Udayavni Special

ಬೀಳಗಿ ಕೆರೆಯಲ್ಲಿ ನೀರಿಗಿಂತ ಹೂಳೇ ಹೆಚ್ಚು­

1964ರಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಕೆರೆ­! ಹೂಳು ತೆಗೆದರೆ ನೀರಿನ ಸಾಮರ್ಥ್ಯ ಹೆಚ್ಚಳ

Team Udayavani, Mar 20, 2021, 7:40 PM IST

lake

ಕುಷ್ಟಗಿ: ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುರಾತನ ಬೀಳಗಿ ಕೆರೆ ಭಾರೀ ಪ್ರಮಾಣದ ಹೂಳಿನಿಂದಾಗಿ ಚಿಂತಾಜನಕ ಸ್ಥಿತಿ ತಲುಪಿದೆ. ಕೆರೆಯನ್ನು ಆವರಿಸಿಕೊಂಡಿರುವ ಹೂಳು ತೆಗೆಯದ ಹೊರತು ಕೆರೆಗೆ ಮರುಜೀವದ ಕಾಯಕಲ್ಪಿಸುವುದು ಅಸಾಧ್ಯವೆನಿಸಿದೆ.

1964ರಲ್ಲಿ ನಿರ್ಮಾಣವಾಗಿರುವ ಬೀಳಗಿ ಕೆರೆ 57 ವರ್ಷದ ಹಿನ್ನೆಲೆ ಇದೆ. ಸದರಿ ಕೆರೆ 25 ಎಕರೆ 9 ಗುಂಟೆ ವಿಸ್ತೀಣವಿದ್ದು, 15 ಹೆಕ್ಟೇರ್‌ ನೀರಿನ ಸಾಂದ್ರತೆ ಪ್ರದೇಶ ಹೊಂದಿದೆ. 540 ಮೀಟರ್‌ ಉದ್ದ ಹಾಗೂ 5 ಮೀಟರ್‌ ಬಂಡ್‌ (ತಡೆಗೋಡೆ) ಹೊಂದಿದ್ದು, ಕೆರೆಯ ಸಂಗ್ರಹ ಸಾಮಾರ್ಥ್ಯ 3.83 ಎಂಸಿಎಫ್‌ಟಿ ಇದೆ ಸದರಿ ಕೆರೆ ಭರ್ತಿಯಾದಾಗ ಹೊರ ಹರಿವು 2,430 ಕ್ಯೂಸೆಕ್ಸ್‌ ಆಗಿದೆ.

ಹೂಳಿನದ್ದೇ ಸಮಸ್ಯೆ: ಶ್ರೀ ಚಂದಾಲಿಂಗ ಹಾಗೂ ಚಂದ್ರಗಿರಿ, ವೆಂಕಟಾಪುರ ಗುಡ್ಡಗಾಡು ಪ್ರದೇಶದಲ್ಲಿ ಬೀಳುವ ಮಳೆ ನೀರು, ಕಣಿವೆಗಳಲ್ಲಿ ಹರಿದು, ಬೀಳಗಿ ಕೆರೆ ಕಟ್ಟೆ ಸೇರುತ್ತಿದೆ. ಈ ಕೆರೆಯಲ್ಲಿ ನೀರಿನ ಸಂಗ್ರಹಗಿಂತ ಹೂಳಿನ ಸಂಗ್ರಹವೇ ಹೆಚ್ಚಿದ್ದು, ಬಹುಪಾಲು ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಕೆರೆಯ ಸಂಗ್ರಹ ಸಾಮಾರ್ಥ್ಯ ಕ್ಷೀಣಿಸಿದೆ. ಇದರಲ್ಲಿನ ಹೂಳು ಉದ್ಯೋಗ ಖಾತ್ರಿ ಯೋಜನೆಯಿಂದ ಹೂಳಿನಿಂದ ಮುಕ್ತಿ ಹೊಂದುವುದು ಅಸಾಧ್ಯವಾಗಿದೆ. ನಿಡಶೇಸಿ, ತಾವರಗೇರಾ, ಯಲಬುರ್ಗಾ ತಾಲೂಕಿನ ತಲ್ಲೂರು, ಕೊಪ್ಪಳ ತಾಲೂಕಿನ ಗಿಣಗೇರಾ ಕೆರೆಗಳನ್ನು ಸಾರ್ವಜನಿಕರು ಹಾಗೂ ಸರ್ಕಾರ ಸಹಭಾಗಿತ್ವದಲ್ಲಿ ಮಾದರಿಯ ಹೂಳೆತ್ತುವ ಅಭಿವೃದ್ಧಿ ಕೆಲಸದಿಂದ ಮಾತ್ರ ನೀರಿನ ಸಂಗ್ರಹ ಸಾಮಾರ್ಥ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.

ಮಾ.20ರ ಜಿಲ್ಲಾ ಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಫಲಶ್ರುತಿ ಹಿನ್ನೆಲೆಯಲ್ಲಿ ಜನತೆ ಕೆರೆಯ ಪುನಶ್ಚೇತನ ನಿರೀಕ್ಷೆಯಲ್ಲಿದ್ದಾರೆ. ಅಂದುಕೊಂಡಾಂತಾದರೆ ಕೆರೆಗೆ ಪುನಶ್ಚೇತನ ಭಾಗ್ಯ ಕಲ್ಪಿಸಿದರೆ ಮಾತ್ರ ಮನ್ನೇರಾಳ, ಸೇಬಿನಕಟ್ಟಿ, ಕಬ್ಬರಗಿ, ಹೂಲಗೇರಿ, ಬಂಡ್ರಗಲ್ಲ, ಹನುಮಸಾಗರ ಪ್ರದೇಶಕ್ಕೂ ಅಂತರ್ಜಲದ ವಿಸ್ತಾರದ ಸಾಧ್ಯತೆಗಳಿವೆ.

ಕೆರೆಯ ದುಸ್ಥಿತಿ: ಕೆರೆಕಟ್ಟೆಯ ಬಂಡ್‌ (ತಡೆಗೋಡೆ) ಭಾಗದಲ್ಲಿ ಕಲ್ಲುಗಳು ಅಲ್ಲಲ್ಲಿ ಜರಿದಿವೆ. ಅಲ್ಲದೇ ಕೆರೆಗೆ ಹೊಂದಿಕೊಂಡಿರುವ ಪಕ್ಕದ ಬೆಟ್ಟದಲ್ಲಿ ಸೈಜು ಕಲ್ಲುಗಳ ಗಣಿಗಾರಿಕೆ ನಡೆಯುತ್ತಿದ್ದು, ಈ ಕಲ್ಲುಗಳ ಸಾಗಾಣಿಕೆಗೆ ದಾರಿಗೆ ಕೆರೆಯ ಒಡ್ಡು ಹಾಗೂ ಸರ್ವಿಸ್‌ ರಸ್ತೆ ಬಳಸಿಕೊಳ್ಳಲಾಗಿದ್ದು, ನಿತ್ಯ ಲಾರಿ, ಟ್ರಕ್‌ಗಳ ಸಂಚಾರದಿಂದ ಕೆರೆಯ ಒಡ್ಡು ದುರ್ಬಲಗೊಳ್ಳುವ ಆತಂಕವಿದೆ. ಅಲ್ಲದೇ ಕೆರೆಯ ವೇಸ್ಟ್‌ವೇರ್‌ ತಳಭಾಗದಲ್ಲಿ ಬಿರುಕು ಬಿಟ್ಟ ಪರಿಣಾಮ ಕೆರೆಯ ನೀರು ನಿರಂತರ ಸೋರಿಕೆಗೆ ಕಾರಣವಾಗಿದ್ದು, ಸಣ್ಣ ನೀರಾವರಿ ಸಕಾಲಿಕ ಕ್ರಮ ಕೈಗೊಳ್ಳದೇ ಇದ್ದಲ್ಲಿ ವೇಸ್‌ ವೇರ್‌ ಕೊಚ್ಚಿಹೋಗುವ ಸಾಧ್ಯತೆಗಳಿವೆ. ವೇಸ್‌ rವೇರ್‌ ಕೆಳಭಾಗ ನಾಲೆಯಲ್ಲಿ ಮುಳ್ಳುಕಂಟಿ ಬೆಳೆದಿದ್ದು, ವೇಸ್ಟ್‌ವೇರ್‌ ನಿಂದ ಹೊರ ಹರಿವಿನ ನೀರು, ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯ ಅಪಾಯವಿದೆ.

ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

ಬ್ಗಜಹಹಗಗ

ಕೆಲಸಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ಕೊಡಲ್ಲ : ಸಿಎಂ ವಾರ್ನಿಂಗ್

NRC Will Have No Impact On Gorkhas: Amit Shah

ಎನ್ ಆರ್ ಸಿ ಗೂರ್ಖಾಗಳ ಮೇಲೆ ಪರಿಣಾಮ ಬೀರುವುದಿಲ್ಲ : ಅಮಿತ್ ಶಾ

Mamata Didi’s bitterness increasing, you have eliminated TMC in four phases of polls: PM Narendra Modi tells people in West Bengal’s Bardhaman

ಟಿಎಂಸಿ ಪಕ್ಷದವರು ಎಸ್ ಸಿ ಸಮುದಾಯದವರನ್ನು ಭಿಕ್ಷುಕರೆಂದು ನಿಂದಿಸಿದ್ದಾರೆ : ಪ್ರಧಾನಿ ಕಿಡಿ

ದ್ಯಗ್ಗದ್ದ್ಗ

ಕೋವಿಡ್ ಹೆಚ್ಚಳ ಹಿನ್ನೆಲೆ : ಏ,18,19ರಂದು ಸರ್ವಪಕ್ಷ ಸಭೆ ಕರೆದ ಸಿಎಂ ಯಡಿಯೂರಪ್ಪ

ಕೋವಿಡ್ : ಭಾರತದಲ್ಲಿ ಸ್ಫುಟ್ನಿಕ್ V ಲಸಿಕೆ ತುರ್ತು ಬಳಕೆಗೆ ತಜ್ಞರ ಸಮಿತಿ ಗ್ರೀನ್ ಸಿಗ್ನಲ್

ಕೋವಿಡ್: ಭಾರತದಲ್ಲಿ ಸ್ಫುಟ್ನಿಕ್ V ಲಸಿಕೆ ತುರ್ತು ಬಳಕೆಗೆ ತಜ್ಞರ ಸಮಿತಿ ಗ್ರೀನ್ ಸಿಗ್ನಲ್

chgnfhf

ಕೋವಿಡ್‍-19 ಸೋಂಕಿನಿಂದ ಗುಣಮುಖರಾದ ನಟ ಅಕ್ಷಯ್ ಕುಮಾರ್ !

jhgfdsfghb

ಆನ್ ಲೈನ್ ತರಗತಿಗಳು ಇರುತ್ತವೆ, ಆನ್ ಲೈನ್ ಪರೀಕ್ಷೆ ಸಾಧ್ಯವಿಲ್ಲ : ಡಿಸಿಎಂ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೈನ ಸಾಧುಗಳಿಗೆ ಹೆದ್ದಾರಿ ಬದಿ ವಿಶ್ರಾಂತಿ ಗೃಹ

ಜೈನ ಸಾಧುಗಳಿಗೆ ಹೆದ್ದಾರಿ ಬದಿ ವಿಶ್ರಾಂತಿ ಗೃಹ

ಬ್ಗಜಹಹಗಗ

ಕೆಲಸಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ಕೊಡಲ್ಲ : ಸಿಎಂ ವಾರ್ನಿಂಗ್

ಮತ್ತೆ ಕೋವಿಡ್ ಅಟ್ಟಹಾಸ

ಮತ್ತೆ ಕೋವಿಡ್ ಅಟ್ಟಹಾಸ

ಮಹಿಳೆಯರಿಗೆ ಪಿಂಕ್‌ ಬೂತ್‌ ಕಾರ್ಯಕ್ರಮ

ಮಹಿಳೆಯರಿಗೆ ಪಿಂಕ್‌ ಬೂತ್‌ ಕಾರ್ಯಕ್ರಮ

ದ್ಯಗ್ಗದ್ದ್ಗ

ಕೋವಿಡ್ ಹೆಚ್ಚಳ ಹಿನ್ನೆಲೆ : ಏ,18,19ರಂದು ಸರ್ವಪಕ್ಷ ಸಭೆ ಕರೆದ ಸಿಎಂ ಯಡಿಯೂರಪ್ಪ

MUST WATCH

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

udayavani youtube

ಮೇ ಮೊದಲ ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು: ಸುಧಾಕರ್

ಹೊಸ ಸೇರ್ಪಡೆ

Clove health Benefits

ಲವಂಗ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೋತ್ತಾ?

ಜೈನ ಸಾಧುಗಳಿಗೆ ಹೆದ್ದಾರಿ ಬದಿ ವಿಶ್ರಾಂತಿ ಗೃಹ

ಜೈನ ಸಾಧುಗಳಿಗೆ ಹೆದ್ದಾರಿ ಬದಿ ವಿಶ್ರಾಂತಿ ಗೃಹ

ಬ್ಗಜಹಹಗಗ

ಕೆಲಸಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಂಬಳ ಕೊಡಲ್ಲ : ಸಿಎಂ ವಾರ್ನಿಂಗ್

NRC Will Have No Impact On Gorkhas: Amit Shah

ಎನ್ ಆರ್ ಸಿ ಗೂರ್ಖಾಗಳ ಮೇಲೆ ಪರಿಣಾಮ ಬೀರುವುದಿಲ್ಲ : ಅಮಿತ್ ಶಾ

ಮತ್ತೆ ಕೋವಿಡ್ ಅಟ್ಟಹಾಸ

ಮತ್ತೆ ಕೋವಿಡ್ ಅಟ್ಟಹಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.