ಶ್ರೀಚನ್ನ ಬಸವಸ್ವಾಮಿ ಜೋಡು ರಥೋತ್ಸವ ಸರಳ
Team Udayavani, Jan 16, 2022, 10:53 PM IST
ಗಂಗಾವತಿ: ನಗರದ ಆರಾಧ್ಯ ದೈವ ಎಂದು ಖ್ಯಾತಿ ಪಡೆದ ಶ್ರೀಚನ್ನಬಸವಸ್ವಾಮಿ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಶನಿವಾರ ಜಿಲ್ಲಾಡಳಿತದ ಸೂಚನೆಯಂತೆ ಕೊರೊನಾ ಮಾರ್ಗಸೂಚಿ ಅನುಸಾರ ಜರುಗಿತು. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುವ ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳನ್ನು ಸರಕಾರ ನಿಷೇಧ ಮಾಡಿರುವುದರಿಂದ ಶ್ರೀ ಚನ್ನಬಸವಸ್ವಾಮಿ ಜಾತ್ರೆ ಸರಳವಾಗಿ ನಡೆಯಿತು.
ಜಿಲ್ಲಾಡಳಿತ 50 ಜನರು ಪಾತ್ರ ಮಾರ್ಗಸೂಚಿ ಪಾಲನೆ ಮಾಡಿ ರಥೋತ್ಸವ ಕಾರ್ಯಕ್ರಮ ಜರುಗಿಸಲು ಸೂಚನೆ ನೀಡಿದಂತೆ ಬೆಳಗ್ಗೆ 8 ಗಂಟೆಗೆ 5 ಹೆಜ್ಜೆ ರಥವನ್ನು ಎಳೆಯಲಾಗಿದೆ. ಜಾತ್ರೆಯ ನಿಮಿತ್ತ ಮಠದಲ್ಲಿ ಶ್ರೀಚನ್ನಬಸವಸ್ವಾಮಿ ಕತೃ ಗದ್ದುಗೆಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ನಗರ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಂದ ಪಾದತ್ರೆಯ ಮೂಲಕ ಭಕ್ತರು ಆಗಮಿಸಿದ್ದರು.
ಪಾದಯಾತ್ರೆಯಲ್ಲಿ ಆಗಮಿಸಿದವರಿಗೆ ಬೆಳಗ್ಗೆ 10 ಗಂಟೆವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ತೀರ್ಥ, ಅನ್ನ ಪ್ರಸಾದ ವಿತರಣೆ ನಿಷೇ ಧಿಸಲಾಗಿತ್ತು. ಮಠದ ವತಿಯಿಂದ ಮೈಕ್ ಮೂಲಕ ಆಗಾಗ ವೀಕೆಂಡ್ ಕರ್ಫ್ಯೂ ಇರುವ ಕುರಿತು ಮತ್ತು ಕೊರೊನಾ ಮಾರ್ಗಸೂಚಿ ಪಾಲನೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಯಿತು. ಸಿಂಧನೂರು ರಸ್ತೆ, ಕಂಪ್ಲಿ ರಸ್ತೆ, ಕೊಪ್ಪಳ, ಹೇರೂರು ಮತ್ತು ಆನೆಗೊಂದಿ ಭಾಗದಿಂದ ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತರಿಗೆ ನಗರದ ಹೊರ ವಲಯದಲ್ಲಿ ಶುದ್ಧ ಕುಡಿಯುವ ನೀರು, ಉಪಹಾರ ವಿತರಿಸಲಾಯಿತು