ಡ್ರಗ್ ಪ್ರಕರಣದಲ್ಲಿ ಯಾವ ಮಾಫಿಯಾ ಇದ್ದರೂ ತನಿಖೆಯಲ್ಲಿ ಗೊತ್ತಾಗಲಿದೆ : ಬಿ.ಸಿ ಪಾಟೀಲ್

Team Udayavani, Sep 11, 2020, 11:27 AM IST

ಬಿ.ಸಿ ಪಾಟೀಲ್

ಕೊಪ್ಪಳ: ಡ್ರಗ್ಸ್ ಮಾಫಿಯಾಗೆ ಭೂ ಮಾಫಿಯಾ, ಟೆರರಿಸ್ಟ್, ಐಎಸ್ಐ ಕೈವಾಡ ಇದೆಯೇ ಎನ್ನುವುದು ತನಿಖೆ ವೇಳೆ ಗೊತ್ತಾಗಲಿದೆ. ಡ್ರಗ್ ನಲ್ಲಿ ಎಲ್ಲರೂ ಪವಿತ್ರರು, ಪತಿವ್ರತೆಯರು ಎಂದು ಹೇಳಕ್ಕಾಗಲ್ಲ ಇದೆಲ್ಲ ತನಿಖೆ ವೇಳೆ ಗೊತ್ತಾಗಲಿದೆ  ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು.‌

ಯಲಬುರ್ಗಾ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರ ಜೊತೆ ಮಾತನನಾಡಿ, ಡ್ರಗ್ ಮಾಫಿಯಾದಲ್ಲಿ ಯಾರ ಕೈವಾಡ ಇದೆ ಎನ್ನುವುದು ತನಿಖೆಯಿಂದ ಬಯಲಿಗೆ ಬರಲಿದೆ. ಆದರೆ ಡ್ರಗ್ ಮಾಫಿಯಾ ಎನ್ನೊದು ಕೆಟ್ಟ ಪರಿಮಾಣ ಬೀರುತ್ತದೆ. ಇದರ ನಿರ್ಮೂಲನೆಗೆ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ನಾನೂ ಸಿನಿಮಾ ನಟನಾಗಿ ಕೆಲಸ ಮಾಡಿದ್ದೇನೆ. ನಮ್ಮ ಅವಧಿಯಲ್ಲಿ ಇಂತಹ ಯಾವುದೇ ಡ್ರಗ್ ಇರಲಿಲ್ಲ. ಈಗ ಅದು ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಯುವ ಜನಾಂಗವು ಇದಕ್ಕೆ ಬಲಿಯಾಗುತ್ತಿದೆ. ಚಿತ್ರರಂಗದಲ್ಲಿ ಇದ್ದವರು ಗಾಜಿನ ಮನೆಯಲ್ಲಿ ಇದ್ದಂತೆ, ನಮ್ಮನ್ನ ಲಕ್ಷಾಂತರ ಜನ ನೋಡುತ್ತಿರುತ್ತಾರೆ. ಫಾಲೋವರ್ಸ್ ಇರುತ್ತಾರೆ. ನಮ್ಮಂತೆ ಅವರು ಅನುಕರಣೆ ಮಾಡುತ್ತಾರೆ. ಅದು ಒಳ್ಳೆಯದನ್ನು ಅನುಕರಣೆ ಮಾಡಿದರೆ ತೊಂದರೆ ಇಲ್ಲ. ಆದರೆ‌ ಇಂತದ್ದನ್ನು ಅನುಕರಣೆ ಮಾಡಿದರೆ ದೊಡ್ಡ ದುರಂತ ಆಗುತ್ತದೆ ಎಂದರು.

ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಮೂವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ: ಹುಂಡಿ ದೋಚಿ ಪರಾರಿ

ಸಿನಿಮಾದಲ್ಲಿ ಇರುವವರು ಇನ್ನೊಬ್ಬರಿಗೆ ರೋಲ್ ಮಾಡಲ್ ಗಳಾಗಿ ಇರಬೇಕು. ಡ್ರಗ್ ವಿಚಾರದಲ್ಲಿ ಜಮೀರ್ ಅಹ್ಮದ್ ಸೇರಿ ಯಾರದ್ದೇ ಹೆಸರು ಕೇಳಿ ಬಂದರೂ ಯಾರನ್ನೂ ಬಿಡಲ್ಲ. ಇದರಲ್ಲಿ ರಾಜಕೀಯದವರು, ಸಿನಿಮಾದವರು ಅಂತಾ ಇಲ್ಲ. ಎಲ್ಲದರಲ್ಲೂ ಇರ್ತಾರೆ. ಯಾರ ಮಾಡಿದರೂ ತಪ್ಪು ತಪ್ಪೆ ಎಂದರು.

ಗಾಂಜಾ ಲೀಗಲ್‌ ಮಾಡೋದು ತಪ್ಪು. ಅದನ್ನು ಮಾಡಬಾರದು. ಇಂದು ತಂಬಾಕು ಮಾರಾಟ ಮಾಡುವುದು ತಪ್ಪೆ. ಒಂದು ಸಿಗರೇಟಿನಲ್ಲಿ ತಂಬಾಕು ಇದ್ದರೂ ಜನ ಅದನ್ನು ಸೇವನೆ ಮಾಡುತ್ತಾರೆ. ಆದರೆ ಡ್ರಗ್ ಎನ್ನೋದು ಅತಿರೇಕಕ್ಕೆ ಹೋಗುವಂತದ್ದು, ಮನುಷ್ಯನ ಜೀವನವನ್ನೆ ಬಲಿ ಪಡೆಯುತ್ತದೆ ಎಂದರು.

ಇನ್ನು ಕೃಷಿ ಪದವಿ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋಡಿಹಳ್ಳಿ ಅವರಿಗೆ ಈ ಬಗ್ಗೆ ಜ್ಞಾನ ಇಲ್ಲ ಅಂತ ನಾನು ತಿಳಿದುಕೊಳ್ಳುವೆ.‌ ಪದವಿಯಲ್ಲಿ ಶೇ.40 ರಷ್ಟು ರೈತರ ಮಕ್ಕಳಿಗೆ ಅವಕಾಶ ಇದ್ದೆ ಇರುತ್ತದೆ. ನಾನೂ ರೈತನ ಮಗ ನಾವೂ ಕೃಷಿ ಮಾಡಿದ್ದೇನೆ. ನಮ್ಮ ಮುತ್ತಾತನ ಕಾಲದಿಂದಲೂ ಕೃಷಿ‌ಯಲ್ಲಿ‌ ತೊಡಗಿದ್ದೇವೆ ಎಂದರು.

ಇದನ್ನೂ ಓದಿ: ಕುಂಟಿಕಾನ ವಸತಿ ಸಮುಚ್ಛಯ ತಡೆಗೋಡೆ ಕುಸಿತ:10ಕ್ಕೂ ಹೆಚ್ಚು ಕಾರುಗಳು ಮಣ್ಣಿನಡಿ ಹೂತಿರುವ ಶಂಕೆ

ಸಿನಿಮಾ ನಟನನ್ನು ಕೃಷಿ ಸಚಿವನನ್ನಾಗಿ ಮಾಡಿದ್ದಾರೆ ಎಂದಿದ್ದಾರೆ. ರೈತ ಪರವಾಗಿ ಹೋರಾಟ ಮಾಡಿ 20 ದಿನಗಳ ಕಾಲ ಹಿಂಡಲಗಾ ಜೈಲಿಗೆ ಹೋಗಿ ಬಂದಿದ್ದೇನೆ. ಆದರೆ ಕೋಡಿಹಳ್ಳಿ ಅವರು ಏಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ನಾವು ಕಳಪೆ ಬೀಜ ಪತ್ತೆ ಮಾಡಿದಾಗ ಯಾರೊಬ್ಬರೂ ನಮ್ಮ ಬಗ್ಗೆ ಮಾತನಾಡಲಿಲ್ಲ. ನಾವು ಒಳ್ಳೆ ಕೆಲಸ ಮಾಡುತ್ತಿದ್ದೇವೆ. ಯಾವ ಕೃಷಿ ಮಂತ್ರಿಯ ಕಾಲದಲ್ಲೂ ಕಳಪೆ ಬೀಜ ಹಿಡಿದಿಲ್ಲ. ನಾವು 12 ಕೋಟಿ ಕಳಪೆ ಬೀಜ ಹಿಡಿದಿದ್ದೇವೆ. ಕೋಡಿಹಳ್ಳಿ ಅವರು ಪ್ರಚಾರಕ್ಕಾಗಿ ಹೀಗೆ ಹೇಳಿದ್ದಾರೆ ಎಂದರು.

ವಿಧಾನ ಸೌಧಕ್ಕೆ ರೈತರ ಮುತ್ತಿಗೆ ವಿಚಾರ ಕಾಯ್ದೆಗಳ ತಿದ್ದುಪಡಿ ಕುರಿತು ಸರ್ಕಾರವು ಸದನಲ್ಲಿ ಸಮರ್ಪಕ ಉತ್ತರ ಕೊಡಲಿದೆ. ಮೆಕ್ಕೆಜೋಳ ಖರೀದಿ ಮಾಡುವಂತೆ ಉಪ ಸಮಿತಿಯಲ್ಲಿ ಒತ್ತಾಯ ಮಾಡಿದ್ದೀವಿ. ಇದನ್ನು ನಾನು ಗ್ಯಾರಂಟಿ ಕೊಡಲ್ಲ. ಈ ವರೆಗೂ ಖರೀದಿ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದರು.

ಟಾಪ್ ನ್ಯೂಸ್

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.