಾಜಾ ಮೈನುದ್ದೀನ್‌, ಇಬ್ರಾಹಿಂಸಾಬ್‌, ಪರಸಪ್ಪ ಚೌಡ್ಕಿ, ಕನಕದಾಸ ಸೇರಿದಂತೆ ಇತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ