Udayavni Special

ಸೋಂಕಿನ ಭಯವಿದ್ರೂ ಜಾಗೃತರಾಗದ ಜನ

41 ಸಾವಿರ ಜನರಿಗೆ ದಂಡ, 71 ಎಫ್‌ಐಆರ್‌ ! ­ಕದ್ದುಮುಚ್ಚಿ ವಹಿವಾಟು ನಡೆಸುವ ವ್ಯಾಪಾರಿಗಳು

Team Udayavani, May 5, 2021, 8:39 PM IST

bhgyiyi

ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಜನತೆಗೆ ಸೋಂಕಿನ ಬಗ್ಗೆ ಭಯವಿದ್ದರೂ ಇನ್ನೂ ಜಾಗೃತರಾಗುತ್ತಿಲ್ಲ. ಅನಗತ್ಯವಾಗಿ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದಾರೆ. ಪೊಲೀಸರು ದಂಡ ಹಾಕಿದ್ರೂ, ಎಫ್‌ಐಆರ್‌ ದಾಖಲಿಸಿದರೂ ಜನರು ಕ್ಯಾರೆ ಎನ್ನುತ್ತಿಲ್ಲ. ಇದು ಯಾರ ನಿರ್ಲಕ್ಷ್ಯ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ರಾಜ್ಯದಲ್ಲಿ ಸರ್ಕಾರವು ಆರಂಭದಲ್ಲಿ ಕರ್ಫ್ಯೂ ಜಾರಿಗೊಳಿಸಿದ ಬಳಿಕ 6ರಿಂದ 10 ಗಂಟೆವರೆಗೂ ಅಗತ್ಯ ವಸ್ತುಗಳ ಖರೀದಿ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿತ್ತು. ಇದನ್ನೇ ಜನರು ತಮಗೆ ಯಾವ ಭಯವೂ ಇಲ್ಲವೆಂಬಂತೆ ಅನಗತ್ಯವಾಗಿ ಸುತ್ತಾಡುತ್ತಿದ್ದಾರೆ. ಒಂದೆಡೆ ಜಿಲ್ಲೆಯಲ್ಲಿ ನಿತ್ಯ ಸೋಂಕಿತರ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಜನರು ಸಹ ಅಲ್ಲಿ ಇಷ್ಟು ಜನರಿಗೆ ಸೋಂಕು ದೃಢಪಟ್ಟಿದೆಯಂತೆ, ಇಲ್ಲಿ ಇಷ್ಟು ಜನ ಸೋಂಕಿಗೆ ಬಲಿಯಾಗಿದ್ದಾರಂತೆ.

ಜಿಲ್ಲೆಯಲ್ಲಿ ಅಷ್ಟು ಜನರು ಸತ್ತಿದ್ದಾರಂತೆ ಎಂದು ಮಾತನಾಡಿಕೊಳ್ಳುತ್ತಾರೆ. ಆದರೆ ಅನಗತ್ಯವಾಗಿ ಸುತ್ತಾಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಇದು ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾ ಆಡಳಿತಕ್ಕೂ ದೊಡ್ಡ ಸಮಸ್ಯೆಯಾಗುತ್ತಿದೆ. ಒಂದೆಡೆ ಪೊಲೀಸ್‌ ಇಲಾಖೆ ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿದ್ದೇವೆ ಎನ್ನುತ್ತಿದೆ. ಕರ್ಫ್ಯೂ ಜಾರಿ ಮಾಡಿದ ಬಳಿಕ ಜಿಲ್ಲಾದ್ಯಂತ ಕೋವಿಡ್‌ ನಿಯಮ ಉಲ್ಲಂಘಿಸಿದ 41,235 ಜನರಿಗೆ ಸ್ಥಳದಲ್ಲೇ ದಂಡ ಹಾಕಲಾಗಿದೆ. ದಂಡದ ಮೊತ್ತವೇ 43,83,614 ಸಂಗ್ರಹವಾಗಿದೆ. ದಂಡದ ಮೊತ್ತ ಏರಿಕೆಯಾಗುತ್ತಿದೆ ವಿನಃ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಇದಲ್ಲದೇ 71 ಜನರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ಕದ್ದುಮುಚ್ಚಿ ವ್ಯಾಪಾರ: ಇನ್ನು ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ. ಆದರೂ ಕೆಲ ವ್ಯಾಪಾರಿಗಳು ಕದ್ದುಮುಚ್ಚಿ ಅಂಗಡಿಗಳ ಶೆಟರ್‌ಗಳನ್ನು ಅರ್ಧಕ್ಕೆ ಎಳೆದು ವಹಿವಾಟು ಮಾಡುತ್ತಿದ್ದಾರೆ. ಪೊಲೀಸರಿಂದ ದಂಡ ಬಿದ್ದರೂ ಸಹಿತ ಅವರು ಮತ್ತೆ ಮತ್ತೆ ಅದೇ ಕೆಲಸ ಮಾಡುತ್ತಿದ್ದು ಪೊಲೀಸ್‌ ಇಲಾಖೆಯೂ ಈ ಬಗ್ಗೆ ಮೌನ ವಹಿಸುತ್ತಿದೆ. ಇಲ್ಲಿ ಯಾರ ನಿರ್ಲಕ್ಷ್ಯ ಎನ್ನುವುದೇ ತಿಳಿಯುತ್ತಿಲ್ಲ.

ಬ್ಯಾಂಕ್‌ ಮುಂದೆ ಜನೋವೋ: ಜನ ಕೋವಿಡ್‌ ಆರ್ಭಟದ ಮಧ್ಯೆಯೂ ನಗರದ ವಿವಿಧ ಬ್ಯಾಂಕ್‌ಗಳಲ್ಲಿ ಹಣ ಪಡೆಯಲು ಸಾಲುಗಟ್ಟಿ ನಿಂತಿದ್ದು, ನಿಜಕ್ಕೂ ಅಚ್ಚರಿ ತರಿಸುತ್ತಿದೆ. ಹಣ ಸಿಗುತ್ತೋ ಇಲ್ಲವೋ ಎನ್ನುವಂತೆ ಜನರು ಬ್ಯಾಂಕಿನ ಮುಂದೆ ಜನ ಜಂಗುಳಿ ಸೇರುತ್ತಿದ್ದಾರೆ. ಪೊಲೀಸರು, ಬ್ಯಾಂಕ್‌ ಸಿಬ್ಬಂದಿ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ ಎಂದು ಜನರಿಗೆ ಪದೇ ಪದೆ ಹೇಳುವುದೇ ಆಗಿದೆ. ಇಷ್ಟಾದರೂ ಜನದಟ್ಟಣೆ ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಇದು ನಿಜಕ್ಕೂ ವಿಪರ್ಯಾಸವೇ ಸರಿ.

ಟಾಪ್ ನ್ಯೂಸ್

ಖ್ಯಾತ ಜ್ಯೋತಿಷ್ಯ ತಜ್ಞ, ಉದಯವಾಣಿ ಅಂಕಣಕಾರ ಎನ್.ಎಸ್ ಭಟ್ ಇನ್ನಿಲ್ಲ

ಖ್ಯಾತ ಜ್ಯೋತಿಷ್ಯ ತಜ್ಞ, ಉದಯವಾಣಿ ಅಂಕಣಕಾರ ಎನ್.ಎಸ್ ಭಟ್ ಇನ್ನಿಲ್ಲ

ಕೊಪ್ಪಳ: ಕೋವಿಡ್ ನಿಯಮ ಉಲ್ಲಂಘಿಸಿ ತಹಶಿಲ್ದಾರ್ ಜನ್ಮ ದಿನ ಆಚರಣೆ

ಕೊಪ್ಪಳ: ಕೋವಿಡ್ ನಿಯಮ ಉಲ್ಲಂಘಿಸಿ ತಹಶೀಲ್ದಾರ್ ಜನ್ಮ ದಿನ ಆಚರಣೆ

ಪೊಲೀಸರ ಹಲ್ಲೆಯಿಂದ ಮಾನಸಿಕ ಅಸ್ವಸ್ಥನ ಸಾವು

ಪೊಲೀಸರ ಹಲ್ಲೆಯಿಂದ ಮಾನಸಿಕ ಅಸ್ವಸ್ಥನ ಸಾವು

ಅಪ್ರಾಪ್ತ ವಯಸ್ಕ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಟಿಕ್ ಟಾಕ್ ಸ್ಟಾರ್ ಬಂಧನ

ಅಪ್ರಾಪ್ತ ವಯಸ್ಕ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಟಿಕ್ ಟಾಕ್ ಸ್ಟಾರ್ ಬಂಧನ

ಗೆಳತಿಯ ಬಾಲ್ಯವಿವಾಹ ತಡೆದ ಬಾಲಕಿ

ಗೆಳತಿಯ ಬಾಲ್ಯವಿವಾಹ ತಡೆದ ಬಾಲಕಿ

ಕ್ರಿಕೆಟ್ ಆಡುತ್ತಿದ್ದಾಗ ಉರುಳಿ ಬಿದ್ದ ತೆಂಗಿನ ಮರ: 6 ವರ್ಷದ ಬಾಲಕ ಸಾವು

ಕ್ರಿಕೆಟ್ ಆಡುತ್ತಿದ್ದಾಗ ಉರುಳಿ ಬಿದ್ದ ತೆಂಗಿನ ಮರ: 6 ವರ್ಷದ ಬಾಲಕ ಸಾವು

ಪರಮೇಶ್ವರ್ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಉಪಹಾರ: 100 ನಾಟೌಟ್ ಪ್ರತಿಭಟನೆ ಬಗ್ಗೆ ಸಮಾಲೋಚನೆ

ಪರಮೇಶ್ವರ್ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಉಪಹಾರ: 100 ನಾಟೌಟ್ ಪ್ರತಿಭಟನೆ ಬಗ್ಗೆ ಸಮಾಲೋಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖ್ಯಾತ ಜ್ಯೋತಿಷ್ಯ ತಜ್ಞ, ಉದಯವಾಣಿ ಅಂಕಣಕಾರ ಎನ್.ಎಸ್ ಭಟ್ ಇನ್ನಿಲ್ಲ

ಖ್ಯಾತ ಜ್ಯೋತಿಷ್ಯ ತಜ್ಞ, ಉದಯವಾಣಿ ಅಂಕಣಕಾರ ಎನ್.ಎಸ್ ಭಟ್ ಇನ್ನಿಲ್ಲ

ಕೊಪ್ಪಳ: ಕೋವಿಡ್ ನಿಯಮ ಉಲ್ಲಂಘಿಸಿ ತಹಶಿಲ್ದಾರ್ ಜನ್ಮ ದಿನ ಆಚರಣೆ

ಕೊಪ್ಪಳ: ಕೋವಿಡ್ ನಿಯಮ ಉಲ್ಲಂಘಿಸಿ ತಹಶೀಲ್ದಾರ್ ಜನ್ಮ ದಿನ ಆಚರಣೆ

ಗೆಳತಿಯ ಬಾಲ್ಯವಿವಾಹ ತಡೆದ ಬಾಲಕಿ

ಗೆಳತಿಯ ಬಾಲ್ಯವಿವಾಹ ತಡೆದ ಬಾಲಕಿ

ಕ್ರಿಕೆಟ್ ಆಡುತ್ತಿದ್ದಾಗ ಉರುಳಿ ಬಿದ್ದ ತೆಂಗಿನ ಮರ: 6 ವರ್ಷದ ಬಾಲಕ ಸಾವು

ಕ್ರಿಕೆಟ್ ಆಡುತ್ತಿದ್ದಾಗ ಉರುಳಿ ಬಿದ್ದ ತೆಂಗಿನ ಮರ: 6 ವರ್ಷದ ಬಾಲಕ ಸಾವು

ಪರಮೇಶ್ವರ್ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಉಪಹಾರ: 100 ನಾಟೌಟ್ ಪ್ರತಿಭಟನೆ ಬಗ್ಗೆ ಸಮಾಲೋಚನೆ

ಪರಮೇಶ್ವರ್ ಮನೆಯಲ್ಲಿ ಡಿ.ಕೆ.ಶಿವಕುಮಾರ್ ಉಪಹಾರ: 100 ನಾಟೌಟ್ ಪ್ರತಿಭಟನೆ ಬಗ್ಗೆ ಸಮಾಲೋಚನೆ

MUST WATCH

udayavani youtube

ಕೋವಿಡ್ ನಿಯಮ‌ ಮೀರಿ ಮದುವೆಯ ಪುರವಂತಿಕೆ ಮೆರವಣಿಗೆ

udayavani youtube

ಚಿಂತಾಮಣಿಯ ಕೈವಾರದ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಭಯ

udayavani youtube

ಕಾರವಾರ: ವೃದ್ಧೆಯನ್ನು 5 ಕಿ.ಮೀ ಗುಡ್ಡದ ಇಳಿಜಾರಿನಲ್ಲಿ ಹೊತ್ತು ಆಸ್ಪತ್ರೆ ಸಾಗಿಸಿದ ಯುವಕರು

udayavani youtube

SSLC ಪರೀಕ್ಷೆ: ಯಾವ ವಿದ್ಯಾರ್ಥಿಯನ್ನು ಫೈಲ್ ಮಾಡಲ್ಲ, ಕನಿಷ್ಠ ಅಂಕವೂ ನಿಗದಿ ಮಾಡಿಲ್ಲ!

udayavani youtube

28 ಹೆಂಡತಿಯರ ಮುಂದೆ 37 ನೇ ಬಾರಿಗೆ ವಿವಾಹವಾದ ಭೂಪ

ಹೊಸ ಸೇರ್ಪಡೆ

Arogyavani

ದೀರ್ಘ‌ಕಾಲೀನ ಮತ್ತು ಹಸ್ತಕ್ಷೇಪಿತ ನೋವಿಗೆ ಸಂಬಂಧಿಸಿದ  ಸೇವೆಗಳು

ಖ್ಯಾತ ಜ್ಯೋತಿಷ್ಯ ತಜ್ಞ, ಉದಯವಾಣಿ ಅಂಕಣಕಾರ ಎನ್.ಎಸ್ ಭಟ್ ಇನ್ನಿಲ್ಲ

ಖ್ಯಾತ ಜ್ಯೋತಿಷ್ಯ ತಜ್ಞ, ಉದಯವಾಣಿ ಅಂಕಣಕಾರ ಎನ್.ಎಸ್ ಭಟ್ ಇನ್ನಿಲ್ಲ

ಕೊಪ್ಪಳ: ಕೋವಿಡ್ ನಿಯಮ ಉಲ್ಲಂಘಿಸಿ ತಹಶಿಲ್ದಾರ್ ಜನ್ಮ ದಿನ ಆಚರಣೆ

ಕೊಪ್ಪಳ: ಕೋವಿಡ್ ನಿಯಮ ಉಲ್ಲಂಘಿಸಿ ತಹಶೀಲ್ದಾರ್ ಜನ್ಮ ದಿನ ಆಚರಣೆ

covid news

“ಜಿಲ್ಲಾಡಳಿತ 3ನೇ ಅಲೆಗೆ ಸಿದ್ಧತೆ ಮಾಡಿಕೊಳ್ಳಬೇಕು’

A society full of health

“ಆರೋಗ್ಯ ಪೂರ್ಣ ಸಮಾಜ ಬಾಂಧವರು ದೇಶದ ಆಸ್ತಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.