ಕೃಷಿ ಉತ್ಪನ್ನ ಮಾರಾಟಕ್ಕೆ ಕೋವಿಡ್ 19 ಕಾಟ

Team Udayavani, Apr 16, 2020, 5:53 PM IST

ಕೃಷಿ ಉತ್ಪನ್ನ ಮಾರಾಟಕ್ಕೆ ಕೋವಿಡ್ 19 ಕಾಟ

ಸಾಂದರ್ಭಿಕ ಚಿತ್ರ

ಕೊಪ್ಪಳ: ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿ ಮಾಡಿದಾಗಿನಿಂದ ಎಲ್ಲವೂ ರೈತರ ಮೇಲೆಯೇ ಪೆಟ್ಟು ಬೀಳಲಾರಂಭಿಸಿದೆ. ಅವರ ಜಮೀನಿನಲ್ಲಿ ಫಸಲು ಇದೆ. ಆದರೆ ಮಾರಾಟಕ್ಕೆ ಮಾರುಕಟ್ಟೆಯೂ ಸಿಗುತ್ತಿಲ್ಲ. ಬೆಲೆಯೂ ಸಿಗುತ್ತಿಲ್ಲ. ಇದರಿಂದ ತನ್ನ ಕೈಯಾರೆ ಬೆಳೆ ನಾಶ ಮಾಡುವ ಹಂತಕ್ಕೂ ತೆರಳುತ್ತಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ದಾನಿಗಳು ನೆರವಾಗಬೇಕಿದೆ.

ಹೌದು. ತಾಲೂಕಿನ ಓಜಿನಹಳ್ಳಿಯ ಗ್ರಾಮದ ರೈತ ಚಿನ್ನಪ್ಪ ಮೇಟಿ ಅವರ ಜಮೀನಿನಲ್ಲಿ ಬೆಳೆದಿರುವ 3 ಎಕರೆ ಹೂಕೋಸು ನಾಶ ಮಾಡಿ ಕಣ್ಣೀರಿಟ್ಟಿದ್ದಾನೆ. ಪ್ರತಿ ಎಕರೆಗೂ 30-40 ಸಾವಿರ ರೂ. ವೆಚ್ಚ ಮಾಡಿ ಬೆಳೆದಿದ್ದಾನೆ. ಮೂರು ಎಕರೆ ಸೇರಿ 1 ಲಕ್ಷ ರೂ. ವೆಚ್ಚ ಮಾಡಿದ್ದಾನೆ. ಹೊಲದಲ್ಲಿ ಕನಿಷ್ಟ 3 ಲಕ್ಷ ರೂ. ನಷ್ಟು ಹೂಕೋಸು ಇದೆ. ಜಿಲ್ಲಾ ಲಾಕ್‌ಡೌನ್‌ ಆದ ಬಳಿಕವಂತೂ ಇವರ ಹೂಕೋಸು ಯಾರೂ ಕೇಳದಂತ ಪರಿಸ್ಥಿತಿ ಬಂದಿದೆ. ಇದರಿಂದ ನೊಂದ ರೈತ ಎಷ್ಟಕ್ಕಾದರೂ ಹೋಗಲಿ ಎಂದು ಒಂದು ಟ್ರ್ಯಾಕ್ಟರ್‌ನಲ್ಲಿ ಕೊಪ್ಪಳ ಮಾರುಕಟ್ಟೆಗೆ ಹೂಕೋಸು ತೆಗೆದುಕೊಂಡು ಬಂದರೆ ಖರೀದಿಯೂ ಆಗಲೇ ಇಲ್ಲ. ಇದರಿಂದ ಟ್ರ್ಯಾಕ್ಟರ್‌ ಖರ್ಚು ಭರಿಸಲಾಗದಂತಹ ಸ್ಥಿತಿ ಎದುರಾಯಿತು.

ಹೀಗೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಆದಾಗಿನಿಂದ ರೈತ ಸಮುದಾಯಕ್ಕೆ ಒಂದಿಲ್ಲೊಂದು ಪೆಟ್ಟು ಬೀಳುತ್ತಿದೆ. ಜಿಲ್ಲೆಯಲ್ಲಿ ರೈತರ ತರಕಾರಿಗೆ ಬೆಲೆಯೇ ಸಿಗುತ್ತಿಲ್ಲ. ಆದರೆ ಮಾರುಕಟ್ಟೆಯಲ್ಲಿ ಯಾವುದೇ ತರಕಾರಿಯಬೆಲೆಯಂತೂ ಕಡಿಮೆ ಇಲ್ಲ. ಆದರೆ ಗ್ರಾಹಕರಿಗೆಮಾತ್ರ ಅಧಿಕ ಬೆಲೆಗೆ ಮಾರುತ್ತಿದ್ದಾರೆ. ಸರ್ಕಾರ ಕೃಷಿ ಉತ್ಪನ್ನ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದುಹೇಳುತ್ತಿದ್ದರೂ ರೈತರು ನಷ್ಟ ಅನುಭವಿಸುವುದು ತಪ್ಪಿಲ್ಲ.ಈರುಳ್ಳಿ, ಕುಂಬಳ, ಕಲ್ಲಂಗಡಿ,ಕರಿಬೇವು ಸೇರಿದಂತೆ ಇತರೆ ಉತ್ಪನ್ನವು ಇದೆ. ಆದರೆ ಮಾರುಕಟ್ಟೆಯಲ್ಲಿ ಸಂಕಷ್ಟ ಎದುರಿಸಿ ಜನರು ನೋವು ಅನುಭವಿಸುತ್ತಿದ್ದಾರೆ.

ನೆರವಿಗೆ ಮುಂದಾಗಿ: ಜಿಲ್ಲೆಯ ವಿವಿಧ ಭಾಗದಲ್ಲಿ ರೈತರ ಬಳಿ ಉತ ನ್ನ ಸಾಕಷ್ಟಿದೆ. ಆದರೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಮಾರಾಟ ಮಾಡದೇ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ನೋವಿಗೆ ಜಿಲ್ಲೆಯದಾನಿಗಳು ಆಸರೆಯಾಗಿ ಕಣ್ಣೀರು ಒರೆಸಬೇಕಿದೆ. ಜಿಲ್ಲಾದ್ಯಂತ ಜನತೆಗೆ ದಾನಿಗಳು ಕಿರಾಣಿ ಕಿಟ್‌ ವಿತರಣೆ ಮಾಡುತ್ತಿದ್ದಾರೆ. ತರಕಾರಿ ಪೂರೈಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿನ ರೈತರ ಬಳಿ ಇರುವ ಉತ ನ್ನವನ್ನೇನೇರ ಖರೀದಿ ಮಾಡಿ ಸಂಕಷ್ಟದಲ್ಲಿರುವವರಿಗೆ ಕೊಟ್ಟರೆ ಎರಡು ಕುಟುಂಬಕ್ಕೆ ಆಸರೆಯಾದಂತಾಗಲಿದೆ. ದಯವಿಟ್ಟುನಮ್ಮ ನೆರವಿಗೆ ಬನ್ನಿ ಎಂದು ಅನ್ನದಾತ ವಲಯ ಗೋಗರೆಯುತ್ತಿದೆ.

ಏನೇ ಖರೀದಿಸಿದ್ರೂ ರೈತರ ಉತ್ಪನ್ನವನ್ನ ಖರೀದಿ ಮಾಡಿ ಎಂದುಕೇಳಿಕೊಳ್ಳುತ್ತಿದ್ದಾರೆ. ಬೆಳೆಯನ್ನು ಯಾರೂ ಖರೀದಿ ಮಾಡದಿದ್ದರೆ ಅನಿವಾರ್ಯವಾಗಿ ಬೆಳೆ ನಾಶ ಮಾಡುವ ಪರಿಸ್ಥಿತಿ ಬರುತ್ತದೆ. ಈಗಾಗಲೇ ಹಲವು ರೈತರುತಮ್ಮ ಬೆಳೆಯನ್ನು ಕೈಯಾರೆ ನಾಶ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಲವರು ರೈತರ ನೆರವಿಗೆಧಾವಿಸಬೇಕಿದೆ.

ನಾವು ಕಷ್ಟಪಟ್ಟು  ಹೂಕೋಸು ಬೆಳೆದಿದ್ದೇವೆ. ಕನಿಷ್ಟವೆಂದರೂ 3 ಲಕ್ಷ ರೂ. ಫಸಲಿದೆ.ಆದರೆ ಯಾರೂ ಖರೀದಿಮಾಡುತ್ತಿಲ್ಲ. ನಾವೇ ಕೊಪ್ಪಳಕ್ಕೆ ಟ್ರ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗಿ ಮಾರಾಟಕ್ಕೆ ಮುಂದಾದರೂಖರೀದಿಯಾಗಲಿಲ್ಲ. ಇದರಿಂದ ನಮಗೆ ದಿಕ್ಕು ತಿಳಿಯದಂತಾಗಿ ಬೆಳೆಯನ್ನು ಕೈಯಾರೆ ನಾಶ ಮಾಡುವಂತ ಸ್ಥಿತಿ ಬಂದಿದೆ.  ಚಿನ್ನಪ್ಪ ಮೇಟಿ,-ಓಜಿನಹಳ್ಳಿ ರೈತ

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

crime (2)

Koppal: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.