ಸಿಬ್ಬಂದಿ ಬ್ಯಾಗ್‌ ಮೇಲೆ ನಾಯಕರ ಚಿತ್

Team Udayavani, Apr 23, 2019, 2:28 PM IST

ಕೊಪ್ಪಳ: ನಗರದ ಗವಿಸಿದ್ದೇಶ್ವರ ಶಾಲಾ ಆವರಣದಲ್ಲಿ ಚುನಾವಣಾ ಸಿಬ್ಬಂದಿಗೆ ಮತಯಂತ್ರ ಸೇರಿದಂತೆ ಇತರೆ ಸಾಮಗ್ರಿಗಳನ್ನು ನೀಡಲು ಜಿಲ್ಲಾಡಳಿತ ಆಹ್ವಾನಿಸಿತ್ತು. ಕೆಲವು ಸಿಬ್ಬಂದಿ ಮತಗಟ್ಟೆಯಲ್ಲಿ ವಸತಿ ಮಾಡಲು ಬ್ಯಾಗ್‌ನೊಂದಿಗೆ ಆಗಮಿಸಿದ್ದರು. ಆದರೆ ಆ ಬ್ಯಾಗ್‌ಗಳ ಮೇಲೆ ಬಿಜೆಪಿ, ಕಾಂಗ್ರೆಸ್‌ ನಾಯಕರ ಭಾವಚಿತ್ರ ಇರುವುದು ಎಲ್ಲರ ಗಮನ ಸೆಳೆಯಿತು.

ಕೆಲವರ ಬ್ಯಾಗ್‌ಗಳ ಮೇಲೆ ಕುಷ್ಟಗಿ ಬಿಜೆಪಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಭಾವಚಿತ್ರ ಇದ್ದರೆ, ಕೆಲವರ ಬ್ಯಾಗ್‌ಗಳ ಮೇಲೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ ಅವರ ಭಾವಚಿತ್ರಗಳಿರುವ ಕುರಿತು ಗಮನ ಸೆಳೆದವು. ಇವು ಮತಗಟ್ಟೆಯಲ್ಲಿ ಮತದಾರನ ಮೇಲೆ ಪ್ರಭಾವ ಬೀರುವ ಸಾಧ್ಯತೆಯ ಕುರಿತು ಚರ್ಚೆ ನಡೆಯುತ್ತಿದ್ದಂತೆ, ಇದೊಂದು ನೀತಿ ಸಂಹಿತೆ ಉಲ್ಲಂಘನೆಯಾಗಲಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವ ಕುರಿತು ಜಿಲ್ಲಾಧಿಕಾರಿ ಸುನೀಲ್ ಕುಮಾರ ಸ್ಪಷ್ಟನೆ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

  • ಸಿರುಗುಪ್ಪ: ಭೀಕರ ಬರ ಮತ್ತು ಬಿರುಬಿಸಿಲಿಗೆ ತಾಲೂಕಿನಲ್ಲಿರುವ ಜಿಂಕೆಗಳು ತತ್ತರಿಸಿ ಹೋಗಿವೆ. ತಾಲೂಕಿನಲ್ಲಿ ಜೀವನಾಡಿಯಾದ ತುಂಗಭದ್ರಾ ಮತ್ತು ವೇದಾವತಿ ಹಗರಿ...

  • ಕುಷ್ಟಗಿ: ಬೇಸಿಗೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕೊಳವೆಬಾವಿಗಳಿಂದ ನೀರು ಸರಬರಾಜು...

  • ಕುಷ್ಟಗಿ: ಭಕ್ತರ ಆರಾಧ್ಯ ದೈವ ಶ್ರೀಅಡವಿ ಮುಖ್ಯ ಪ್ರಾಣೇಶ ರಥೋತ್ಸವ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಶನಿವಾರ ಸಂಜೆ ಜಯಘೋಷದೊಂದಿಗೆ ವೈಭವದಿಂದ ಜರುಗಿತು. ತಾಲೂಕಿನ...

  • ಕೊಪ್ಪಳ: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23ರಂದು ನಡೆಯಲಿದ್ದು, ಮತ ಎಣಿಕೆ ಕೇಂದ್ರದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ....

  • ಕೊಪ್ಪಳ: ತಾಲೂಕಿನ ಅಳವಂಡಿ ಸಿದ್ದೇಶ್ವರ ಮಠದ ಪೀಠತ್ಯಾಗ ವಿಚಾರ ಹೊಸ ತಿರುವು ಪಡೆದಿದ್ದು, ಪೀಠತ್ಯಾಗ ಮಾಡಿ ನಾಪತ್ತೆಯಾಗಿದ್ದ ಸಿದ್ದಲಿಂಗ ಸ್ವಾಮೀಜಿ ಶನಿವಾರ...

ಹೊಸ ಸೇರ್ಪಡೆ