Udayavni Special

ಗವಿಮಠದಲ್ಲಿ ಸೋಂಕಿತರಿಗೆ ಉತ್ತಮ ಉಪಚಾರ

Team Udayavani, May 20, 2021, 6:12 PM IST

dsc_2992

ದ‌ತ್ತು ಕಮ್ಮಾರ

ಕೊಪ್ಪಳ: ಕೊರೊನಾ ಸೋಂಕಿತರ ಆರೈಕೆಯಲ್ಲಿ ಮುಂಚೂಣಿಯಲ್ಲಿರುವ ಗವಿಮಠವು ಊಟೋ  ಪಚಾರದಲ್ಲೂ ಒಂದು ಹೆಜ್ಜೆ ಮುಂದೆ ಇದೆ. ಅವರಿಗೆ ನಿತ್ಯ ಎರಡು ಹೊತ್ತು ಕಷಾಯ, ಚಹ, ಬಿಸ್ಕೇಟ್‌, ಸಕ್ಕರೆ ಕಾಯಿಲೆ ಸೋಂಕಿತರಿಗೆ ರಾಗಿ ಗಂಜಿಯನ್ನೂ ಕೊಡುತ್ತಿದ್ದಾರೆ.

ಯಾವ ಸ್ಟಾರ್‌ ಹೋಟೆಲ್‌ನಲ್ಲೂ ಇಲ್ಲದ ಸೌಲಭ್ಯ ಇಲ್ಲಿ ಇರುವುದು ಮಾದರಿಯಾಗಿದೆ. ಇಡೀ ಜಗತ್ತು ಕೋವಿಡ್‌ ಮಹಾಮಾರಿಗೆ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಾಡಬೇಕಾದ ಕಾರ್ಯವನ್ನು ಸಂಘ-ಸಂಘ ಸಂಸ್ಥೆಗಳು, ಮಠ-ಮಾನ್ಯಗಳು ಮಾಡುತ್ತಿ ರುವುದು ಒಳ್ಳೆಯ ಬೆಳವಣಿಗೆ. ಅದರಲ್ಲೂ ಅಕ್ಷರ, ಅನ್ನ, ದಾಸೋಹಕ್ಕೆ ನಾಡಿಗೆ ಹೆಸರಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಠವು ಜಿಲ್ಲಾಡಳಿತದ ಸಹಕಾರದೊಂದಿಗೆ 100 ಬೆಡ್‌ಗಳ ಆಕ್ಸಿಜನ್‌ ಆಸ್ಪತ್ರೆ ಆರಂಭಿಸಿದೆ. ಮತ್ತೂಂದು ವಾರದಲ್ಲಿ 200 ಬೆಡ್‌ನ‌ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿದೆ.

ಕೇರ್‌ ಸೆಂಟರ್‌ ಹಾಗೂ ಆಸ್ಪತ್ರೆ  ಯಲ್ಲಿ ಬಹುಪಾಲು ಸೋಂಕಿತರು ದಾಖಲಾಗಿ ಆರೈಕೆ ಯಲ್ಲಿದ್ದು, ಅವರ ಯೋಗಕ್ಷೇಮದ ಬಗ್ಗೆ ಗವಿಸಿದ್ದೇಶ್ವರ ಸ್ವಾಮೀಜಿ ನಿಗಾ ವಹಿಸಿದ್ದಾರೆ. ನಿತ್ಯ 2 ಬಾರಿ ಕಷಾಯ: ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಪ್ರಸ್ತುತ ವೈದ್ಯಕೀಯ ಚಿಕಿತ್ಸಾ ವಿಧಾನ ನಡೆದಿದೆ. ಅದರೊಟ್ಟಿಗೆ ಗವಿಮಠದ ಪರಂಪರೆಯಿಂದ ಬೆಳೆದು ಬಂದಿರುವ ಆರ್ಯುವೇದ ಪದ್ಧತಿಯನ್ನೂ ಸೋಂಕಿತರಿಗೆ ಅನುಕರಣೆ ಮಾಡುತ್ತಿರುವುದು ಗಮನಾರ್ಹ ಸಂಗತಿ.

ಯೋಗ, ಧ್ಯಾನ, ಅಧ್ಯಾತ್ಮದ ಮೂಲಕ ಮನಸ್ಸಿನ ಒತ್ತಡ ನಿವಾರಿಸುವ ಜೊತೆಗೆ ಆರೋಗ್ಯ ಚೈತನ್ಯಕ್ಕಾಗಿ ನಿತ್ಯ ಬೆಳಗ್ಗೆ ಹಾಗೂ ರಾತ್ರಿ ಎರಡು ಬಾರಿ ಕಷಾಯ ನೀಡಲಾಗುತ್ತಿದೆ. ಇದರೊಟ್ಟಿಗೆ ಚಹಾ, ಬಿಸ್ಕೇಟ್‌ಗಳನ್ನೂ ಕೊಡಲಾಗುತ್ತಿದೆ. ಕಷಾಯವೂ ಸೋಂಕಿತರಿಗೆ ಒಂದು ರೀತಿಯ ಔಷ ಧಿಯಾಗಿದೆ. ಇನ್ನೂ ಸಕ್ಕರೆ ಕಾಯಿಲೆಯಿಂದ ಬಳಲುವ ಸೋಂಕಿತರಿಗೆ ರಾಗಿ ಗಂಜಿಯನ್ನೂ ಮಾಡಿ ಕೊಡಲಾಗುತ್ತಿದೆ. ಉತ್ತಮ ಸೌಲಭ್ಯ: ನಿಜಕ್ಕೂ ಗವಿಮಠದ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಸೋಂಕಿತರಿಗೆ ನೀಡುವ ಆತಿಥ್ಯ, ಆರೈಕೆ ಸ್ಟಾರ್‌ ಹೋಟೆಲ್‌ನಲ್ಲಿಯೂ ಇಲ್ಲ. ಅಷ್ಟೊಂದು ಎಚ್ಚರಿಕೆಯಿಂದ ಮನೆಯ ಮಕ್ಕಳಂತೆ, ಭಕ್ತರಂತೆ ಆರೈಕೆ ಮಾಡಲಾಗುತ್ತಿದೆ.

ಹೋಟೆಲ್‌ಗ‌ಳಲ್ಲಿ ಹಣ ಕೊಟ್ಟಂತೆಲ್ಲ ಕಾಳಜಿ ವಹಿಸುವವರನ್ನು ನೋಡಿದ್ದೇವೆ. ಆದರೆ ಮಠದಲ್ಲಿ ಸೇವೆ ಎನ್ನುವ ಒಂದೇ ಒಂದು ಮನೋಭಾವದಿಂದ ಸಾಮಾಜಿಕ ಕಳಕಳಿಯಿಂದ ಇಲ್ಲಿ ಸೋಂಕಿತರ ಆರೈಕೆಯಲ್ಲಿ ತೊಡಗಿರುವುದು ನಿಜಕ್ಕೂ ಗಮನಾರ್ಹ ಸಂಗತಿ. ಇಂತಹ ಸೌಕರ್ಯ ರಾಜ್ಯ ಸೇರಿದಂತೆ ದೇಶದ ಯಾವ ಕೋವಿಡ್‌ ಆಸ್ಪತ್ರೆ, ಕೇರ್‌ ಸೆಂಟರ್‌ ಗಳಲ್ಲೂ ಕಾಣುವುದು ಅಪರೂಪ. ಇಲ್ಲಿನ ಸಕಲ ಸೌಲಭ್ಯಗಳನ್ನು ನೋಡಿದ ಸೋಂಕಿತರು ಮನೆ ಬಿಟ್ಟು ಗವಿಮಠದ ಕೋವಿಡ್‌ ಕೇರ್‌ ಸೆಂಟರ್‌ಗೆ ದೌಡಾಯಿಸಿ ಬರುತ್ತಿದ್ದಾರೆ. ಕೇರ್‌ ಸೆಂಟರ್‌ ಆರಂಭವಾದ ಒಂದೇ ದಿನದಲ್ಲಿ 50ಕ್ಕೂ ಹೆಚ್ಚು ಸೋಂಕಿತರು ಆಗಮಿಸಿದ್ದಾರೆ.

ಒಟ್ಟಿನಲ್ಲಿ ಕೊಪ್ಪಳದ ಶ್ರೀ ಗವಿಮಠ ಹಾಗೂ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮಿಗಳ ಸೇವಾ ಕಾರ್ಯದ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು. ಎಷ್ಟು ಗುಣಗಾನ ಮಾಡಿದರೂ ಸಾಲದು. ಸಂಕಷ್ಟದ ಕಾಲದಲ್ಲಿ ಗವಿಮಠ ಸೋಂಕಿತರಿಗೆ ಸಂಜೀವಿನಿಯಾಗಿರುವುದು ಅಕ್ಷರಶಃ ಸತ್ಯ.

ಟಾಪ್ ನ್ಯೂಸ್

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

2022ಕ್ಕೆ ಎಲ್ಲಾ 36 ರಫೇಲ್‌ ಭಾರತಕ್ಕೆ : ಭಾರತೀಯ ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆ

2022ಕ್ಕೆ ಎಲ್ಲಾ ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ : ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆ

19-11

ರಸ್ತೆ ಕಾಮಗಾರಿ ವೇಳೆ ಸ್ಫೋಟಕ ಬಳಕೆ: ಜನರ ಆಕ್ರೋಶ

ಲಾರಿಗೆ ಕಾರು ಡಿಕ್ಕಿ : ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ಲಾರಿಗೆ ಕಾರು ಡಿಕ್ಕಿ : ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ಕೋವಿಡ್ ಪ್ರಕರಣ : ರಾಜ್ಯದಲ್ಲಿಂದು 11832 ಸೋಂಕಿತರು ಗುಣಮುಖ; 5815 ಹೊಸ ಪ್ರಕರಣ ಪತ್ತೆ

ಕೋವಿಡ್ ಪ್ರಕರಣ : ರಾಜ್ಯದಲ್ಲಿಂದು 11832 ಸೋಂಕಿತರು ಗುಣಮುಖ; 5815 ಹೊಸ ಪ್ರಕರಣ ಪತ್ತೆ

—-

ಇನ್ನು ಮುಂದೆ ಗಂಜಿ ಕೇಂದ್ರಗಳಲ್ಲಿ ಸಿಗಲಿದೆ ಫುಲ್ ಮೀಲ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾರಿಗೆ ಕಾರು ಡಿಕ್ಕಿ : ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ಲಾರಿಗೆ ಕಾರು ಡಿಕ್ಕಿ : ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ಕೋವಿಡ್ ಪ್ರಕರಣ : ರಾಜ್ಯದಲ್ಲಿಂದು 11832 ಸೋಂಕಿತರು ಗುಣಮುಖ; 5815 ಹೊಸ ಪ್ರಕರಣ ಪತ್ತೆ

ಕೋವಿಡ್ ಪ್ರಕರಣ : ರಾಜ್ಯದಲ್ಲಿಂದು 11832 ಸೋಂಕಿತರು ಗುಣಮುಖ; 5815 ಹೊಸ ಪ್ರಕರಣ ಪತ್ತೆ

ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಎದುರಿಸಲು ಸನ್ನದ್ದರಾಗಿ: ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ

ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಎದುರಿಸಲು ಸನ್ನದ್ದರಾಗಿ: ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ

b-s-yadiyurappa

ಕೋವಿಡ್ ಇಳಿಮುಖ : ರಾಜ್ಯದಲ್ಲಿ 2ನೇ ಹಂತದ ಅನ್ ಲಾಕ್ ಘೋಷಣೆ ಮಾಡಿದ ಬಿ ಎಸ್ ವೈ

Minister Aravind  Limbavali

ತ್ಯಾಜ್ಯ ನಿರ್ವಹಣೆಯಲ್ಲಿ ಲೋಪವಾದರೆ, ಸಂಬಂಧಪಟ್ಟವರ ಮೇಲೆ ಕ್ರಮ : ಸಚಿವ ಲಿಂಬಾವಳಿ ಎಚ್ಚರಿಕೆ

MUST WATCH

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

ಹೊಸ ಸೇರ್ಪಡೆ

19-17

ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

19-16

ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ

19-15

ಭಾಷಾ ಕಲಿಕೆಗೆ 3 ವರ್ಷ ಅವಕಾಶ ನೀಡಿ

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.